ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Mahakumbh Mela 2025: ಕುಂಭಮೇಳದಲ್ಲಿ ಬಾಲಕಿಗೆ ಮಾದಕ ವಸ್ತು ನೀಡಿದ್ದಾರೆಂದು ಸಾಧು ವಿರುದ್ಧ ಪೋಸ್ಟ್‌; ಇದು ನಿಜವೇ?

ಮಹಾಕುಂಭ ಮೇಳದಲ್ಲಿ ಸಾಧುವೊಬ್ಬರು ಬಾಲಕಿಗೆ ಮಾದಕ ವಸ್ತುಗಳನ್ನು ನೀಡಿ ಆಕೆಯನ್ನು ಕರೆದುಕೊಂಡು ಹೋಗುತ್ತಿದ್ದಾರೆ ಎಂದು ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವನ್ನು ಹಂಚಿಕೊಂಡಿದ್ದವರ ಮೇಲೆ ಕೇಸ್‌ ದಾಖಲಾಗಿದೆ.

Mahakumbh 2025

ಲಖನೌ: ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ಮಹಾಕುಂಭ ಮೇಳ ನಡೆಯುತ್ತಿದೆ. ಈಗಾಗಲೇ ಜಗತ್ತಿನ ಮೂಲೆ ಮೂಲೆಗಳಿಂದಲೂ ಮಹಾಕುಂಭ ಮೇಳವನ್ನು ವೀಕ್ಷಿಸಲು ಭಕ್ತರು ಆಗಮಿಸುತ್ತಿದ್ದಾರೆ. ಇದೀಗ ಕುಂಭ ಮೇಳದಲ್ಲಿ ಸಾಧುವೊಬ್ಬರ ಬಗ್ಗೆ ಯೂಟ್ಯೂಬ್‌ ಸುದ್ದಿ ವಾಹಿನಿಯೊಂದು ಸುದ್ದಿಯನ್ನು ಬಿತ್ತರಿಸಿದ್ದು, ಎಲ್ಲೆಡೆ ಸದ್ದು ಮಾಡುತ್ತಿದೆ. 'ಮಹಾಕುಂಭ ಮೇಳದಲ್ಲಿ ಸಾಧು ಒಬ್ಬ ಅಪ್ರಾಪ್ತ ಬಾಲಕಿ ಆತನೊಂದಿಗೆ ವಾಸಿಸುವಂತೆ ಪ್ರಭಾವ ಬೀರಿದ ವೀಡಿಯೊಗಳ ಸರಣಿಯನ್ನು ಬಿಡುಗಡೆ ಮಾಡಿದೆ. ಆ ಸಾಧು ಜನಸಂದಣಿಯಿಂದ ಅವಳನ್ನು ಕರೆದುಕೊಂಡು ಹೋಗಿ ಅವಳನ್ನು ತನ್ನೊಂದಿಗೆ ಒಬ್ಬಂಟಿಯಾಗಿ ಕುಳಿತುಕೊಳ್ಳುವಂತೆ ಆಕೆಯ ಮೇಲೆ ಪ್ರಭಾವ ಬೀರುತ್ತಿದ್ದಾರೆ ಎನ್ನಲಾಗಿದೆ.

ಸಾಧುವನ್ನು ಜುನಾ ಅಖಾಡದ ಭಾಗವೆಂದು ಹೇಳಲಾಗಿದ್ದು, ಅವರನ್ನು ಮಹಾರಾಜ್ ಸಂಜಯ್ ಗಿರಿ ಎಂದು ಗುರುತಿಸಲಾಗಿದೆ. ಸಾಧು ಸುದ್ದಿ ನಿರೂಪಕರೊಂದಿಗೆ ಮಾತನಾಡುತ್ತಾ, ಹುಡುಗಿ ತನ್ನೊಂದಿಗೆ ವಾಸಿಸಲು ಬಯಸುತ್ತಾಳೆ, ಆದ್ದರಿಂದ ತಾನು ಅವಳನನ್ನು ನನ್ನೊಟ್ಟಿಗೆ ಕರೆದುಕೊಂಡು ಹೋಗುತ್ತಿದ್ದೇನೆ ಎಂದು ಹೇಳಿದ್ದಾರೆ. ಈ ವಿಡಿಯೋ ವೈರಲ್‌ ಆಗುತ್ತಿದ್ದಂತೆ ಎಕ್ಸ್‌ ಬಳಕೆದಾರರಾದ ಸಂಜಯ್ ಎಸ್ ಕುಮಾರ್ ಮತ್ತು ವಕೀಲ ನಜೀನ್ ಅಖ್ತರ್ ಅವರು ಸಾಮಾಜಿಕ ಮಾಧ್ಯಮದಲ್ಲಿ ಸುದ್ದಿ ವೀಡಿಯೊದ ಒಂದು ಕ್ಲಿಪ್ ಅನ್ನು ಹಂಚಿಕೊಂಡಿದ್ದಾರೆ. ಮಹಾಕುಂಭ ಮೇಳದಲ್ಲಿ ಸಾಧು ಮಾದಕ ದ್ರವ್ಯ ಸೇವಿಸಿ ಆಕೆಯೊಂದಿಗೆ ಅನುಚಿತವಾಗಿ ವರ್ತಿಸಲು ಯತ್ನಿಸಿದ ಎಂದು ಅವರು ಹೇಳಿದ್ದಾರೆ.



