#ದೆಹಲಿರಿಸಲ್ಟ್​ ಧಾರ್ಮಿಕ ವಿಶ್ವವಾಣಿ ಕ್ಲಬ್‌ ಹೌಸ್‌ ರಾಜಕೀಯ ಸಂಪಾದಕೀಯ ಫ್ಯಾಷನ್‌ ಲೋಕ ಉದ್ಯೋಗ

Vishweshwar Bhat Column: ಬಸ್‌ ಚಲಿಸುತ್ತಿರುವಾಗ ಚಾಲಕನೊಂದಿಗೆ ಮಾತಾಡುವುದು ಅಲ್ಲಿ ಅಪರಾಧ !

ಜಪಾನ್ ಕುರಿತು ನಾನು ಪುಂಖಾನುಪುಂಖವಾಗಿ ಬರೆಯುವುದನ್ನು ಓದಿದ್ದೀರಿ. ನಾನು ಬರೆಯುತ್ತಿರುವು ದರಲ್ಲಿ ಏನಾದರೂ ದೋಷಗಳು, ತಪ್ಪುಗ್ರಹಿಕೆಗಳು ಇವೆಯಾ? ಮುಲಾಜಿಲ್ಲದೇ ಹೇಳಿ" ಎಂದೆ. ಅದಕ್ಕೆ ಕುಪ್ಪುಸ್ವಾಮಿಯವರು, “ಒಂದು ಸಂಗತಿಯನ್ನು ಎತ್ತಿಹೇಳಬಲ್ಲೆ" ಎಂದರು. ನನಗೆ ತುಸು ಗಾಬರಿ ಯಾಯಿತು. “ಏನು? ದಯವಿಟ್ಟು ಹೇಳಿ" ಎಂದು ಕೋರಿದೆ. ಅದಕ್ಕೆ ಅವರು, “ನೀವು ಬರೆದುದೆಲ್ಲ ಅಪ್ಪಟ ನಿಜ.

ಬಸ್‌ ಚಲಿಸುತ್ತಿರುವಾಗ ಚಾಲಕನೊಂದಿಗೆ ಮಾತಾಡುವುದು ಅಲ್ಲಿ ಅಪರಾಧ !

ಪ್ರಧಾನ ಸಂಪಾದಕ ವಿಶ್ವೇಶ್ವರ ಭಟ್‌ ಅಂಕಣ

ಇದೇ ಅಂತರಂಗ ಸುದ್ದಿ

vbhat@me.com

ಜಪಾನಿನ ಬಗ್ಗೆ ನಾನು ಬರೆಯುತ್ತಿರುವುದನ್ನು ಓದಿದ, ಮೂಲತಃ ಮೂಡಿಗೆರೆಯವರಾದ ಸಿ.ಕುಪ್ಪು ಸ್ವಾಮಿ ಎಂಬುವವರು ನನ್ನ ಭೇಟಿಗೆಂದು ಫೋನ್ ಮಾಡಿ ಬಂದಿದ್ದರು. ಅವರು ಹನ್ನೊಂದು ವರ್ಷಗಳ ಕಾಲ ಜಪಾನಿನಲ್ಲಿದ್ದು ಈಗ ಬೆಂಗಳೂರಿನ ಹೊಸಕೆರೆಹಳ್ಳಿಯಲ್ಲಿ ಪತ್ನಿಯೊಂದಿಗೆ ವಾಸಿ ಸುತ್ತಿದ್ದಾರೆ. ಆರು ತಿಂಗಳಿಗೊಮ್ಮೆ ಜಪಾನಿಗೆ ಹೋಗಿ ಬರುತ್ತಾರೆ. ಅವರು ಆ ದೇಶದಿಂದ ಬಂದರೂ, ಅಲ್ಲಿನ ಸಂಬಂಧವನ್ನು ಮಾತ್ರ ಇನ್ನೂ ಜೀವಂತವಾಗಿಟ್ಟುಕೊಂಡಿದ್ದಾರೆ. ಜಪಾನ್ ಬಗ್ಗೆ ಈ ಪರಿ ಬರೆಯು ತ್ತಿರುವ ವ್ಯಕ್ತಿಯನ್ನು ಒಮ್ಮೆ ಭೇಟಿಯಾಗಲೇಬೇಕು ಎಂದು ಅವರು ತೀರ್ಮಾ ನಿಸಿದ್ದರಂತೆ. ನಮ್ಮಿಬ್ಬರ ನಡುವಿನ ಎರಡು ಗಂಟೆ ಮಾತುಕತೆ ಸಂದರ್ಭದಲ್ಲಿ, “ನಾನು ಜಪಾನ್ ಬಗ್ಗೆ ಯೋಚಿ ಸದ ದಿನಗಳೇ ಇಲ್ಲ.

ನನ್ನ ಬದುಕನ್ನು ಬದಲಿಸಿದ್ದು ಜಪಾನ್. ನಿಮಗೂ ಆ ದೇಶದ ಬಗ್ಗೆ ಹೆಮ್ಮೆ ಇರುವುದು ನನಗೆ ಖುಷಿಯನ್ನುಂಟುಮಾಡಿತು. ನಿಮ್ಮ ಭೇಟಿಗೆ ಇದೇ ಪ್ರೇರಣೆ" ಎಂದು ಅವರು ಅಭಿಮಾನದಿಂದ ಮೂರ್ನಾಲ್ಕು ಸಲ ಹೇಳಿದರು.

