ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಸಿ.ಜೆ. ರಾಯ್‌ ಆತ್ಮಹತ್ಯೆಗೆ ಕಾರಣ ರಿವೀಲ್‌; ರಿಯಲ್‌ ಎಸ್ಟೇಟ್‌ ಉದ್ಯಮಿಗೆ ಮುಳುವಾಯ್ತಾ ಹವಾಲಾ ಹಣ?

C.J. Roy's Death Case: ಸಿ.ಜೆ.ರಾಯ್ ವ್ಯವಹಾರದಲ್ಲಿ 500 ಕೋಟಿ ರೂ.‌ ಮಿಸ್ ಮ್ಯಾಚ್ ಆಗಿತ್ತು. ಹೀಗಾಗಿ ತನಿಖೆ ನಡೆಸಿದ್ದ ಐಟಿ ಇಲಾಖೆ ಈ ಹಣದ ಲೆಕ್ಕ ಕೇಳಿತ್ತು. ಈ ಹಣದ ಮೂಲದ ಬಗ್ಗೆ ಮಾಹಿತಿ ನೀಡಲಾಗದೆ ಉದ್ಯಮಿ ಸಂಕಷ್ಟಕ್ಕೊಳಗಾಗಿದ್ದರು ಎಂದು ತಿಳಿದುಬಂದಿದೆ.

ರಿಯಲ್‌ ಎಸ್ಟೇಟ್‌ ಉದ್ಯಮಿ ಸಿ.ಜೆ.ರಾಯ್‌ ಆತ್ಮಹತ್ಯೆಗೆ ಕಾರಣ ರಿವೀಲ್‌

‌ಉದ್ಯಮಿ ಸಿ.ಜೆ.ರಾಯ್. -

Prabhakara R
Prabhakara R Feb 25, 2026 10:55 PM

ಬೆಂಗಳೂರು: ಖ್ಯಾತ ರಿಯಲ್‌ ಎಸ್ಟೇಟ್‌ ಉದ್ಯಮಿ ಹಾಗೂ ಕಾನ್ಫಿಡೆಂಟ್ ಗ್ರೂಪ್ ಮುಖ್ಯಸ್ಥ ಸಿ.ಜೆ. ರಾಯ್ ಅವರ ಆತ್ಮಹತ್ಯೆ ಪ್ರಕರಣ (C.J. Roy's Death Case) ರಾಜ್ಯದಲ್ಲಿ ದೊಡ್ಡ ಸಂಚಲನವನ್ನೇ ಸೃಷ್ಟಿಸಿತ್ತು. ಉದ್ಯಮಿ ಸಾವಿಗೆ ಐಟಿ ಅಧಿಕಾರಿಗಳ ಕಿರುಕುಳವೇ ಕಾರಣ ಎಂಬ ಆರೋಪ ಕೇಳಿಬಂದಿತ್ತು. ಆದರೆ, ಇದೀಗ ಸಿ.ಜೆ. ರಾಯ್ ಸಾವಿಗೆ ಹವಾಲಾ ವ್ಯವಹಾರ ಪ್ರಮುಖ ಕಾರಣ ಎಂಬ ವಿಚಾರ ಬಹಿರಂಗವಾಗಿದೆ.

ಹೌದು, ಸಿಜೆ ರಾಯ್ ಆತ್ಮಹತ್ಯೆಗೆ ಬರೋಬ್ಬರಿ 500 ಕೋಟಿ ರೂಪಾಯಿ ‌ಹವಾಲಾ ಹಣ ಕಾರಣ ಎಂದು ತಿಳಿದುಬಂದಿದೆ. ಈ ಹಣದ ಬಗ್ಗೆ ಲೆಕ್ಕ ಕೊಡಲಾಗದೆ ಸಿಜೆ ರಾಯ್ ಸಂಕಷ್ಟಕ್ಕೆ ಸಿಲುಕಿದ್ದರು ಎನ್ನಲಾಗಿದೆ. ಇದರಿಂದ ಅವರು ಮಾನಸಿಕವಾಗಿ ಕುಗ್ಗಿ ಹೋಗಿ, ಪ್ರಾಣಕಳೆದುಕೊಂಡಿದ್ದಾರೆ ಎನ್ನಲಾಗಿದೆ.

