ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಅಕ್ಷಯ ತೃತೀಯ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

IPL 2025: ಟ್ರಾವಿಸ್‌ ಹೆಡ್‌ಗೆ ಕೋವಿಡ್‌-19, ಎಲ್‌ಎಸ್‌ಜಿ ಪಂದ್ಯಕ್ಕೂ ಮುನ್ನ ಸನ್‌ರೈಸರ್ಸ್‌ಗೆ ಆಘಾತ!

Travis Head Covid-19: ಸನ್‌ರೈಸರ್ಸ್‌ ಹೈದರಾಬಾದ್‌ ತಂಡದ ಆರಂಭಿಕ ಬ್ಯಾಟ್ಸ್‌ಮನ್‌ ಟ್ರಾವಿಸ್‌ ಹೆಡ್‌ ಕೋವಿಡ್‌-19 ಪಾಸಿಟಿವ್‌ ಬಂದಿದೆ. ಈ ಹಿನ್ನೆಲೆಯಲ್ಲಿ ಅವರು ಭಾರತಕ್ಕೆ ಮರಳುವುದು ಒಂದು ದಿನ ತಡವಾಗಲಿದೆ ಎಂದು ಎಸ್‌ಆರ್‌ಎಚ್‌ ಹೆಡ್‌ ಕೋಚ್‌ ಡೇನಿಯಲ್‌ ವೆಟ್ಟೋರಿ, ಲಖನೌ ಸೂಪರ್‌ ಜಯಂಟ್ಸ್‌ ವಿರುದ್ಧದ ಪಂದ್ಯಕ್ಕೂ ಮುನ್ನ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ್ದಾರೆ.

ಟ್ರಾವಿಸ್‌ ಹೆಡ್‌ಗೆ ಕೋವಿಡ್‌-19, ಎಲ್‌ಎಸ್‌ಜಿ ಪಂದ್ಯಕ್ಕೆ ಅಲಭ್ಯ!

ಲಖನೌ ಸೂಪರ್‌ ಜಯಂಟ್ಸ್‌ ಪಂದ್ಯಕ್ಕೆ ಟ್ರಾವಿಸ್‌ ಹೆಡ್‌ ಅಲಭ್ಯ.

Profile Ramesh Kote May 18, 2025 8:57 PM

ನವದೆಹಲಿ: ಸನ್‌ರೈಸರ್ಸ್‌ ಹೈದರಾಬಾದ್‌ (SRH) ತಂಡದ ಆರಂಭಿಕ ಬ್ಯಾಟ್ಸ್‌ಮನ್‌ ಟ್ರಾವಿಸ್‌ ಹೆಡ್‌ (Travis Head) ಅವರಿಗೆ ಕೊರೋನಾ ಸೋಂಕು ತಗುಲಿದೆ. ಈ ಹಿನ್ನೆಲೆಯಲ್ಲಿ ಸೋಮವಾರ ಲಖನೌದ ಏಕನಾ ಕ್ರೀಡಾಂಗಣದಲ್ಲಿ ನಡೆಯುವ ಲಖನೌ ಸೂಪರ್‌ ಜಯಂಟ್ಸ್‌ (LSG) ವಿರುದ್ದದ ಪಂದ್ಯಕ್ಕೆ ಆಸ್ಟ್ರೇಲಿಯಾ ಆರಂಭಿಕ ಅಲಭ್ಯರಾಗಿದ್ದಾರೆ ಎಂದು ಭಾನುವಾರ ಪಂದ್ಯ ಪೂರ್ವ ಸುದ್ದಿಗೋಷ್ಠಿಯಲ್ಲಿ ಎಸ್‌ಆರ್‌ಎಚ್‌ ಹೆಡ್‌ ಕೋಚ್‌ ಡೇನಿಯಲ್‌ ವೆಟ್ಟೋರಿ ತಿಳಿಸಿದ್ದಾರೆ. ಕೋವಿಡ್‌-19 ಪಾಸಿಟಿವ್‌ ಬಂದಿರುವ ಕಾರಣ ಹೆಡ್‌, ಭಾರತಕ್ಕೆ ಆಗಮಿಸುವುದು ತಡವಾಗಲಿದೆ ಎಂದು ಕಿವೀಸ್‌ ದಿಗ್ಗಜ ಮಾಹಿತಿ ನೀಡಿದ್ದಾರೆ. ಅಂದ ಹಾಗೆ ಸನ್‌ರೈಸರ್ಸ್‌ ಹೈದರಾಬಾದ್‌ ತಂಡ ಈ ಸೀಸನ್‌ನಲ್ಲಿ ನಿರೀಕ್ಷಿತ ಪ್ರದರ್ಶನ ತೋರುವಲ್ಲಿ ವಿಫಲವಾಗಿದೆ. ಈ ಹಿನ್ನೆಲೆಯಲ್ಲಿ ಈಗಾಗಲೇ ಟೂರ್ನಿಯ ಪ್ಲೇಆಫ್ಸ್‌ ರೇಸ್‌ನಿಂದ ಹೊರ ಬಿದ್ದಿದೆ.