ಇದನ್ನೂ ಓದಿ: Vishweshwar Bhat Column: ಅಣುಬಾಂಬ್‌ ಚರ್ಚೆ ಬಾಂಬ್‌ ನಿಷಿದ್ಧ

“ಜಪಾನ್ ಕುರಿತು ನಾನು ಪುಂಖಾನುಪುಂಖವಾಗಿ ಬರೆಯುವುದನ್ನು ಓದಿದ್ದೀರಿ. ನಾನು ಬರೆಯು ತ್ತಿರುವುದರಲ್ಲಿ ಏನಾದರೂ ದೋಷಗಳು, ತಪ್ಪುಗ್ರಹಿಕೆಗಳು ಇವೆಯಾ? ಮುಲಾಜಿಲ್ಲದೇ ಹೇಳಿ" ಎಂದೆ. ಅದಕ್ಕೆ ಕುಪ್ಪುಸ್ವಾಮಿಯವರು, “ಒಂದು ಸಂಗತಿಯನ್ನು ಎತ್ತಿಹೇಳಬಲ್ಲೆ" ಎಂದರು. ನನಗೆ ತುಸು ಗಾಬರಿಯಾಯಿತು. “ಏನು? ದಯವಿಟ್ಟು ಹೇಳಿ" ಎಂದು ಕೋರಿದೆ. ಅದಕ್ಕೆ ಅವರು, “ನೀವು ಬರೆದುದೆಲ್ಲ ಅಪ್ಪಟ ನಿಜ.

ಇಷ್ಟೆಲ್ಲ ಮಾಹಿತಿಯನ್ನು ನೀವು ಸಂಗ್ರಹಿಸಿದ್ದು ಸಾಮಾನ್ಯ ಸಂಗತಿಯಲ್ಲ" ಎಂದರು. ಆಗ ‘ಉಸ್ಸ ಪ್ಪಾ’ ಎಂದು ನಿಟ್ಟುಸಿರು ಬಿಟ್ಟೆ. ಕುಪ್ಪುಸ್ವಾಮಿಯವರು ಜಪಾನ್ ಮೂಲದ ಮಿಟ್ಸುಬಿಷಿ, ಟಿಡಿಕೆ ಮತ್ತು ಬ್ರಿಜ್ ಸ್ಟೋನ್ ಕಂಪನಿಗಳಲ್ಲಿ ಕೆಲಸ ಮಾಡಿದವರು. “ಯಾರು ಜಪಾನ್ ಮೂಲದ ಕಂಪನಿ ಗಳಲ್ಲಿ ಕೆಲಸ ಮಾಡುತ್ತಾರೋ, ಅವರು ಆ ದೇಶದ ಸಂಸ್ಕೃತಿ ಮತ್ತು ಕರ್ಮ ಸಿದ್ಧಾಂತಗಳನ್ನು ಮೈಗೂಡಿಸಿಕೊಂಡಿರುತ್ತಾರೆ.

ಇಲ್ಲದಿದ್ದರೆ ಅಲ್ಲಿ ಕೆಲಸ ಮಾಡುವುದು ಸಾಧ್ಯವೇ ಇಲ್ಲ. ಉದಾಹರಣೆಗೆ, ಅಲ್ಲಿನ ಸಂಸ್ಥೆಗಳಲ್ಲಿ ಕೆಲಸ ಮಾಡಬೇಕೆಂದರೆ, ನೀವು ಕತ್ತೆ ರೀತಿ ದುಡಿಯಲು ಸಿದ್ಧರಿರಬೇಕು. ದಿನಕ್ಕೆ ಹದಿನೈದು ಗಂಟೆ ಕೆಲಸ ಮಾಡಿದರೂ ಅವರಿಗೆ ಸಮಾಧಾನವಿಲ್ಲ" ಎಂದು ಹೇಳಿದರು ಕುಪ್ಪುಸ್ವಾಮಿ.

ನಂತರ ಕುಪ್ಪುಸ್ವಾಮಿ ಅವರು ಒಂದು ಪ್ರಸಂಗವನ್ನು ಹೇಳಿದರು- “ನನಗೊಬ್ಬ ಬಾಸ್ ಇದ್ದ. ಆತ ಪ್ರತಿದಿನ ಇಪ್ಪತ್ತು ಗಂಟೆ ಕೆಲಸ ಮಾಡುತ್ತಿದ್ದ. ಆರು ತಿಂಗಳಿಗೆ ಎರಡು ಸಲ ಮಾತ್ರ ಮನೆಗೆ ಹೋಗು ತ್ತಿದ್ದ. ಆಫೀಸಿನಲ್ಲಿಯೇ ಮಲಗುತ್ತಿದ್ದ. ಆತ ಸ್ವತಃ ತನ್ನ ಬಟ್ಟೆಗಳನ್ನು ಆಫೀಸಿನಲ್ಲಿಯೇ ತೊಳೆದು, ಇಸ್ತ್ರಿ ಮಾಡಿ ಧರಿಸುತ್ತಿದ್ದ.

