ಮೋದಿ ಸರ್ಕಾರದಿಂದ ಮತ್ತೊಂದು ಮೈಲಿಗಲ್ಲು: ಸೌರಶಕ್ತಿ ಉತ್ಪಾದನೆಯಲ್ಲಿ ಮಹತ್ತರ ಪ್ರಗತಿ
Pralhad Joshi: 2014ರಲ್ಲಿ ಕೇವಲ 2.3 GW ಇದ್ದ ದೇಶದ ಸೌರ ಶಕ್ತಿ ಉತ್ಪಾದನೆ ಈಗ 2025ರ ವೇಳೆಗೆ ಬರೋಬ್ಬರಿ 100 GW ತಲುಪಿದ್ದು, ಭಾರತ ಗಮನಾರ್ಹ ಪ್ರಗತಿ ಸಾಧಿಸಿದ್ದಕ್ಕಾಗಿ ಪ್ರಧಾನಿ ಮೋದಿ ಸಂತಸ ಹಂಚಿಕೊಂಡಿದ್ದಾರೆ ಎಂದು ಕೇಂದ್ರ ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವ ಪ್ರಲ್ಹಾದ್ ಜೋಶಿ ತಿಳಿಸಿದ್ದಾರೆ.

ಸಾಂದರ್ಭಿಕ ಚಿತ್ರ.

ನವದೆಹಲಿ: ಭಾರತ 100 GW ಸೌರ ಶಕ್ತಿ ಉತ್ಪಾದನಾ ಸಾಮರ್ಥ್ಯದ ಮೈಲಿಗಲ್ಲು ಸಾಧಿಸಿರುವ ಬಗ್ಗೆ ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು ಹೆಮ್ಮೆ ವ್ಯಕ್ತಪಡಿಸಿದ್ದಾರೆ. 2014ರಲ್ಲಿ ಕೇವಲ 2.3 GW ಇದ್ದ ದೇಶದ ಸೌರ ಶಕ್ತಿ ಉತ್ಪಾದನೆ ಈಗ 2025ರ ವೇಳೆಗೆ ಬರೋಬ್ಬರಿ 100 GW ತಲುಪಿದ್ದು, ಭಾರತ ಗಮನಾರ್ಹ ಪ್ರಗತಿ ಸಾಧಿಸಿದ್ದಕ್ಕಾಗಿ ಪ್ರಧಾನಿ ಮೋದಿ ಸಂತಸ ಹಂಚಿಕೊಂಡಿದ್ದಾರೆ ಎಂದು ಕೇಂದ್ರ ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವ ಪ್ರಲ್ಹಾದ್ ಜೋಶಿ (Pralhad Joshi) ತಿಳಿಸಿದ್ದಾರೆ.
ಜಿ ಮತ್ತು ಹೆಚ್ಚಿನ ದಕ್ಷತೆಯ ಸೌರ ಶಕ್ತಿ ಉತ್ಪಾದನಾ ಸಂಬಂಧಿತ ಪ್ರೋತ್ಸಾಹಕ (ಪಿಎಲ್‌ಐ) ಯೋಜನೆಯಂತಹ ಪರಿವರ್ತನಾ ಉಪಕ್ರಮಗಳೊಂದಿಗೆ ಭಾರತ ದೃಢವಾದ ಹೆಜ್ಜೆಯಿರಿಸಿದೆ. ಸ್ವಾವಲಂಬಿ ಸೌರ ಉತ್ಪಾದನಾ ಪರಿಸರ ವ್ಯವಸ್ಥೆ ನಿರ್ಮಿಸುತ್ತಿದೆ ಎಂದು ಮೋದಿ ಬಣ್ಣಿಸಿದ್ದಾರೆ. ಅಲ್ಲದೇ, ಈ ಸಾಧನೆ ಆತ್ಮನಿರ್ಭರ ಭಾರತ ಮತ್ತು 2030ರ ವೇಳೆಗೆ 500 GW ಪಳೆಯುಳಿಕೆ ರಹಿತ ಇಂಧನ ಸಾಮರ್ಥ್ಯದ ಗುರಿಯತ್ತ ಭಾರತವನ್ನು ಕೊಂಡೊಯ್ಯುತ್ತಿರುವ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿದ್ದಾರೆ.