ವೈರಲ್‌ ಆಗುತ್ತಿರುವ ವಿಡಿಯೋದ ಬಗ್ಗೆ ಪೊಲೀಸರು ಆರೋಪಗಳನ್ನು ಅಲ್ಲಗಳೆದಿದ್ದಾರೆ. ಘಟನೆಗೆ ಸಂಭಂದಿಸಿದಂತೆ ಪ್ರಯಾಗ್‌ರಾಜ್‌ನ ವರಿಷ್ಠಾಧಿಕಾರಿ ವೈಭವ್ ಕೃಷ್ಣ ಐಪಿಎಸ್ ಸಾಮಾಜಿ ಜಾಲತಾಣದಲ್ಲಿ ಸುಳ್ಳು ಸುದ್ದಿ ಹಬ್ಬಿಸುತ್ತಿದ್ದ, ಎಕ್ಸ್‌ ಬಳಕೆದಾರರ ಮೇಲೆ ಪ್ರಕರಣ ದಾಖಲಿಸಿದ್ದಾರೆ. ಬಿಎನ್‌ಎಸ್‌ನ ಸೆಕ್ಷನ್ 298 ರ ಅಡಿಯಲ್ಲಿ ಕ್ರಿಮಿನಲ್ ಪ್ರಕರಣವನ್ನು ದಾಖಲಿಸಲಾಗಿದೆ.

ಈ ಸುದ್ದಿಯನ್ನೂ ಓದಿ : Maha Kumbh 2025: ಮಹಾಕುಂಭ ಮೇಳದಲ್ಲಿ ಸಾಧ್ವಿ ಹರ್ಷ ಹವಾ; ಈಕೆಯನ್ನು ನೆಟ್ಟಿಗರು ಟ್ರೋಲ್ ಮಾಡ್ತಿರೋದ್ಯಾಕೆ..!?

ಈ ಬಗ್ಗೆ ಮಾಹಿತಿ ನೀಡಿದ ವರಿಷ್ಠಾಧಿಕಾರಿ ವೈಭವ್ ಕೃಷ್ಣ ಆಕೆಯನ್ನು ಆಕೆಯ ಕುಟುಂಬಕ್ಕೆ ವಾಪಸ್ ಕಳುಹಿಸಿದೆ. ಆಕೆಯೊಂದಿಗೆ ಅಂತಹ ಯಾವುದೇ ಘಟನೆ ನಡೆದಿಲ್ಲ. ಪದೇ ಪದೇ ಸುಳ್ಳು ಸುದ್ದಿಯನ್ನು ಪ್ರಚಾರ ಮಾಡುತ್ತಿದ್ದೀರಿ. ಹುಡುಗಿಯನ್ನು ತನ್ನ ಹೆತ್ತವರೊಂದಿಗೆ ಸೇರಿಸಲಾಗಿದೆ ಎಂದು ಹೇಳಿದ್ದಾರೆ. ಜನವರಿ 16 ರಂದು ಬಾಲಕಿ ತನ್ನ ಪೋಷಕರಿಗೆ ತಿಳಿಸದೆ ಪ್ರಯಾಗ್‌ರಾಜ್‌ಗೆ ಪ್ರಯಾಣಿಸಿದ್ದಳು. ವರದಿಗಾರರೊಂದಿಗೆ ಮಾತನಾಡಿದ ಬಾಲಕಿ ತಾನು ಯುಪಿಯ ಭದೋಹಿ ಜಿಲ್ಲೆಯವಳು ಮತ್ತು ಪ್ರಯಾಗ್‌ರಾಜ್‌ನಲ್ಲಿ ಮಹಾಕುಂಭದಲ್ಲಿ ಪಾಲ್ಗೊಳ್ಳಲು ತನ್ನ ಮನೆಯಿಂದ ಬಂದಿದ್ದೆ ಎಂದು ಹೇಳಿದ್ದಾಳೆ.