ಕರ್ನಾಟಕ ಬಜೆಟ್​ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹೋಳಿ ಹಬ್ಬ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

IPL 2025: ಈ ಬಾರಿ ಐಪಿಎಲ್ ಉದ್ಘಾಟನಾ ಸಮಾರಂಭದಲ್ಲಿ ಶ್ರದ್ಧಾ ಕಪೂರ್ & ವರುಣ್ ಧವನ್ ಡ್ಯಾನ್ಸ್

ಉದ್ಘಾಟನ ಪಂದ್ಯದಲ್ಲಿ ಹಾಲಿ ಚಾಂಪಿಯ್‌ ಕೋಲ್ಕತಾ ನೈಟ್‌ ರೈಡರ್ಸ್‌ ವಿರುದ್ಧ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ಕಣಕ್ಕಿಳಿಯುವ ಮೂಲಕ ವಿಶ್ವದ ಅತ್ಯಂತ ಶ್ರೀಮಂತ ಕ್ರಿಕೆಟ್‌ ಲೀಗ್‌ಗೆ ಚಾಲನೆ ದೊರೆಯಲಿದೆ. ಒಟ್ಟು 10 ತಂಡಗಳು ಪರಸ್ಪರ ಸೆಣಸಾಡಲಿದ್ದು, 13 ತಾಣಗಳಲ್ಲಿ 74 ಪಂದ್ಯಗಳು ನಡೆಯಲಿವೆ.

ಈ ಐಪಿಎಲ್ ಉದ್ಘಾಟನಾ ಸಮಾರಂಭದಲ್ಲಿ ಶ್ರದ್ಧಾ ಕಪೂರ್ ಡ್ಯಾನ್ಸ್

Profile Abhilash BC Mar 16, 2025 1:01 PM

ಕೋಲ್ಕತ್ತಾ: ಈ ಬಾರಿಯ ಐಪಿಎಲ್‌ 18ನೇ ಆವೃತ್ತಿಯ ಉದ್ಘಾಟನ ಕಾರ್ಯಕ್ರಮದಲ್ಲಿ ಬಾಲಿವುಡ್‌ ನಟಿ ಶ್ರದ್ಧಾ ಕಪೂರ್(Shraddha Kapoor) ಮತ್ತು ನಟ ವರುಣ್ ಧವನ್(Varun Dhawan) ಹಾಗೂ ಗಾಯಕ ಅರಿಜಿತ್‌ ಸಿಂಗ್‌(Arijit Singh) ಅದ್ದೂರಿ ಕಾರ್ಯಕ್ರಮ ನೀಡಲಿದ್ದಾರೆ ಎಂದು ತಿಳಿದುಬಂದಿದೆ. ಕೋಲ್ಕತ್ತಾದ ಐತಿಹಾಸಿಕ ಈಡನ್‌ ಗಾರ್ಡನ್‌ ಮೈದಾನದಲ್ಲಿ ಮಾರ್ಚ್‌ 22 ರಂದು ನಡೆಯುವ ಉದ್ಘಾಟನ ಪಂದ್ಯಕ್ಕೂ ಮುನ್ನ ಇವರು ಕ್ರೀಡಾಭಿಮಾನಿಗನ್ನು ನೃತ್ಯ ಹಾಗೂ ಸಂಗೀತದ ಮೂಲಕ ರಂಜಿಸಲಿದ್ದಾರೆ ಎನ್ನಲಾಗಿದೆ. ಇನ್ನೊಂದು ಮೂಲಗಳ ಪ್ರಕಾರ ದೀಪಿಕಾ ಪಡುಕೋಣೆ ವಿಶೇಷ ಅತಿಥಿಯಾಗಿ ಕಾಣಿಸಿಕೊಳ್ಳುವ ಸಾಧ್ಯತೆಯೂ ಇದೆ ಎನ್ನಲಾಗಿದೆ. ತಾಯಿಯಾದ ನಂತರ ದೀಪಿಕಾ ಯಾವುದೇ ಸಾರ್ವಜನಿಕ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡಿರಲಿಲ್ಲ.