ಸಿ.ಜೆ.ರಾಯ್ ವ್ಯವಹಾರದಲ್ಲಿ 500 ಕೋಟಿ ರೂ.‌ ಮಿಸ್ ಮ್ಯಾಚ್ ಆಗಿತ್ತು. ಹೀಗಾಗಿ ತನಿಖೆ ನಡೆಸಿದ್ದ ಐಟಿ ಇಲಾಖೆ ಈ ಹಣದ ಲೆಕ್ಕ ಕೇಳಿತ್ತು. ಇದರಿಂದ ದುಬೈನಿಂದ ಭಾರತಕ್ಕೆ ವಾಪಸ್ ಬರದೇ ಮೀನಮೇಷ ಎಣಿಸುತ್ತಿದ್ದರು. ಬಳಿಕ ಕೊನೆಗೂ ಭಾರತಕ್ಕೆ ಬಂದ ಸಿಜೆ ರಾಯ್‌ಗೆ ಐಟಿ ಅಧಿಕಾರಿಗಳು ಅನೇಕ ಪ್ರಶ್ನೆಗಳನ್ನು ಮುಂದಿಟ್ಟಿದ್ದರು. ಕೊನೆಗೆ 500 ಕೋಟಿ ರೂಪಾಯಿ ಮೂಲ ನೀಡಲಾಗದೆ, ತಮಗೆ ಬಂದಿದ್ದ ಹವಾಲಾ ಹಣದ ಲೆಕ್ಕ ಕೊಡದೆ ಸಿ.ಜೆ.ರಾಯ್ ಪರದಾಡಿದ್ದರು.

ಇದರಿಂದ ಸಿಜೆ ರಾಯ್ ಮಾನಸಿಕವಾಗಿ ಕುಗ್ಗಿ ಹೋಗಿದ್ದರು. ಆದರೂ ಆತ್ಮಹತ್ಯೆ ದಿನ ಐಟಿಗೆ ಉತ್ತರಿಸುವುದಾಗಿ ಹೇಳಿದ್ದ ರಾಯ್, ಅಂದು ಮಾನಸಿಕ ಖಿನ್ನತೆಯ ಟ್ಯಾಬ್ಲೆಟ್ ಕೂಡ ಸೇವಿಸರಿಲಿಲ್ಲ. ಮಾತ್ರೆ ಸೇವಿಸದೆ ಇದ್ದಿದ್ದು ಖಿನ್ನತೆ ಮತ್ತಷ್ಟು ಹೆಚ್ಚಳಕ್ಕೆ ಕಾರಣವಾಗಿ ಆತ್ಮಹತ್ಯೆ ಮಾಡಿಕೊಂಡಿರೋ ಶಂಕೆ ಇದೆ.

CM Siddaramaiah: ಗ್ಯಾರಂಟಿ ಯೋಜನೆಗಳಿಂದ ರೈತರ ಆತ್ಮಹತ್ಯೆ ಇಳಿಕೆ: ಅಧ್ಯಯನ

ಇನ್ನು ಸಿಜೆ ರಾಯ್ ತಮ್ಮ ಕಚೇರಿಗೂ ಮುನ್ನ ಇದ್ದಂತ ಖಾಸಗಿ ಹೋಟೆಲ್‌ನಲ್ಲೇ ಸಜೀವ ಗುಂಡು ಸಿಕ್ಕಿದ್ದವು. ಹೀಗಾಗಿ ಖಾಸಗಿ ಹೋಟೆಲ್‌ನಲ್ಲಿ ಆತ್ಮಹತ್ಯೆಗೆ ಯತ್ನಿಸಿ, ಕೊನೆಗೆ ಅದು ಸೂಕ್ತ ಸ್ಥಳ ಅಲ್ಲವೆಂದು ನಿರ್ಧರಿಸಿ, ಕಚೇರಿಯಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ಇದೆ. ಒಟ್ಟಿನಲ್ಲಿ ಸಿಜೆ ರಾಯ್ ಆತ್ಮಹತ್ಯೆ ಕೇಸ್‌ಗೆ ಹವಾಲಾ ಹಣ ಲಿಂಕ್‌ ಇರುವುದು ಗೊತ್ತಾಗಿದೆ. ಆದರೆ ಈ ಹಣ ಯಾರದ್ದು, ಯಾಕಾಗಿ ನೀಡಿದರು ಎನ್ನುವುದು ತನಿಖೆಯಿಂದ ಬಯಲಾಗಬೇಕಿದೆ.