ಮಡಿವಾಳ ಮಾಚಿದೇವ ಶರಣ ಚಳವಳಿಯ ಅನರ್ಘ್ಯ ರತ್ನ : ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ
ಮಾಚಿದೇವರು ಎಲ್ಲ ವರ್ಗದವರ ಬಟ್ಟೆಗಳನ್ನು ಮಾತ್ರ ಸ್ವಚ್ಛಗೊಳಿಸಲಿಲ್ಲ, ಅದರೊಟ್ಟಿಗೆ ಅವರ ಲ್ಲಿದ್ದ ಮೌಢ್ಯ, ಅಜ್ಞಾನ ಅಂಧಕಾರಗಳನ್ನು ತಮ್ಮ ಪ್ರಖರ ವಚನಗಳ ಮೂಲಕ ತೊಳೆದರು ಎಂದರು.
ಚಿಕ್ಕಬಳ್ಳಾಪುರ : 12ನೇ ಶತಮಾನದ ಬಸವಾದಿ ಶರಣರ ಸಾಲಿಗೆ ಸೇರುವ ಮಡಿವಾಳ ಮಾಚಿ ದೇವರು ವೈಚಾರಿಕತೆಯ ನೆಲೆಯಲ್ಲಿ ಅನಘ್ಯ ರತ್ನವಾಗಿದ್ದಾರೆ ಎಂದು ಜಿಲ್ಲಾಧಿಕಾರಿ ಪಿ.ಎನ್. ರವೀಂದ್ರ ತಿಳಿಸಿದರು.
ನಗರ ಹೊರವಲಯ ಜಿಲ್ಲಾಡಳಿತ ಭವನದಲ್ಲಿದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಶಿವಶರಣ ಶ್ರೀ ಮಡಿವಾಳ ಮಾಚಿದೇವರ ಜಯಂತಿ ಕಾರ್ಯಕ್ರಮದಲ್ಲಿ ಮಾಚಿದೇವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದರು.
ಇದನ್ನೂ ಓದಿ: Union Budget 2025: ಬಜೆಟ್‌ನಲ್ಲಿ ಶಾಲಾ ಶಿಕ್ಷಣಕ್ಕೆ ಉತ್ತೇಜನ ಶ್ಲಾಘನೀಯ: ಶಿಕ್ಷಣ ತಜ್ಞ ಪ್ರೊ.ಎಂ.ಆರ್.ದೊರೆಸ್ವಾಮಿ
ಮಾಚಿದೇವರು ಎಲ್ಲ ವರ್ಗದವರ ಬಟ್ಟೆಗಳನ್ನು ಮಾತ್ರ ಸ್ವಚ್ಛಗೊಳಿಸಲಿಲ್ಲ, ಅದರೊಟ್ಟಿಗೆ ಅವರ ಲ್ಲಿದ್ದ ಮೌಢ್ಯ, ಅಜ್ಞಾನ ಅಂಧಕಾರಗಳನ್ನು ತಮ್ಮ ಪ್ರಖರ ವಚನಗಳ ಮೂಲಕ ತೊಳೆದರು ಎಂದರು.
ಕರ್ನಾಟಕದ ಇತಿಹಾಸ ಮತ್ತು ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ 12 ನೇ ಶತಮಾನ ಅತ್ಯಂತ ಮಹತ್ವ ದ ಯುಗ. ಸಮಾಜದ ಸಧಾರಣೆಗಾಗಿ ಶಿವಶರಣರು ಕ್ರಾಂತಿಕಾರಿ ಹೋರಾಟಗಳನ್ನು ನಡೆಸಿದ ಕಾಲ ಇದು. ಶಿವ ಶರಣರು ಆಧ್ಯಾತ್ಮಿಕತೆಯೊಟ್ಟಿಗೆ ಹೊಸ ವೈಚಾರಿಕ ಲೋಕವೊಂದನ್ನೇ ತೆರೆದಿಟ್ಟರು. ಹಲವು ತಾರತಮ್ಯಗಳ ವಿರುದ್ಧ ದನಿ ಎತ್ತುವ ಮೂಲಕ ಸಮಾಜದಲ್ಲಿನ ಅಂಕುಡೊAಕುಗಳನ್ನು ತಿದ್ದಲು ಯತ್ನಿಸಿದರು ಎಂದರು.
