Vachanananda swamiji: ಪ್ರಯಾಗರಾಜ್‌ ಮಹಾ ಕುಂಭಮೇಳ: ಮಹಾ ಧಾರ್ಮಿಕ ಸಮ್ಮೇಳನ

Vachanananda swamiji: ಉತ್ತರ ಪ್ರದೇಶ ಪ್ರಯಾಗ್‌ರಾಜ್‌ನಲ್ಲಿ ಮಹಾ ಕುಂಭಮೇಳ ಆರಂಭವಾಗಿದೆ. ಜಗತ್ತಿನ ಅತ್ಯಂತ ದೊಡ್ಡ ಧಾರ್ಮಿಕ ಸಮ್ಮಿಲನ ಇದು. ಪವಿತ್ರ ನದಿಗಳಾದ ಗಂಗಾ, ಯಮುನಾ ಮತ್ತು ವೇದಕಾಲದ ನದಿ, ಈಗ ಗುಪ್ತಗಾಮಿನಿ, ಸರಸ್ವತಿಗಳ ಸಂಗಮ ಪ್ರಯಾಗರಾಜ್‌. ಇದು ಹಿಂದೂಗಳಿಗೆ ಅತಿ ಪವಿತ್ರ.

Prayagraj
Profile Ramesh B January 19, 2025

Vachananda


ಜಗದ್ಗುರು ಶ್ರೀ ವಚನಾನಂದ ಮಹಾಸ್ವಾಮಿ

ಲಖನೌ: ಪ್ರಯಾಗರಾಜ್‌ ಮಹಾ ಕುಂಭಮೇಳ (Maha Kumbh Mela)ವು ಜಗತ್ತಿನ ಅತ್ಯಂತ ದೊಡ್ಡ ಧಾರ್ಮಿಕ ಸಮ್ಮಿಲನ. ಪವಿತ್ರ ನದಿಗಳಾದ ಗಂಗಾ, ಯಮುನಾ ಮತ್ತು ವೇದಕಾಲದ ನದಿ, ಈಗ ಗುಪ್ತಗಾಮಿನಿ, ಸರಸ್ವತಿಗಳ ಸಂಗಮ ಪ್ರಯಾಗರಾಜ್‌. ಇದು ಹಿಂದುಗಳಿಗೆ ಅತಿ ಪವಿತ್ರ. ಕುಂಭಮೇಳದ ಮಹತ್ವ ವೇದ, ಪುರಾಣಗಳಲ್ಲಿ ವರ್ಣಿತವಾಗಿದೆ. ಈ ಸಂಗಮದಲ್ಲಿ ಕುಂಭಮೇಳ ಕಾಲದಲ್ಲಿ ಮೀಯುವುದರಿಂದ, ಎಲ್ಲ ಪಾಪಗಳ ವಿಮೋಚನೆಯಾಗಿ, ಜನನ ಮರಣ ಚಕ್ರ ಕಡಿದು, ಮೋಕ್ಷ ಸಾಧ್ಯವೆಂಬ ನಂಬಿಕೆ ನಮ್ಮದಾಗಿದೆ.

ಪುರಾಣದ ಸಮುದ್ರಮಥನದ ಕಥೆ ಕುಂಭಮೇಳದ ಮೂಲ ಪ್ರೇರಣೆ. ಮಂದರವನ್ನು ಕಡಗೋಲು ಮಾಡಿಕೊಂಡು, ವಾಸುಕಿಯನ್ನು ಹಗ್ಗವಾಗಿಸಿ ಅಮೃತಕ್ಕಾಗಿ ಸಮುದ್ರವನ್ನು ಸುರಾಸುರರು ಮಥನ ಮಾಡಿದರು. ಅದರ ಫಲಶ್ರುತಿ ಅಮೃತದ ಕುಂಭ. ಸುರರು ಸೇವಿಸಿ ಉಳಿದಿದ್ದನ್ನು ಭಾರತದ ನಾಲ್ಕು ಪವಿತ್ರ ಸ್ಥಳಗಳಲ್ಲಿ ರಕ್ಷಿಸಿಟ್ಟರು. ಅವುಗಳೇ ಪ್ರಯಾಗ, ಹರಿದ್ವಾರ, ಉಜ್ಜಯಿನಿ ಮತ್ತು ನಾಶಿಕ್. ಈ ಸ್ಥಳಗಳಲ್ಲಿ ಸಂಯೋಜಿತ ಶಕ್ತಿ ಅವಿರತವಾಗಿ ಹರಿಯುತ್ತಲೇ ಇರುತ್ತದೆ ಎಂಬ ನಂಬಿಕೆ ನಮ್ಮದು.

