ಕರ್ನಾಟಕ ಬಜೆಟ್​ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹೋಳಿ ಹಬ್ಬ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Jos Buttler: ಪಂದ್ಯ ಸೋತರೂ 2 ದಾಖಲೆ ಬರೆದ ಜಾಸ್‌ ಬಟ್ಲರ್‌

ಟಿ20 ಯಲ್ಲಿ ಅತ್ಯಧಿಕ ಸಿಕ್ಸರ್‌ ಬಾರಿಸಿದ ದಾಖಲೆ ಟೀಮ್‌ ಇಂಡಿಯಾದ ಮಾಜಿ ಆಟಗಾರ ರೋಹಿತ್‌ ಶರ್ಮ ಹೆಸರಿನಲ್ಲಿದೆ. 159 ಪಂದ್ಯಗಳನ್ನಾಡಿ 205 ಸಿಕ್ಸರ್‌ ಬಾರಿಸಿದ್ದಾರೆ.

Jos Buttler: ಪಂದ್ಯ ಸೋತರೂ 2 ದಾಖಲೆ ಬರೆದ ಜಾಸ್‌ ಬಟ್ಲರ್‌

Jos Buttler

Profile Abhilash BC Jan 26, 2025 9:51 AM

ಚೆನ್ನೈ: ಭಾರತ ವಿರುದ್ಧ ದ್ವಿತೀಯ ಟಿ20 ಪಂದ್ಯ ಸೋತರೂ ಇಂಗ್ಲೆಂಡ್‌(India vs England) ತಂಡದ ನಾಯಕ ಜಾಸ್‌ ಬಟ್ಲರ್‌(Jos Buttler) ಅವರು ಈ ಪಂದ್ಯದಲ್ಲಿ ಎರಡು ದಾಖಲೆಗಳನ್ನು ಬರೆದರು. ಪಂದ್ಯದಲ್ಲಿ ಮೂರು ಸಿಕ್ಸರ್‌ ಬಾರಿಸಿಸುವ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 150 ಸಿಕ್ಸರ್‌ ಪೂರೈಸಿದ ಇಂಗ್ಲೆಂಡ್‌ನ ಮೊದಲ, ವಿಶ್ವದ ನಾಲ್ಕನೇ ಬ್ಯಾಟರ್‌ ಎನಿಸಿಕೊಂಡರು.

ಪಂದ್ಯದಲ್ಲಿ ಬಿರುಸಿನ ಬ್ಯಾಟಿಂಗ್‌ ನಡೆಸಿದ ಬಟ್ಲರ್‌ 3 ಸಿಕ್ಸರ್‌ ಮತ್ತು 2 ಬೌಂಡರಿ ನೆರವಿನಿಂದ 45 ರನ್‌ ಬಾರಿಸಿದರು. ಇದೇ ವೇಳೆ ಭಾರತ ವಿರುದ್ಧ ಟಿ20ಯಲ್ಲಿ ಅತ್ಯಧಿಕ ರನ್‌ ಬಾರಿಸಿದ ವಿಶ್ವದ ಮೊದಲ ಬ್ಯಾಟರ್‌ ಎನಿಸಿಕೊಂಡರು. ಇದಕ್ಕೂ ಮುನ್ನ ಈ ದಾಖಲೆ ವೆಸ್ಟ್‌ ಇಂಡೀಸ್‌ನ ನಿಕೋಲಸ್‌ ಪೂರನ್‌(592) ಹೆಸರಿನಲ್ಲಿತ್ತು. ಇದೀಗ ಬಟ್ಲರ್‌(611) ರನ್‌ ಬಾರಿಸಿದ್ದಾರೆ.

ಟಿ20 ಯಲ್ಲಿ ಅತ್ಯಧಿಕ ಸಿಕ್ಸರ್‌ ಬಾರಿಸಿದ ದಾಖಲೆ ಟೀಮ್‌ ಇಂಡಿಯಾದ ಮಾಜಿ ಆಟಗಾರ ರೋಹಿತ್‌ ಶರ್ಮ ಹೆಸರಿನಲ್ಲಿದೆ. 159 ಪಂದ್ಯಗಳನ್ನಾಡಿ 205 ಸಿಕ್ಸರ್‌ ಬಾರಿಸಿದ್ದಾರೆ. ಮಾರ್ಟಿನ್ ಗಪ್ಟಿಲ್(173), ಮುಹಮ್ಮದ್ ವಸೀಂ(158) ಕ್ರಮವಾಗಿ ಎರಡು ಮತ್ತು ಮೂರನೇ ಸ್ಥಾನದಲ್ಲಿದ್ದಾರೆ.