ಲಖನೌ ಹಾಗೂ ಹೈದರಾಬಾದ್‌ ಪಂದ್ಯದ ನಿಮಿತ್ತ ಭಾನುವಾರ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಡೇನಿಯಲ್‌ ವೆಟ್ಟೋರಿ, "ಟ್ರಾವಿಸ್‌ ಹೆಡ್‌ ಸೋಮವಾರ ಬೆಳಗ್ಗೆ ಬರಲಿದ್ದಾರೆ. ಅವರ ಆಗಮನ ತಡವಾಗಿದೆ. ಅವರಿಗೆ ಕೊರೋನ ಸೋಂಕು ತಗುಲಿದೆ ಹಾಗಾಗಿ ಅವರು ಪ್ರಯಾಣಿಸಲು ಸಾಧ್ಯವಾಗುವುದಿಲ್ಲ. ಅವರು ಆಗಮಿಸಿದ ಬಳಿಕ ನಮ್ಮ ವೈದ್ಯಕೀಯ ತಂಡ ನೋಡಿಕೊಳ್ಳಲಿದೆ ಹಾಗೂ ಅವರಿಗೆ ಸೋಂಕು ಎಲ್ಲಿ ತಗುಲಿದೆ ಎಂದು ಪತ್ತೆ ಮಾಡಲಾಗುತ್ತದೆ," ಎಂದು ತಿಳಿಸಿದ್ದಾರೆ.

RR vs PBKS: ಹೈಸ್ಕೋರಿಂಗ್‌ ಪಂದ್ಯದಲ್ಲಿ ರಾಜಸ್ಥಾನ್‌ಗೆ ಆಘಾತ ನೀಡಿದ ಪಂಜಾಬ್‌ ಕಿಂಗ್ಸ್‌!

ಭಾರತ ಹಾಗೂ ಪಾಕಿಸ್ತಾನ ನಡುವಣ ಅಂತಾರಾಷ್ಟ್ರೀಯ ಗಡಿ ಭಾಗದಲ್ಲಿ ಉದ್ವಗ್ನತೆಯ ಕಾರಣ 2025ರ ಐಪಿಎಲ್‌ ಟೂರ್ನಿಯನ್ನು ಒಂದು ವಾರ ನಿಲ್ಲಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಪ್ಯಾಟ್‌ ಕಮಿನ್ಸ್‌ ಹಾಗೂ ಟ್ರಾವಿಸ್‌ ಹೆಡ್‌ ಅವರು ತಮ್ಮ ತವರಿಗೆ ತೆರಳಿದ್ದರು. ನಂತರ ಟೂರ್ನಿಯ ಪುನರಾರಂಭವಾದ ದಿನಾಂಕ ಪ್ರಕಟವಾದ ಬಳಿಕ ಪ್ಯಾಟ್‌ ಕಮಿನ್ಸ್‌ ಭಾರತಕ್ಕೆ ಮರಳಿದ್ದಾರೆ. ಆದರೆ, ಕೋವಿಡ್‌-19 ಬಂದ ಹಿನ್ನೆಲೆಯಲ್ಲಿ ಟ್ರಾವಿಸ್‌ ಹೆಡ್‌ ಅವರು ಭಾರತಕ್ಕೆ ಆಗಮಿಸುತ್ತಿರುವುದು ತಡವಾಗುತ್ತಿದೆ.

