Mahakumbh 2025: ಮಹಿಳೆಯರ ಪುಣ್ಯ ಸ್ನಾನದ ವಿಡಿಯೊ ರೆಕಾರ್ಡ್ ಮಾಡಿ ಶೇರ್; ಪತ್ರಕರ್ತ ಅರೆಸ್ಟ್!
ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿರುವ ಮಹಾ ಕುಂಭಮೇಳದಲ್ಲಿ ಕೋಟ್ಯಂತರ ಭಕ್ತರು ಪುಣ್ಯ ಸ್ನಾನ ಮಾಡುತ್ತಿದ್ದಾರೆ. ತ್ರಿವೇಣಿ ಸಂಗಮದಲ್ಲಿ ಮಹಿಳೆಯರೂ ಪುಣ್ಯ ಸ್ನಾನ ಮಾಡುತ್ತಿದ್ದು,ಆ ವಿಡಿಯೊವನ್ನು ಉತ್ತರ ಪ್ರದೇಶದ ಪತ್ರಕರ್ತನೊಬ್ಬ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾನೆ. ಅಷ್ಟೇ ಅಲ್ಲದೆ ಹಿಂದೂ ದೇವತೆಗಳ ವಿರುದ್ಧ ಅಶ್ಲೀಲ ಕಾಮೆಂಟ್‌ಗಳನ್ನು ಮಾಡಿದ್ದಾನೆ. ಅವನನ್ನು ಪೊಲೀಸರು ಬಂಧಿಸಿದ್ದಾರೆ.
ಲಖನೌ: ಪ್ರಯಾಗರಾಜ್‌ನ(Prayagraj) ಮಹಾಕುಂಭಮೇಳದಲ್ಲಿ(Mahakumbh) ಮಹಿಳೆಯರು ಪವಿತ್ರ ಸ್ನಾನ(Holy Dip) ಮಾಡುವ ವಿಡಿಯೊವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿದ ಆರೋಪದ ಮೇಲೆ ಉತ್ತರ ಪ್ರದೇಶದ ಪತ್ರಕರ್ತನೊಬ್ಬನನ್ನು ಬಂಧಿಸಲಾಗಿದೆ. ಆರೋಪಿಯನ್ನು ಕಮ್ರಾನ್ ಅಲ್ವಿ ಎಂದು ಗುರುತಿಸಲಾಗಿದ್ದು ಆತ ತನ್ನದೇ ಆದ ವೆಬ್‌ಸೈಟ್ ಹೊಂದಿದ್ದು, ಪತ್ರಿಕೆ ನಡೆಸುತ್ತಿದ್ದಾನೆ ಎಂದು ತಿಳಿದು ಬಂದಿದೆ.
ಮಹಾ ಕುಂಭಮೇಳದಲ್ಲಿನ ಪವಿತ್ರ ಸ್ನಾನದ ವಿಡಿಯೊವನ್ನು ಶೇರ್ ಮಾಡಿದ್ದಲ್ಲದೆ, ಹಿಂದೂ ದೇವತೆಗಳ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಅವಹೇಳನಕಾರಿ ಕಾಮೆಂಟ್ ಕೂಡ ಮಾಡಿದ್ದಾನೆ. ಈ ಆರೋಪಗಳ ಮೇಲೆ ಉತ್ತರ ಪ್ರದೇಶದ ಬಾರಾಬಂಕಿಯ ಸ್ಥಳೀಯ ಪತ್ರಕರ್ತನನ್ನು ಪೊಲೀಸರು ಬಂಧಿಸಿದ್ದಾರೆ. ಕಮ್ರಾನ್ ಅಲ್ವಿ ಎಂಬ ಪತ್ರಕರ್ತ ತನ್ನದೇ ಆದ ವೆಬ್‌ಸೈಟ್ ಮತ್ತು ಪತ್ರಿಕೆಯನ್ನು ನಿರ್ವಹಿಸುತ್ತಿದ್ದು, ಮಹಾಕುಂಭದಲ್ಲಿ ಮಹಿಳೆಯರ ವಿಡಿಯೊವನ್ನು ಶೇರ್ ಮಾಡುವ ಮೂಲಕ ಅಶ್ಲೀಲ ಭಾಷೆಯಲ್ಲಿ ಟೀಕೆ ಮಾಡಿದ್ದಾನೆ.
He is Kamran Alvi, a self proclaimed journalist, from Barabanki, UP.
— Treeni (@TheTreeni) January 22, 2025
He recorded Hindu women taking a dip at the Maha Kumbh and made highly objectionable remarks against Hindus and Hindu deties.
After his perverted post became viral, the police arrested him.#MahaKumbh pic.twitter.com/aPM4iIoSXs
ಪೊಲೀಸ್ ಅಧಿಕಾರಿಗಳ ಪ್ರಕಾರ, ಕಮ್ರಾನ್ ಅಲ್ವಿ ಮಹಾ ಕುಂಭಮೇಳದ ಪುಣ್ಯ ಸ್ನಾನವನ್ನು ಚಿತ್ರಿಸುವ ವಿಡಿಯೊದಲ್ಲಿ ಅವಹೇಳನಕಾರಿ ಕಾಮೆಂಟ್‌ನೊಂದಿಗೆ ಪೋಸ್ಟ್ ಮಾಡಿದ್ದಾನೆ. ಆತನ ವಿರುದ್ಧ ಪ್ರಕರಣ ದಾಖಲಾಗಿದ್ದು, ಅವನನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ.
ಈ ಸುದ್ದಿಯನ್ನೂ ಓದಿ:Cylinder Blast: ಮಹಾ ಕುಂಭಮೇಳದಲ್ಲಿ ಅಗ್ನಿ ಅವಘಡ; ಸಿಲಿಂಡರ್‌ಗಳ ಸ್ಫೋಟ!
ಸಹಾಯಕ ಪೊಲೀಸ್ ಅಧೀಕ್ಷಕ (ಎಎಸ್‌ಪಿ) ಅಖಿಲೇಶ್ ನಾರಾಯಣ್ ಸಿಂಗ್ ಅವರು ಬಂಧನವನ್ನು ಖಚಿತಪಡಿಸಿದ್ದಾರೆ. ಪತ್ರಕರ್ತ ಮಹಾ ಕುಂಭಮೇಳದ ಪುಣ್ಯ ಸ್ನಾನದಲ್ಲಿ ಭಾಗಿಯಾಗುವ ಮಹಿಳೆಯರ ಆಕ್ಷೇಪಾರ್ಹ ವಿಡಿಯೊವನ್ನು ಸಾಮಾಜಿಕ ಜಾಲತಾಣದಲ್ಲಿ ಅನುಚಿತ ಟೀಕೆಗಳೊಂದಿಗೆ ಹಂಚಿಕೊಂಡಿದ್ದಾನೆ ಎಂದು ಹೇಳಿದ್ದಾರೆ. ಪೊಲೀಸರು ಚುರುಕಾಗಿ ಕ್ರಮ ಕೈಗೊಂಡು ಪ್ರಕರಣ ದಾಖಲಿಸಿಕೊಂಡು ಪತ್ರಕರ್ತನನ್ನು ಬಂಧಿಸಿದ್ದಾರೆ ಎಂದು ಅಖಿಲೇಶ್ ಸಿಂಗ್ ತಿಳಿಸಿದ್ದಾರೆ.