Viral Video: ಶಾಲೆಯ ಎಲ್‍ಇಡಿ ಸ್ಕ್ರೀನ್ ಮೇಲೆ ಅಶ್ಲೀಲ ಚಿತ್ರ ವೀಕ್ಷಿಸಿದ ವಿದ್ಯಾರ್ಥಿಗಳು; ಪೋಷಕರಿಂದ ಭಾರಿ ಆಕ್ರೋಶ
ಶಾಲೆಯೊಂದರಲ್ಲಿ ವಿದ್ಯಾರ್ಥಿಗಳ ಗುಂಪೊಂದು ಎಲ್‌ಇಡಿ ಪರದೆಯ ಮೇಲೆ ಅಶ್ಲೀಲ ಚಿತ್ರವನ್ನು ಪ್ರದರ್ಶಿಸಿತು. ಈ ಘಟನೆಯ ವಿಡಿಯೊವನ್ನು ಮತ್ತೊಬ್ಬ ವಿದ್ಯಾರ್ಥಿ ರೆಕಾರ್ಡ್ ಮಾಡಿ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾನೆ. ಮಧ್ಯ ಪ್ರದೇಶದ ರಾಜ್‌ಗಢ ಜಿಲ್ಲೆಯ ಸುಥಾಲಿಯಾದಲ್ಲಿ ಈ ಘಟನೆ ನಡೆದಿದೆ. ಇದು ವೈರಲ್ ಆದ ನಂತರ, ಸ್ಥಳೀಯರು ಮತ್ತು ಪೋಷಕರು ಪ್ರತಿಭಟನೆ ನಡೆಸಿದರು.


ಭೋಪಾಲ್: ಶಾಲೆಯೊಂದರಲ್ಲಿ ವಿದ್ಯಾರ್ಥಿಗಳ ಗುಂಪೊಂದು ಎಲ್‌ಇಡಿ ಪರದೆಯ ಮೇಲೆ ಅಶ್ಲೀಲ ಚಿತ್ರವನ್ನು ಪ್ರದರ್ಶಿಸಿತು. ಈ ಘಟನೆಯ ವಿಡಿಯೊವನ್ನು (Viral Video) ಮತ್ತೊಬ್ಬ ವಿದ್ಯಾರ್ಥಿ ರೆಕಾರ್ಡ್ ಮಾಡಿ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾನೆ. ಮಧ್ಯ ಪ್ರದೇಶದ ರಾಜ್‌ಗಢ ಜಿಲ್ಲೆಯ ಸುಥಾಲಿಯಾದಲ್ಲಿ ಈ ಘಟನೆ ನಡೆದಿದೆ. ಇದು ವೈರಲ್ ಆದ ನಂತರ, ಸ್ಥಳೀಯರು ಮತ್ತು ಪೋಷಕರು ಪ್ರತಿಭಟನೆ ನಡೆಸಿದರು. ಈ ಸಂಬಂಧ ಪೊಲೀಸರು ಮತ್ತು ಶಿಕ್ಷಣ ಅಧಿಕಾರಿಗಳು ಈ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.
ತರಗತಿಯಲ್ಲಿ ಅಧ್ಯಯನ ಉದ್ದೇಶಕ್ಕಾಗಿ ಅಳವಡಿಸಲಾಗಿದ್ದ ಎಲ್‌ಇಡಿ ಪರದೆಯನ್ನು ಅಶ್ಲೀಲ ಚಿತ್ರವನ್ನು ಪ್ರದರ್ಶಿಸಲು ಬಳಸಲಾಗಿದೆ. ಒಬ್ಬ ವಿದ್ಯಾರ್ಥಿ ಪರದೆಯ ಬಳಿ ನಿಂತಿದ್ದರೆ, ಇತರ 13 ವಿದ್ಯಾರ್ಥಿಗಳು ಕುರ್ಚಿಗಳ ಮೇಲೆ ಕುಳಿತು ವೀಕ್ಷಿಸುತ್ತಿದ್ದರು. ಈ ವೇಳೆ ಇನ್ನುಳಿದ ವಿದ್ಯಾರ್ಥಿಗಳು ಈ ದೃಶ್ಯವನ್ನು ಮೊಬೈಲ್ ಫೋನ್‍ನಲ್ಲಿ ಚಿತ್ರೀಕರಣ ಮಾಡಿದ್ದಾರೆ. ಕೆಲವು ವಿದ್ಯಾರ್ಥಿಗಳು ನಗುತ್ತ ತಮ್ಮ ಮುಖವನ್ನು ಮುಚ್ಚಿಕೊಂಡಿದ್ದಾರೆ.
