ಟಿ20 ಕ್ರಿಕೆಟ್‌ನಲ್ಲಿ ಅಪರೂಪದ ದಾಖಲೆ ಬರೆದ ಲಿಯಾಮ್ ಲಿವಿಂಗ್‌ಸ್ಟೋನ್!
ಬರ್ಮಿಂಗ್‌ಹ್ಯಾಮ್‌ನ ಎಜ್‌ಬಾಸ್ಟನ್ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದಿದ್ದ ದಿ ಹಂಡ್ರೆಡ್ ಪಂದ್ಯದಲ್ಲಿ ಬರ್ಮಿಂಗ್‌ಹ್ಯಾಮ್ ಫೀನಿಕ್ಸ್ ತಂಡದ ಲಿಯಾಮ್ ಲಿವಿಂಗ್‌ಸ್ಟೋನ್ ಸ್ಪೋಟಕ ಅರ್ಧಶತಕ ಬಾರಿಸಿದರು. ಆ ಮೂಲಕ ರಶೀದ್ ಖಾನ್ ಎದುರು 200 ಟಿ20 ರನ್‌ಗಳನ್ನು ಗಳಿಸಿದ ವಿಶ್ವದ ಮೊದಲ ಬ್ಯಾಟ್ಸ್‌ಮನ್ ಎನಿಸಿಕೊಂಡಿದ್ದಾರೆ.

ರಶೀದ್ ಖಾನ್ ಎದುರು 200 ಟಿ20 ರನ್ ಪೂರ್ಣಗೊಳಿಸಿದ ಲಿಯಾಮ್ ಲಿವಿಂಗ್‌ಸ್ಟೋನ್.

ನವದೆಹಲಿ: ಬರ್ಮಿಂಗ್ಹ್ಯಾಮ್ ಫೀನಿಕ್ಸ್ ಹಾಗೂ ದಿ ಓವಲ್ ಇನ್ವಿನ್ಸಿಬಲ್ಸ್ ನಡುವಣ ದಿ ಹಂಡ್ರೆಡ್ (The Hundred) ಪಂದ್ಯದಲ್ಲಿ ಲಿಯಾಮ್ ಲಿವಿಂಗ್‌ಸ್ಟೋನ್ (Liam Livingstone) ಸ್ಪೋಟಕ ಅರ್ಧಶತಕವನ್ನು ಸಿಡಿಸಿದರು. ಆ ಮೂಲಕ ಇತಿಹಾಸವನ್ನು ಬರೆದಿದ್ದಾರೆ. ಬರ್ಮಿಂಗ್‌ಹ್ಯಾಮ್ ಎಜ್‌ಬಾಸ್ಟನ್ ಕ್ರೀಡಾಂಗಣದಲ್ಲಿ ನಡೆದಿದ್ದ ಪಂದ್ಯದಲ್ಲಿ ತವರು ತಂಡ ಇನ್ನು ಎರಡು ಎಸೆತಗಳು ಬಾಕಿ ಇರುವಾಗಲೇ 4 ವಿಕೆಟ್ ಗೆಲುವು ಪಡೆಯಿತು. ಈ ಪಂದ್ಯದಲ್ಲಿ ಸ್ಪೋಟಕ ಬ್ಯಾಟಿಂಗ್ ಪ್ರದರ್ಶನವನ್ನು ತೋರಿದ ಲಿಯಾಮ್ ಲಿವಿಂಗ್‌ಸ್ಟೋನ್ ಅವರು ಕೇವಲ 27 ಎಸೆತಗಳಲ್ಲಿ 255.55ರ ಸ್ಟ್ರೈಕ್ ರೇಟ್‌ನಲ್ಲಿ ಅಜೇಯ 69 ರನ್‌ಗಳನ್ನು ಬಾರಿಸಿದ್ದರು. ಇದರಲ್ಲಿ ಅವರು ಐದು ಸಿಕ್ಸರ್ ಹಾಗೂ ಏಳು ಬೌಂಡರಿಗಳನ್ನು ಬಾರಿಸಿದ್ದಾರೆ.
