Kolkata Horrror: 8ನೇ ತರಗತಿ ವಿದ್ಯಾರ್ಥಿನಿಯ ಮೇಲೆ ಅತ್ಯಾಚಾರ ಎಸಗಿ ಕೊಲೆ: ಆರೋಪಿ ಅರೆಸ್ಟ್!
ಕೊಲ್ಕತ್ತಾದ ನ್ಯೂ ಟೌನ್ ಪ್ರದೇಶದಲ್ಲಿ 8 ನೇ ತರಗತಿ ವಿದ್ಯಾರ್ಥಿನಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ ಕತ್ತು ಹಿಸುಕಿ ಅಮಾನವೀಯವಾಗಿ ಹತೈಗೈದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ತಾಯಿ ಗದರಿಸಿದ ಕಾರಣಕ್ಕೆ ಪತ್ರ ಬರೆದಿಟ್ಟು ಮನೆಯಿಂದ ಹೊರಗೆ ಹೋಗಿದ್ದ ಬಾಲಕಿಯ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಲಾಗಿದೆ ಎಂದು ತಿಳಿದು ಬಂದಿದೆ. ಶುಕ್ರವಾರ ಬೆಳಗ್ಗೆ ನ್ಯೂ ಟೌನ್‌ನ ನಿರ್ಜನ ಪ್ರದೇಶದಲ್ಲಿ ಪೊಲೀಸರು ಆಕೆಯ ಶವವನ್ನು ಪತ್ತೆ ಮಾಡಿದ್ದಾರೆ.
![ವಿದ್ಯಾರ್ಥಿನಿ ಮೇಲೆ ಅತ್ಯಾಚಾರವೆಸಗಿ ಹತ್ಯೆಗೈದ ಆರೋಪಿ ಬಂಧನ!](https://cdn-vishwavani-prod.hindverse.com/media/original_images/Kolkata_Horror.jpg)
Kolkata Horror
![Profile](https://vishwavani.news/static/img/user.png)
ಕೊಲ್ಕತ್ತಾ: ಕೊಲ್ಕತ್ತಾದ ನ್ಯೂ ಟೌನ್(New Town) ಪ್ರದೇಶದಲ್ಲಿ 8 ನೇ ತರಗತಿ ವಿದ್ಯಾರ್ಥಿನಿಯ ಮೇಲೆ ಲೈಂಗಿಕ ದೌರ್ಜನ್ಯ (Physical Assault) ಎಸಗಿ ನಂತರ ಕತ್ತು ಹಿಸುಕಿ ಅಮಾನವೀಯವಾಗಿ ಹತೈಗೈದ ಆರೋಪಿಯನ್ನು(Kolkata Horror) ಪೊಲೀಸರು ಬಂಧಿಸಿದ್ದಾರೆ. ತಾಯಿ ಗದರಿಸಿದ ಕಾರಣಕ್ಕೆ ಪತ್ರ ಬರೆದಿಟ್ಟು ಮನೆಯಿಂದ ಹೊರಗೆ ಹೋಗಿದ್ದ ಬಾಲಕಿಯ ಮೇಲೆ ರಿಕ್ಷಾ ಚಾಲಕನೊಬ್ಬ ಅತ್ಯಾಚಾರ ಎಸಗಿ ಕೊಲೆ ಮಾಡಿದ್ದಾನೆ ಎಂದು ತಿಳಿದು ಬಂದಿದೆ. ಶುಕ್ರವಾರ(ಫೆ.7) ಬೆಳಗ್ಗೆ ನ್ಯೂ ಟೌನ್‌ನ ನಿರ್ಜನ ಪ್ರದೇಶದಲ್ಲಿ ಪೊಲೀಸರು ಆಕೆಯ ಶವವನ್ನು ಪತ್ತೆ ಮಾಡಿದ್ದಾರೆ. ಈ ಪ್ರಕರಣ ಸಂಬಂಧ ಆಟೋ ಚಾಲಕನನ್ನು ಬಂಧಿಸಲಾಗಿದೆ.