ಇನ್ನು ವಿಡಿಯೊ ಬಗ್ಗೆ ಪ್ರಶ್ನಿಸಿದಾಗ, “ಮೇ 12ರಂದು ತಾನು ಪ್ರಾಂಶುಪಾಲ ಹುದ್ದೆ ಸ್ವೀಕರಿಸಿದೆ. ಈ ವಿಡಿಯೊ ಚಿತ್ರೀಕರಿಸಿದ್ದು ಯಾವಾಗ ಎಂದು ತನಗೆ ತಿಳಿದಿಲ್ಲ. ಆದರೆ, ಇದು ಸುಮಾರು 8ರಿಂದ 10 ತಿಂಗಳ ಹಳೆಯದು. ಒಬ್ಬ ವ್ಯಕ್ತಿ ನನಗೆ 50,000 ರೂ.ಗೆ ಬೇಡಿಕೆ ಇಡುವ ಮೂಲಕ ಬ್ಲ್ಯಾಕ್‌ಮೇಲ್ ಮಾಡಲು ಪ್ರಯತ್ನಿಸಿದನು. ನಾನು ಹಣ ಕೊಡಲು ನಿರಾಕರಿಸಿದ್ದಕ್ಕೆ ವಿಡಿಯೊ ಸೋರಿಕೆ ಮಾಡಿದ್ದಾನೆ” ಎಂದು ಶಾಲೆಯ ಪ್ರಾಂಶುಪಾಲ ಹೇಮಂತ್ ಯಾದವ್ ಆರೋಪಿಸಿದ್ದಾರೆ.
ಇನ್ನು ನೀಲಿಚಿತ್ರ ಪ್ರಸಾರವಾದಾಗ ತರಗತಿಯಲ್ಲಿ ಯಾವುದೇ ಶಿಕ್ಷಕರು ಇರಲಿಲ್ಲ. ಸಾಮಾಜಿಕ ಮಾಧ್ಯಮದಲ್ಲಿ ವಿಡಿಯೊ ವೈರಲ್ ಆದ ನಂತರ, ಪೋಷಕರು ಮತ್ತು ಸ್ಥಳೀಯ ನಿವಾಸಿಗಳಲ್ಲಿ ಇದು ಕೋಪ ತರಿಸಿದೆ. ಇದು ಕಲಿಕಾ ವಾತಾವರಣಕ್ಕೆ ಹಾನಿ ಮಾಡುತ್ತದೆ ಮತ್ತು ವಿದ್ಯಾರ್ಥಿಗಳ ಭವಿಷ್ಯಕ್ಕೂ ಹಾನಿ ಮಾಡುತ್ತದೆ ಎಂದು ಪ್ರಾಂಶುಪಾಲರು ಹೇಳಿದರು.
ಈ ಸಂಬಂಧ ಶಾಲಾ ಆಡಳಿತ ಮಂಡಳಿಯು ಮೇಲ್ವಿಚಾರಣೆ ಮಾಡಲು ವಿಫಲವಾಗಿದೆ ಎಂದು ಪೋಷಕರು ಮತ್ತು ಸ್ಥಳೀಯರು ದೂಷಿಸಿದ್ದಾರೆ. ಘಟನೆಯ ಸಮಯದಲ್ಲಿ ಸಿಬ್ಬಂದಿ ಎಲ್ಲಿದ್ದರು ಎಂದು ಪ್ರಶ್ನಿಸಿದ್ದಾರೆ. ಎಲ್ಇಡಿ ಸೌಲಭ್ಯವು ಶಿಕ್ಷಣಕ್ಕಾಗಿ ಮೀಸಲಿಡಲಾಗಿದ್ದು, ಅದರ ದುರುಪಯೋಗ ಮಾಡಿಕೊಂಡಿರುವುದು ತೀವ್ರ ಕಳವಳವನ್ನುಂಟು ಮಾಡಿದೆ ಎಂದು ಪೋಷಕರು ಬೇಸರ ವ್ಯಕ್ತಪಡಿಸಿದ್ದಾರೆ.
ಇನ್ನು ಈ ಸಂಬಂಧ ಜಿಲ್ಲಾ ಶಿಕ್ಷಣ ಅಧಿಕಾರಿ ಕರಣ್ ಸಿಂಗ್ ಭಿಲಾಲ ಅವರು ಬ್ಲಾಕ್ ಅಭಿವೃದ್ಧಿ ಅಧಿಕಾರಿ ದಿಲೀಪ್ ಶರ್ಮಾ ಅವರಿಗೆ ತನಿಖೆ ನಡೆಸುವಂತೆ ಸೂಚಿಸಿದ್ದಾರೆ. ಪೊಲೀಸರಿಗೂ ಮಾಹಿತಿ ನೀಡಲಾಗಿದ್ದು, ವಿಚಾರಣೆಯ ನಂತರ ಕ್ರಮ ಕೈಗೊಳ್ಳುವ ನಿರೀಕ್ಷೆಯಿದೆ.