ಶಿರಸಿ: ನಮ್ಮ ತಾಲೂಕಿಗೆ ತಹಸೀಲ್ದಾರ್ ಅವಶ್ಯಕತೆ ಇದ್ದು, ಸಾರ್ವಜನಿಕ ವಲಯದಲ್ಲಿ ತಹಸೀ ಲ್ದಾರ್ ಇಲ್ಲದೇ ಪರದಾಡುವಂತಾಗಿದೆ. ಆದ್ದರಿಂದ ಸಾರ್ವಜನಿಕ ಹಿತಾಸಕ್ತಿಯಿಂದ 23 ರಂದು ಕಾರವಾರ ಚಲೋ ಹಮ್ಮಿಕೊಂಡಿದ್ದೇವೆ. ಸಮಾನ ಮನಸ್ಕರೆಲ್ಲರೂ ಎಲ್ಲರೂ ಕೈ ಜೋಡಿಸಿ ಎಂದು ಹೋರಾಟಗಾರ, ಸಾಮಾಜಿಕ ಕಾರ್ಯಕರ್ತ ಅನಂತ ಮೂರ್ತಿ ಹೆಗಡೆ ಹೇಳಿದರು.
ಇದನ್ನೂ ಓದಿ: Sirsi News: ಸಂಚಾರ ದಟ್ಟಣೆ ತಡೆಯಲು ರಸ್ತೆಯ ಮಧ್ಯದಲ್ಲಿಯ ಹೊಂಡ ಮುಚ್ಚಿದ ಪೊಲೀಸ್ ಸಿಬ್ಬಂದಿ
ಅವರು ನಗರದ ಪತ್ರಿಕಾಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು. ಈ ರಾಜ್ಯ ಸರಕಾರ ಹೋರಾಟಗಾರರ, ಪತ್ರಿಕಾ ವರದಿ ಇದ್ಯಾವುದಕ್ಕೂ ಸ್ಪಂದಿಸದ ಸರಕಾರದ ವಿರುದ್ದ ಅವರು ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು.
ಅಂದು ಸಮಾನ ಮನಸ್ಕರೆಲ್ಲ ಎಲ್ಲರೂ ಜಿಲ್ಲಾಧಿಕಾರಿಗಳ ಬಳಿ ಈ ವಿಷಯ ಪ್ರಸ್ತಾಪಿಸಲಿದ್ದೇವೆ ಎಂದರು.