ಆತ ಆಫೀಸಿನಿಂದ ಹೊರಬಿದ್ದರೆ, ನೀರಿನಿಂದ ಹೊರಬಿದ್ದ ಮೀನಿನಂತೆ ವರ್ತಿಸುತ್ತಿದ್ದ. ಆರಂಭ ದಲ್ಲಿ ನನಗೆ ಆತನ ವರ್ತನೆ ವಿಚಿತ್ರವಾಗಿ ಕಾಣುತ್ತಿತ್ತು. ಕ್ರಮೇಣ ಆತ ನನ್ನನ್ನೂ ಅವನಂತೆ ಪರಿವ ರ್ತಿಸಿದ. ಜಪಾನಿನ ಮಂದಿ ಹದಿನಾರು-ಹದಿನೆಂಟು ಗಂಟೆ ಕೆಲಸ ಮಾಡುವುದು ಸಾಮಾನ್ಯ. ಅದರಲ್ಲಿ ಹೆಚ್ಚುಗಾರಿಕೆಯೇನೂ ಇಲ್ಲ. ಆತ ನನಗೆ ಯಾವತ್ತೂ ಒಂದು ಮಾತನ್ನು ಹೇಳುತ್ತಿದ್ದ- ‘ಮನುಷ್ಯ ಯಂತ್ರವಲ್ಲ. ಮನುಷ್ಯನಿಗೂ ಯಂತ್ರಕ್ಕೂ ವ್ಯತ್ಯಾಸವಿದೆ. ಯಂತ್ರ ಉಪಯೋಗಿಸಿ ದಷ್ಟೂ ಸವೆಯುತ್ತದೆ, ಆದರೆ ಮನುಷ್ಯ ತನ್ನ ದೇಹವನ್ನು ಎಷ್ಟೇ ಉಪಯೋಗಿಸಿದರೂ ಸವೆಯು ವುದಿಲ್ಲ. ಹೀಗಾಗಿ ಮನುಷ್ಯ ತನ್ನ ದೇಹ ಮತ್ತು ಮನಸ್ಸನ್ನು ಹೆಚ್ಚು ಹೆಚ್ಚು ಉಪಯೋಗಿ ಸಬೇಕು. ಏನೂ ಆಗುವುದಿಲ್ಲ’..." ನಾನು ಸಹಜವಾಗಿ ಕುಪ್ಪುಸ್ವಾಮಿಯವರನ್ನು, “ನೀವು ಕೆಲಸ ಮಾಡಿದ್ದೆಲ್ಲ ಜಪಾನ್ ಮೂಲದ ಕಂಪನಿಯ ಅಂತ ಹೇಳಿದಿರಿ.

ಬ್ರಿಜ್ ಸ್ಟೋನ್ ಕಂಪನಿ ಜಪಾನ್ ಮೂಲದ್ದೇ?" ಎಂದು ಕೇಳಿದೆ. ಅದರ ಹೆಸರನ್ನು ಕೇಳಿದರೆ ಅದು ಜಪಾನಿ ಹೆಸರೆಂದು ಅನಿಸದ್ದರಿಂದ ನಾನು ಹಾಗೆ ಕೇಳಿದೆ. “ಭಟ್ರೇ, ನಾನು ಆ ದೇಶದಲ್ಲಿ ನಾಲ್ಕೈದು ಕಂಪನಿಗಳಲ್ಲಿ ಕೆಲಸ ಮಾಡಿದ್ದೇನೆ. ಅಲ್ಲಿ ಕೆಲಸ ಮಾಡುವಾಗ, ಅವುಗಳ ಹೆಸರು, ಅದರ ಮೂಲ ಗಳನ್ನು ತಿಳಿದುಕೊಳ್ಳುವುದು ಮುಖ್ಯ" ಎಂದರು ಕುಪ್ಪುಸ್ವಾಮಿ.

“ಜಪಾನಿಯರು ಸೇರಿದಂತೆ ಅನೇಕರು ಬ್ರಿಜ್ ಸ್ಟೋನ್ ಅಮೆರಿಕ ಅಥವಾ ಇಂಗ್ಲಿಷ್ ಮೂಲದ ಕಂಪನಿಯಿದ್ದಿರಬಹುದು ಎಂದು ಭಾವಿಸುತ್ತಾರೆ. ಆದರೆ ಅದು ಅಪ್ಪಟ ಜಪಾನಿನ ಸಂಸ್ಥೆ. ಆ ಕಂಪನಿಯನ್ನು ಸ್ಥಾಪಿಸಿದವನ ಹೆಸರು ಇಶಿಬಾಷಿ ಅಂತ. ಜಪಾನಿ ಭಾಷೆಯಲ್ಲಿ ಇಶಿಬಾಷಿ ಅಂದ್ರೆ ಸ್ಟೋನ್ ಬ್ರಿಜ್ (ಕಲ್ಲಿನ ಸೇತುವೆ) ಎಂದರ್ಥ. ಆ ಹೆಸರನ್ನೇ ಪಲ್ಲಟ ಮಾಡಿ ‘ಬ್ರಿಜ್ ಸ್ಟೋನ್’ ಅಂತ ಹೆಸರಿಡಲಾಗಿದೆ.

