Kolhar News: ಕಾಂಗ್ರೆಸ್ ತೆಕ್ಕೆಗೆ ಕೊಲ್ಹಾರ ಪಟ್ಟಣ ಪಂಚಾಯಿತ
ಬುಧವಾರ ಜರುಗಿದ ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಕಾಂಗ್ರೆಸ ಬೆಂಬಲಿತ 4ನೇ ವಾರ್ಡಿನ ಪಕ್ಷೇತರ ಸದಸ್ಯ ಚನ್ನಮಲ್ಲಪ್ಪ ಗಿಡ್ಡಪ್ಪಗೋಳ. ಉಪಾಧ್ಯಕ್ಷರಾಗಿ 9ನೇ ವಾರ್ಡಿನ ಕಾಂಗ್ರೆಸ ಸದಸ್ಯೆ ರಾಜಮಾ ನದಾಫ ಅವಿರೋಧವಾಗಿ ಆಯ್ಕೆಯಾದರು. ಕೊಲ್ಹಾರ ಪ.ಪಂ ಅಧ್ಯಕ್ಷ ಸ್ಥಾನ ಸಾಮಾ ನ್ಯ ವರ್ಗಕ್ಕೆ ಮೀಸಲಾಗಿದ್ದರೆ, ಉಪಾಧ್ಯಕ್ಷ ಸ್ಥಾನ ಸಾಮಾ ನ್ಯ "ಮಹಿಳೆ"ಗೆ ಮೀಸಲಾಗಿತ್ತು. ಬಹುಮತ ಹೊಂದಿರುವ ಕಾಂಗ್ರೆಸ ಅಧಿಕಾರದ ಚುಕ್ಕಾಣಿ ಹಿಡಿಯಿತು
![Kolhar News: ಕಾಂಗ್ರೆಸ್ ತೆಕ್ಕೆಗೆ ಕೊಲ್ಹಾರ ಪಟ್ಟಣ ಪಂಚಾಯಿತ](https://cdn-vishwavani-prod.hindverse.com/media/original_images/kolhar_J.jpg)
![Profile](https://vishwavani.news/static/img/user.png)
ಕೊಲ್ಹಾರ: ನಿರೀಕ್ಷೆಯಂತೆ ಕೊಲ್ಹಾರ ಪಟ್ಟಣ ಪಂಚಾಯತ ಅಧ್ಯಕ್ಷ, ಉಪಾಧ್ಯಕ್ಷ ಆಯ್ಕೆ ಪ್ರಕ್ರಿಯೆ ಯಲ್ಲಿ ಕಾಂಗ್ರೆಸ ಮೇಲುಗೈ ಸಾಧಿಸಿ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನ ವಶಪಡಿಸಿಕೊಂಡಿತು. ಬುಧವಾರ ಜರುಗಿದ ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಕಾಂಗ್ರೆಸ ಬೆಂಬಲಿತ 4ನೇ ವಾರ್ಡಿನ ಪಕ್ಷೇತರ ಸದಸ್ಯ ಚನ್ನಮಲ್ಲಪ್ಪ ಗಿಡ್ಡಪ್ಪಗೋಳ. ಉಪಾಧ್ಯಕ್ಷರಾಗಿ 9ನೇ ವಾರ್ಡಿನ ಕಾಂಗ್ರೆಸ ಸದಸ್ಯೆ ರಾಜಮಾ ನದಾಫ ಅವಿರೋಧವಾಗಿ ಆಯ್ಕೆಯಾದರು. ಕೊಲ್ಹಾರ ಪ.ಪಂ ಅಧ್ಯಕ್ಷ ಸ್ಥಾನ ಸಾಮಾನ್ಯ ವರ್ಗಕ್ಕೆ ಮೀಸಲಾಗಿದ್ದರೆ, ಉಪಾಧ್ಯಕ್ಷ ಸ್ಥಾನ ಸಾಮಾ ನ್ಯ "ಮಹಿಳೆ"ಗೆ ಮೀಸಲಾಗಿತ್ತು. ಬಹುಮತ ಹೊಂದಿರುವ ಕಾಂಗ್ರೆಸ ಅಧಿಕಾರದ ಚುಕ್ಕಾಣಿ ಹಿಡಿಯಿತು.
ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆಯನ್ನು ಚುನಾವಣಾಧಿಕಾರಿ ತಹಶೀಲ್ದಾರ ಎಸ್.ಎಸ್ ನಾಯಕಲಮಠ ಘೋಷಿಸಿದರು. ಅಧ್ಯಕ್ಷ, ಉಪಾಧ್ಯಕ್ಷರಾಗಿ ಆಯ್ಕೆಯಾದವರನ್ನು ಸಚಿವ ಶಿವಾನಂದ ಪಾಟೀಲ ಸನ್ಮಾನಿಸಿದರು.
ಇದನ್ನೂ ಓದಿ: Kolkata Horrror: 8ನೇ ತರಗತಿ ವಿದ್ಯಾರ್ಥಿನಿಯ ಮೇಲೆ ಅತ್ಯಾಚಾರ ಎಸಗಿ ಕೊಲೆ: ಆರೋಪಿ ಅರೆಸ್ಟ್!
ವಿಜಯೋತ್ಸವ: ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ಪ್ರಕ್ರಿಯೆ ಪೂರ್ಣಗೊಂಡ ನಂತರ ಕಾಂಗ್ರೆಸ ಮುಖಂಡರು, ಕಾರ್ಯಕರ್ತರು ಪಟಾಕಿ ಸಿಡಿಸಿ, ಗುಲಾಲು ಎರಚಿ ಸಂಭ್ರಮಾಚರಣೆ ನಡೆಸಿದರು.
ಈ ಸಂದರ್ಭದಲ್ಲಿ ಮಾಜಿ ಜಿ.ಪಂ ಸದಸ್ಯ ಕಲ್ಲು ದೇಸಾಯಿ, ಬ್ಲಾಕ್ ಕಾಂಗ್ರೆಸ ಅಧ್ಯಕ್ಷ ಆರ್.ಬಿ ಪಕಾಲಿ, ಮಹೇಶ ಗಿಡ್ಡಪ್ಪಗೋಳ, ತಾನಾಜಿ ನಾಗರಾಳ, ಪ ಪಂ ಸದಸ್ಯರು ಕಾಂಗ್ರೆಸ ಮುಖಂಡರು ಹಾಗೂ ಇನ್ನಿತರರು ಇದ್ದರು.