ಕರ್ನಾಟಕ ಬಜೆಟ್​ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹೋಳಿ ಹಬ್ಬ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

IPL 2025: ಐಪಿಎಲ್‌ ಆಡಲು ಮಾರ್ಷ್‌ಗೆ ಗ್ರೀನ್‌ ಸಿಗ್ನಲ್‌

Mitchell Marsh: ಐಪಿಎಲ್ 2025 ರಲ್ಲಿ ಆಡಲು ಅನುಮತಿ ಪಡೆದಿರುವ ಮಾರ್ಷ್, ಬ್ಯಾಟಿಂಗ್ ಮೂಲಕ ತಮ್ಮ ಪ್ರಭಾವ ಬೀರಲು ಮುಂದಾಗಿದ್ದಾರೆ. ಮಧ್ಯಮ ಕ್ರಮಾಂಕದಲ್ಲಿ ಮಾರ್ಷ್ ಅವರ ಉಪಸ್ಥಿತಿಯು ಎಲ್‌ಎಸ್‌ಜಿ ತಂಡದ ಅಭಿಯಾನಕ್ಕೆ ನಿರ್ಣಾಯಕವಾಗಬಹುದು. ಕಳೆದ ಮೆಗಾ ಹರಾಜಿನಲ್ಲಿ ಮಾರ್ಷ್‌ ಅವರನ್ನು ಎಲ್‌ಎಸ್‌ಜಿ ತಂಡ 3.3 ಕೋಟಿ ರೂ. ನೀಡಿ ಖರೀದಿ ಮಾಡಿತ್ತು.

ಐಪಿಎಲ್‌ ಆಡಲು ಮಾರ್ಷ್‌ಗೆ ಗ್ರೀನ್‌ ಸಿಗ್ನಲ್‌

Profile Abhilash BC Mar 13, 2025 4:26 PM

ಲಕ್ನೋ: ಗಾಯದಿಂದ ಚೇತರಿಕೊಂಡು ಸಂಪೂರ್ಣ ಫಿಟ್‌ ಆಗಿರುವ ಆಸ್ಟ್ರೇಲಿಯಾ ತಂಡದ ಸ್ಟಾರ್‌ ಆಲ್‌ರೌಂಡರ್‌ ಮಿಚೆಲ್‌ ಮಾರ್ಷ್‌(Mitchell Marsh)ಗೆ 18ನೇ ಆವೃತ್ತಿಯ ಐಪಿಎಲ್‌(IPL 2025) ಆಡಲು ಗ್ರೀನ್ ಸಿಗ್ನಲ್ ಸಿಕ್ಕಿದೆ. ಆಸ್ಟ್ರೇಲಿಯಾ ಕ್ರಿಕೆಟ್‌ ಮಂಡಳಿ ಅನುಮತಿ ನೀಡಿದೆ ಎಂದು ತಿಳಿದುಬಂದಿದೆ. ಲಕ್ನೋ ಸೂಪರ್‌ ಜೈಂಟ್ಸ್‌(Lucknow Super Giants) ತಂಡದ ಆಟಗಾರನಾಗಿರುವ ಮಿಚೆಲ್‌ ಮಾರ್ಷ್‌ ಶೀಘ್ರದಲ್ಲೇ ತಂಡ ಸೇರುವ ನಿರೀಕ್ಷೆ ಇದೆ. ಐಪಿಎಲ್‌ ಪಂದ್ಯಾವಳಿಗಳು ಮಾರ್ಚ್‌ 22 ರಿಂದ ಆರಂಭಗೊಳ್ಳಲಿದೆ.

ಬೆನ್ನಿನ ಕೆಳಭಾಗದ ಗಾಯದಿಂದ ಬಳಲುತ್ತಿದ್ದ ಮಾರ್ಷ್ ಸಂಪೂರ್ಣ ಫಿಟ್‌ ಆಗದ ಕಾರಣ ಚಾಂಪಿಯನ್ಸ್ ಟ್ರೋಫಿಯಿಂದ ಹೊರಬಿದ್ದಿದ್ದರು. ಹೀಗಾಗಿ ಅವರು ಐಪಿಎಲ್ 2025ರಲ್ಲಿ ಆಡುವ ಬಗ್ಗೆ ಅನುಮಾನ ವ್ಯಕ್ತವಾಗಿತ್ತು. ಇದೀಗ ಅವರು ಐಪಿಎಲ್‌ ಆಡಲು ಫಿಟ್‌ ಆಗಿದ್ದಾರೆ. ಆದರೆ ಬೌಲಿಂಗ್ ಮಾಡದಂತೆ ಅಥವಾ ಬೆನ್ನಿನ ಮೇಲೆ ಅತಿಯಾದ ಒತ್ತಡ ಹೇರದಂತೆ ಅವರಿಗೆ ಸಲಹೆ ನೀಡಿದ್ದಾರೆ ಎನ್ನಲಾಗಿದೆ.

