Mid Winter Mens Fashion 2025: ಪುರುಷರ ಯಂಗ್ ಲುಕ್‌ಗೆ ಸಾಥ್ ನೀಡುವ ಮಿಡ್ ವಿಂಟರ್ ಫ್ಯಾಷನ್ ವೇರ್‌ಗಳಿವು
Mid Winter Mens Fashion 2025: ಈ ಸಾಲಿನ ಮೆನ್ಸ್ ವಿಂಟರ್ ಮಿಡ್ ಫ್ಯಾಷನ್‌ನಲ್ಲಿ, ಹೆಚ್ಚಿನ ಬದಲಾವಣೆಗಳಿಲ್ಲ! ಪ್ರಿಂಟೆಡ್ ಹಾಗೂ ನಿಯಾನ್ ಶೇಡ್ ಕಾಂಬಿನೇಷನ್‌ನ ಲೇಯರ್ ಲುಕ್ ಕಾನ್ಸೆಪ್ಟ್ ಟ್ರೆಂಡಿಯಾಗಿದೆ. ಇದರೊಂದಿಗೆ ಯಾವುದೆಲ್ಲಾ ಟ್ರೆಂಡ್‌ನಲ್ಲಿದೆ? ಸ್ಟೈಲಿಂಗ್ ಹೇಗೆ? ಇಲ್ಲಿದೆ ಡಿಟೇಲ್ಸ್

ಚಿತ್ರಕೃಪೆ: ಪಿಕ್ಸೆಲ್

| ಶೀಲಾ ಸಿ. ಶೆಟ್ಟಿ, ಬೆಂಗಳೂರು
ಚಳಿಗಾಲದ ಮಧ್ಯಂತರ ಮೆನ್ಸ್ ಫ್ಯಾಷನ್‌ನಲ್ಲಿ (Mid Winter Mens Fashion 2025) ಹೆಚ್ಚೇನೂ ಬದಲಾವಣೆಗಳಾಗಿಲ್ಲ! ಬದಲಿಗೆ, ಒಂದಿಷ್ಟು ಕಲರ್ ಕಾಂಬಿನೇಷನ್ ಹಾಗೂ ಲೇಯರ್ ಲುಕ್ ಕಾನ್ಸೆಪ್ಟ್‌ನಲ್ಲಿ ಕೊಂಚ ಬದಲಾವಣೆಗಳಾಗಿವೆ. ಅಷ್ಟೇ! ಎನ್ನುತ್ತಾರೆ ಫ್ಯಾಷನ್ ಎಕ್ಸ್‌ಪರ್ಟ್ಸ್.
ಚಾಲ್ತಿಯಲ್ಲಿರುವ ಮಿಡ್ ವಿಂಟರ್ ಫ್ಯಾಷನ್
ಈ ಹಿಂದೆ ತಿಳಿ ಬಣ್ಣದ ತುಂಬು ತೋಳಿನ ಶರ್ಟ್‌ಗಳು ಹೆಚ್ಚು ಪ್ರಚಲಿತದಲ್ಲಿದ್ದವು. ಆದರೆ ಇದೀಗ ನಿಯಾನ್, ಪೀಚ್, ಪಿಸ್ತಾ ಗ್ರೀನ್, ರೋಸ್ ಲೈಟ್, ಕರೆಂಟ್ ಬ್ಲ್ಯೂ, ಸ್ಕೈ ಬ್ಲ್ಯೂ ಸೇರಿದಂತೆ ಎದ್ದು ಕಾಣುವಂತಹ ಕಾಂಟ್ರಸ್ಟ್ ಶೇಡ್‌ನ ಬಟನ್ ಹೊಂದಿರುವಂತವು, ಕಾಲರ್ ಹಾಗೂ ಸ್ಲೀವ್ ವಿನ್ಯಾಸ ಬದಲಾಗಿರುವಂತಹ ಯಂಗ್ ಲುಕ್ ನೀಡುವಂತಹ ಔಟ್‌ಫಿಟ್‌ಗಳು ಟ್ರೆಂಡಿಯಾಗಿವೆ.