ತಮ್ಮ ಈ ಸ್ಪೋಟಕ ಇನಿಂಗ್ಸ್‌ನಲ್ಲಿ ಲಿಯಾಮ್ ಲಿವಿಂಗ್‌ಸ್ಟೋನ್ ಅವರು ರಶೀದ್ ಖಾನ್‌ಗೆ ಐದು ಎಸೆತಗಳಲ್ಲಿ ಎರಡು ಬೌಂಡರಿ ಹಾಗೂ ಮೂರು ಸಿಕ್ಸರ್‌ನೊಂದಿಗೆ 26 ರನ್‌ಗಳನ್ನು ಗಳಿಸಿದರು. ಆ ಮೂಲಕ ಟಿ20 ಕ್ರಿಕೆಟ್‌ನಲ್ಲಿ ಬರ್ಮಿಂಗ್‌ಹ್ಯಾಮ್ ಫೀನಿಕ್ಸ್ ತಂಡದ ಬ್ಯಾಟರ್ ವಿಶೇಷ ದಾಖಲೆಯನ್ನು ಬರೆದಿದ್ದಾರೆ.
SA vs AUS: ದಕ್ಷಿಣ ಆಫ್ರಿಕಾ ಆಲ್‌ರೌಂಡರ್ ಕಾರ್ಬಿನ್ ಬಾಷ್‌ಗೆ ದಂಡ ವಿಧಿಸಿದ ಐಸಿಸಿ!
ವಿಶ್ವದ ಟಿ20 ಕ್ರಿಕೆಟ್‌ನ ಅತ್ಯಂತ ಶ್ರೇಷ್ಠ ಸ್ಪಿನ್ನರ್‌ಗಳಲ್ಲಿ ಒಬ್ಬರಾಗಿರುವ ರಶೀದ್ ಖಾನ್ ಎದುರು ಲಿಯಾಮ್ ಲಿವಿಂಗ್‌ಸ್ಟೋನ್ 200 ಟಿ20 ರನ್‌ಗಳನ್ನು ಸಿಡಿಸಿದ್ದಾರೆ. ಆ ಮೂಲಕ ಈ ಸಾಧನೆ ಮಾಡಿದ ವಿಶ್ವದ ಮೊದಲ ಬ್ಯಾಟ್ಸ್‌ಮನ್ ಆಗಿದ್ದಾರೆ. ಅಫ್ಘಾನಿಸ್ತಾನ ಸ್ಪಿನ್ನರ್ ಎದುರು ಇಂಗ್ಲೆಂಡ್ ಆಲ್‌ರೌಂಡರ್ 21 ಸಿಕ್ಸರ್‌ಗಳನ್ನು ಬಾರಿಸಿದ್ದಾರೆ. ಇನ್ನುಳಿದ ಯಾವುದೇ ಬ್ಯಾಟ್ಸ್‌ಮನ್ 13ಕ್ಕಿಂತ ಹೆಚ್ಚು ಸಿಕ್ಸರ್ ಬಾರಿಸಿಲ್ಲ.
ರಶೀದ್ ಖಾನ್ ಎದುರು ಅತಿ ಹೆಚ್ಚು ಟಿ20 ರನ್ ಗಳಿಸಿದ ಬ್ಯಾಟರ್ಸ್
ಲಿಯಾಮ್ ಲಿವಿಂಗ್‌ಸ್ಟೋನ್: 200 ರನ್
ಕೈರೊನ್ ಪೊಲಾರ್ಡ್:125 ರನ್
ಸೂರ್ಯಕುಮಾರ್ ಯಾದವ್: 124
ಸಂಜು ಸ್ಯಾಮ್ಸಾನ್: 121
ರಿಷಭ್ ಪಂತ್: 120
4, 6, 6, 6, 4 took Liam Livingstone to 2️⃣ 0️⃣ 0️⃣ runs against Rashid Khan 👊 #TheHundred pic.twitter.com/nnqStLOxDE
— ESPNcricinfo (@ESPNcricinfo) August 13, 2025
ರಶೀದ್ ಖಾನ್ ಎದುರು ಅತಿ ಹೆಚ್ಚು ಸಿಕ್ಸರ್ ಬಾರಿಸಿದ ಬ್ಯಾಟರ್ಸ್
ಲಿಯಾಮ್ ಲಿವಿಂಗ್‌ಸ್ಟೋನ್: 21
ಕ್ರಿಸ್ ಗೇಲ್: 12
ಕೀರನ್ ಪೊಲಾರ್ಡ್: 9
ಆಂಡ್ರೆ ರಸೆಲ್: 9
ಶಿಮ್ರಾನ್ ಹೆಟ್ಮಾಯರ್ : 8