ಕಳೆದ ವರ್ಷ ನಡೆದಿದ್ದ ಭಾರತ ವಿರುದ್ಧದ ಬಾರ್ಡರ್‌-ಗವಾಸ್ಕರ್‌ ಟೆಸ್ಟ್‌ ಸರಣಿಯ ನಂತರ ಮಾರ್ಷ್‌ ಜನವರಿ 7 ರಂದು ನಡೆದ ಬಿಗ್ ಬ್ಯಾಷ್ ಲೀಗ್ (ಬಿಬಿಎಲ್)ನಲ್ಲಿ ಏಕೈಕ ಪಂದ್ಯದಲ್ಲಿ ಆಡಿದ್ದರು. ನಂತರ ಚಾಂಪಿಯನ್ಸ್ ಟ್ರೋಫಿಗೂ ಮುನ್ನ ಮಾನಸಿಕವಾಗಿ ಮತ್ತು ದೈಹಿಕವಾಗಿ ಚೇತರಿಸಿಕೊಳ್ಳಲು ಕೊನೆಯ ಮೂರು ಪಂದ್ಯಗಳಿಂದ ಹೊರಗುಳಿದಿದ್ದರು. ಆದರೆ ಅವರ ಬೆನ್ನು ನೋವು ಕಡಿಮೆಯಾಗದ ಕಾರಣ ಅವರು ಪಂದ್ಯಾವಳಿಯಿಂದ ಹಿಂದೆ ಸರಿದಿದ್ದರು.



ಐಪಿಎಲ್ 2025 ರಲ್ಲಿ ಆಡಲು ಅನುಮತಿ ಪಡೆದಿರುವ ಮಾರ್ಷ್, ಬ್ಯಾಟಿಂಗ್ ಮೂಲಕ ತಮ್ಮ ಪ್ರಭಾವ ಬೀರಲು ಮುಂದಾಗಿದ್ದಾರೆ. ಮಧ್ಯಮ ಕ್ರಮಾಂಕದಲ್ಲಿ ಮಾರ್ಷ್ ಅವರ ಉಪಸ್ಥಿತಿಯು ಎಲ್‌ಎಸ್‌ಜಿ ತಂಡದ ಅಭಿಯಾನಕ್ಕೆ ನಿರ್ಣಾಯಕವಾಗಬಹುದು. ಕಳೆದ ಮೆಗಾ ಹರಾಜಿನಲ್ಲಿ ಮಾರ್ಷ್‌ ಅವರನ್ನು ಎಲ್‌ಎಸ್‌ಜಿ ತಂಡ 3.3 ಕೋಟಿ ರೂ. ನೀಡಿ ಖರೀದಿ ಮಾಡಿತ್ತು. ಲಕ್ನೋ ತಂಡಕ್ಕೆ ರಿಷಭ್‌ ಪಂತ್‌ ನಾಯಕನಾಗಿದ್ದಾರೆ. ಮಾರ್ಚ್‌ 24 ರಂದು ಡೆಲ್ಲಿ ಕ್ಯಾಪಿಲಟ್ಸ್‌ ವಿರುದ್ಧ ಆಡುವ ಮೂಲಕ ತನ್ನ ಅಭಿಯಾನ ಆರಂಭಿಸಲಿದೆ.

ಇದನ್ನೂ ಓದಿ IPL 2025: ಕೊಹ್ಲಿ-ಸಾಲ್ಟ್‌ ಓಪನರ್ಸ್‌, ಕೆಕೆಆರ್‌ ವಿರುದ್ದದ ಆರಂಭಿಕ ಪಂದ್ಯಕ್ಕೆ ಆರ್‌ಸಿಬಿ ಸಂಭಾವ್ಯ ಪ್ಲೇಯಿಂಗ್‌ XI

ಲಕ್ನೋ ತಂಡ

ನಿಕೋಲಸ್‌ ಪೂರನ್‌, ಮಯಾಂಕ್‌ ಯಾದವ್‌, ರವಿ ಬಿಷ್ಣೋಯ್‌, ಮೊಹ್ಸಿನ್‌ ಖಾನ್‌, ಆಯುಷ್‌ ಬದೋನಿ, ರಿಷಭ್​ ಪಂತ್​, ಆವೇಶ್​ ಖಾನ್​, ಡೇವಿಡ್​ ಮಿಲ್ಲರ್​, ಮಿಚೆಲ್​ ಮಾರ್ಷ್​, ಐಡನ್​ ಮಾರ್ಕ್ರಮ್​, ಅಬ್ದುಲ್​ ಸಮದ್​, ಆರ್ಯನ್​ ಜುಯಲ್​, ಆಕಾಶ್​ದೀಪ್​, ಶಾಬಾಜ್​ ಅಹ್ಮದ್​, ಹಿಮ್ಮತ್​ ಸಿಂಗ್​, ಎಂ. ಸಿದ್ಧಾರ್ಥ್​, ದಿಗ್ವೇಷ್​ ಸಿಂಗ್​, ಆಕಾಶ್​ ಸಿಂಗ್​, ಶಮರ್​ ಜೋಸೆಫ್​, ಪ್ರಿನ್ಸ್​ ಯಾದವ್​, ಯುವರಾಜ್​ ಚೌಧರಿ, ರಾಜ್ಯವರ್ಧನ್​ ಹಂಗರ್ಗೆಕರ್​, ಅರ್ಷಿನ್​ ಕುಲಕರ್ಣಿ, ಮ್ಯಾಥ್ಯೂ ಬ್ರಿಟ್​ಜ್ಕೆ.