ಹಾಗೆ ಟಿಡಿಕೆ ಎಂಬ ಕಂಪನಿಯಲ್ಲಿ ಕೆಲಸಕ್ಕಿದ್ದೆ. ಟಿಡಿಕೆ ಪೂರ್ಣ ರೂಪ ಟೋಕಿಯೋ ಡೆಂಕಿ ಮತ್ತು ಕಗಾಕು ಎಂದು. ಹಾಗಂದ್ರೆ ಟೋಕಿಯೋ ಇಲೆಕ್ಟ್ರಿಕ್ ಮತ್ತು ಕೆಮಿಕಲ್ಸ್ ಅಂತ. ಹಾಗೇ ಮಿಟ್ಸುಬಿಷಿ ಕಂಪನಿ. ಇದು ಭಾರತದಲ್ಲೂ ಪರಿಚಿತ ಬ್ರಾಂಡ್. ಅನೇಕರಿಗೆ ಮಿಟ್ಸುಬಿಷಿ ಹೆಸರಿನ ಮರ್ಮ ಗೊತ್ತಿಲ್ಲ. ‌

ಜಪಾನಿ ಭಾಷೆಯಲ್ಲಿ ‘ಮಿತ್ಸು’ ಅಂದರೆ ಮೂರು ಎಂದರ್ಥ ಮತ್ತು ಬಿಷಿ ಅಂದರೆ ವಜ್ರ ಅಥವಾ ವಜ್ರದ ಆಕಾರವುಳ್ಳದ್ದು ಎಂದು. ಮಿಟ್ಸುಬಿಷಿ ಸಂಸ್ಥೆಯ ಲೋಗೋದಲ್ಲಿ ಮೂರು ವಜ್ರದ ಹರಳು ಗಳಿರುವುದನ್ನು ನೋಡಬಹುದು. ಆ ಕಂಪನಿಯು ಆರಂಭದಲ್ಲಿ Daimante ಹೆಸರಿನ ಕಾರನ್ನು ತಯಾರಿಸುತ್ತಿತ್ತು" ಎಂದು ಕುಪ್ಪುಸ್ವಾಮಿ ಹೀಗೆ ಎಷ್ಟೋ ಸ್ವಾರಸ್ಯಕರ ಸಂಗತಿಗಳನ್ನು ಹೇಳುತ್ತಾ ಹೋದರು.

“ಟೊಯೋಟಾ ಕಂಪನಿ ಹೆಸರು ಹೇಗೆ ಬಂತು ಗೊತ್ತಾ?" ಎಂದು ಕೇಳಿದ ಕುಪ್ಪುಸ್ವಾಮಿ, “ಜಪಾನಿ ನಲ್ಲಿ ಟೊಯೊದ ಎಂಬ ಹೆಸರಿನ ಪ್ರತಿಷ್ಠಿತ ಕುಟುಂಬವಿದೆ. ಆ ಕುಟುಂಬದಲ್ಲಿ ಹತ್ತಾರು ಮಂದಿ ದೊಡ್ಡ ದೊಡ್ಡ ಸಾಧನೆ ಮಾಡಿದವರೇ. ಅವರ ಪೈಕಿ ಸಾಕಿಚಿ ಟೊಯೊದ ಎಂಬಾತ ಟೊಯೊದ ಹೆಸರಿನಲ್ಲಿ ಮೋಟಾರು ವಾಹನ ತಯಾರಿಕಾ ಸಂಸ್ಥೆ ಆರಂಭಿಸಿದ.

ಜಪಾನಿ ಭಾಷೆಯಲ್ಲಿ ಟೊಯೊದ ಎಂದು ಬರೆದರೂ ಟೊಯೋಟಾ ಎಂದು ಉಚ್ಚರಿಸುವುದರಿಂದ, ಈ ಗೊಂದಲ ನಿವಾರಣೆಗೆ 1936ರಲ್ಲಿ ಸಂಸ್ಥೆಯ ಹೆಸರನ್ನು ಟೊಯೋಟಾ ಅಂತ ಬದಲಿಸ ಲಾಯಿತು" ಎಂದು ವಿವರಿಸಿದರು. ಟೊಯೋಟಾ ಸಂಸ್ಥೆಯು ಇನ್ನೋವಾ ಕಾರಿಗೆ ಆರಂಭದಲ್ಲಿ ‘ನೋವಾ’ ಎಂದು ಹೆಸರಿಟ್ಟಿತ್ತು. ಆ ಕಾರನ್ನು ಚೀನಾದಲ್ಲಿ ಬಿಡುಗಡೆ ಮಾಡಿದಾಗ, ಅದಕ್ಕೆ ಬೇಡಿಕೆಯೇ ಬರಲಿಲ್ಲ.

ನಂತರ ಗೊತ್ತಾಗಿದ್ದೇನೆಂದರೆ, ಚೈನೀಸ್ ಭಾಷೆಯಲ್ಲಿ ‘ನೋವಾ’ ಅಂದ್ರೆ ‘ಚಲಿಸುವುದಿಲ್ಲ’ (Not Going ) ಎಂದರ್ಥ. ನಂತರ ಆ ಹೆಸರನ್ನು ಇನ್ನೋವಾ ಅಂದರೆ ‘ಜೋರಾಗಿ ಚಲಿಸುತ್ತದೆ’ ಎಂದು ಬದಲಿಸಲಾಯಿತು.

