ಚೌತಿ ಹಬ್ಬ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

IPL 2025: ವಿರಾಟ್‌ ಕೊಹ್ಲಿ ದಾಖಲೆ ಮುರಿಯಲು ಸಜ್ಜಾದ ಕೆ.ಎಲ್‌ ರಾಹುಲ್‌

ಪ್ಲೇಆಫ್ಸ್‌ಗೆ ಅರ್ಹತೆ ಪಡೆಯಬೇಕೆಂದರೆ ಡೆಲ್ಲಿ ಕ್ಯಾಪಿಟಲ್ಸ್‌ ತಂಡ ಇನ್ನುಳಿದ ಮೂರೂ ಪಂದ್ಯಗಳಲ್ಲಿ ಗೆಲುವು ಪಡೆಯಬೇಕಾದ ಅನಿವಾರ್ಯತೆ ಇದೆ. ಗುಜರಾತ್‌ ಟೈಟಾನ್ಸ್‌ ವಿರುದ್ಧ ಇಂದಿನ ಪಂದ್ಯದಲ್ಲಿ ಸೋತರೆ ಡೆಲ್ಲಿಯ ಪ್ಲೇ ಆಫ್‌ ಕನಸು ಬಹುತೇಕ ಕಮರಿ ಹೋಗಲಿದೆ.

ನವದೆಹಲಿ: ಡೆಲ್ಲಿ ಕ್ಯಾಪಿಟಲ್ಸ್(Delhi Capitals) ತಂಡದ ಅನುಭವಿ ಬ್ಯಾಟರ್‌, ಕನ್ನಡಿಗ ಕೆಎಲ್ ರಾಹುಲ್(KL Rahul) ಅವರು ವಿರಾಟ್ ಕೊಹ್ಲಿ(Virat Kohli) ಅವರ ಟಿ20 ದಾಖಲೆಯೊಂದನ್ನು ಮುರಿಯಲು ಸಜ್ಜಾಗಿದ್ದಾರೆ. ಇಂದು(ಭಾನುವಾರ) ನಡೆಯುವ ಗುಜರಾತ್‌ ಟೈಟಾನ್ಸ್‌ ವಿರುದ್ಧದ ಐಪಿಎಲ್‌(IPL 2025) ಪಂದ್ಯದಲ್ಲಿ 33 ರನ್ ಬಾರಿಸಿದರೆ, ಟಿ20 ಕ್ರಿಕೆಟ್‌ನಲ್ಲಿ ಅತ್ಯಂತ ವೇಗವಾಗಿ 8000 ರನ್ ಪೂರೈಸಿದ ಭಾರತೀಯ ಆಟಗಾರ ಎಂಬ ದಾಖಲೆಯನ್ನು ನಿರ್ಮಿಸಲಿದ್ದಾರೆ.

ಸದ್ಯ ದಾಖಲೆ ವಿರಾಟ್‌ ಕೊಹ್ಲಿ ಹೆಸರಿನಲ್ಲಿದೆ. ಕೊಹ್ಲಿ 243 ಇನ್ನಿಂಗ್ಸ್‌ನಲ್ಲಿ ಈ ಮೈಲುಗಲ್ಲು ನೆಟ್ಟಿದ್ದರು. ರಾಹುಲ್‌ 214 ಇನಿಂಗ್ಸ್‌ನಲ್ಲಿ ದಾಖಲೆ ನಿರ್ಮಿಸುವ ಅವಕಾಶವಿದೆ. ವಿಶ್ವ ದಾಖಲೆ ಪಾಕಿಸ್ತಾನದ ಬಾಬರ್‌ ಅಜಂ ಹೆಸರಿನಲ್ಲಿದೆ. ಬಾಬರ್‌ 218 ಇನ್ನಿಂಗ್ಸ್‌ಗಳಲ್ಲಿ ಈ ಸಾಧನೆ ಮಾಡಿದ್ದರು.

ಡೆಲ್ಲಿ ಕ್ಯಾಪಿಟಲ್ಸ್‌ ತಂಡ ಈ ಟೂರ್ನಿಯಲ್ಲಿ ಸಾಕಷ್ಟು ಏರಿಳಿತಗಳನ್ನು ಕಂಡಿದೆ. ಟೂರ್ನಿಯ ಆರಂಭಿಕ ನಾಲ್ಕು ಪಂದ್ಯಗಳನ್ನು ಗೆಲ್ಲುವ ಮೂಲಕ ಟೂರ್ನಿಯಲ್ಲಿ ಶುಭಾರಂಭ ಕಂಡಿದ್ದ ಅಕ್ಷರ್‌ ಪಟೇಲ್‌ ನಂತರ ಗೆಲುವಿನ ಲಯವನ್ನು ಕಳೆದುಕೊಂಡಿತ್ತು. ಇಲ್ಲಿಯ ತನಕ ಆಡಿದ 11 ಪಂದ್ಯಗಳಿಂದ ಆರರಲ್ಲಿ ಗೆಲುವು ಪಡೆದಿದೆ. ಪ್ಲೇಆಫ್ಸ್‌ಗೆ ಅರ್ಹತೆ ಪಡೆಯಬೇಕೆಂದರೆ ಡೆಲ್ಲಿ ತಂಡ ಇನ್ನುಳಿದ ಮೂರೂ ಪಂದ್ಯಗಳಲ್ಲಿ ಗೆಲುವು ಪಡೆಯಬೇಕಾದ ಅನಿವಾರ್ಯತೆ ಇದೆ. ಗುಜರಾತ್‌ ವಿರುದ್ಧ ಸೋತರೆ ಡೆಲ್ಲಿಯ ಪ್ಲೇ ಆಫ್‌ ಕನಸು ಬಹುತೇಕ ಕಮರಿ ಹೋಗಲಿದೆ.

