ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Sirsi News: ಉತ್ತರಕನ್ನಡ ಜಿಲ್ಲಾ 24 ನೇ ಸಾಹಿತ್ಯ ಸಮ್ಮೇಳನಕ್ಕೆ ಚಾಲನೆ

Sirsi News: ಉತ್ತರಕನ್ನಡ ಜಿಲ್ಲಾ 24 ನೇ ಸಾಹಿತ್ಯ ಸಮ್ಮೇಳನಕ್ಕೆ ಚಾಲನೆ

Ashok Nayak Ashok Nayak Dec 3, 2024 2:05 PM
ಶಿರಸಿ: ಶಿರಸಿಯಲ್ಲಿ ಇಂದು ಉತ್ತರಕನ್ನಡ ಜಿಲ್ಲಾ 24 ನೇ ಸಾಹಿತ್ಯ ಸಮ್ಮೇಳನಕ್ಕೆ ನಗರದ ನೆಮ್ಮದಿ ರಂಗಧಾಮದಲ್ಲಿ ಚಾಲನೆ ಕೊಡಲಾಯಿತು. ಇದಕ್ಕೂ ಮುನ್ನ ನಡೆದ ಶೋಭಾಯಾತ್ರೆಗೆ ಶಾಸಕ ಭೀಮಣ್ಣ ಟಿ ನಾಯ್ಕ ಚಾಲನೆ ನೀಡಿದರು.
ನಗರದ ಮಾರಿಕಾಂಬಾ ದೇವಸ್ಥಾನದಿಂದ ಹೊರಟ ಈ ಜಾಥಾದಲ್ಲಿ ಬೇಡರವೇಶ,ಡೊಳ್ಳು ಕುಣಿತ ಹಾಗು ಶಾಲಾ ಮಕ್ಕಳ ಆಕರ್ಷಕವಾದ ಪಥ ಸಂಚಲನದೊಂದಿಗೆ ಸಾಹಿತ್ಯ ಸಮ್ಮೇಳನದ ಶೋಭಾಯಾತ್ರೆ ನೆಮ್ಮದಿ ರಂಗಮಂದಿರದ ವರೆಗೆ ನಡೆಯಿತು.
ನಂತ ನಡೆಸ ಸಭಾ ಕಾರ್ಯಕ್ರಮಕ್ಕೆ ಸಾಹಿತಿ ಬಿಟಿ ಲಲಿತಾ ನಾಯಕ್ ಚಾಲನೆ ನೀಡಿದರು.
ಇದೇ ಹೊತ್ತಲ್ಲಿ ಅನೇಕ ಸಾಹಿತಿಗಳ ಪುಸ್ತಕ ಬಿಡುಗಡೆಗೊಳಿಸಲಾಯಿತು. ಸಾಹಿತಿ ಅಂಕಣಕಾರ ರಾಜು ಅಡಕಳ್ಳಿ ಬರೆದ ವಿಶ್ವವಾಣಿ ಪುಸ್ತಕ ಪ್ರಕಾಶನದ ಹೊಸ ಮುಖ ಪುಸ್ತಕವನ್ನು ಶಾಸಕ ಶಿವರಾಮ ಹೆಬ್ಬಾರ್ ಬಿಡುಗಡೆಗೊಳಿಸಿದರು.
ಸಂದರ್ಭದಲ್ಲಿ ಸಮ್ಮೇಳನದ ಅಧ್ಯಕ್ಷ ಆರ್ ಡಿ ಹೆಗಡೆ, ಸಹಾಯಕ ಆಯುಕ್ತೆ ಕಾವ್ಯರಾಣಿ, ಕಸಾಪ ಜಿಲ್ಲಾದ್ಯಕ್ಷ ಬಿ  ಎನ್ ವಾಸರೆ, ಕಸಾಪ ತಾಲೂಕಾ ಅದ್ಯಕ್ಷ ಜಿ ಸು ಭಟ್ಟ ಬಕ್ಕಳ ಹಾಗೂ ಅನೇಕ ಸಾಹಿತ್ಯಾಸಕ್ತರು ಇದ್ದರು.
ಇದನ್ನೂ ಓದಿ: #sirsi