ನಮ್ಮ ಮಾತಿನ ವಿಷಯ ಜಪಾನಿನಲ್ಲಿ ಚಾಲ್ತಿಯಲ್ಲಿರುವ ವಿಚಿತ್ರ ಕಾನೂನಿನತ್ತ ಹೊರಳಿತು. ಜಪಾನಿನಲ್ಲಿ ನೀವು ಕುಟುಂಬದ ಸದಸ್ಯರೊಬ್ಬರಿಗೆ ಕಳುಹಿಸಿದ ಪತ್ರವನ್ನು ಬೇರೆಯವರು ತೆರೆದು ಓದುವುದು ಕಾನೂನುಬಾಹಿರ ಗೊತ್ತಾ ಎಂದು ಕೇಳಿದರು. “ನೀವು ಸರಿಯಾದ ಕಾರಣವಿಲ್ಲದೇ ಕುಟುಂಬದ ಸದಸ್ಯರನ್ನೂ ಒಳಗೊಂಡಂತೆ ಬೇರೆಯವರಿಗೆ ಬರೆದಿರುವ ಮೊಹರು ಮಾಡಿದ ಪತ್ರವನ್ನು ತೆರೆದರೆ, ಜಪಾನಿ ದಂಡ ಸಂಹಿತೆಯ 133ನೇ ವಿಧಿಯ ಪ್ರಕಾರ, ನಿಮ್ಮ ಮೇಲೆ ಪತ್ರವನ್ನು ತೆರೆದ ಆರೋಪ ಹೊರಿಸಬಹುದು.

ಇದಕ್ಕೆ ಒಂದು ವರ್ಷದವರೆಗೆ ಜೈಲು ಶಿಕ್ಷೆ ಅಥವಾ ಎರಡು ಲಕ್ಷ ಯೆನ್‌ವರೆಗೆ ದಂಡ ವಿಧಿಸ ಬಹುದು. ಪತ್ರಗಳ ಜತೆಗೆ, ಬಿಲ್‌ಗಳು ಮತ್ತು ಅಂಥದೇ ವಸ್ತುಗಳು ಕೂಡ ಈ ವರ್ಗದ ಅಡಿಯಲ್ಲಿ ಬರುತ್ತವೆ ಗೊತ್ತಿರಲಿ" ಎಂದು ಕುಪ್ಪುಸ್ವಾಮಿ ಹೇಳಿದರು.

ಕುಪ್ಪುಸ್ವಾಮಿಯವರು ಇನ್ನೂ ಕೆಲವು ವಿಚಿತ್ರ ಕಾನೂನುಗಳನ್ನು ಹೇಳಿದರು- ಬಸ್ ಚಲಿಸು ತ್ತಿರುವಾಗ ಅದರ ಚಾಲಕನೊಂದಿಗೆ ಮಾತನಾಡುವುದನ್ನು ನಿಷೇಧಿಸಲಾಗಿದೆ. ರಸ್ತೆ ಸಾರಿಗೆ ಕಾನೂನಿನ ಪ್ರಕಾರ, ಬಸ್ ಚಲಿಸುತ್ತಿರುವಾಗ ಚಾಲಕನೊಂದಿಗೆ ಮಾತಾಡುವುದನ್ನು ಸಹ ಪ್ರಯಾ ಣಿಕರು ಗಮನಿಸಿ, ದೂರು ನೀಡಿದರೆ, ಚಾಲಕ ಮತ್ತು ಅವನೊಂದಿಗೆ ಮಾತಾಡಿದವನನ್ನು ಒಳಕ್ಕೆ ಹಾಕುತ್ತಾರೆ. ಚಾಲಕನೊಂದಿಗೆ ಮಾತಾಡಬೇಕು ಅಂತ ಅನಿಸಿದರೆ, ಆತನಿಗೆ ಬಸ್ ಸ್ಟಾಪ್ ಮಾಡು ವಂತೆ ಹೇಳಬೇಕು. ಆತ ನಿಲ್ಲಿಸಿದ ನಂತರವೇ ಮಾತಾಡಬಹುದು.

ಹಾಗೆಯೇ ಜಪಾನಿನಲ್ಲಿ ಇನ್ನೊಂದು ಕಾನೂನಿದೆ. ಅದರ ಪ್ರಕಾರ, ಅಂತ್ಯಕ್ರಿಯೆಗೆ ಅಡ್ಡಿಪಡಿ ಸುವುದು ಅಪರಾಧ. ಅದೇ ರೀತಿ ಧರ್ಮೋಪದೇಶ, ಪೂಜಾ ಸೇವೆಗೆ ಅಡ್ಡಿಪಡಿಸುವುದು ಸಹ ಅಪ ರಾಧ. ಆದರೆ ಮದುವೆಗೆ ಅಡ್ಡಿಪಡಿಸುವುದು ಧರ್ಮೋಪದೇಶಕ್ಕೆ ಅಡ್ಡಿಪಡಿಸಿದಂತಾಗುವುದಿಲ್ಲ. ಹಾಗಾದರೆ ಮದುವೆಗೆ ಅಡ್ಡಿಪಡಿಸುವುದು ಅಪರಾಧವೇನು? ಮದುವೆಗೆ ಅಡ್ಡಿಪಡಿಸಿದರೆ ವ್ಯವ ಹಾರದಲ್ಲಿ (ಬಲವಂತ ಅಥವಾ ವಂಚನೆಯಿಂದ) ಹಸ್ತಕ್ಷೇಪ ಮಾಡಿದ್ದಾರೆಂದು ಪರಿಗಣಿಸುವು ದರಿಂದ, ವ್ಯವಹಾರಕ್ಕೆ ಅಡ್ಡಿಪಡಿಸಿದ ಅಪರಾಽಯಾಗುತ್ತಾನೆ (ದಂಡ ಸಂಹಿತೆಯ ವಿಧಿ 233 ಅಥವಾ 234).

