MS Dhoni: ಐಪಿಎಲ್‌ಗೆ ಅಭ್ಯಾಸ ಆರಂಭಿಸಿದ ಧೋನಿ
MS Dhoni: ಧೋನಿ ಅವರನ್ನು ಕಳೆದ ವರ್ಷ ನಡೆದಿದ್ದ ಮೆಗಾ ಹರಾಜಿನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡ ಅನ್‌ಕ್ಯಾಪ್ಟ್ ನಿಯಮದ ಅಡಿಯಲ್ಲಿ 4 ಕೋಟಿ ರೂ. ನೀಡಿ ರಿಟೇನ್ ಮಾಡಿತ್ತು.
ರಾಂಚಿ: ಬಹುನಿರೀಕ್ಷಿತ 18ನೇ ಆವೃತ್ತಿಯ ಐಪಿಎಲ್ ಆರಂಭಕ್ಕೆ ಇನ್ನೂ ಸರಿ ಸುಮಾರು ಎರಡು ತಿಂಗಳು ಇವೆ. ಅದಾಗಲೇ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಹಿರಿಯ ಆಟಗಾರ ಮಹೇಂದ್ರ ಸಿಂಗ್ ಧೋನಿ ಬ್ಯಾಟಿಂಗ್ ಅಭ್ಯಾಸ ಆರಂಭಿಸಿದ್ದಾರೆ. ಧೋನಿ ಅಭ್ಯಾಸದ ಫೋಟೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(BCCI) ಉಪಾಧ್ಯಕ್ಷ ರಾಜೀವ್ ಶುಕ್ಲಾ ನೀಡಿರುವ ಮಾಹಿತಿ ಪ್ರಕಾರ ಐಪಿಎಲ್ ಪಂದ್ಯವಾವಳಿ ಮಾರ್ಚ್ 23ರಿಂದ ಪ್ರಾರಂಭವಾಗಲಿದೆ.
ವೈರಲ್ ಆಗುತ್ತಿರುವ ಫೋಟೊದಲ್ಲಿ ಧೋನಿ ಅವರು ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪ್ಯಾಡ್‌ಗಳನ್ನು ಧರಿಸಿ ಬ್ಯಾಟಿಂಗ್ ನಡೆಸುವುದನ್ನು ಕಾಣಬಹುದಾಗಿದೆ. 43 ವರ್ಷದ ಧೋನಿ ಈ ಹಿಂದೆಯೂ ಕೂಡ ಐಪಿಎಲ್ ಆರಂಭಕ್ಕೆ ತಿಂಗಳುಗಳು ಬಾಕಿ ಇರುವ ಮುಂಚೆಯೇ ಅಭ್ಯಾಸ ನಡೆಸಿ ಫಾರ್ಮ್ ಕಂಡುಕೊಳ್ಳುವುದು ಅವರ ಗುಣವಾಗಿದೆ.
THALA DHONI FOR IPL 2025 💛
— Johns. (@CricCrazyJohns) January 20, 2025
- Dhoni has started the practice ahead of the IPL 2025. pic.twitter.com/IJeq4EyIA9
ಧೋನಿ ಅವರನ್ನು ಕಳೆದ ವರ್ಷ ನಡೆದಿದ್ದ ಮೆಗಾ ಹರಾಜಿನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡ ಅನ್‌ಕ್ಯಾಪ್ಟ್ ನಿಯಮದ ಅಡಿಯಲ್ಲಿ 4 ಕೋಟಿ ರೂ. ನೀಡಿ ರಿಟೇನ್ ಮಾಡಿತ್ತು. ಧೋನಿ ಈ ಬಾರಿ ಇಂಪ್ಯಾಕ್ಟ್ ಆಟಗಾರನಾಗಿ ಆಡಲಿದ್ದಾರಾ ಅಥವಾ ಪೂರ್ಣ ಪ್ರಮಾಣದ ವಿಕೆಟ್ ಕೀಪರ್ ಆಗಿ ಆಡಲಿದ್ದಾರಾ ಎನ್ನುವುದು ಇನ್ನಷ್ಟೇ ಖಚಿತವಾಗಬೇಕಿದೆ. ಕಳೆದ ವರ್ಷ ತಂಡದಲ್ಲಿ ಸಮರ್ಥ ವಿಕೆಟ್ ಕೀಪರ್ ಇಲ್ಲದ ಕಾರಣದಿಂದ ಮಂಡಿ ನೋವಿನ ಮಧ್ಯೆಯೇ ಧೋನಿ ಕೀಪಿಂಗ್ ನಡೆಸಿದ್ದರು. ಈ ಬಾರಿ ತಂಡದಲ್ಲಿ ಪರಿಣಿತ ಕೀಪರ್ ಡೆವೋನ್ ಕಾನ್ವೆ ತಂಡದಲ್ಲಿರುವ ಕಾರಣ ಇವರೂ ಕೂಡ ಕೀಪಿಂಗ್ ನಡೆಸುವ ಸಾಧ್ಯತೆ ಇದೆ.
ಚೆನ್ನೈ ಸೂಪರ್ ಕಿಂಗ್ಸ್ ತಂಡ
ಋತುರಾಜ್ ಗಾಯಕ್ವಾಡ್, ಮಥೀಶ ಪತಿರಾಣ, ಶಿವಂ ದುಬೆ, ರವೀಂದ್ರ ಜಡೇಜಾ, ಎಂಎಸ್ ಧೋನಿ, ನೂರ್ ಅಹ್ಮದ್, ಆರ್. ಅಶ್ವಿನ್, ಡೆವೊನ್ ಕಾನ್ವೇ, ರಚಿನ್ ರವೀಂದ್ರ, ರಾಹುಲ್ ತ್ರಿಪಾಠಿ, ಖಲೀಲ್ ಅಹ್ಮದ್, ವಿಜಯ್ ಶಂಕರ್, ಸ್ಯಾಮ್ ಕರನ್, ಅಂಶುಲ್ ಕಂಬೋಜ್, ಶೇಕ್ ರಶೀದ್, ಮುಕೇಶ್ ಚೌಧರಿ, ದೀಪಕ್ ಹೂಡಾ, ಗುರುಜಪ್ನೀತ್ ಸಿಂಗ್ ,ನಾಥನ್ ಎಲ್ಲಿಸ್, ಜೇಮಿ ಓವರ್ಟನ್, ಕಮಲೇಶ್ ನಾಗರಕೋಟಿ, ರಾಮಕೃಷ್ಣ ಘೋಷ್, ಶ್ರೇಯಸ್ ಗೋಪಾಲ್, ವಂಶ್ ಬೇಡಿ, ಆಂಡ್ರೆ ಸಿದ್ಧಾರ್ಥ್.