ಕುಂಭಮೇಳವು ಭಾರತದ ಧಾರ್ಮಿಕ ಮತ್ತು ಆಧ್ಯಾತ್ಮಿಕ ದೃಷ್ಟಿಯಿಂದ ಮಾತ್ರವಲ್ಲ, ಖಗೋಲ ಮತ್ತು ಜ್ಯೋತಿಷ್ಯಶಾಸ್ತ್ರದ ದೃಷ್ಟಿಯಿಂದಲೂ ಮಹತ್ವಪೂರ್ಣ. ಇದರ ಆಯೋಜನೆ ಗ್ರಹಗಳು ಮತ್ತು ನಕ್ಷತ್ರಗಳ ವಿಶಿಷ್ಟ ಸ್ಥಾನವನ್ನಾಧರಿಸಿದೆ. ಈ ಅವಧಿ ಗುರುಗ್ರಹವು ರಾಶಿಚಕ್ರದ 12 ರಾಶಿಗಳಲ್ಲಿ ಒಮ್ಮೆ ಸಂಪೂರ್ಣ ಚಕ್ರವನ್ನು ಪೂರ್ಣಗೊಳಿಸುವ ಕಾಲವನ್ನು ಪ್ರತಿನಿಧಿಸುತ್ತದೆ. ಪ್ರಯಾಗದ ಕುಂಭಮೇಳದ ಸಮಯದಲ್ಲಿ, ಗುರುವು ಮೇಷ ರಾಶಿಯಿಂದ ಕುಂಭ ರಾಶಿಗೆ ಪ್ರವೇಶಿಸುತ್ತಾನೆ. ಗುರು ಅಥವಾ ಬೃಹಸ್ಪತಿ, ವಿದ್ಯೆ, ಧರ್ಮ ಮತ್ತು ಆಧ್ಯಾತ್ಮಿಕತೆಯ ಅಧಿಪತಿ. ಕುಂಭಮೇಳದ ಸಮಯದಲ್ಲಿ ಸೂರ್ಯನು ಮಕರ ರಾಶಿಯಲ್ಲಿರುತ್ತಾನೆ ಮತ್ತು ಚಂದ್ರನು ಕುಂಭ ರಾಶಿಯಲ್ಲಿ ಪ್ರವೇಶಿಸುತ್ತಾನೆ. ಇದು ಅತ್ಯಂತ ಪವಿತ್ರ ಪುಣ್ಯ ಪರ್ವಕಾಲ.

ನಮ್ಮದು ಕೃತಜ್ಞತಾ ಸಂಸ್ಕೃತಿ. ಜೀವನಕ್ಕೆ ಬೇಕಾದ ದ್ರವ್ಯಗಳೆಲ್ಲವೂ ನಮಗೆ ದೇವರು. ಕಣಕಣದಲ್ಲಿ ಶಂಕರನ್ನು, ಹನಿಹನಿಯಲ್ಲಿ ಗಂಗೆಯನ್ನು ಧೇನಿಸಿದ ಪರಂಪರೆ ನಮ್ಮದು. ಕನ್ನಡ ಶಬ್ದ ಇನ್ನೂ ಅರ್ಥಪೂರ್ಣ. ನೀ+ಇರು= ನೀರು ಇದ್ದಲ್ಲಿಯೇ ಜೀವ, ಜೀವನ. ಸಾಧು ಸನ್ಯಾಸಿಗಳನ್ನು ಸ್ವಾಗತಿಸುವಾಗಲೂ ಪೂರ್ಣಕುಂಭ ಬೇಕು. ನಮ್ಮ ಮಾತೆಯರು ಅಮೃತದ ಕಲಶ ಹೊತ್ತು ಜಾತ್ರೆ ಉತ್ಸವಗಳಲ್ಲಿ ನಡೆಯುತ್ತಾರೆ. ವೇದಗಳಲ್ಲಿ ನದಿಗಳ ಮಹತ್ವವನ್ನು ಮತ್ತು ಅದರ ಪವಿತ್ರತೆಯನ್ನು ಉದ್ಧರಿಸಲಾಗಿದೆ. ಋಗ್ವೇದ (10.75.5) ಮತ್ತು ಅಥರ್ವವೇದ (7.5.1) ನಲ್ಲಿ ಗಂಗಾ, ಯಮುನಾ ಮತ್ತು ಸರಸ್ವತಿ ನದಿಗಳನ್ನು ಅತ್ಯಂತ ಪವಿತ್ರವಾದ ನದಿಗಳೆಂದು ಬಣ್ಣಿಸಲಾಗಿದೆ. ಋಗ್ವೇದ ಮತ್ತು ಯಜುರ್ವೇದದಲ್ಲಿ, ಪವಿತ್ರ ತೀರ್ಥ ಸ್ಥಳಗಳಲ್ಲಿ ಸ್ನಾನ ಮಾಡುವ ಮಹತ್ವವನ್ನು ವಿವರಿಸಲಾಗಿದೆ. ಆಥರ್ವಣ ವೇದದಲ್ಲಿ "ಪುಣ್ಯಕಾಲ" ಎಂಬ ಆಧ್ಯಾತ್ಮಿಕ ಶಕ್ತಿಯುಳ್ಳ ಸಮಯದ ಉಲ್ಲೇಖವಿದೆ, ಇದು ಕುಂಭಮೇಳದ ಸಮಯದಲ್ಲಿನ ಸ್ನಾನವನ್ನು ಬೆಂಬಲಿಸುತ್ತದೆ. ಭಾಗವತ, ವರಾಹ, ಭವಿಷ್ಯ, ನಾರದೀಯ ಪುರಾಣಗಳು ಕುಂಭಮೇಳಕ್ಕೆ ಪೌರಾಣಿಕ ಸಾಕ್ಷಿ ನೀಡಿದರೆ, ರಾಮಾಯಣ-ಮಹಾಭಾರತಗಳು ಐತಿಹಾಸಿಕ ಸಾಕ್ಷಿ ನುಡಿಯುತ್ತವೆ.