ಕೇಂದ್ರ ಸರ್ಕಾರ ಸೌರ ಶಕ್ತಿ ಉತ್ಪಾದನೆಯಲ್ಲಿ ಸ್ವಾವಲಂಬಿ ಆಗಿದ್ದಲ್ಲದೆ, ಜಾಗತಿಕವಾಗಿ ಪ್ರಮುಖ ರಾಷ್ಟ್ರವಾಗಿದ್ದು, ಕೇಂದ್ರ ಸರ್ಕಾರ ಕೈಗೊಂಡ PLI ಯೋಜನೆ ಇದನ್ನು ಸಾಕಾರಗೊಳಿಸಿದೆ. ಅಲ್ಲದೇ, 100 GWಗಿಂತ ಹೆಚ್ಚಿನ ಸೌರ ಶಕ್ತಿ ಉತ್ಪಾದನಾ ಸಾಮರ್ಥ್ಯದ ವಿಸ್ತರಣೆಗೆ ಕಾರಣವಾಗಿದೆ ಎಂದು ಜೋಶಿ ಹೇಳಿದ್ದಾರೆ.
2030ರ ವೇಳೆಗೆ 500 GW ಪಳೆಯುಳಿಕೆಯೇತರ ಇಂಧನ ಸಾಮರ್ಥ್ಯ ಸಾಧಿಸುವ ಭಾರತದ ಬದ್ಧತೆಯನ್ನು ಬಲಪಡಿಸುವ ಜತೆಗೆ ಜಾಗತಿಕ ಡಿಕಾರ್ಬೊನೈಸೇಶನ್ ಪ್ರಯತ್ನಗಳಿಗೆ ಅರ್ಥಪೂರ್ಣ ಕೊಡುಗೆ ನೀಡುತ್ತದೆ ಎಂದಿದ್ದಾರೆ.
2021ರ ಆರಂಭದಲ್ಲಿ ಸುಮಾರು 8.2 GW ಸೌರ PV ಮಾಡ್ಯೂಲ್ ಆಗಿದ್ದುದು, ಕೇವಲ ನಾಲ್ಕೇ ವರ್ಷಗಳಲ್ಲಿ ಇದರ ಹನ್ನೆರಡು ಪಟ್ಟು ಹೆಚ್ಚು ಬೆಳೆದು 100 GW ಗಡಿ ದಾಟಿದೆ. ಈ ಗಮನಾರ್ಹ ವಿಸ್ತರಣೆ ಸಾಧಿಸಿದೆ. 2021ರಲ್ಲಿ ಇದ್ದ 21 ಘಟಕಗಳ ಸಂಖ್ಯೆ ಪ್ರಸ್ತುತ 123ಕ್ಕೆ ಏರಿದೆ. ತಯಾರಕರ ಸಂಖ್ಯೆ ಸಹ ಅಧಿಕವಾಗಿದೆ ಎಂದು ಹೇಳಿದ್ದಾರೆ.
ಈ ಸುದ್ದಿಯನ್ನೂ ಓದಿ | Special Economic Zone: ಇಟ್ಟಿಗಟ್ಟಿ ಎಲೆಕ್ಟ್ರಾನಿಕ್ ಘಟಕಗಳಿಗಾಗಿ SEZ ಘೋಷಣೆ; 28 ಎಕರೆ ವಿಶೇಷ ಆರ್ಥಿಕ ವಲಯಕ್ಕೆ ಗೆಜೆಟ್
ಸೌರ ಶಕ್ತಿ ವಲಯದಲ್ಲಿ ಮೂಲಸೌಕರ್ಯ ಅಭಿವೃದ್ಧಿ ಮತ್ತು ನಾವೀನ್ಯತೆ ಮೂಲಕ ಸೌರ ಉತ್ಪಾದನಾ ಪರಿಸರ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸಲು MNRE ಬದ್ಧವಾಗಿದೆ. ಭಾರತದ ಸೌರ ಪ್ರಯಾಣ ಸ್ಪರ್ಧಾತ್ಮಕವಾಗಿ ಮತ್ತು ಸುಸ್ಥಿರ ಭವಿಷ್ಯಕ್ಕೆ ಕೊಡುಗೆ ನೀಡುತ್ತಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಪ್ರತಿಪಾದಿಸಿದ್ದಾರೆ.