ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಒಂದೇ ಮಹಿಳೆ ಜತೆ ಇಬ್ಬರಿಗೆ ಅನೈತಿಕ ಸಂಬಂಧ; ಗಲಾಟೆ ವೇಳೆ ಅಡುಗೆ ಗುತ್ತಿಗೆದಾರನ ಕೊಲೆ

ಹಾಸನ ನಗರದ ಕೆ.ಆರ್.ಪುರಂ ಬಡಾವಣೆಯಲ್ಲಿ ಬುಧವಾರ ತಡರಾತ್ರಿ ಅಡುಗೆ ಗುತ್ತಿಗೆದಾರನ ಕೊಲೆ ನಡೆದಿದೆ. ಒಂದೇ ಮಹಿಳೆ ಜತೆ ಇಬ್ಬರು ಅನೈತಿಕ ಸಂಬಂಧ ಹೊಂದಿದ್ದರು. ಈ ವಿಚಾರಕ್ಕೆ ನಡೆದ ಗಲಾಟೆ ಒಬ್ಬರ ಕೊಲೆಯಲ್ಲಿ ಆಂತ್ಯವಾಗಿದೆ. ಈ ಬಗ್ಗೆ ಪೊಲೀಸ್‌ ಠಾಣೆಗೆ ದೂರು ದಾಖಲಾಗಿದೆ.

ಒಂದೇ ಮಹಿಳೆ ಜತೆ ಇಬ್ಬರಿಗೆ ಅನೈತಿಕ ಸಂಬಂಧ; ಗುತ್ತಿಗೆದಾರನ ಕೊಲೆ

ಕೊಲೆಯಾದ ಆನಂದ ಮತ್ತು ಆರೋಪಿ ಧರ್ಮೇಂದ್ರ. -

Prabhakara R
Prabhakara R Jan 29, 2026 6:00 PM

ಹಾಸನ, ಜ.29: ಅನೈತಿಕ ಸಂಬಂಧ ವಿಚಾರವಾಗಿ ನಡೆದ ಗಲಾಟೆಯೊಂದು ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಹಾಸನದಲ್ಲಿ (Hassan) ನಡೆದಿದೆ. ಒಂದೇ ಮಹಿಳೆ ಜತೆ ಇಬ್ಬರು ವ್ಯಕ್ತಿಗಳು ಅನೈತಿಕ ಸಂಬಂಧ ಹೊಂದಿದ್ದರು ಎನ್ನಲಾಗಿದೆ. ಈ ವಿಚಾರವಾಗಿ ನಡೆದ ಗಲಾಟೆ ವೇಳೆ ವ್ಯಕ್ತಿಯೊಬ್ಬ ಚಾಕುವಿನಿಂದ ಇರಿದು ಅಡುಗೆ ಗುತ್ತಿಗೆದಾರನ ಕೊಲೆ (Murder) ಮಾಡಿದ್ದಾನೆ. ಈ ಸಂಬಂಧ ಪೊಲೀಸ್‌ ಠಾಣೆಗೆ ದೂರು ದಾಖಲಾಗಿದೆ.

ನಗರದ ಕೆ.ಆರ್.ಪುರಂ ಬಡಾವಣೆಯಲ್ಲಿ ಬುಧವಾರ ತಡರಾತ್ರಿ ಅಡುಗೆ ಗುತ್ತಿಗೆದಾರ ಆನಂದ್(48) ಎಂಬುವವರ ಹತ್ಯೆ ನಡೆದಿದೆ. ಆರೋಪಿ ಧರ್ಮೇಂದ್ರ ಎಂಬಾತ ಅಡುಗೆ ಗುತ್ತಿಗೆದಾರ ಆನಂದ್‌ಗೆ ಐದಾರು ಬಾರಿ ಚಾಕುವಿನಿಂದ ಇರಿದು ಹತ್ಯೆ ಮಾಡಿದ್ದಾನೆ.

ಧರ್ಮೇಂದ್ರಗೆ ಮಹಿಳೆ ಜತೆ ಕಳೆದ ಎಂಟು ವರ್ಷಗಳಿಂದ ಸಂಬಂಧ ಇತ್ತು. ಈ ನಡುವೆ ಮಹಿಳೆ ಜತೆ ಆನಂದ ಕೂಡ ಅನೈತಿಕ ಸಂಬಂಧ ಹೊಂದಿದ್ದ. ಇದೇ ವಿಚಾರಕ್ಕೆ ಇಬ್ಬರ ನಡುವೆ ಆಗಾಗ್ಗೆ ಜಗಳ ನಡೆಯುತ್ತಿತ್ತು.