12ನೇ ಶತಮಾನ ಎಂಬುದು ತುಂಬಾ ಮಹತ್ವವನ್ನು ಹೊಂದಿರುವ ಕಾಲಘಟ್ಟ. ಅಲ್ಲಮ ಪ್ರಭು, ಬಸವಣ್ಣ, ಅಕ್ಕಮಹಾದೇವಿ, ಚೆನ್ನಬಸಣ್ಣ ಮೊದಲಾದ ಶರಣರೆಲ್ಲರೂ ತಮ್ಮದೇ ಆದ ನೆಲೆಗಟ್ಟಿ ನಲ್ಲಿ ವಿಶೇಷತೆ ಉಳ್ಳವರಾಗಿದ್ದರು.ಇಂತಹ ಶರಣರಿಗೆಲ್ಲ ರಕ್ಷಕನಾಗಿ ನಿಂತAತಹ ಶರಣರಲ್ಲಿ ಮಾಚಿದೇವರು ಪ್ರಮುಖರು. ಅವರು ತಮ್ಮ ವಚನಗಳ ಮೂಲಕ ತಮ್ಮಲ್ಲಿರುವ ಜ್ಞಾನಾನುಭವ ಗಳನ್ನು ವಚನಗಳ ಮೂಲಕ ಜನಸಾಮಾನ್ಯರಿಗೆ ತಿಳಿಸಿ ಕೊಟ್ಟು ಸಮಾಜದ ಅಭಿವೃದ್ಧಿ ಶ್ರಮಿಸಿ ದ್ದಾರೆ. ಈ ಶರಣರ ಕಾಯಕ ಜೀವನ ಇವತ್ತಿಗೂ ಪ್ರಸ್ತುತವಾಗಿದೆ. ನಾವು ಮಾಚಿದೇವರಂತಹ ಮಹಾನ್ ವ್ಯಕ್ತಿಗಳ ವಿಷಯಗಳನ್ನು ಅರಿವು ಮೂಡಿಸುವ ಮೂಲಕ ಮುಂದಿನ ಪೀಳಿಗೆಯು ಕೂಡ ಇವರ ವಿಷಯಗಳನ್ನು ರವಾನಿಸಬೇಕು ಎಂದು ಕರೆ ನೀಡಿದರು.
ಸಮುದಾಯದ ಮುಖಂಡ ಪ್ರಭಾಕರ್ ಮಾತನಾಡಿ, 12ನೇ ಶತಮಾನದಲ್ಲಿ ವಿಶ್ವಗುರು ಬಸವಣ್ಣ ನವರ ಕಲ್ಯಾಣ ಕ್ರಾಂತಿಯಲ್ಲಿ ಮಾಚಿದೇವರ ಪಾತ್ರ ಬಹಳ ಪ್ರಮುಖವಾದದ್ದು. ಅಂದಿನ ಕಾಲದಲ್ಲಿ ಚಿಕ್ಕ ವಯಸ್ಸಿನಲ್ಲಿ ತಮ್ಮ ಗುರುಗಳಾದ ಮಲ್ಲಿಕಾರ್ಜುನಸ್ವಾಮಿಯವರ ಆಶ್ರಯದಲ್ಲಿ ವಿದ್ಯಾಭ್ಯಾಸ ಪಡೆದರೂ ಸಹ ತನ್ನ ಕುಲವೃತ್ತಿಯನ್ನು ಬಿಡದೆ ನಿರ್ವಹಿಸುತ್ತಿದ್ದರು. ಶ್ರೀ ವಿಶ್ವಗುರು ಬಸವಣ್ಣನವರ ತತ್ವ ಸಿದ್ಧಾಂತಕ್ಕೆ ಮನಸೋತ ಮಾಚಿದೇವರು ಕಲ್ಯಾಣ ಪಟ್ಟಣವನ್ನು ಸೇರಿ ಶರಣರ ಬಟ್ಟೆಯನ್ನು ಮಡಿ ಮಾಡುವ ಸೇವೆ ಮಾಡುತ್ತಿದ್ದರು. ಕಾರ್ಯಕರ್ತರಾಗಿ ಹಾಗೂ ಅನು ಭವ ಮಂಟಪದ ಶರಣರ ರಕ್ಷಕರಾಗಿದ್ದ ಶ್ರೀ ಮಡಿವಾಳ ಮಾಚಿದೇವರ ಆದರ್ಶ, ತತ್ವ ಸಿದ್ಧಾಂತ ಗಳು ನಮಗೆ ಮಾದರಿಯಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಮಡಿವಾಳ ಸಮುದಾಯದ ಮುಖಂಡರಿಗೆ ಸಾಧಕರಿಗೆ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ, ಸಮುದಾಯದ ಮುಖಂಡರಾದ ದಿನೇಶ್, ರಾಜಶೇಖರ್, ಪ್ರಭಾಕರ್, ಕೃಷ್ಣಪ್ಪ, ಚಂದ್ರಶೇಖರ್, ಸುಧಾಕರ್ ಹಾಗೂ ಸಮುದಾಯದ ಪದಾಧಿಕಾರಿಗಳು, ಜಿಲ್ಲಾ ಮಟ್ಟದ ಅಧಿಕಾರಿ ಗಳು ಉಪಸ್ಥಿತರಿದ್ದರು.