ಇನ್ನೊಂದೆಡೆ ಗುಜರಾತ್‌ ಟೈಟನ್ಸ್‌ ತಂಡ ಇಲ್ಲಿಯವರೆಗೂ ಆಡಿದ 11 ಪಂದ್ಯಗಳಲ್ಲಿ 8ರಲ್ಲಿ ಗೆಲುವು ಪಡೆದಿದ್ದು, ಟೂರ್ನಿಯ ಪಾಯಿಂಟ್ಸ್‌ ಟೇಬಲ್‌ನಲ್ಲಿ ಅಗ್ರ ಸ್ಥಾನವನ್ನು ಅಲಂಕರಿಸಿದೆ. ಈ ಪಂದ್ಯದಲ್ಲಿ ಡೆಲ್ಲಿ ವಿರುದ್ಧ ಗೆದ್ದರೆ ಗುಜರಾತ್‌ ಟೈಟನ್ಸ್‌ ತಂಡ ಪ್ಲೇಆಫ್ಸ್‌ಗೆ ಅರ್ಹತೆ ಪಡೆಯಲಿದೆ. ಈ ಸೀಸನ್‌ನಲ್ಲಿ ಅದ್ಭುತ ಪ್ರದರ್ಶನ ತೋರುತ್ತಿರುವ ಗುಜರಾತ್‌ ಟೈಟನ್ಸ್‌ ತಂಡಕ್ಕೆ ನಾಯಕ ಶುಭಮನ್‌ ಗಿಲ್‌, ಸಾಯಿ ಸುದರ್ಶನ್‌ ಹಾಗೂ ಜೋಸ್‌ ಬಟ್ಲರ್‌ ಕೀ ಬ್ಯಾಟ್ಸ್‌ಮನ್‌ಗಳಾಗಿದ್ದಾರೆ.

ಸಂಭಾವ್ಯ ತಂಡಗಳು

ಡೆಲ್ಲಿ ಕ್ಯಾಪಿಟಲ್ಸ್‌: ಫಾಫ್‌ ಡು ಪ್ಲೆಸಿಸ್‌, ಅಭಿಷೇಕ್‌ ಪೊರೆಲ್‌ (ವಿ.ಕೀ), ಕರುಣ್‌ ನಾಯರ್‌, ಕೆಎಲ್‌ ರಾಹುಲ್‌, ಸಮೀರ್‌ ರಿಝ್ವಿ, ಅಕ್ಷರ್‌ ಪಟೇಲ್‌ (ನಾಯಕ), ಟ್ರಿಸ್ಟನ್‌ ಸ್ಟಬ್ಸ್‌, ವಿಪ್ರಾಝ್ ನಿಗಮ್‌, ದುಷ್ಮಾಂತ ಚಮೀರಾ, ಕುಲ್‌ದೀಪ್‌ ಯಾದವ್‌, ಟಿ ನಟರಾಜನ್‌.

ಗುಜರಾತ್‌ ಟೈಟನ್ಸ್‌: ಸಾಯಿ ಸುದರ್ಶನ್‌, ಶುಭಮನ್‌ ಗಿಲ್‌ (ನಾಯಕ), ಜೋಸ್‌ ಬಟ್ಲರ್‌ (ವಿ.ಕೀ), ರಾಹುಲ್‌ ತೆವಾಟಿಯಾ, ಶಾರೂಖ್‌ ಖಾನ್‌, ರಶೀದ್‌ ಖಾನ್‌, ಸಾಯಿ ಕಿಶೋರ್‌, ಅರ್ಷದ್‌ ಖಾನ್‌, ಜೆರಾಲ್ಡ್‌ ಕೋಯೆಡ್ಜಿ, ಮೊಹಮ್ಮದ್‌ ಸಿರಾಜ್‌, ಪ್ರಸಿಧ್‌ ಕೃಷ್ಣ.

ಇದನ್ನೂ ಓದಿ IPL 2025: 10 ವರ್ಷಗಳ ಬಳಿಕ ಪ್ಲೇ-ಆಫ್‌ ಸ್ಥಾನದ ಮೇಲೆ ಕಣ್ಣಿಟ್ಟ ಪಂಜಾಬ್‌; ಇಂದು ರಾಜಸ್ಥಾನ್‌ ಎದುರಾಳಿ