IPL 2025: ಕೆಜಿಎಫ್ ಹಾಡಿನೊಂದಿಗೆ ಎಂಟ್ರಿ; ಎದುರಾಳಿ ತಂಡಕ್ಕೆ ಎಚ್ಚರಿಕೆ ಕೊಟ್ಟ ಕರುಣ್ ನಾಯರ್
ಕಳೆದ ದೇಶೀಯ ಕ್ರಿಕೆಟ್ ಋತುವಿನಲ್ಲಿ ಸಾವಿರಕ್ಕೂ ಅಧಿಕ ರನ್ ಕಲೆಹಾಕಿ ಭರ್ಜರಿ ಫಾರ್ಮ್‌ನಲ್ಲಿರುವ ನಾಯರ್, ಐಪಿಎಲ್‌ನಲ್ಲಿಯೂ ಇದೇ ಪ್ರದರ್ಶನದೊಂದಿಗೆ ಟೀಮ್ ಇಂಡಿಯಾಕ್ಕೆ ಕಮ್‌ಬ್ಯಾಕ್ ಮಾಡುವ ವಿಶ್ವಾಸದಲ್ಲಿದ್ದಾರೆ. ಐಪಿಎಲ್‌ನಲ್ಲಿಯೂ ಮಿಂಚಿದರೆ ಜೂನ್‌ನಲ್ಲಿ ನಡೆಯುವ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಸ್ಥಾನ ಪಡೆಯುವ ಸಾಧ್ಯತೆ ಇದೆ.

ನವದೆಹಲಿ: ದೇಶೀಯ ಕ್ರಿಕೆಟ್‌ನಲ್ಲಿ ರನ್ ಪ್ರವಾಹವನ್ನೇ ಹರಿಸಿ ಪ್ರಚಂಡ ಬ್ಯಾಟಿಂಗ್ ಫಾರ್ಮ್‌ನಲ್ಲಿರುವ ಕರ್ನಾಟಕದ ಬ್ಯಾಟರ್ ಕರುಣ್ ನಾಯರ್ ಇದೀಗ 18ನೇ ಆವೃತಿಯ ಐಪಿಎಲ್‌ನಲ್ಲೂ ಅದೇ ಲಯ ಮುಂದುವರಿಸುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಕರುಣ್ ಡೆಲ್ಲಿ ತಂಡ ಕೂಡಿಕೊಂಡಿರುವ ವಿಡಿಯೊವನ್ನು ಫ್ರಾಂಚೈಸಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಕೆಜಿಎಫ್ ಸಿನಿಮಾದ ಮ್ಯೂಸಿಕ್‌ನೊಂದಿಗೆ ಖಡಕ್ ಎಂಟ್ರಿ ನೀಡುವ ಕರುಣ್, ಬ್ಯಾಟ್ ಹಿಡಿದು ಯಶ್ ಅವರ ‘ಮಾನ್‌ಸ್ಟರ್’ ಡೈಲಾಗ್ ಹೊಡೆದಿದ್ದಾರೆ. ಈ ಮೂಲಕ ಎದುರಾಳಿ ತಂಡಗಳಿಗೆ ಎಚರಿಕೆ ನೀಡಿದ್ದಾರೆ.
ಕಳೆದ ದೇಶೀಯ ಕ್ರಿಕೆಟ್ ಋತುವಿನಲ್ಲಿ ಸಾವಿರಕ್ಕೂ ಅಧಿಕ ರನ್ ಕಲೆಹಾಕಿ ಭರ್ಜರಿ ಫಾರ್ಮ್‌ನಲ್ಲಿರುವ ನಾಯರ್, ಐಪಿಎಲ್‌ನಲ್ಲಿಯೂ ಇದೇ ಪ್ರದರ್ಶನದೊಂದಿಗೆ ಟೀಮ್ ಇಂಡಿಯಾಕ್ಕೆ ಕಮ್‌ಬ್ಯಾಕ್ ಮಾಡುವ ವಿಶ್ವಾಸದಲ್ಲಿದ್ದಾರೆ. ಐಪಿಎಲ್‌ನಲ್ಲಿಯೂ ಮಿಂಚಿದರೆ ಜೂನ್‌ನಲ್ಲಿ ನಡೆಯುವ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಸ್ಥಾನ ಪಡೆಯುವ ಸಾಧ್ಯತೆ ಇದೆ.
ಬಾಲ್ಯ ಸ್ನೇಹಿತ ರಾಹುಲ್ ಜತೆ ಆಡಲು ಉತ್ಸುಕ
ಬಾಲ್ಯ ಸ್ನೇಹಿತ ಕೆ.ಎಲ್ ರಾಹುಲ್ ಜತೆಗೂಡಿ ಈ ಬಾರಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಪರ ಕಣಕ್ಕಿಳಿಯುತ್ತಿರುವುದು ಸಂತಸವಾಗಿದೆ. ನಾವು ಆರಂಭಿಕ ದಿನದಿಂದಲೂ ಒಟ್ಟಿಗೆ ಆಡುತ್ತಿದ್ದೇವೆ. ಕಳೆದ ಕೆಲವು ಋತುಗಳಲ್ಲಿ ಹಾಗೂ ಐಪಿಎಲ್‌ನಲ್ಲಿ ರಾಹುಲ್ ಉತ್ತಮ ಪ್ರದರ್ಶನ ನೀಡಿದ್ದಾರೆ. ದೇಶೀಯ ಕ್ರಿಕೆಟ್ ಯಶಸ್ಸನ್ನು ಪುನರಾವರ್ತಿಸುವ ಮೂಲಕ ಡೆಲ್ಲಿ ತಂಡಕ್ಕೆ ಮೊದಲ ಪ್ರಶಸ್ತಿ ಗೆದ್ದುಕೊಡುವುದನ್ನು ಎದುರು ನೋಡುತ್ತಿದ್ದೇನೆ ಎಂದು ಕರುಣ್ ತಿಳಿಸಿದ್ದಾರೆ. ಕರುಣ್ ಮೂಲಬೆಲೆ ₹50 ಲಕ್ಷಕ್ಕೆ ಡೆಲ್ಲಿ ತಂಡ ಸೇರಿದ್ದಾರೆ. ಇದಕ್ಕೂ ಮುನ್ನ 2016-17ರಲ್ಲೂ ಡೆಲ್ಲಿ ತಂಡದ ಸದಸ್ಯರಾಗಿದ್ದರು. ಕಳೆದ ಆವೃತ್ತಿಯಲ್ಲಿ ರಾಹುಲ್ ಸಾರಥ್ಯದ ಲಕ್ನೋ ತಂಡದಲ್ಲಿ ಕರುಣ್ ಕಾಣಿಸಿಕೊಂಡಿದ್ದರು. ಆದರೆ ಆಡುವ ಅವಕಾಶ ಸಿಕ್ಕಿರಲಿಲ್ಲ. ಈ ಬಾರಿ ಮಾತ್ರ ಆಡುವ ಹನ್ನೊಂದರ ಬಳಗದಲ್ಲಿ ಅವರು ಕಾಣಿಸಿಕೊಳ್ಳುವುದು ನಿಶ್ಚಿತ.
𝗔𝗿𝗲 𝘆𝗼𝘂 𝗿𝗲𝗮𝗱𝘆 𝗳𝗼𝗿 𝗞𝗮𝗿𝘂𝗻 𝗡𝗮𝗶𝗿? 🔥 pic.twitter.com/fT1qokTGuQ
— Delhi Capitals (@DelhiCapitals) March 15, 2025
ಡೆಲ್ಲಿ ಪರ ಆಡಲು ಎದುರು ನೋಡುತ್ತಿದ್ದೇನೆ
"ತಂಡ ಮತ್ತು ಟೀಮ್ ಮ್ಯಾನೇಜ್‌ಮೆಂಟ್ ನಿರ್ಮಿಸಿರುವ ರೀತಿಯನ್ನು ನೋಡಿದರೆ, ಇದು ಸಮತೋಲಿತ ತಂಡವೆಂದು ತೋರುತ್ತದೆ. ಇಲ್ಲಿ ಅನುಭವಿ ಆಟಗಾರರು ಮತ್ತು ಯುವ ಪ್ರತಿಭೆಗಳ ಉತ್ತಮ ಮಿಶ್ರಣವಿದೆ ಮತ್ತು ಕೆಲವು ಅದ್ಭುತ ಪ್ರತಿಭಾನ್ವಿತ ಯುವಕರೊಂದಿಗೆ ಆಟವಾಡಲು ಮತ್ತು ಕಲಿಯಲು ನಾನು ಉತ್ಸುಕನಾಗಿದ್ದೇನೆ. ಮಿಚೆಲ್ ಸ್ಟಾರ್ಕ್, ಅಕ್ಷರ್ ಪಟೇಲ್, ಕುಲ್‌ದೀಪ್ ಯಾದವ್ ಅವರಂತಹ ಆಟಗಾರರೊಂದಿಗೆ ನಮ್ಮ ತಂಡ ಬಲಿಷ್ಠವಾಗಿದೆ. ಐಪಿಎಲ್ ಆರಂಭವಾಗಲು ನಾನು ಕಾತುರದಿಂದ ಕಾಯುತ್ತಿದ್ದೇನೆ" ಎಂದು ಕೆಎಲ್ ರಾಹುಲ್ ಹೇಳಿದ್ದಾರೆ.
ಇದನ್ನೂ ಓದಿ IPL 2025: ಕೇವಲ ಲೀಗ್ ಪಂದ್ಯಕ್ಕಾಗಿ ಆರ್‌ಸಿಬಿ ಪ್ರಯಾಣಿಸಲಿದೆ 17 ಸಾವಿರ ಕಿ. ಮೀ.
ಡೆಲ್ಲಿ ಕ್ಯಾಪಿಟಲ್ಸ್ ತಂಡ
ಕೆಎಲ್ ರಾಹುಲ್, ಮಿಚೆಲ್ ಸ್ಟಾರ್ಕ್, ಟಿ. ನಟರಾಜನ್, ಜೇಕ್ ಫ್ರೇಸರ್ ಮೆಕ್ಗುರ್ಕ್, ಕರುಣ್ ನಾಯರ್, ಸಮೀರ್ ರಿಜ್ವಿ, ಆಶುತೋಷ್ ಶರ್ಮ, ಮೋಹಿತ್ ಶರ್ಮ, ಮುಕೇಶ್ ಕುಮಾರ್, ಫಾಫ್ ಡು ಪ್ಲೆಸಿಸ್, ದರ್ಶನ್ ನಲ್ಕಂಡೆ, ವಿಪ್ರಜ್ ನಿಗಮ್, ದುಶ್ಮಂತ ಚಮೀರ, ಡೊನೊವನ್ ಫೆರೀರ , ಅಜಯ್ ಮಂಡಲ್, ಮನ್ವಂತ್ ಕುಮಾರ್, ತ್ರಿಪುರಣ ವಿಜಯ್, ಮಾಧವ್ ತಿವಾರಿ.