Chikkaballapur News: ಬಾಗೇಪಲ್ಲಿ:ಕೃಷಿ ಇಲಾಖೆಯಲ್ಲಿ ಲೋಕಾಯುಕ್ತ ಪೊಲೀಸರಿಂದ ಕಡತಗಳ ತನಿಖೆ
ತಾಲ್ಲೂಕಿನ ಕೃಷಿ ಇಲಾಖೆಯಲ್ಲಿ ಅಟಲ್ ಫಸಲ್ ಭೀಮಾ ಯೋಜನೆ, ಕೃಷಿ ಯಂತ್ರೋಪಕರಗಳ, ಕೃಷಿ ಹೊಂಡ, ಅವಾರ್ಡ್ ಯೋಜನೆ ಸೇರಿದಂತೆ ವಿವಿಧ ಯೋಜನೆಗಳಲ್ಲಿ ಅರ್ಹ ಫಲಾನುಭವಿಗಳ ಹೆಸರಿ ನಲ್ಲಿ ಖಾಸಗಿ ವ್ಯಕ್ತಿಗಳು ಪಡೆದಿರುವುದು, ಕಾಮಗಾರಿಗಳು ಆಗದೇ, ಕೆಲಸಗಳು ಮಾಡದೇ ಕೋಟ್ಯಾಂತರ ರೂಪಾಯಿಗಳು ಅವ್ಯವಹಾರ ಆಗಿರುವುದು ತಾಲ್ಲೂಕಿನ ಕೆಲ ರೈತರು ಚಿಕ್ಕಬಳ್ಳಾಪುರ ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದರು


ಬಾಗೇಪಲ್ಲಿ: ತಾಲ್ಲೂಕಿನ ಕೃಷಿ ಇಲಾಖೆಯ ವಿವಿಧ ಯೋಜನೆಗಳ ಅರ್ಹ ಫಲಾನುಭವಿಗಳ ಕಡತಗಳನ್ನು ಚಿಕ್ಕಬಳ್ಳಾಪುರ ಲೋಕಾಯುಕ್ತ ವರಿಷ್ಠಾಧಿಕಾರಿ ಅಂಟೋನಿ ಕೆ.ಜಾನ್ ಹಾಗೂ ಉಪ ವರಿಷ್ಠಾಧಿಕಾರಿ ವೀರೇಂದ್ರಕುಮಾರ್ ರವರ ಪೊಲೀಸರ ತಂಡ ಮಂಗಳವಾರ ತಡರಾತ್ರಿರವರಿಗೂ ಕಡತಗಳನ್ನು ತನಿಖೆ ಮಾಡಿದರು. ಹಾಗೂ ಅರ್ಹ ಫಲಾನುಭವಿಗಳ ಗ್ರಾಮಗಳಿಗೆ ಭೇಟಿ ಮಾಡಿ, ಯೋಜನೆಗಳನ್ನು ಅಧಿಕಾರಿಗಳು ಖುದ್ದು ಪರಿಶೀಲನೆ ಮಾಡಿದರು.
ತಾಲ್ಲೂಕಿನ ಕೃಷಿ ಇಲಾಖೆಯಲ್ಲಿ ಅಟಲ್ ಫಸಲ್ ಭೀಮಾ ಯೋಜನೆ, ಕೃಷಿ ಯಂತ್ರೋಪಕರಗಳ, ಕೃಷಿ ಹೊಂಡ, ಅವಾರ್ಡ್ ಯೋಜನೆ ಸೇರಿದಂತೆ ವಿವಿಧ ಯೋಜನೆಗಳಲ್ಲಿ ಅರ್ಹ ಫಲಾನುಭವಿಗಳ ಹೆಸರಿನಲ್ಲಿ ಖಾಸಗಿ ವ್ಯಕ್ತಿಗಳು ಪಡೆದಿರುವುದು, ಕಾಮಗಾರಿಗಳು ಆಗದೇ, ಕೆಲಸಗಳು ಮಾಡದೇ ಕೋಟ್ಯಾಂತರ ರೂಪಾಯಿಗಳು ಅವ್ಯವಹಾರ ಆಗಿರುವುದು ತಾಲ್ಲೂಕಿನ ಕೆಲ ರೈತರು ಚಿಕ್ಕಬಳ್ಳಾ ಪುರ ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದರು.
ಚಿಕ್ಕಬಳ್ಳಾಪುರದ ಕೃಷಿ ಇಲಾಖೆಯ ಜಂಟಿ ನಿದೇರ್ಶಕರ ಕಚೇರಿಯಲ್ಲಿ ಇತ್ತೀಚೆಗೆ ತಾಲ್ಲೂಕು ಕೃಷಿ ಇಲಾಖೆಯ ಸಹಾಯಕ ಅಧಿಕಾರಿ ಶಂಕರಯ್ಯ ರೈತರಿಂದ 15 ಲಕ್ಷ ಲಂಚ ಪಡೆಯುವ ಸಂಧರ್ಭ ದಲ್ಲಿ ಚಿಕ್ಕಬಳ್ಳಾಪುರ ಲೋಕಾಯುಕ್ತ ಪೊಲೀಸರು ದಾಳಿ ಮಾಡಿ, ಶಂಕರಯ್ಯರವರ ವಿರುದ್ಧ ಪ್ರಕರಣ ದಾಖಲಿಸಿದ್ದರು. ಕೃಷಿ ಇಲಾಖೆಯ ಹಿರಿಯ ಅಧಿಕಾರಿಗಳು ಶಂಕರಯ್ಯರವರನ್ನು ಅಮಾ ನತು ಮಾಡಿದ್ದಾರೆ. ಇದರ ಬಗ್ಗೆ ಚಿಕ್ಕಬಳ್ಳಾಪುರದ ಲೋಕಾಯುಕ್ತ ಪೊಲೀಸರು ಬಾಗೇಪಲ್ಲಿ ಕೃಷಿ ಇಲಾಖೆಯಲ್ಲಿನ ಅವ್ಯವಹಾರಗಳ, ಭ್ರಷ್ಟಾಚಾರದ ಬಗ್ಗೆ ಕಣ್ಣಿಟ್ಟಿದ್ದರು.
