ವಕ್ಫ್​ ತಿದ್ದುಪಡಿ ಮಸೂದೆ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಮಹಾನಟಿ ಸೀಸನ್ 2 ಆಡಿಷನ್ ಇದೇ ಶನಿವಾರ ಶಿರಸಿಯಲ್ಲಿ

ಜನಪ್ರಿಯ ರಿಯಾಲಿಟಿ ಶೋಗಳಾದ ಡ್ರಾಮಾ ಜೂನಿಯರ್ಸ್‌,ಕಾಮಿಡಿ ಕಿಲಾಡಿಗಳು, ಡಾನ್ಸ್ ಕರ್ನಾಟಕ ಡಾನ್ಸ್, ಸರಿಗಮಪ, ಮಹಾನಟಿ ಸೀಸನ್-1 ಮೂಲಕ ಈಗಾಗಲೆ ಸಾಕಷ್ಟು ನಟ ನಟಿ ಯರು, ಗಾಯಕ ಗಾಯಕಿಯರು ಹಾಗು ಕೊರಿಯೋಗ್ರಾಫರ್‌ಗಳನ್ನ ಕರುನಾಡಿಗೆ ಕೊಟ್ಟಿರುವ ಜೀ಼ ಕನ್ನಡ ವಾಹಿನಿ ಇದೀಗ ಮಹಾನಟಿ ಸೀಸನ್-2 ನ ನಿಮಗಾಗಿ ಹೊತ್ತು ತರುತ್ತಿದೆ.

ಮಹಾನಟಿ ಸೀಸನ್ 2 ಆಡಿಷನ್ ಇದೇ ಶನಿವಾರ ಶಿರಸಿಯಲ್ಲಿ

Profile Ashok Nayak Apr 19, 2025 12:05 AM

ಶಿರಸಿ: ನಟಿಯಾಗುವ ನಿಮ್ಮ ಕನಸನ್ನು ನನಸಾಗಿಸಲು ಬರ್ತಿದೆ ಮಹಾನಟಿ ಸೀಸನ್ 2 ಆಡಿಷನ್. ಮನಗೆಲ್ಲುವ ಧಾರಾವಾಹಿಗಳು, ಸೂಪರ್ ಹಿಟ್ ವರ್ಲ್ಡ್ ಟೆಲಿವಿಷನ್ ಪ್ರೀಮಿಯರ್ ಗಳು ಮತ್ತು ಮನರಂಜಿಸುವ ರಿಯಾಲಿಟಿ ಶೋ ಗಳ ಮೂಲಕ ಕನ್ನಡಿಗರ ಹೃದಯಗೆದ್ದು ನಂಬರ್ 1 ಸ್ಥಾನ ವನ್ನು ಕಾಯ್ದಿರಿಸಿಕೊಂಡಿರುವ ಜೀ಼ ಕನ್ನಡ ಈಗ ಮತ್ತೊಂದು ಸರ್ಪ್ರೈಸ್ ನ ನಿಮಗಾಗಿ ತಂದಿದೆ.

ಜನಪ್ರಿಯ ರಿಯಾಲಿಟಿ ಶೋಗಳಾದ ಡ್ರಾಮಾ ಜೂನಿಯರ್ಸ್‌,ಕಾಮಿಡಿ ಕಿಲಾಡಿಗಳು, ಡಾನ್ಸ್ ಕರ್ನಾಟಕ ಡಾನ್ಸ್, ಸರಿಗಮಪ, ಮಹಾನಟಿ ಸೀಸನ್-1 ಮೂಲಕ ಈಗಾಗಲೆ ಸಾಕಷ್ಟು ನಟ ನಟಿ ಯರು, ಗಾಯಕ ಗಾಯಕಿಯರು ಹಾಗು ಕೊರಿಯೋಗ್ರಾಫರ್‌ಗಳನ್ನ ಕರುನಾಡಿಗೆ ಕೊಟ್ಟಿರುವ ಜೀ಼ ಕನ್ನಡ ವಾಹಿನಿ ಇದೀಗ ಮಹಾನಟಿ ಸೀಸನ್-2 ನ ನಿಮಗಾಗಿ ಹೊತ್ತು ತರುತ್ತಿದೆ.

ಮಹಾನಟಿ ಸೀಸನ್ 1 ಈಗಾಗಲೇ ಯಶಸ್ವಿಯಾಗಿದ್ದು ,ವಿಜೇತರಾದ ಪ್ರಿಯಾಂಕಾ ಆಚಾರ್ ಬೆಳ್ಳಿತೆರೆಯಲ್ಲಿ ತನ್ನ ಚೊಚ್ಚಲ ನಟನೆಯನ್ನು ಆರಂಭಿಸಿದ್ದಾರೆ.

