IPL 2025: ಡೆಲ್ಲಿ ತಂಡಕ್ಕೆ ಕೈಕೊಟ್ಟ ಬ್ರೂಕ್; 2 ವರ್ಷ ಐಪಿಎಲ್ ನಿಷೇಧ ಸಾಧ್ಯತೆ!
Harry Brook: ಐಪಿಎಲ್‌ನಿಂದ ಹಿಂದೆ ಸರಿಯುವ ಬ್ರೂಕ್ ಅವರ ನಿರ್ಧಾರವನ್ನು ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿಯ (ECB) ಅಧಿಕಾರಿಗಳು ಕಳೆದ ವಾರವೇ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಗೆ (BCCI) ಮತ್ತು ಡೆಲ್ಲಿ ಕ್ಯಾಪಿಟಲ್ಸ್‌ಗೆ ತಿಳಿಸಿದೆ ಎನ್ನಲಾಗಿದೆ.


ನವದೆಹಲಿ: ಡೆಲ್ಲಿ ಕ್ಯಾಪಿಟಲ್ಸ್(Delhi Capitals) ತಂಡದ, ಇಂಗ್ಲೆಂಡ್‌ನ ಮಧ್ಯಮ ಕ್ರಮಾಂಕದ ಬ್ಯಾಟರ್ ಹ್ಯಾರಿ ಬ್ರೂಕ್(Harry Brook) ಅವರು ರಾಷ್ಟ್ರೀಯ ತಂಡದೊಂದಿಗೆ ತಮ್ಮ ಬದ್ಧತೆಗಳಿಗೆ ಸಿದ್ಧರಾಗುವ ಅಗತ್ಯವನ್ನು ಉಲ್ಲೇಖಿಸಿ ಇಂಡಿಯನ್ ಪ್ರೀಮಿಯರ್ ಲೀಗ್, 2025(IPL 2025) ರಿಂದ ಹಿಂದೆ ಸರಿದಿದ್ದಾರೆ. ನೂತನ ನಿಯದ ಪ್ರಕಾರ ಬ್ರೂಕ್ ಐಪಿಎಲ್‌ನಿಂದ 2 ವರ್ಷಗಳ ಕಾಲ ನಿಷೇಧ ಭೀತಿ ಎದುರಿಸುವ ಸಾಧ್ಯತೆ ಇದೆ.
'ಇದು ಇಂಗ್ಲೆಂಡ್ ತಂಡಕ್ಕೆ ಪ್ರಮುಖ ಸಮಯವಾಗಿದ್ದು, ದೇಶದ ಮುಂದಿನ ಕ್ರಿಕೆಟ್ ಸರಣಿಗಾಗಿ ನಾನು ಸಿದ್ದತೆ ನಡೆಸಬೇಕಿದೆ. ಸತತ ಕ್ರಿಕೆಟ್‌ನಿಂದ ಬಳಲಿರುವ ನಾನು ಕೊಂಚ ವಿಶ್ರಾಂತಿ ಪಡೆದು ಮತ್ತೆ ಇಂಗ್ಲೆಂಡ್ ತಂಡಕ್ಕೆ ಅಭ್ಯಾಸ ಆರಂಭಿಸಲಿದ್ದೇನೆ. ದೇಶಕ್ಕಾಗಿ ಆಡುವುದು ನನಗೆ ಯಾವಾಗಲೂ ಮುಖ್ಯ' ಎಂದು ಹೇಳುವ ಮೂಲಕ ಐಪಿಎಲ್‌ನಿಂದ ಹಿಂದೆ ಸರಿಯುವುದಾಗಿ ಬ್ರೂಕ್ ಹೇಳಿದ್ದಾರೆ.
ನೂತನ ನಿಯಮದ ಪ್ರಕಾರ ಯಾವುದೇ ಆಟಗಾರ ಐಪಿಎಲ್ ಹರಾಜಿಗೆ ನೋಂದಣಿ ಮಾಡಿಕೊಂಡು, ಆಯ್ಕೆಯೂ ಆಗು, ಕೂಟಕ್ಕೂ ಮುನ್ನ ಆಡಲ್ಲ ಎಂದರೆ, ಮುಂದಿನ 2 ವರ್ಷಗಳ ಟೂರ್ನಿಯಲ್ಲಿ ಅವರಿಗೆ ನಿಷೇಧ ವಿಧಿಸಲಾಗುತ್ತದೆ. ಈ ನಿಯವನ್ನು ಕಳೆದ 2024ರಲ್ಲಿ ನಡೆದಿದ್ದ ಮೆಗಾ ಹರಾಜಿಗೂ ಮುನ್ನವೇ ಬಿಸಿಸಿಐ ಮತ್ತು ಐಪಿಎಲ್ ಆಡಳಿತ ಮಂಡಳಿ ಜಾರಿಗೆ ತಂದಿತ್ತು. ಆಟಗಾರನ ಗಾಯದ ಸಮಸ್ಯೆ, ಅನಾರೋಗ್ಯ ಸಮಸ್ಯೆ ಇದ್ದರೆ ಮಾತ್ರ ಈ ನಿಯಮ ಅನ್ವಯವಾಗುವುದಿಲ್ಲ.