Kumbha mela (1)

ಆಧುನಿಕ ಇತಿಹಾಸದಲ್ಲಿ ಚಾಣಕ್ಯ ಚಂದ್ರಗುಪ್ತರ ಕಾಲದಲ್ಲಿ ಇದರ ಉಲ್ಲೇಖ ಬರುತ್ತದೆ. 7ನೇ ಶತಮಾನದಲ್ಲಿ ಭಾರತಕ್ಕೆ ಭೇಟಿ ನೀಡಿದ್ದ, ಚೀನಾದ ಯಾತ್ರಿಕ ಹುಯೆನ್ ತ್ಸಾಂಗ್ ಕುಂಭಮೇಳದ ಕುರಿತು ಉಲ್ಲೇಖಿಸಿದ್ದಾನೆ. ಅದರಲ್ಲಿ ಭಾಗವಹಿಸುವ ಜನ ಸಂಖ್ಯೆಯನ್ನು ನೋಡಿ ಬೆರಗುಗೊಂಡಿದ್ದಾನೆ. ಶಂಕರಾಚಾರ್ಯರು ಇದನ್ನು ಇನ್ನೂ ಸುವ್ಯವಸ್ಥಿತವಾಗಿ ನಡೆಯುವಂತೆ ಮಾಡಿದರು. ಮೊಘಲರ ಕಾಲದಲ್ಲಿಯೂ, ಬ್ರಿಟೀಷರ ಕಾಲದಲ್ಲಿಯೂ ಇದು ಯಾವುದೇ ಅಡೆತಡೆಯಿಲ್ಲದೆ ನಡೆದಿದೆ. ಲಕ್ಷಾಂತರ ಜನರು ಭಾಗವಹಿಸಿದ್ದು ಇತಿಹಾಸದಲ್ಲಿ ದಾಖಲಾಗಿದೆ.

ಕುಂಭಮೇಳದಲ್ಲಿ ಭಾಗವಹಿಸುವ ಪ್ರಮುಖ ಸಂಘಟನೆಗಳನ್ನು ಅಖಾಡಾಗಳು ಎಂದು ಕರೆಯಲಾಗುತ್ತದೆ. ಈ ಅಖಾಡಾಗಳು ಹಿಂದು ಧರ್ಮದ ಸಾಧುಸಂತರನ್ನು ಒಕ್ಕೂಟವಾಗಿಸಿ ಧಾರ್ಮಿಕ ಪ್ರವಚನಗಳು, ಪೂಜಾ ವಿಧಿಗಳು ಮತ್ತು ಶೈಕ್ಷಣಿಕ ಚಟುವಟಿಕೆಗಳನ್ನು ನಡೆಸುತ್ತವೆ. ಪ್ರತಿಯೊಂದು ಕುಂಭಮೇಳದಲ್ಲಿಯೂ ವಿವಿಧ ಅಖಾರಾಗಳ ಸದಸ್ಯರು, ವಿಶೇಷವಾಗಿ ನಾಗಾ ಸಾಧುಗಳು, ರಾಜಮಾರ್ಗಗಳ ಮೂಲಕ ಶೋಭಾಯಾತ್ರೆಯಲ್ಲಿ ಭಾಗವಹಿಸುತ್ತಾರೆ ಮತ್ತು ಶಾಹಿ ಸ್ನಾನಕ್ಕೆ ಮುನ್ನ ಶುದ್ಧೀಕರಣ ಸ್ನಾನವನ್ನು ಮಾಡುತ್ತಾರೆ. ಭಾರತದ ಎಲ್ಲ ಮತ ಫಂಥಗಳಿಗೂ ಕುಂಭಮೇಳದಲ್ಲಿ ಪ್ರಾತಿನಿಧ್ಯವಿರುತ್ತದೆ.

