ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Marriage with Go Daana: ವಿಶೇಷ ಗೋ ದಾನದ ಮೂಲಕ ವಿವಾಹ ಆರಂಭ

ಸುಸಂಪ್ರದಾಯದಂತೆ ವಿಶೇಷ ಗೋ ದಾನದ ಮೂಲಕ ಆರಂಭವಾದ ವಿವಾಹ ಪದ್ದತಿಯೊಂದಿಗೆ ಹೋಮ ಹವನಗಳ ಮೂಲಕ. ದಂಪ್ರದಾಯಿಕ ಮದುವೆ ನೆರವೇರಿತು. ಸಿದ್ದಾಪುರ ತಾಲೂಕಿನ ಮಮತಾ ಹಾಗೂ ವಿಶ್ವನಾಥ ಭಟ್ ಪುತ್ರಿ ವೇದಾ, ಶಿರಸಿ ತಾಲೂಕಿನ ಹಸ್ತಳದ ವೀಣಾ ಭಟ್ ಹಾಗೂ ನಾರಾಯಣ ಭಟ್ ಮಗ ರಾಮಕೃಷ್ಣ ಅವರ ವಿವಾಹವು ಜತೆ ನಡೆಸಲಾಯಿತು.

Marriage with Go Daana: ಸಿದ್ದಾಪುರ ತಾಲೂಕಿನಲ್ಲಿ ಹೀಗೊಂದು ವಿವಾಹ ಸಮಾರಂಭ

Profile Ashok Nayak Feb 3, 2025 12:40 PM

ಶಿರಸಿ: ಇಂದಿನ ದಿನದಲ್ಲಿ ಮದುವೆ ಎಂದರೆ ಆಡಂಬರದಿಂದ ಕೂಡಿ ಒಂದು ಉತ್ಸವವಾಗಿ ಪರಿಣ ಮಿಸಿದೆ.

ಭಾರತೀಯ ಸಂಪ್ರದಾಯದಲ್ಲಿ ಮದುವೆಗೆ ವಿಶೇಷ ಸ್ಥಾನಮಾನ ಕಲ್ಪಿಸಲಾಗಿದ್ದು, ಈ ಮದುವೆ ಎನ್ನುವ ಪದ್ದತಿಯನ್ನು ತಂದಿದ್ದು ಭಾರತೀಯರು. ಆದರಿಂದು ಯಾಂತ್ರಿಕತೆಯ ಭರಾಟೆಯಲ್ಲಿ ಪದ್ದತಿಗಳೇ ನಶಿಸುತ್ತ ಬಂದಿದೆ. ಉದ್ದೇಶಿತ ಪೂರ್ವ ಪದ್ದತಿ ಕಳೆದುಕೊಳ್ಳುತ್ತಿರುವ ಇಂದಿನ ದಿನದಲ್ಲಿ ಹಿಂದಿನ ಸಂಪ್ರದಾಯಗಳ ಅಳವಡಿಸಿಕೊಂಡು ಅದು ನಶಿಸಬಾರದು ಮತ್ತು ಸಂಪ್ರ ದಾಯ ಮುಂದುವರಿದುಕೊಂಡು ಹೋಗಬೇಕೆನ್ನುವ ನಿಟ್ಟಿನಲ್ಲಿ ಉತ್ತರ ಕನ್ನಡ ಜಿಲ್ಲೆಯ ಸಿದ್ದಾ ಪುರದ ಶಂಕರ ಮಠದಲ್ಲೊಂದು ವಿಶೇಷ ವಿವಾಹ ಸೋಮವಾರ ನೆರವೇರಿತು.

ಇದನ್ನೂ ಓದಿ: Sirsi News: ಉತ್ತರಕನ್ನಡ ಜಿಲ್ಲಾ 24 ನೇ ಸಾಹಿತ್ಯ ಸಮ್ಮೇಳನಕ್ಕೆ ಚಾಲನೆ

ಸುಸಂಪ್ರದಾಯದಂತೆ ವಿಶೇಷ ಗೋ ದಾನದ ಮೂಲಕ ಆರಂಭವಾದ ವಿವಾಹ ಪದ್ದತಿಯೊಂದಿಗೆ ಹೋಮ ಹವನಗಳ ಮೂಲಕ, ಸಾಂಪ್ರದಾಯಿಕ ಮದುವೆ ನೆರವೇರಿತು. ಸಿದ್ದಾಪುರ ತಾಲೂಕಿನ ಮಮತಾ ಹಾಗೂ ವಿಶ್ವನಾಥ ಬಟ್ ಅವರ ಪುತ್ರಿ ವೇದಾ ಹಾಗೂ ಶಿರಸಿ ತಾಲೂಕಿನ ಹಸ್ತಳದ ವೀಣಾ ಭಟ್ ಹಾಗೂ ನಾರಾಯಣ ಭಟ್ ಮಗ ರಾಮಕೃಷ್ಣ ಅವರ ವಿವಾಹವು ಜತೆ ವಿವಾಹ ನಡೆಸ ಲಾಯಿತು.

ಹೆಣ್ಣು ಮಕ್ಕಳು ಅಪರ ಕ್ರಿಯೆಯನ್ನು ಮಾಡಬೇಕೇ ಬೇಡವೆ ಎಂಬ ವಿಚಾರವಾಗಿ ಬರೆಯಲಾದ ಸದ್ಗತಿ ಪುಸ್ತಕ, ಅದರ ಕುರಿತಾದ ಲೇಖನಗಳೂ ಇಲ್ಲಿ ಪ್ರದರ್ಶನಕ್ಕಾಗಿ ಇಡಲಾಗಿತ್ತು. ಅಂತೆಯೇ ಹಿಂದಿನ ಕಾಲದಲ್ಲಿ ಯಜ್ಞ ಯಾಗಾದಿಗಳಿಗೆ ಬಳಸುತ್ತಿದ್ದ ವಿಶೇಷ ಸಲಕರಣರಯನ್ನು ಯಜ್ಞ ಮಂಟಪ ಮಾಡಿ ಪ್ರದರ್ಶನಕ್ಕಿಡಲಾಗಿತ್ತು.