ಇದನ್ನೂ ಓದಿ: Sirsi News: ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಪ್ರೋತ್ಸಾಹಿಸುವ ವಾತಾವರಣ ಹೆಚ್ಚಬೇಕು: ಸಂಸದ ಕಾಗೇರಿ

ಜಡ್ಜಸ್ ಗಳಾದ ತರುಣ್ ಸುಧೀರ್ ಹಾಗೂ ಮಹಾನಟಿ ಪ್ರೇಮ ಅವರ ನಟನೆಯ ಪಾಠಗಳು, ಮನೋಜ್ಞ ನಟಿ ನಿಶ್ವಿಕ ಅವರ ಸ್ಫೂರ್ತಿ ಮಾತುಗಳು ,ಮಾಸ್ಟರ್ ಮೈಂಡ್ ಎಂದೇ ಖ್ಯಾತರಾದ ರಮೇಶ್ ಅರವಿಂದ್ ಅವರು ಮಾಸ್ಟರ್ ಕ್ಲಾಸ್ ಮೂಲಕ ನಟಿಯರ ಅಭಿನಯವನ್ನು ತಿದ್ದಿ ತೀಡಿರೋ ಪರಿ ಅಮೋಘ.ಮಹಾನಟಿ ಮತ್ತಷ್ಟು ನಟನೆಯ ಹಸಿವಿರುವವರಿಗಾಗಿ ಅಗತ್ಯ ವೇದಿಕೆ ಯಾಗಿದೆ.

ಚಂದನವನದ ನಟಿ ಆಗಿ ಕನ್ನಡಿಗರ ಮನಕ್ಕೆ ಲಗ್ಗೆ ಇಡಬೇಕೆಂಬ ಕನಸು ಕಾಣುತ್ತಿದ್ದು ವೇದಿಕೆ ಸಿಗದೇ ವಂಚಿತರಾಗಿದ್ದೀರಾ? ಹಾಗಾದರೆ ಮಹಾನಟಿ ಸೀಸನ್-2 ನಿಮಗೆ ತಕ್ಕ ವೇದಿಕೆ. ಮಹಾನಟಿ ಸೀಸನ್-2 ಆಡಿಷನ್ ಗೆ 18 ರಿಂದ 28 ವರುಷದ ಒಳಗಿನ ಕಲಾಸಕ್ತ ಯುವತಿಯರು ಈ ಆಡಿಷನ್ ನಲ್ಲಿ ಭಾಗವಹಿಸಬಹುದಾಗಿದೆ. ಹಾಗೆಯೇ ಆಡಿಷನ್ ನಲ್ಲಿ ಭಾಗವಹಿಸಲು ಬರುವಾಗ ನಿಮ್ಮ ಪಾಸ್ಪೋರ್ಟ್ ಸೈಜ್ ಫೋಟೋ ಮತ್ತು ಅಡ್ರೆಸ್ ಪ್ರೂಫ್ ತರಲು ಮರೆಯದಿರಿ.ದಿನಾಂಕ 19 ಏಪ್ರಿಲ್ 2025 ಇದೇ ಶನಿವಾರದಂದು ಬೆಳಗ್ಗೆ 9 ಗಂಟೆಗೆ,ಎಂ.ಇ.ಎಸ್.ಎಂ.ಎಂ.ಕಲಾ & ವಿಜ್ಞಾನ ಕಾಲೇಜು,ಶಿರಸಿ.ಇಲ್ಲಿ ಆಡಿಷನ್ ನಡೆಯಲಿದೆ.

ಮತ್ಯಾಕೆ ತಡ? ನಿಮ್ಮ ಕನಸು ನನಸಾಗಿಸಲು ಇರುವ ಸುವರ್ಣಾವಕಾಶ ಮಿಸ್ ಮಾಡಿಕೊಳ್ಳದೇ ಆಡಿಷನ್ ನಲ್ಲಿ ಭಾಗವಹಿಸಿ. ನಿಮ್ಮಲ್ಲಿ ನಟನೆಯ ಪ್ರತಿಭೆ ಇದ್ದರೆ. ನೀವು 2 ನಿಮಿಷಗಳ ಎರಡು ಭಾವನೆಗಳುಳ್ಳ ನಟನೆಯ ತುಣುಕನ್ನು ಅಭ್ಯಾಸ ಮಾಡಿಕೊಂಡು ಬರಬೇಕು. ಜೀ಼ ಕನ್ನಡ ವಾಹಿನಿಯಲ್ಲಿ ಆಡಿಷನ್‌ಗಳಿಗೆ ಯಾವುದೇ ರೀತಿಯ ಶುಲ್ಕ ಕಟ್ಟುವಂತಿಲ್ಲ. ವಾಹಿನಿಯ ಹೆಸರಲ್ಲಿ ಹಣ ಪಡೆಯುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು