ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

KL Rahul: ಇಂಗ್ಲೆಂಡ್ ಲಯನ್ಸ್ ವಿರುದ್ಧ ಅಭ್ಯಾಸ ಪಂದ್ಯ ಆಡಲಿದ್ದಾರೆ ರಾಹುಲ್‌

ಭಾರತದ ಹಲವು ಕಡೆ ಮಳೆಯಾಗುತ್ತಿರುವ ಕಾರಣ ಕ್ರಿಕೆಟ್‌ ಅಭ್ಯಾಸಕ್ಕೆ ಅಡ್ಡಿಯಾಗಿದೆ. ಹೀಗಾಗಿ ರಾಹುಲ್‌ ಭಾರತ ಎ ಪರ ಅನಧಿಕೃತ ಟೆಸ್ಟ್ ಪಂದ್ಯ ಆಡಲು ಅನುಮತಿಗಾಗಿ ಬಿಸಿಸಿಐಗೆ ಮನವಿ ಮಾಡಿದ್ದರು. ರಾಹುಲ್‌ ಅವರ ಈ ನಿರ್ಧಾರಕ್ಕೆ ಬಿಸಿಸಿಐ ಕೂಡ ಸಮ್ಮತಿ ಸೂಚಿಸಿದೆ ಎನ್ನಲಾಗಿದೆ.

ಇಂಗ್ಲೆಂಡ್ ಲಯನ್ಸ್ ವಿರುದ್ಧ ಅಭ್ಯಾಸ ಪಂದ್ಯ ಆಡಲಿದ್ದಾರೆ ರಾಹುಲ್‌

Profile Abhilash BC Jun 5, 2025 2:18 PM

ಲಂಡನ್‌: ಜೂನ್ 20 ರಿಂದ ಇಂಗ್ಲೆಂಡ್(England vs India) ವಿರುದ್ಧ ಪ್ರಾರಂಭವಾಗುವ ಐದು ಪಂದ್ಯಗಳ ಟೆಸ್ಟ್ ಸರಣಿಗೂ ಮುನ್ನ ಕೆಂಪು ಚೆಂಡಿನ ಪ್ರದರ್ಶನವನ್ನು ಸದುಪಯೋಗಪಡಿಸಿಕೊಳ್ಳಲು ಕೆ.ಎಲ್ ರಾಹುಲ್ (KL Rahul) ಅವರು ಇಂಗ್ಲೆಂಡ್ ಲಯನ್ಸ್(England Lions) ವಿರುದ್ಧದ ಎರಡನೇ ಮತ್ತು ಅಂತಿಮ ಅನಧಿಕೃತ ಟೆಸ್ಟ್ ಪಂದ್ಯದಲ್ಲಿ ಆಡುವುದು ಬಹುತೇಕ ಖಚಿತವಾಗಿದೆ. ಶುಭಮನ್ ಗಿಲ್(Shubman Gill) ನೇತೃತ್ವದ ಭಾರತ ತಂಡ ಶುಕ್ರವಾರ ತಡರಾತ್ರಿ ಮುಂಬೈನಿಂದ ಇಂಗ್ಲೆಂಡ್‌ಗೆ ಹೊರಡಲಿದೆ.

ಭಾರತದ ಹಲವು ಕಡೆ ಮಳೆಯಾಗುತ್ತಿರುವ ಕಾರಣ ಕ್ರಿಕೆಟ್‌ ಅಭ್ಯಾಸಕ್ಕೆ ಅಡ್ಡಿಯಾಗಿದೆ. ಹೀಗಾಗಿ ರಾಹುಲ್‌ ಭಾರತ ಎ ಪರ ಅನಧಿಕೃತ ಟೆಸ್ಟ್ ಪಂದ್ಯ ಆಡಲು ಅನುಮತಿಗಾಗಿ ಬಿಸಿಸಿಐಗೆ ಮನವಿ ಮಾಡಿದ್ದರು. ರಾಹುಲ್‌ ಅವರ ಈ ನಿರ್ಧಾರಕ್ಕೆ ಬಿಸಿಸಿಐ ಕೂಡ ಸಮ್ಮತಿ ಸೂಚಿಸಿದೆ ಎನ್ನಲಾಗಿದೆ.

ಇಂಗ್ಲೆಂಡ್‌ನಲ್ಲಿ ರಾಹುಲ್‌ ಎರಡು ಶತಕಗಳು ಸೇರಿದಂತೆ ಉತ್ತಮ ಬ್ಯಾಟಿಂಗ್‌ ದಾಖಲೆ ಹೊಂದಿದ್ದಾರೆ. ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ನಿವೃತ್ತರಾದ ನಂತರ ಟೆಸ್ಟ್ ತಂಡದಲ್ಲಿ ಅತ್ಯಂತ ಹಿರಿಯ ಬ್ಯಾಟ್ಸ್‌ಮನ್ ಆಗಿದ್ದಾರೆ.

ಇಂಗ್ಲೆಂಡ್ ಲಯನ್ಸ್ ವಿರುದ್ಧದ ಮೊದಲ ಪಂದ್ಯದಲ್ಲಿ ಟೆಸ್ಟ್ ತಂಡದ ಆರು ಆಟಗಾರರು ಭಾಗವಹಿಸಿದ್ದರು. ಪಂದ್ಯ ಡ್ರಾದಲ್ಲಿ ಕೊನೆಗೊಂಡಿತ್ತು. ಮೊದಲ ಪಂದ್ಯ ಆಡದ ವೇಗಿ ಆಕಾಶ್ ದೀಪ್ ದ್ವಿತೀಯ ಪಂದ್ಯದಲ್ಲಿ ಆಡುವ ಸಾಧ್ಯತೆಯಿದೆ.

ಇದನ್ನೂ ಓದಿ WTC Final 2025: ಐಪಿಎಲ್‌ ಮುಗಿಯಿತು ಇನ್ನು ಟೆಸ್ಟ್‌ ಕ್ರಿಕೆಟ್‌ ಕಾವು

ರಾಹುಲ್‌ 58 ಟೆಸ್ಟ್‌ಗಳಲ್ಲಿ ಅವರು 33.57 ರ ಸರಾಸರಿಯಲ್ಲಿ ಕಳಪೆ ಪ್ರದರ್ಶನ ನೀಡಿದ್ದರೂ, ಸಾಂಪ್ರದಾಯಿಕ ಸ್ವರೂಪದಲ್ಲಿ ಅವರ ಹೆಚ್ಚಿನ ಯಶಸ್ಸು ಅಗ್ರ ಕ್ರಮಾಂಕದಲ್ಲಿ ಬಂದಿದೆ. ಹೀಗಾಗಿ ಅವರು ಇಂಗ್ಲೆಂಡ್‌ ಟೆಸ್ಟ್‌ನಲ್ಲಿ ಆರಂಭಿಕರಾಗಿ ಮುಂದುವರಿಯುತ್ತಾರೋ ಅಥವಾ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುತ್ತಾರೋ ಎಂಬುದು ಕಾದು ನೋಡಬೇಕಿದೆ. ಮೊದಲ ಪಂದ್ಯದಲ್ಲಿ ದ್ವಿಶತಕ ಬಾರಿಸಿದ ಕರುಣ್‌ ನಾಯರ್ ಟೆಸ್ಟ್ ಸರಣಿಯಲ್ಲೂ ತಂಡದಲ್ಲಿ ಅವಕಾಶ ಪಡೆಯಬಹುದು. ಅವರನ್ನು ನಿರ್ಲಕ್ಷಿಸುವುದು ಕಷ್ಟಕರವಾಗಿದೆ.