ಉದ್ಘಾಟನ ಪಂದ್ಯದಲ್ಲಿ ಹಾಲಿ ಚಾಂಪಿಯ್‌ ಕೋಲ್ಕತಾ ನೈಟ್‌ ರೈಡರ್ಸ್‌ ವಿರುದ್ಧ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ಕಣಕ್ಕಿಳಿಯುವ ಮೂಲಕ ವಿಶ್ವದ ಅತ್ಯಂತ ಶ್ರೀಮಂತ ಕ್ರಿಕೆಟ್‌ ಲೀಗ್‌ಗೆ ಚಾಲನೆ ದೊರೆಯಲಿದೆ. ಒಟ್ಟು 10 ತಂಡಗಳು ಪರಸ್ಪರ ಸೆಣಸಾಡಲಿದ್ದು, 13 ತಾಣಗಳಲ್ಲಿ 74 ಪಂದ್ಯಗಳು ನಡೆಯಲಿವೆ.



ಈ ಬಾರಿ ಸಾರ್ವಜನಿಕರ ಆರೋಗ್ಯದ ಹಿತರಕ್ಷಣೆಯ ಆದ್ಯತೆಯಾಗಿ ಐಪಿಎಲ್ ಟೂರ್ನಿ ಸೇರಿ ಫ್ರಾಂಚೈಸಿಗಳ ಇತರ ಕಾರ್ಯಕ್ರಮಗಳ ಆಯೋಜನೆ ಸಮಯದಲ್ಲಿ ಕ್ರೀಡಾಂಗಣ ಮತ್ತು ಟಿವಿಯಲ್ಲಿ ತಂಬಾಕು ಉತ್ಪನ್ನ, ಮದ್ಯ ಪ್ರಚಾರದ(alcohol and tobacco advertising) ಜಾಹೀರಾತುಗಳನ್ನು ನಿಷೇಧಿಸುವಂತೆ ಐಪಿಎಲ್ ಆಡಳಿತ ಮಂಡಳಿಗೆ ಕೇಂದ್ರ ಆರೋಗ್ಯ ಇಲಾಖೆ ಸೂಚನೆ ನೀಡಿದೆ ಎನ್ನಲಾಗಿದೆ.

ಐಪಿಎಲ್ ಟೂರ್ನಿ ಮುಖ್ಯಸ್ಥ ಅರುಣ್ ಧುಮಾಲ್‌ಗೆ ಪತ್ರ ಕಳುಹಿಸಿರುವ ಕೇಂದ್ರ ಆರೋಗ್ಯ ಸೇವೆಗಳ ಮಹಾನಿರ್ದೇಶಕ (ಡಿಜಿಎಚ್‌ಎಸ್) ಅತುಲ್ ಗೋಯೆಲ್, ಯುವಜನತೆಗೆ ಮಾದರಿಯಾಗಿರುವ ಕ್ರಿಕೆಟಿಗರು ಯಾವುದೇ ರೀತಿಯ ತಂಬಾಕು ಅಥವಾ ಮದ್ಯದ ಜಾಹೀರಾತುಗಳಿಗೆ ನೇರವಾಗಿ ಅಥವಾ ಪರೋಕ್ಷವಾಗಿ ಬೆಂಬಲ ಸೂಚಿಸದಂತೆಯೂ ತಿಳಿಸಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ IPL 2025: ಆರ್‌ಸಿಬಿ ಕ್ಯಾಂಪ್‌ ಸೇರಿದ ಕಿಂಗ್‌ ಕೊಹ್ಲಿ

2023ರ 16ನೇ ಆವೃತ್ತಿಯ ಐಪಿಎಲ್ ಉದ್ಘಾಟನಾ ಸಮಾರಂಭದಲ್ಲಿ ಗಾಯಕ ಅರಿಜೀತ್‌ ಸಿಂಗ್‌ ಅವರು ಧೋನಿ ಕಾಲಿಗೆ ಬಿದ್ದು ನಮಸ್ಕರಿಸಿದ್ದರು. ನಟಿಯರಾದ ರಶ್ಮಿಕಾ ಮತ್ತು ತಮನ್ನಾ ನೃತ್ಯ ಮಾಡಿದ್ದರು.