ಟೋಕಿಯೋಕ್ಕೆ ಭೇಟಿ ನೀಡುವಾಗ, ಯಾವ ಕಾರಣಕ್ಕೂ ಶೀತ ಮತ್ತು ಜ್ವರ ಔಷಧಿಗಳನ್ನು ತೆಗೆದು ಕೊಂಡು ಹೋಗಬಾರದು. ಅದು ಕಾನೂನುಬಾಹಿರ. ಹಾಗೆಯೇ ಕೊಡೈನ್ ಹೊಂದಿರುವ ಕೆಲವು ಸಾಮಾನ್ಯ ನೋವು ನಿವಾರಕಗಳು ಸಹ ಕಾನೂನುಬಾಹಿರ. ನೀವು ಈ ನಿಷೇಧಿತ ಔಷಧಿಗಳಲ್ಲಿ ಯಾವುದನ್ನಾದರೂ ಜಪಾನ್ ಗೆ ತಂದಿದ್ದರೆ ಅಥವಾ ವೈಯಕ್ತಿಕ ಬಳಕೆಗಾಗಿ ದೇಶಕ್ಕೆ ಆಮದು ಮಾಡಿಕೊಂಡಿದ್ದರೆ, ನಿಮ್ಮನ್ನು ತಪ್ಪಿತಸ್ಥರೆಂದು ಪರಿಗಣಿಸಬಹುದು. ಅಷ್ಟಕ್ಕೇ ನಿಮ್ಮನ್ನು ಬಂಧಿಸ ಬಹುದು ಅಥವಾ ಗಡಿಪಾರು ಮಾಡಬಹುದು.

ನಮ್ಮ ದೇಶದಲ್ಲಿ ಬ್ಯಾಂಕಿನಲ್ಲಿ ಅಥವಾ ಅಂಗಡಿಗಳಲ್ಲಿ ಕ್ಯಾಷಿಯರ್ ನಮಗೆ ನೀಡಬೇಕಾದ ಹಣ ಕ್ಕಿಂತ ಜಾಸ್ತಿ ಹಣ ನೀಡಿದರೆ, ನಾವು ಸುಮ್ಮನೆ ಜೇಬಿಗೆ ಹಾಕಿಕೊಂಡು ಬರುತ್ತೇವೆ. ಆದರೆ ಹಾಗೆ ಮಾಡುವುದು ಜಪಾನಿನಲ್ಲಿ ಅಪರಾಧ. ನೀವು ಹೆಚ್ಚು ಚಿಲ್ಲರೆ ಹಣವನ್ನು ಪಡೆದಿರುವುದನ್ನು ಗಮನಿಸಿದರೂ ಬ್ಯಾಂಕಿನಲ್ಲಿ ಕ್ಲರ್ಕ್ ಅಥವಾ ಕ್ಯಾಷಿಯರ್‌ಗೆ ತಿಳಿಸದಿದ್ದರೆ ಅದು ವಂಚನೆಯ ಅಪರಾಧವಾಗುತ್ತದೆ.

ನಿಮಗೆ ನೀಡಬೇಕಾಗಿದ್ದಕ್ಕಿಂತ ಹೆಚ್ಚಿನ ಹಣ ಬಂದಿದೆ ಎಂದು ನೀವು ಅರಿತುಕೊಂಡರೂ, ಅದನ್ನು ಹಿಂತಿರುಗಿಸದಿದ್ದರೆ, ನೀವು ವಂಚನೆ ಮಾಡಿದ ಶಿಕ್ಷೆಗೆ ಗುರಿಯಾಗಬಹುದು. ನೀವು ನಂತರ ತಪ್ಪನ್ನು ಗಮನಿಸಿದರೆ, ಆದರೆ ಹಣವನ್ನು ಹಿಂತಿರುಗಿಸದಿದ್ದರೆ, ನೀವು ‘ಮಾಲೀಕರಿಂದ ಪಡೆದ ಆಸ್ತಿಯ ದುರುಪಯೋಗ’ಕ್ಕೆ ಗುರಿಯಾಗಬಹುದು.

ಇಂಥ ಕಾನೂನನ್ನು ಜಪಾನಿನಲ್ಲಿ ಮಾತ್ರ ಕಾಣಲು ಸಾಧ್ಯ. 2015ರಲ್ಲಿ, ಕ್ಯಾಷಿಯರ್ ತಪ್ಪಾಗಿ ನೀಡಿ ದ್ದ 45 ಸಾವಿರ ಯೆನ್ ಹೆಚ್ಚುವರಿ (ಚಿಲ್ಲರೆ) ಹಣವನ್ನು ತೆಗೆದುಕೊಂಡ ನಂತರ ಮಹಿಳೆಯನ್ನು ಬಂಧಿಸಲಾಯಿತು. ಹಣವನ್ನು ತಪ್ಪಾಗಿ ಲೆಕ್ಕ ಹಾಕಲಾಗಿದೆ ಎಂದು ತನಗೆ ಅರಿವಿರಲಿಲ್ಲ ಎಂದು ಮಹಿಳೆ ಪರಿಪರಿಯಾಗಿ ಹೇಳಿಕೊಂಡರೂ, ವಂಚನೆ ಆರೋಪದ ಮೇಲೆ ಆಕೆಯನ್ನು ಬಂಧಿಸಲಾ ಯಿತು.