ಇದನ್ನೂ ಓದಿ: America-China: ಅಮೆರಿಕದ ಸುಂಕದಾಟದ ಕುರಿತು ಗಮನ ಕೊಡುವುದಿಲ್ಲ; ತೆರಿಗೆ ಹೆಚ್ಚಳದ ಕುರಿತು ಚೀನಾ ಪ್ರತಿಕ್ರಿಯೆ
ಕೃಷಿ ಇಲಾಖೆಯಲ್ಲಿನ ಅವ್ಯವಹಾರ, ಭ್ರಷ್ಠಾಚಾರದ ಬಗ್ಗೆ ಖುದ್ದು ಪರಿಶೀಲಿಸಲು ಲೋಕಾಯುಕ್ತ ಪೊಲೀಸ್ ವರಿಷ್ಠಾಧಿಕಾರಿ ಆಂಟೋನಿ ಕೆ ಜಾನ್, ಉಪ ವರಿಷ್ಠಾಧಿಕಾರಿ ವೀರೇಂದ್ರಕುಮಾರ್ ರವರ ಪೊಲೀಸರ ತಂಡ, ತಾಲ್ಲೂಕಿನ ನಲ್ಲಪರೆಡ್ಡಿಪಲ್ಲಿ, ಬಾಲರೆಡ್ಡಿಪಲ್ಲಿ, ಕಾನಗಮಾಕಲಪಲ್ಲಿ ಗ್ರಾಮಗಳ ಅರ್ಹ ಫಲಾನುಭವಿಗಳ ಜಮೀನುಗಳ, ಕೃಷಿ ಪರಿಕರಗಳು ಪಡೆದಿರುವ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ಕಲೆ ಹಾಕಿದ್ದಾರೆ. ಅರ್ಹ ಫಲಾನುಭವಿಗಳಿಂದ ಸರ್ಕಾರದ ಯೋಜನೆಯ ಪಡೆದ ಹಣ, ಪರಿಕರಗಳ ಬಗ್ಗೆ ಪರಿಶೀಲನೆ ಮಾಡಿದ್ದಾರೆ. ಅರ್ಹ ಫಲಾನುಭವಿಯ ಬಳಿ ಪರಿಕರಗಳು ಇದೆಯೇ? ಇಲ್ಲವೇ? ಎಂದು ಖುದ್ದು ಭೇಟಿ ಮಾಡಿ ವೀಕ್ಷಣೆ ಮಾಡಿದ್ದಾರೆ.
ವಿವಿಧ ಯೋಜನೆಗಳಲ್ಲಿನ ಫಲಾನುಭವಿಗಳ ಕಡತಗಳು, ಭಾವಚಿತ್ರಗಳು ಲೋಕಾಯುಕ್ತ ಡಿವೈಎಸ್‌ಪಿ ವೀರೇಂದ್ರಕುಮಾರ್ ಹಾಗೂ ಪೊಲೀಸರ ತಂಡ ಮಂಗಳವಾರ ತಡರಾತ್ರಿಯವರಿಗೂ ಪರಿಶೀಲನೆ ಮಾಡಿದರು. ಕೃಷಿ ಇಲಾಖೆಯಿಂದ ಪಡೆದ ವಿವಿಧ ಯೋಜನೆಗಳ ಅರ್ಹ ಫಲಾನು ಭವಿಗಳ ಬಳಿ ಇಲ್ಲದೇ, ಖಾಸಗಿ ವ್ಯಕ್ತಿಗಳು ಪಡೆದಿರುವ ಬಗ್ಗೆ ಪರಿಶೀಲನೆಯಲ್ಲಿ ಮೇಲ್ನೋಟಕ್ಕೆ ಕಂಡುಬAದಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಎಲ್ಲಾ ಕಡತಗಳ ಪರಿಶೀಲನೆ ನಂತರ, ಸತ್ಯಾಸತ್ಯತೆ ಹೊರಬೀಳಲಿದೆ ಎಂದು ಲೋಕಾಯುಕ್ತ ಪೊಲೀಸರು ತಿಳಿಸಿದ್ದಾರೆ.
ಕೃಷಿ ಇಲಾಖೆಯ ಲೋಕಾಯುಕ್ತ ಪೊಲೀಸರ ತನಿಖೆಗೆ ಕೃಷಿ ಇಲಾಖೆಯ ಸಹಾಯಕ ನಿದೇರ್ಶಕಿ ಜಿ.ಲಕ್ಷ್ಮೀರವರು ಅರ್ಹ ಫಲಾನುಭವಿಗಳ ಕಡತಗಳನ್ನು ವಿತರಿಸಿದರು.
ಲೋಕಾಯುಕ್ತ ಪೊಲೀಸ್ ಉಪ ವರಿಷ್ಠಾಧಿಕಾರಿ ವೀರೇಂದ್ರಕುಮಾರ್, ಪೊಲೀಸ್ ಸಿಬ್ಬಂದಿ ಕೆ.ನಾಗರಾಜು, ಸತೀಶ್, ಗುರು, ಲಿಂಗರಾಜು, ಸಂತೋಷ, ಮಂಜುಳಾ ಇದ್ದರು.