ಕೊಲ್ಕತ್ತಾ ನಗರದ ಖಾಸಗಿ ಶಾಲೆಯಲ್ಲಿ ಎಂಟನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿನಿಯ ಮೇಲೆ ಆಟೋ ಚಾಲಕನೊಬ್ಬ ಲೈಂಗಿಕ ದೌರ್ಜನ್ಯವೆಸಗಿ ಕೊಲೆ ಮಾಡಿದ್ದಾನೆ. ಸರಿಯಾಗಿ ಓದದ ಕಾರಣಕ್ಕೆ ತಾಯಿ ಸಿಟ್ಟಿಗೆದ್ದು ಗದರಿದ್ದಕ್ಕೆ ಬೇಸರಗೊಂಡು ಬಾಲಕಿ ತಡರಾತ್ರಿ ಪತ್ರ ಬರೆದಿಟ್ಟು ಮನೆಯಿಂದ ಹೊರ ಹೋಗಿದ್ದಾಳೆ. ಮರುದಿನ ಬೆಳಗ್ಗೆಯಾದರೂ ಬಾಲಕಿ ಹಿಂತಿರುಗದಿದ್ದಾಗ, ಕುಟುಂಬವು ಶುಕ್ರವಾರ ಬೆಳಗ್ಗೆ 4:30 ಕ್ಕೆ ನ್ಯೂ ಟೌನ್ ಪೊಲೀಸ್ ಠಾಣೆಯಲ್ಲಿ ಮಿಸ್ಸಿಂಗ್ ದೂರು ದಾಖಲಿಸಿದ್ದಾರೆ.
ಈ ಸುದ್ದಿಯನ್ನೂ ಓದಿ:Physical Abuse: ಬುದ್ಧಿಮಾಂದ್ಯ ಬಾಲಕಿ ಮೇಲೆ ಅತ್ಯಾಚಾರ ಎಸಗಿದ ಪಕ್ಕದ ಮನೆಯ ಪಾತಕಿ
ಪ್ರಕರಣ ದಾಖಲಿಸಿಕೊಂಡ ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದ್ದಾರೆ. ಬಾಲಕಿ ಮನೆಯಿಂದ ಹೊರ ಹೋದ ನಂತರ ರಿಕ್ಷಾ ಹತ್ತಿದ್ದು ಕಂಡುಬಂದಿದೆ. 22 ವರ್ಷದ ಸೌಮಿತ್ರ ರಾಯ್ ಎಂಬಾತ ಆಕೆಯನ್ನು ನಿರ್ಜನ ಸ್ಥಳಕ್ಕೆ ಕರೆದೊಯ್ದು ಲೈಂಗಿಕ ದೌರ್ಜನ್ಯ ಎಸಗಿದ್ದಾನೆ.ಬಾಲಕಿಯ ಮೊಬೈಲ್ ಫೋನ್‌ನಲ್ಲಿ ಅಲಾರಾಂ ಕೂಗಿಕೊಂಡಿದೆ. ಬಾಲಕಿಯ ಕತ್ತು ಹಿಸುಕಿ ಕೊಂದು ಸ್ಥಳದಿಂದ ತಕ್ಷಣವೇ ಪರಾರಿಯಾಗಿದ್ದಾನೆ.
ಕೊಲ್ಕತ್ತಾ ಪೊಲೀಸರಿಗೆ ದೌರ್ಜನ್ಯದಲ್ಲಿ ಭಾಗಿಯಾಗಿರುವ ಬಗ್ಗೆ ಯಾವುದೇ ಪುರಾವೆಗಳು ಸಿಕ್ಕಿಲ್ಲ. ಆರೋಪಿ ಕೂಡ ತನ್ನ ಅಪರಾಧವನ್ನು ಒಪ್ಪಿಕೊಂಡಿದ್ದಾನೆ. ಆರೋಪಿಗೆ ಕ್ರಿಮಿನಲ್ ಹಿನ್ನೆಲೆ ಇದೆ ಸ್ವತಃ ಅವನ ಪತ್ನಿ ಬಹಿರಂಗಪಡಿಸಿದ್ದಾರೆ. ಈ ಹಿಂದೆಯೂ ದೌರ್ಜನ್ಯ ಎಸಗಿದ್ದಾನೆ. ಅವರ ಊರಾದ ರಾಣಾಘಾಟ್‌ನಲ್ಲಿ ಮಹಿಳೆಯೊಬ್ಬರಿಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣವನ್ನು ಎದುರಿಸುತ್ತಿದ್ದಾನೆ ಎಂದು ಪತ್ನಿ ಅವನ ತಿಳಿಸಿದ್ದಾರೆ.