ಟೋಕಿಯೋಗೆ ನಿಮ್ಮ ಮುಂದಿನ ಭೇಟಿಯ ಮೊದಲು ನಿಮ್ಮ ಗಣಿತ ಕೌಶಲಗಳನ್ನು ಸುಧಾರಿಸಿ ಕೊಳ್ಳಿ ಮತ್ತು ಯಾವಾಗಲೂ ನಿಮ್ಮ ಚಿಲ್ಲರೆ ಹಣವನ್ನು ಪರಿಶೀಲಿಸಲು ಮರೆಯಬೇಡಿ ಎಂದು ಕುಪ್ಪುಸ್ವಾಮಿ ಕಿವಿಮಾತು ಹೇಳಲು ಮರೆಯಲಿಲ್ಲ.

ಧೂಮಪಾನಿಗಳ ಸಂಖ್ಯೆಯನ್ನು ಕಡಿಮೆ ಮಾಡುವ ಪ್ರಯತ್ನದಲ್ಲಿ, ಕಟ್ಟುನಿಟ್ಟಾದ ಧೂಮಪಾನ ಮಾರ್ಗಸೂಚಿಗಳನ್ನು ಜಾರಿಗೆ ತಂದಿರುವ ಜಪಾನ್‌ನ ಅನೇಕ ನಗರಗಳಲ್ಲಿ ಟೋಕಿಯೋ ಕೂಡ ಒಂದು. ಆ ನಗರವು ಧೂಮಪಾನ ಪ್ರದೇಶಗಳನ್ನು ಗೊತ್ತುಪಡಿಸಿದ್ದು, ಅವುಗಳನ್ನು ಪೋಸ್ಟರ್‌ಗಳು ಮತ್ತು ಚಿಹ್ನೆಗಳಿಂದ ಗುರುತಿಸಲಾಗಿದೆ ಮತ್ತು ಈ ಸ್ಥಳಗಳ ಹೊರಗೆ ಧೂಮಪಾನ ಮಾಡುವುದು ಕಾನೂನುಬಾಹಿರವಾಗಿದೆ.

ಇದೇ ಕಾರಣಕ್ಕಾಗಿ, ನಡೆದಾಡುತ್ತಾ ಧೂಮಪಾನ ಮಾಡುವುದು ಸಹ ಶಿಕ್ಷಾರ್ಹ. ಟೋಕಿಯೋದಲ್ಲಿ ಈ ನಿಯಮಗಳನ್ನು ನಿರ್ಲಕ್ಷಿಸುವವರು ಐದು ಸಾವಿರ ಯೆನ್‌ಗಳವರೆಗೆ ದಂಡವನ್ನು ತೆರಬೇಕಾ ಗುತ್ತದೆ.

ಆದರೆ ಜಪಾನಿನಲ್ಲಿ ಸಾರ್ವಜನಿಕವಾಗಿ ಕುಡಿಯುವುದು ಅಪರಾಧವಲ್ಲ. ಪೊಲೀಸರು ಪಕ್ಕದಲ್ಲಿ ನಡೆದುಕೊಂಡು ಹೋಗುತ್ತಿದ್ದರೂ, ಕೈಯಲ್ಲಿ ಬಿಯರ್ ಬಾಟಲಿ ಹಿಡಿದು ಹಾದಿಯಲ್ಲಿ ಕುಡಿ ಯುತ್ತಾ ಹೋಗಬಹುದು. ಅನೇಕ ರೈಲು ನಿಲ್ದಾಣಗಳಲ್ಲಿ ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಮದ್ಯ ಮಾರಾಟ ಮಾಡುವ ವೆಂಡಿಂಗ್ ಮೆಷಿನ್‌ಗಳಿವೆ. ಅಲ್ಲಿಯೇ ಕುಡಿದು ಟ್ಞಛಿ ಟ್ಟ ಠಿeಛಿ ಟZb ಅಂತ ಬಾಟಲಿಯನ್ನು ಕೈಯಲ್ಲಿ ಹಿಡಿದು ಹೊರಟರೂ ಸರಿಯೇ.

ಆದರೆ ಸಾಮಾನ್ಯವಾಗಿ ಯಾರೂ ಹಗಲು ಹೊತ್ತು ಕುಡಿಯುವುದಿಲ್ಲ (ಒಂದು ವೇಳೆ ಕುಡಿದರೆ ಅದು ಅಪರಾಧವಲ್ಲ). ಸಾಯಂಕಾಲ ಆರರ ನಂತರ ಇಂಥ ಚಟುವಟಿಕೆಗಳಿಗೆ ಯಾರ ಅಭ್ಯಂತರವೂ ಇಲ್ಲ. ವಿಚಿತ್ರ ಅಂದರೆ, ಜಪಾನಿನಲ್ಲಿ ನಿಮ್ಮ ಮೊದಲ ಸೋದರ ಸಂಬಂಧಿಯನ್ನು ಮದುವೆ ಯಾಗುವುದು ಕಾನೂನುಬದ್ಧವಾಗಿದೆ.