ಇನ್ನು, ಪ್ರಿಂಟೆಡ್‌ನಲ್ಲಿ ಗಾಢ ವರ್ಣದ ಶರ್ಟ್-ಟೀ ಶರ್ಟ್, ಲೇಯರ್ ಲುಕ್ ಇರುವಂತಹ ಔಟ್‌ಫಿಟ್‌ಗಳಲ್ಲಿ ಸ್ಟ್ರೈಫ್ಸ್ ಹಾಗೂ ಫಂಕಿ ಚಿತ್ರಗಳಿರುವ ಜಾಕೆಟ್, ಕೋಟ್‌ಗಳು ಯುವಕರನ್ನು ಸೆಳೆದಿವೆ. ಇನ್ನು, ವೃತ್ತಿಪರ ಪುರುಷರ ಮೆಚ್ಚಿನ ಆಯ್ಕೆಯ ಶರ್ಟ್‌ಗಳಲ್ಲಿ, ವಿನೂತನ ಬಗೆಯ ಕಾಲರ್ ಹಾಗೂ ಹ್ಯಾಂಡ್ ಬಟನ್ ಹೊಂದಿದ ಯೂರೋಪಿಯನ್-ಇಟಾಲಿಯನ್ ಮಾದರಿಯವು ಪ್ರಚಲಿತದಲ್ಲಿವೆ.
ವಿಂಟರ್ ಪ್ರಿಂಟೆಡ್ ಟೀ ಶರ್ಟ್ ಲವ್
ನಾನಾ ಪ್ರಿಂಟ್ಸ್ ಇರುವಂತಹ ಟೀ ಶರ್ಟ್‌ಗಳು ಈ ಬಾರಿ ಹಂಗಾಮ ಎಬ್ಬಿಸಿವೆ. ನವೋಲ್ಲಾಸ ತುಂಬುವ ನವನವೀನ ವಿನ್ಯಾಸದಲ್ಲಿ ಮತ್ತಷ್ಟು ಆಕರ್ಷಕವಾದ ವಿನ್ಯಾಸದಲ್ಲಿ ಎಲ್ಲಾ ವಯಸ್ಸಿನ ಪುರುಷರನ್ನು ಸವಾರಿ ಮಾಡುತ್ತಿವೆ ಎನ್ನುತ್ತಾರೆ ಸ್ಟೈಲಿಸ್ಟ್ ರಾಜಾ.

ಲೇಯರ್ ಲುಕ್ ಸೃಷ್ಟಿಸಿ
ಶರ್ಟ್-ಟೀ ಶರ್ಟ್ ಮೇಲೆ ಸ್ಟೋಲ್ ಇಲ್ಲವೇ ಜಾಕೆಟ್ ಧರಿಸುವುದು, ಕುರ್ತಾ ಮೇಲೆ ವೇಸ್ ಕೋಟ್, ಟೀ-ಶರ್ಟ್ಗೆ ಡೆನಿಮ್ ಫುಲ್ ಸ್ಲಿವ್ ಜಾಕೆಟ್, ಫುಲ್ ಸ್ಲೀವ್ ಶರ್ಟ್‌ಗೆ ಅರ್ಧ ತೋಳಿನ ಫುಲ್ ಒವರ್ಸ್ ಹೀಗೆ ಲೇಯರ್ ಲುಕ್‌ಗೆ ಹೊಸತನ ತುಂಬಬಹುದು ಎನ್ನುವ ಸ್ಟೈಲಿಸ್ಟ್ ರಾಜ್ ಅವರ ಪ್ರಕಾರ, ವಿಂಟರ್‌ನಲ್ಲಿ ಯಂಗ್ ಲುಕ್‌ನಲ್ಲಿ ಕಾಣಿಸಿಕೊಳ್ಳುವುದು ಸಾಮಾನ್ಯವಾಗಿದೆ ಎನ್ನುತ್ತಾರೆ.

ಮೆನ್ಸ್ ಮಿಡ್ ವಿಂಟರ್ ಫ್ಯಾಷನ್ ಟಿಪ್ಸ್
* ಶರ್ಟ್-ಟೀ ಶರ್ಟ್‌ಗೆ ಹೊಂದುವಂತಹ ಫ್ಲೋರಲ್ ಜಾಕೆಟ್ ಅಥವಾ ವೇಸ್ ಕೋಟ್ ಧರಿಸಿ.
* ಧರಿಸುವ ಔಟ್‌ಫಿಟ್‌ನ ಲೇಯರ್ ಲುಕ್ ಕಾಂಟ್ರಸ್ಟ್ ಬಣ್ಣದ್ದಾಗಿರಲಿ.
* ಪ್ರಿಂಟೆಡ್ ಔಟ್‌ಫಿಟ್ಸ್ ಮಿಡ್ ವಿಂಟರ್ ಫ್ಯಾಷನ್ ಟ್ರೆಂಡ್ನಲ್ಲಿದೆ.
(ಲೇಖಕಿ: ಫ್ಯಾಷನ್ ಪತ್ರಕರ್ತೆ)
ಈ ಸುದ್ದಿಯನ್ನೂ ಓದಿ | Winter Lipstick Awareness 2025: ಚಳಿಗಾಲದಲ್ಲಿ ನೀವು ಹಚ್ಚಬಾರದ ಲಿಪ್‌ಸ್ಟಿಕ್‌ಗಳಿವು!