ಆಸ್ಟ್ರೇಲಿಯಾ ಹಾಗೂ ದಕ್ಷಿಣ ಆಫ್ರಿಕಾ ನಡುವೆ ಜೂನ್‌ 11 ರಂದು ಆರಂಭವಾಗಲಿರುವ ನಾಲ್ಕನೇ ಆವೃತ್ತಿಯ ವಿಶ್ವ ಟೆಸ್ಟ್‌ ಚಾಂಪಿಯನ್‌ಷಿಪ್‌ ಪೈನಲ್‌ ಪಂದ್ಯ ಆರಂಭವಾಗಲಿದೆ. ಈ ಹಿನ್ನೆಲೆಯಲ್ಲಿ ಪ್ಯಾಟ್‌ ಕಮಿನ್ಸ್‌ ಹಾಗೂ ಟ್ರಾವಿಸ್‌ ಹೆಡ್‌ ಐಪಿಎಲ್‌ಗೆ ಮರಳುವುದು ಅನುಮಾನ ಎಂದು ಹೇಳಲಾಗಿತ್ತು. ಆದರೆ, ಹೈದರಾಬಾದ್‌ ಫ್ರಾಂಚೈಸಿ, ಈ ಇಬ್ಬರೂ ಐಪಿಎಲ್‌ ಟೂರ್ನಿಯ ಇನ್ನುಳಿದ ಪಂದ್ಯಗಳಿಗೆ ಲಭ್ಯರಾಗಲಿದ್ದಾರೆಂದು ಖಚಿತಪಡಿಸಿತ್ತು. ಏಕೆಂದರೆ, ಎಸ್‌ಆರ್‌ಎಚ್‌ ತಂಡ ಈಗಾಗಲೇ ಪ್ಲೇಆಫ್ಸ್‌ನಿಂದ ಹೊರ ಬಿದ್ದಿದೆ. ಎಸ್‌ಆರ್‌ಎಚ್‌ ತಂಡದ ಕೊನೆಯ ಪಂದ್ಯ ಮೇ 23 ರಂದು ನಡೆಯಲಿದೆ. ಈ ಪಂದ್ಯವನ್ನು ಮುಗಿಸಿಕೊಂಡು ಈ ಇಬ್ಬರೂ ತವರಿಗೆ ಮರಳಲಿದ್ದಾರೆ.

IPL 2025: ʻಕೆಕೆಆರ್‌ನ ಐಪಿಎಲ್‌ ಗೆಲುವಿನ ಶ್ರೇಯ ಶ್ರೇಯಸ್‌ ಅಯ್ಯರ್‌ಗೆ ಸಿಕ್ಕಿರಲಿಲ್ಲʼ-ಸುನೀಲ್‌ ಗವಾಸ್ಕರ್‌!

2025ರ ಐಪಿಎಲ್‌ನಲ್ಲಿ ಟ್ರಾವಿಸ್‌ ಹೆಡ್‌ ಫಾರ್ಮ್‌

ಆಸ್ಟ್ರೇಲಿಯಾ ಅರಂಭಿಕ ಬ್ಯಾಟ್ಸ್‌ಮನ್‌ ಟ್ರಾವಿಸ್‌ ಹೆಡ್‌ 2025ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯಲ್ಲಿ ನಿರೀಕ್ಷಿತ ಪ್ರದರ್ಶನ ತೋರುವಲ್ಲಿ ವಿಫಲರಾಗಿದ್ದಾರೆ. ಇಲ್ಲಿಯವರೆಗೂ ಆಡಿದ 11 ಪಂದ್ಯಗಳಿಂದ 281 ರನ್‌ಗಳನ್ನು ಗಳಿಸಿದ್ದಾರೆ. ಆದರೆ, 2024ರ ಟೂರ್ನಿಯಲ್ಲಿ ಅವರು 15 ಪಂದ್ಯಗಳಿಂದ 567 ರನ್‌ಗಳನ್ನು ಕಲೆ ಹಾಕಿದ್ದರು. ಆ ಮೂಲಕ ಎಸ್‌ಆರ್‌ಎಚ್‌ ಫೈನಲ್‌ಗೆ ಪ್ರವೇಶ ಮಾಡುವಲ್ಲಿ ಅವರು ಪ್ರಮುಖ ಪಾತ್ರವನ್ನು ವಹಿಸಿದ್ದರು.