ಅಂಥ ವಿವಾಹಗಳನ್ನು ನಿಷೇಧಿಸಲಾಗಿರುವ ದೇಶಗಳ ಜನರಿಗೆ ಇದು ಆಶ್ಚರ್ಯವನ್ನುಂಟು ಮಾಡ ಬಹುದು. ಈ ಪದ್ಧತಿಯು ಜಪಾನಿನಲ್ಲಿ ಆಳವಾದ ಐತಿಹಾಸಿಕ ಬೇರುಗಳನ್ನು ಹೊಂದಿದೆ. ಇದು ಕುಲಗಳು ಸಾಮಾಜಿಕ ರಚನೆಯ ಕೇಂದ್ರ ಬಿಂದುವಾಗಿದ್ದ ಮತ್ತು ಸಂಪ್ರದಾಯಗಳು ಆಸ್ತಿಯನ್ನು ಕಾಪಾಡಿಕೊಳ್ಳಲು ಕುಲದೊಳಗಿನ ಅಂತರ್ವಿವಾಹವು ಸಾಮಾನ್ಯವಾಗಿದ್ದ ಕಾಲದಿಂದ ನಡೆದು ಕೊಂಡು ಬಂದಿದೆ.

ಕಾಲಾನಂತರದಲ್ಲಿ, ವಿಶೇಷವಾಗಿ ನಗರ ಪ್ರದೇಶಗಳಲ್ಲಿ ಸಾಮಾಜಿಕ ವರ್ತನೆಗಳು ಬದಲಾಗುತ್ತಾ, ಆನುವಂಶಿಕ ಅಪಾಯಗಳ ಬಗ್ಗೆ ಹೆಚ್ಚಿದ ಅರಿವು ಮತ್ತು ಪಾಶ್ಚಿಮಾತ್ಯ ಮೌಲ್ಯಗಳಿಂದ ಪ್ರಭಾವಿತ ವಾದ, ಬದಲಾಗುತ್ತಿರುವ ಸಾಂಸ್ಕೃತಿಕ ರೂಢಿಗಳಿಂದಾಗಿ ಅನೇಕರು ಮೊದಲ ಸೋದರ ಸಂಬಂಧಿ ಗಳನ್ನು ಮದುವೆಯಾಗದಿರುವುದನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ.

ಕುಪ್ಪುಸ್ವಾಮಿಯವರು ಇನ್ನೂ ಒಂದು ವಿಚಿತ್ರ ಕಾನೂನಿನ ಬಗ್ಗೆ ಗಮನಸೆಳೆದರು. ಎಂಟು ಸೆಂ.ಮೀ.ಗಿಂತ ಹೆಚ್ಚಿನ ಉದ್ದದ ಕತ್ತರಿಗಳನ್ನು ಒಯ್ಯುವುದು ಜಪಾನಿನ ಬಂದೂಕು ನಿಯಂತ್ರಣ ಕಾನೂನಿನ ಪ್ರಕಾರ ಅಪರಾಧ. ಆತ್ಮರಕ್ಷಣೆಯ ಉದ್ದೇಶಗಳಿಗಾಗಿ ಅಂಥ ಕತ್ತರಿಗಳನ್ನು ಕೊಂಡೊ ಯ್ಯುವುದನ್ನು ಸಹ ಈ ಕಾನೂನಿನ ಅಡಿಯಲ್ಲಿ ಸಮರ್ಥನೀಯ ಕಾರಣವೆಂದು ಪರಿಗಣಿಸ ಲಾಗುವುದಿಲ್ಲ ಎಂಬುದು ಗಮನಿಸಬೇಕಾದ ಸಂಗತಿ.

ಆದ್ದರಿಂದ, ಜಪಾನಿನಲ್ಲಿರುವ ವ್ಯಕ್ತಿಗಳು ಬ್ಲೇಡ್ ಇರುವ ಉಪಕರಣಗಳನ್ನು ಹೊತ್ತೊಯ್ಯುವಾಗ ಎಚ್ಚರಿಕೆ ವಹಿಸಬೇಕು ಮತ್ತು ಬ್ಲೇಡ್ ಉದ್ದ ಮತ್ತು ಅನುಮತಿಸುವ ಬಳಕೆಗೆ ಸಂಬಂಧಿಸಿದ ಕಾನೂನು ಅವಶ್ಯಕತೆಗಳನ್ನು ಅನುಸರಿಸುವುದನ್ನು ಖಚಿತಪಡಿಸಿಕೊಳ್ಳಬೇಕು. ಸಾರ್ವಜನಿಕ ಸುರಕ್ಷತೆ ಮತ್ತು ಭದ್ರತೆಯನ್ನು ಕಾಪಾಡಿಕೊಳ್ಳಲು, ಅಪಾಯಕಾರಿ ವಸ್ತುಗಳನ್ನು ಹೊಂದುವುದು ಮತ್ತು ಬಳಸುವುದರ ಸುತ್ತ ಇರುವ ಕಟ್ಟುನಿಟ್ಟಿನ ನಿಯಮಗಳನ್ನು ಈ ಕಾನೂನು ಪ್ರತಿಬಿಂಬಿಸು ತ್ತದೆ.

“ನನ್ನ ಪ್ರಕಾರ, ಜಪಾನ್ ಒಂದು ದೇಶವಲ್ಲ. ಅದೊಂದು ಪ್ರತ್ಯೇಕ ಜಗತ್ತು. ಕಾರಣ ಅಂಥ ಇನ್ನೊಂದು ದೇಶವನ್ನು ನೀವು ಜಗತ್ತಿನಲ್ಲೂ ನೋಡಲು ಸಾಧ್ಯವಿಲ್ಲ" ಎಂದು ಹೇಳಿ ಕುಪ್ಪುಸ್ವಾಮಿ ಮಾತು ಮುಗಿಸಿದರು. ಆ ಮಾತಿಗೆ ನಾನೂ ಮುದ್ರೆಯೊತ್ತಿದೆ.