ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Murder Case: ಅಕ್ಕನ ಪಕ್ಕಕ್ಕೆ ಬಂದು ಸಿಕ್ಕಿಹಾಕಿಕೊಂಡವನನ್ನು ಕಲ್ಲು ಎತ್ತಿ ಹಾಕಿ ಕೊಂದ ತಮ್ಮ

Haveri news: ನನ್ನ ಅಕ್ಕನಿಗೆ ಮದುವೆಯಾಗಿದೆ ಆಕೆಯ ಸಹವಾಸ ಬಿಟ್ಟು ಬಿಡು ಎಂದು ದಿಳ್ಳೆಪ್ಪನಿಗೆ ರಾಜಯ್ಯ ಹೇಳುತ್ತಲೇ ಇದ್ದ. ಆದರೆ ದಿಳ್ಳೆಪ್ಪ ಮಾತ್ರ ಕೇಳಿರಲಿಲ್ಲ. ಹೀಗಾಗಿ ನಾನೇ ಕೊಲೆ ಮಾಡಿದ್ದೇನೆ ಎಂದು ರಾಜಯ್ಯ ಪೊಲೀಸರ ಮುಂದೆ ತಪ್ಪು ಒಪ್ಪಿಕೊಂಡಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಅಕ್ಕನ ಪಕ್ಕಕ್ಕೆ ಬಂದು ಸಿಕ್ಕಿಹಾಕಿಕೊಂಡವನ ಕಲ್ಲಿನಿಂದ ಜಜ್ಜಿ ಕೊಂದ ತಮ್ಮ

ಹರೀಶ್‌ ಕೇರ ಹರೀಶ್‌ ಕೇರ Jul 26, 2025 8:49 AM

ಬೆಂಗಳೂರು: ಅಕ್ಕನ ಜತೆ ಅನೈತಿಕ ಸಂಬಂಧ (Illicit Relationship) ಹೊಂದಿದ್ದ ಯುವಕನನ್ನು ತಮ್ಮ ಬರ್ಬರವಾಗಿ ಹತ್ಯೆ (Murder case) ಮಾಡಿದ್ದಾನೆ. ಹಾವೇರಿ (Haveri crime news) ಜಿಲ್ಲೆಯ ರಾಣೆಬೆನ್ನೂರು ತಾಲೂಕಿನ ಚಳಗೇರಿ ಗ್ರಾಮದಲ್ಲಿ ನಡೆದಿದೆ. ದಿಲೀಪ್ ಹಿತ್ತಲಮನಿ (47) ಎಂಬಾತ ಕೊಲೆಯಾದ ವ್ಯಕ್ತಿ. ಈತ ತನ್ನ ಅಕ್ಕನ ಜೊತೆ ರೆಡ್​ ಹ್ಯಾಂಡ್​ ಆಗಿ ಸಿಕ್ಕಿಬಿದ್ದಿದ್ದನ್ನು ಕಂಡು ರೊಚ್ಚಿಗೆದ್ದ ಆಕೆಯ ತಮ್ಮ ರಾಜಯ್ಯ, ದಿಲೀಪ್ ಹಿತ್ತಲಮನಿ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಹತ್ಯೆ ಮಾಡಿದ್ದಾನೆ. ಬಳಿಕ ನಾನೇ ಕೊಲೆ ಮಾಡಿದ್ದೇನೆ ಎಂದು ರಾಜಯ್ಯ ಪೊಲೀಸರ ಮುಂದೆ ತಪ್ಪು ಒಪ್ಪಿಕೊಂಡಿದ್ದಾನೆ.

ರಾಣೆಬೆನ್ನೂರು ತಾಲೂಕು ಚಳಕೇರಿ ಗ್ರಾಮದ ಯುವತಿ ಹಾಗೂ ಕೊಲೆಯಾದ ದಿಳ್ಳೆಪ್ಪನಿಗೆ ಬಹಳ ವರ್ಷದಿಂದ ಪರಿಚಯ ಇತ್ತು. ಕೊಲೆಯಾದ ದಿಳ್ಳೆಪ್ಪ ರೈಲ್ವೆ ಇಲಾಖೆ ನೌಕರನಾಗಿದ್ದು, ಆಕೆಯ ಜೊತೆ ಅನೈತಿಕ ಸಂಬಂಧ ಇಟ್ಟುಕೊಂಡಿದ್ದ ಎಂದು ಹೇಳಲಾಗುತ್ತಿದೆ. ಇದೇ ವಿಚಾರಕ್ಕೆ ಉಮಾಳ ತಮ್ಮರಾಜು ಅಲಿಯಾಸ್ ರಾಜಯ್ಯ ಜಗಳವಾಡುತ್ತಾ ಇದ್ದ. ನನ್ನ ಅಕ್ಕನಿಗೆ ಮದುವೆಯಾಗಿದೆ ಬಿಟ್ಟು ಬಿಡು ಎಂದು ಹೇಳುತ್ತಲೇ ಇದ್ದ. ಆದರೆ ದಿಳ್ಳೆಪ್ಪ ಮಾತ್ರ ಕೇಳಿರಲಿಲ್ಲ. ಹೀಗಾಗಿ ನಾನೇ ಕೊಲೆ ಮಾಡಿದ್ದೇನೆ ಎಂದು ರಾಜಯ್ಯ ಪೊಲೀಸರ ಮುಂದೆ ತಪ್ಪು ಒಪ್ಪಿಕೊಂಡಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ದಿಳ್ಳೆಪ್ಪನ ಕೊಲೆ ಸುದ್ದಿ ಮನೆಯವರಿಗೆ ತಿಳಿಯುತ್ತಿದ್ದಂತೆ ಕಾಕೋಳ ಗ್ರಾಮದಿಂದ 18 ಕಿಲೋ ಮೀಟರ್ ದೂರವಿರುವ ಚಳಗೇರಿ ಗ್ರಾಮಕ್ಕೆ ಧಾವಿಸಿ ಬಂದಿದ್ದಾರೆ. ಆದರೆ ಅಷ್ಟು ಹೊತ್ತಿಗೆ ದಿಳ್ಳೆಪ್ಪನ ಪ್ರಾಣ ಪಕ್ಷಿ ಹಾರಿ ಹೋಗಿತ್ತು. ಘಟನೆಯ ಬಗ್ಗೆ ಕುಟುಂಬಸ್ಥರು ಹೇಳುವುದೇ ಬೇರೆ. ನಮ್ಮ ಅಣ್ಣನ ಜೊತೆಗೆ ರಾಜಯ್ಯ ಹಣಕಾಸಿನ ವ್ಯವಹಾರ ಮಾಡಿದ್ದ. ಹಣ ಕೊಡುವ ವಿಚಾರದಲ್ಲಿ ಗಲಾಟೆ ಮಾಡಿಕೊಂಡು ಕೊಲೆಯಾಗಿದೆ ಎಂದು ರಾಣೇಬೆನ್ನೂರು ಗ್ರಾಮೀಣ ಠಾಣೆಯಲ್ಲಿ ದೂರು ನೀಡಿದ್ದಾರೆ.

ಇದನ್ನೂ ಓದಿ: Murder Case: ಅನೈತಿಕ ಸಂಬಂಧದಿಂದ ಕೊಲೆ, ಕಾಂಗ್ರೆಸ್‌ ಶಾಸಕರ ಚಾಲಕನ ಬಂಧನ