Kumbha mela

ಪ್ರತಿ 12 ವರ್ಷಕ್ಕೊಮ್ಮೆ ನಡೆಯುವ ಕುಂಭಮೇಳದಲ್ಲಿ ಕೋಟ್ಯಂತರ ಭಕ್ತರು, ಸನ್ಯಾಸಿಗಳು, ಅಘೋರಿಗಳು, ನಾಗಾ ಸಾಧುಗಳು ಮತ್ತು ವಿವಿಧ ಹಿಂದೂ ಪಂಥದವರು ಭಾಗವಹಿಸುತ್ತಾರೆ. ಇದು ತುಂಬಾ ವ್ಯವಸ್ಥಿತವಾಗಿ, ಶಿಸ್ತು ಮತ್ತು ಸಮಯಬದ್ಧವಾಗಿ ನಡೆಯುತ್ತದೆ. 2019 ರ ಕುಂಭಮೇಳದಲ್ಲಿ, 24 ಕೋಟಿ ಜನರು ಭಾಗವಹಿಸಿದ್ದರು ಎಂದು ಅಂದಾಜಿಸಲಾಗಿದೆ. ಈ ಬಾರಿ ಇದು ಇನ್ನೂ ಹೆಚ್ಚಾಗಲಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಕುಂಭಮೇಳವು ಆಕರ್ಷಕವಾಗಿದೆ. ಹಲವು ವಿದೇಶಿ ಭಕ್ತರು, ಪ್ರವಾಸಿಗಳು, ಸಂಶೋಧಕರು ಧಾರ್ಮಿಕ ಜ್ಞಾನವನ್ನು ಪಡೆಯಲು ಮತ್ತು ಭಾರತೀಯ ಸಂಸ್ಕೃತಿಯನ್ನು ಅನುಭವಿಸಲು ಸಮಾರಂಭದಲ್ಲಿ ಭಾಗವಹಿಸುತ್ತಾರೆ. ಆಧ್ಯಾತ್ಮ ಮತ್ತು ಚಿಂತನೆಗೆ ಆಸಕ್ತ ವಿದೇಶಿಗರು ಈ ಮೇಳದಲ್ಲಿ ಬಂದು ಹಿಂದೂ ಧರ್ಮದ ಗಾಢತನವನ್ನು ಅಭ್ಯಸಿಸುತ್ತಾರೆ. ಯುರೋಪ್, ಅಮೆರಿಕ, ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾದಿಂದ ಆಗಮಿಸುವ ವಿದೇಶಿ ಯಾತ್ರಾರ್ಥಿಗಳು ಸ್ಥಳೀಯ ಸಂಸ್ಕೃತಿಯೊಂದಿಗೆ ಬೆರೆತು ಅನೇಕ ಧಾರ್ಮಿಕ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುತ್ತಾರೆ.

2019ರ ಮೇಳದಲ್ಲಿ 25,000ಕ್ಕೂ ಹೆಚ್ಚು ವಿದೇಶಿ ಯಾತ್ರಾರ್ಥಿಗಳು ಭಾಗವಹಿಸಿದ್ದರು ಎಂಬ ಮಾಹಿತಿ ಇದೆ. ಜಗತ್ತಿನಲ್ಲಿಯೇ ಅತಿದೊಡ್ಡ ಧಾರ್ಮಿಕ ಸಮಾರಂಭ ಎಂಬ ಹೆಸರನ್ನು ಪಡೆದಿರುವ ಕುಂಭಮೇಳವು ಭಾರತವು ತನ್ನ ಧಾರ್ಮಿಕ ಶ್ರೀಮಂತಿಕೆಯನ್ನು ವಿಶ್ವದ ಮುಂದೆ ತೋರಿಸಬಲ್ಲ ಒಂದು ವಿಶಿಷ್ಟ ಉದಾಹರಣೆಯಾಗಿದೆ.