Harry Brook should be banned. No excuse. pic.twitter.com/NHKaArgRpg
— Yash Lahoti (@YvLahoti) March 10, 2025
ಇದನ್ನೂ ಓದಿ IPL 2025: ಮ್ಯಾಥ್ಯೂ ವೇಡ್ ಗುಜರಾತ್ ತಂಡಕ್ಕೆ ಸಹಾಯಕ ಕೋಚ್
ಇದೀಗ ಐಪಿಎಲ್ ಆರಂಭಕ್ಕೆ ಎರಡು ವಾರ ಮಾತ್ರ ಬಾಕಿ ಇರುವಾಗ ಹ್ಯಾರಿ ಬ್ರೂಕ್ ಕೂಟದಿಂದ ಹಿಂದೆ ಸರಿದಿದ್ದಾರೆ. ಹೀಗಾಗಿ ಇವರನ್ನು 2 ವರ್ಷಗಳ ಕಾಲ ಐಪಿಎಲ್‌ನಿಂದ ನಿಷೇಧ ಮಾಡುವ ಸಾಧ್ಯತೆ ಇದೆ. ಒಂದೊಮ್ಮೆ ಅವರನ್ನು ನಿಷೇಧಿಸಿದರೆ ಈ ಶಿಕ್ಷೆಗೆ ಗುರಿಯಾದ ಮೊದಲ ಆಟಗಾರ ಎನಿಸಿಕೊಳ್ಳಲಿದ್ದಾರೆ. ಕಳೆದ ಆವೃತ್ತಿಯಲ್ಲಿಯೂ ಕೂಡ ಅವರು ಅಜ್ಜಿಯ ಸಾಮಿವ ನೋವು ಕಾಡುತ್ತಿದೆ ಎಂದು ಹೇಳಿ ಕೊನೆಯ ಕ್ಷಣದಲ್ಲಿ ಐಪಿಎಲ್‌ನಿಂದ ಹಿಂದೆ ಸರಿದಿದ್ದರು. ಆಗಲೂ ಕೂಡ ಅವರು ಡೆಲ್ಲಿ ಕ್ಯಾಪಿಟಲ್ಸ್ ತಂಡದ ಸದಸ್ಯನಾಗಿದ್ದರು. ಮೆಗಾ ಹರಾಜಿನಲ್ಲಿ ಡೆಲ್ಲಿ ತಂಡ ಬ್ರೂಕ್‌ಗೆ 6.25 ಕೋಟಿ ರೂ. ವ್ಯಯಿಸಿ ತಂಡಕ್ಕೆ ಖರೀದಿ ಮಾಡಲಾಗಿತ್ತು.
ಐಪಿಎಲ್‌ನಿಂದ ಹಿಂದೆ ಸರಿಯುವ ಬ್ರೂಕ್ ಅವರ ನಿರ್ಧಾರವನ್ನು ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿಯ (ECB) ಅಧಿಕಾರಿಗಳು ಕಳೆದ ವಾರವೇ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಗೆ (BCCI) ಮತ್ತು ಡೆಲ್ಲಿ ಕ್ಯಾಪಿಟಲ್ಸ್‌ಗೆ ತಿಳಿಸಿದೆ ಎನ್ನಲಾಗಿದೆ. ಬ್ರೂಲ್ ಅಲಭ್ಯತೆಯಲ್ಲಿ ಡೆಲ್ಲಿ ತಂಡ ಬದಲಿ ಆಟಗಾರ ಹುಡುಕಾಟ ನಡೆಸಬೇಕಿದೆ. ತಂಡದ ನಾಯಕ ಘೋಷಣೆ ಕೂಡ ಇದುವರೆಗೆ ಆಗಿಲ್ಲ.