ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Mahakumbh 2025 : ಸನಾತನ ಧರ್ಮ ಸ್ವೀಕರಿಸಲಿರೋ ಸ್ಟೀವ್‌ ಜಾಬ್ಸ್‌ ಪತ್ನಿ! ಕೈಲಾಸಗಿರಿ ಸ್ವಾಮಿಗಳಿಂದ ದೀಕ್ಷೆ

ಮಹಾಕುಂಭ ಮೇಳವನ್ನು ಕಣ್ತುಂಬಿಕೊಳ್ಳಲು ಲಕ್ಷಾಂತರ ಜನ ಬರುತ್ತಿದ್ದು, ಸ್ಟೀವ್‌ ಜಾಬ್ಸ್‌ ಪತ್ನಿ ಕೂಡ ಪ್ರಯಾಗರಾಜಕ್ಕೆ ಆಗಮಿಸಿದ್ದಾರೆ. ಇದೀಗ ಅವರು ಹಿಂದೂ ಧರ್ಮಕ್ಕೆ ಸೇರ್ಪಡೆಗೊಳ್ಳಲಿದ್ದಾರೆ ಎಂದು ತಿಳಿದು ಬಂದಿದೆ.

ಸ್ಟೀವ್‌ ಜಾಬ್ಸ್‌ ಪತ್ನಿ ಹಿಂದೂ ಧರ್ಮಕ್ಕೆ ಮತಾಂತರ? ಕೈಲಾಸಗಿರಿ ಸ್ವಾಮೀಜಿಯಿಂದ ಲಾರೆನ್‌ ಪೋವಲ್‌ಗೆ ದೀಕ್ಷೆ

Laurene Powell Jobs

Profile Vishakha Bhat Jan 18, 2025 12:04 PM

ಮುಂಬೈ ಜ.18. 2025 : ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ಮಹಾಕುಂಭ (Mahakumbh) ಮೇಳ ನಡೆಯುತ್ತಿದ್ದು, ದೇಶ ವಿದೇಶಗಳಿಂದ ಭಕ್ತರು ಕುಂಭ ಮೇಳಕ್ಕೆ ಆಗಮಿಸುತ್ತಿದ್ದಾರೆ. ಆಪಲ್‌ ಕಂಪನಿಯ ಜಾಬ್ಸ್ ಅವರ ಪತ್ನಿ ಲಾರೆನ್‌ ಪೋವಲ್‌ ಜಾಬ್ಸ್‌ (Laurene Powell Jobs) ಕೂಡ ಆಗಮಿಸಿದ್ದಾರೆ. ತ್ರಿವೇಣಿಯಲ್ಲಿ ಪುಣ್ಯ ಸ್ನಾನ ಮಾಡಿರುವ ಅವರು ಪೂಜೆ ಕೈಗೊಂಡಿದ್ದಾರೆ. ಹಿಂದೂ ಧರ್ಮದ ಅತೀವ ಶ್ರದ್ಧೆ ಹೊಂದಿರುವ ಲಾರೆನ್‌ ಇದೀಗ ಹಿಂದೂ ಧರ್ಮಕ್ಕೆ ಸೇರ್ಪಡೆಗೊಳ್ಳಲಿದ್ದಾರೆ ಎಂದು ತಿಳಿದು ಬಂದಿದೆ.

ಈ ಬಗ್ಗೆ ಮಾತನಾಡಿರುವ ಕೈಲಾಶಾನಂದ ಗಿರಿಯ ನಿರಂಜನಿ ಪೀಠಾಧೀಶ್ವರ ಸ್ವಾಮಿ ಲಾರೆನ್‌ ಅವರು ಸತಾನ ಧರ್ಮವನ್ನು ಸೇರಲು ಮತ್ತು ಸಂಪ್ರದಾಯವನ್ನು ಕಲಿಯಲು ಬಯಸುತ್ತಾರೆ ಎಂದು ಹೇಳಿದ್ದಾರೆ. ಈ ಹಿಂದೆ ಹಿಂದೂ ಧರ್ಮದಿಂದ ಪ್ರೇರೇಪಿತವಾಗಿ ಅವರು ತಮ್ಮ ಹೆಸರನ್ನು ಕಮಲಾ ಎಂದು ಬದಲಾಯಿಸಿಕೊಂಡಿದ್ದರು. ಈ ಬಾರಿಯ ಮಹಾಕುಂಭ ಮೇಳಕ್ಕೆ ಅವರು ಆಗಮಿಸಿದ್ದು, ಪ್ರಯಾಗ್‌ರಾಜ್‌ನಲ್ಲಿ ವಾಸ್ಥವ್ಯ ಹೂಡಿದ್ದಾರೆ.



ಮಕರ ಸಂಕ್ರಾಂತಿಯ ದಿನದಂದು ರಾತ್ರಿ 10:10 ಕ್ಕೆ ಅವರಿಗೆ ದೀಕ್ಷೆ ನೀಡಿದ್ದೇವೆ. ಒಂದು ವರ್ಷದ ಹಿಂದೆ, ಫೆಬ್ರವರಿ 18 ರಂದು, ಅವರ ಕಮಲಾ ಎಂಬ ಹೆಸರನ್ನು ನೀಡಲಾಯಿತು ಮತ್ತು ಗೋತ್ರವನ್ನು ನಿಯೋಜಿಸಲಾಯಿತು ಎಂದು ನಿರಂಜನಿ ಪೀಠದ ಸ್ವಾಮಿಗಳು ಹೇಳಿದ್ದಾರೆ. ಈಗ ಅವರು ಸನಾತನ ಧರ್ಮವನ್ನು ಸೇರಲು ಬಯಸುತ್ತಾರೆ ಮತ್ತು ತನ್ನ ಗುರುವಿನ ಮೂಲಕ ಸಂಪ್ರದಾಯವನ್ನು ಕಲಿಯಲು ಬಯಸುತ್ತಾರೆ. ಶುದ್ಧ ಸಸ್ಯಾಹಾರಿಯಾಗಿದ್ದು, ಬೆಳ್ಳುಳ್ಳಿ ಅಥವಾ ಈರುಳ್ಳಿ ತಿನ್ನುವುದಿಲ್ಲ ಎಂದು ಅವರು ಹೇಳಿದರು.

ಈ ಸುದ್ದಿಯನ್ನೂ ಓದಿ : Maha Kumbh 2025: ಮಹಾಕುಂಭ ಮೇಳದಲ್ಲಿ ಸಾಧ್ವಿ ಹರ್ಷ ಹವಾ; ಈಕೆಯನ್ನು ನೆಟ್ಟಿಗರು ಟ್ರೋಲ್ ಮಾಡ್ತಿರೋದ್ಯಾಕೆ..!?

ಲಾರೆನ್ ಅವರು ಸೋಮವಾರ ಸ್ವಲ್ಪ ಸಮಯದವರೆಗೆ ಅಸ್ವಸ್ಥರಾಗಿದ್ದರು, ಆದರೆ ಗಂಗಾ ಸ್ನಾನ ಮತ್ತು ವಿಶ್ರಾಂತಿಯ ನಂತರ ಅವರು ಉತ್ತಮವಾಗಿದ್ದಾರೆ. ಸನಾತನ ಧರ್ಮವನ್ನು ಆಳವಾಗಿ ಅಧ್ಯಯನ ಮಾಡುವ ಅವರ ಉತ್ಸಾಹವು ಬಲವಾಗಿ ಉಳಿದಿದೆ ಎಂದು ಸ್ವಾಮಿ ಕೈಲಾಶಾನಂದರು ತಿಳಿಸಿದ್ದಾರೆ.