(ವೀರಶೈವ ಲಿಂಗಾಯತ ಪಂಚಮಸಾಲಿ ಪೀಠ, ಹರಿಹರ)

Three labourers brutally assaulted by brick kiln owner
1:53 PM January 20, 2025

Assault case: ಮೂವರು ಕಾರ್ಮಿಕರ ಮೇಲೆ ಇಟ್ಟಿಗೆ ಭಟ್ಟಿ ಮಾಲೀಕ ಮಾರಣಾಂತಿಕ ಹಲ್ಲೆ; ಕೆಲಸಕ್ಕೆ ಬರುವುದು ವಿಳಂಬವಾಗಿದ್ದಕ್ಕೆ ರಾಕ್ಷಸಿ ಕೃತ್ಯ!

Saif Ali Khan, Ibrahim
2:50 PM January 16, 2025

Saif Ali Khan: 1,200 ಕೋಟಿ ರೂ. ಆಸ್ತಿಗಳ ಒಡೆಯ ಸೈಫ್‌ ಆಲಿ ಖಾನ್‌ನನ್ನು‌ ಆಟೋದಲ್ಲಿ ಆಸ್ಪತ್ರೆಗೆ ಕರೆದೊಯ್ದ ಪುತ್ರ ಇಬ್ರಾಹಿಂ; ಕಾರಣವೇನು?

Student dies 1
8:51 PM January 18, 2025

Heart Attack: ಕಾಲೇಜು ಮುಗಿಸಿ ಹೋಗುವಾಗ ಹೃದಯಾಘಾತವಾಗಿ ವಿದ್ಯಾರ್ಥಿನಿ ಸಾವು

robbery case shooting
1:49 PM January 16, 2025

Murder Case: ಸೆಕ್ಯೂರಿಟಿ ಸಿಬ್ಬಂದಿಯ ಗುಂಡಿಕ್ಕಿ ಹತ್ಯೆ ಮಾಡಿ 93 ಲಕ್ಷ ರೂ. ದರೋಡೆ

BBK 11 Mid week Elimination (1)
9:12 PM January 15, 2025

BBK 11: ಇಂದೇ ನಡೆಯಲಿದೆ ಮಿಡ್ ವೀಕ್ ಎಲಿಮಿನೇಷನ್: ಔಟ್ ಆದ ಸ್ಪರ್ಧಿ ಇವರೇ ನೋಡಿ

Saif ali Khan (1)
9:38 AM January 18, 2025

Saif Ali Khan: ರಕ್ತಸಿಕ್ತವಾದ ಬಟ್ಟೆ, ಸಂಪೂರ್ಣ ಅಸ್ವಸ್ಥರಾಗಿದ್ದ ಸೈಫ್‌! ಆ ರಾತ್ರಿ ನಡೆದಿದ್ದಾದರೂ ಏನು? ಆಟೋ ಡ್ರೈವರ್‌ ಹೇಳಿದ್ದೇನು?

Chaithra Kundapura remuneration (1)
7:13 AM January 16, 2025

BBK 11: ಬಿಗ್ ಬಾಸ್​ನಿಂದ ಹೊರಬಂದ ಚೈತ್ರಾ ಕುಂದಾಪುರಗೆ ಸಿಕ್ಕ ಹಣ ಎಷ್ಟು ಗೊತ್ತೇ?

Naga Sadhus
11:15 PM January 18, 2025

Maha Kumbh Mela: ಕುಂಭಮೇಳದ ವೇಳೆ ನಾಗ ಸಾಧುಗಳು ಬರುವುದೆಲ್ಲಿಂದ? ಬಳಿಕ ಅಪ್ರತ್ಯಕ್ಷರಾಗುವುದೇಕೆ? ಅವರ ನಿಗೂಢ ಪ್ರಪಂಚ ಹೇಗಿದೆ? ಇಲ್ಲಿದೆ ಸಮಗ್ರ ವಿವರ

Honnamaradi jatre
5:53 PM January 15, 2025

Honnamaradi Jatre: ವೈಭವದಿಂದ ನಡೆದ ಹೊನ್ನಮರಡಿ ಜಾತ್ರೆ; ಶ್ರೀ ರಂಗನಾಥಸ್ವಾಮಿ ದರ್ಶನ ಪಡೆದ ಸಾವಿರಾರು ಭಕ್ತರು

Eshwara Khandre
6:54 PM January 16, 2025

Bidar ATM Robbery: ಬೀದರ್ ಎಟಿಎಂ ದರೋಡೆ ಪ್ರಕರಣ; ದುಷ್ಕರ್ಮಿಗಳ ವಿರುದ್ಧ ಕಠಿಣ ಕ್ರಮಕ್ಕೆ ಸಚಿವ ಖಂಡ್ರೆ ಸೂಚನೆ