ಇದನ್ನೂ ಓದಿ IND vs ENG: ಅರ್ಧಶತಕ ಸಿಡಿಸಿ ಸೋಲಂಚಿನಲ್ಲಿದ್ದ ಭಾರತವನ್ನು ಗೆಲ್ಲಿಸಿದ ತಿಲಕ್‌ ವರ್ಮಾ!

ಇಲ್ಲಿನ ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ಶನಿವಾರ ನಡೆದಿದ್ದ ಎರಡನೇ ಟಿ20ಐ ಪಂದ್ಯದಲ್ಲಿ ಇಂಗ್ಲೆಂಡ್‌ ನೀಡಿದ್ದ 166 ರನ್‌ಗಳ ಗುರಿಯನ್ನು ಹಿಂಬಾಲಿಸಿದ ಭಾರತ ತಂಡ, ತಿಲಕ್‌ ವರ್ಮಾ ಅರ್ಧಶತಕದ ಬಲದಿಂದ 19.2 ಓವರ್‌ಗಳಿಗೆ ತಲುಪಿತು. ಸೂರ್ಯಕುಮಾರ್‌ ಯಾದವ್‌, ಸಂಜು ಸ್ಯಾಮ್ಸನ್‌, ಹಾರ್ದಿಕ್‌ ಪಾಂಡ್ಯ ಘಟಾನುಘಟಿ ಬ್ಯಾಟ್ಸ್‌ಮನ್‌ಗಳು ಎಡವಿದರೂ ತಿಲಕ್‌ ವರ್ಮಾ ಭಾರತವನ್ನು ಗೆಲ್ಲಿಸಿ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.



ಸ್ಪರ್ಧಾತ್ಮಕ ಗುರಿಯನ್ನು ಹಿಂಬಾಲಿಸಿದ ಭಾರತ ತಂಡದ ಪರ ಅಭಿಷೇಕ್‌ ಶರ್ಮಾ, ಸಂಜು ಸ್ಯಾಮ್ಸನ್‌, ಸೂರ್ಯಕುಮಾರ್‌ ಯಾದವ್‌, ಹಾರ್ದಿಕ್‌ ಪಾಂಡ್ಯ, ಧ್ರುವ್‌ ಜುರೆಲ್‌ ಬ್ಯಾಟಿಂಗ್‌ ವೈಫಲ್ಯ ಅನುಭವಿಸಿದರು. ವಾಷಿಂಗ್ಟನ್‌ ಸುಂದರ್‌ 26 ರನ್‌ಗಳ ನಿರ್ಣಾಯಕ ಕೊಡುಗೆ ನೀಡಿ ವಿಕೆಟ್‌ ಒಪ್ಪಿಸಿದರು. ಆದರೆ, ಮೂರನೇ ಕ್ರಮಾಂಕದಲ್ಲಿ ಕ್ರೀಸ್‌ಗೆ ಬಂದು ಕೊನೆಯವರೆಗೂ ಬ್ಯಾಟ್‌ ಮಾಡಿದ ತಿಲಕ್‌ ವರ್ಮಾ, ಅತ್ಯಂತ ಜವಾಬ್ದಾರಿಯುತವಾಗಿ ಆಟವಾಡಿದರು. ಅವರನ್ನು ನಿಯಂತ್ರಿಸಲು ಇಂಗ್ಲೆಂಡ್‌ ಬೌಲರ್‌ಗಳಿಂದ ಸಾಧ್ಯವಾಗಲಿಲ್ಲ. ಆಡಿದ 55 ಎಸೆತಗಳಲ್ಲಿ 5 ಸಿಕ್ಸರ್‌ ಹಾಗೂ 4 ಬೌಂಡರಿಗಳೊಂದಿಗೆ ಅಜೇಯ 72 ರನ್‌ಗಳನ್ನು ಸಿಡಿಸಿದರು. ಆ ಮೂಲಕ ಭಾರತ ತಂಡವನ್ನು ಕೊನೆಯ ಓವರ್‌ನಲ್ಲಿ ಗೆಲುವಿನ ದಡ ಸೇರಿಸಿದರು. 5 ಎಸೆತಗಳಲ್ಲಿ 9 ರನ್‌ ಗಳಿಸಿದ ರವಿ ಬಿಷ್ಣೋಯ್‌ ಕೂಡ ಭಾರತದ ಗೆಲುವಿನಲ್ಲಿ ಅಳಿಲು ಸೇವೆ ಸಲ್ಲಿಸಿದರು. ಇಂಗ್ಲೆಂಡ್‌ ಪರ ಬ್ರೈಡೆನ್‌ ಕಾರ್ಸ್‌ 3 ವಿಕೆಟ್‌ ಕಿತ್ತರು.