ಬುಧವಾರ ರಾತ್ರಿ ಇಬ್ಬರೂ ಬಾರ್​​​​ನಲ್ಲಿ ಭೇಟಿಯಾಗಿದ್ದು, ಮಹಿಳೆ ಜತೆಗಿನ ಸಂಬಂಧ ಬಗ್ಗೆ ಮಾತುಕತೆಯಾಗಿದೆ. ಅಲ್ಲಿಂದ ಆನಂದ್​​ ಮನೆಗೆ ಹೋಗಿದ್ದಾರೆ. ಆದರೆ ಮತ್ತೆ ಧರ್ಮೇಂದ್ರ ಫೋನ್​​ ಮಾಡಿದ್ದರಿಂದ ಆನಂದ್​​​​ ವಾಪಸ್ಸು ಬಂದಿದ್ದಾರೆ. ಈ ವೇಳೆ ನಡೆದ ಗಲಾಟೆ ವೇಳೆ ಕುಡಿದ ಅಮಲಿನಲ್ಲಿ ಆನಂದ್​​ ಅವರನ್ನು ಧರ್ಮೇಂದ್ರ ಕೊಲೆ ಮಾಡಿ, ಪರಾರಿಯಾಗಿದ್ದಾನೆ. ತೀವ್ರ ರಕ್ತಸ್ರಾವದಿಂದ ಆನಂದ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಪೊಲೀಸರು ಆರೋಪಿಯ ಪತ್ತೆಗಾಗಿ ಬಲೆ ಬೀಸಿದ್ದಾರೆ.

ಬಾಯ್‌ಫ್ರೆಂಡ್‌ ಜತೆ ಓಡಿಹೋಗಿ ಪತಿ, ಮಾವನ ಸಾವಿಗೆ ಕಾರಣಳಾದ ಮಹಿಳೆ ಆರೆಸ್ಟ್‌

ದಾವಣಗೆರೆ, ಜ.29: ಮದುವೆಯಾದ ಎರಡೇ ತಿಂಗಳಿಗೆ ಬಾಯ್​ಫ್ರೆಂಡ್​ ಜತೆ ಓಡಿಹೋಗಿ ಇಬ್ಬರ ಸಾವಿಗೆ ಕಾರಣವಾಗಿದ್ದವಳನ್ನು ಪೊಲೀಸರು ಆರೆಸ್ಟ್​ ಮಾಡಿದ್ದಾರೆ. ಮೃತ ಹರೀಶ್ ಪತ್ನಿ ಸರಸ್ವತಿಯನ್ನು ದಾವಣಗೆರೆ ಪೊಲೀಸರು ಬಂಧಿಸಿದ್ದಾರೆ. ದಾವಣಗೆರೆಯ ಎಲೆಬೇತೂರಿನಲ್ಲಿ ಸಂಬಂಧಿಕರ ಮನೆಯಲ್ಲಿದ್ದ ಸರಸ್ವತಿಯನ್ನು ಬಂಧಿಸಿ ದಾವಣಗೆರೆ ಗ್ರಾಮಾಂತರ ಠಾಣೆಗೆ ಪೊಲೀಸರು ಕರೆತಂದಿದ್ದಾರೆ. ಅತ್ತ ಸರಸ್ವತಿ ಪ್ರಿಯಕರ ಶಿವಕುಮಾರ್ ನಾಪತ್ತೆಯಾಗಿದ್ದು, ಆತನಿಗಾಗಿ ಪೊಲೀಸರು ಹುಡುಕಾಡುತ್ತಿದ್ದಾರೆ.

ದಾವಣಗೆರೆಯ ಗುಮ್ಮನೂರು ಗ್ರಾಮದ ಹರೀಶ್​ ಪತ್ನಿ ಸರಸ್ವತಿ, ಮದುವೆಯಾದ ಎರಡೇ ತಿಂಗಳಿಗೆ ತನ್ನ ಪ್ರಿಯಕರನ ಜತೆ ಪರಾರಿಯಾಗಿದ್ದಳು. ಈ ಘಟನೆಯಿಂದ ತೀವ್ರವಾಗಿ ಮನನೊಂದಿದ್ದ ಪತಿ ಹರೀಶ್​​, ಜಮೀನಿನಲ್ಲಿ ಮರಕ್ಕೆ ನೇಣು ಬಿಗಿದು ಆತ್ಮಹತ್ಯೆಗೆ ಶರಣಾಗಿದ್ದ. ಅತ್ತ, ಇವರಿಬ್ಬರಿಗೂ ಮದುವೆ ಮಾಡಿಸಿದ್ದ ಸರಸ್ವತಿಯ ಸೋದರ ಮಾವ ಸಹ ಆತ್ಮಹತ್ಯೆಗೆ ಶರಣಾಗಿದ್ದರು.

ಸದ್ಯ, ಇಬ್ಬರ ಸಾವಿಗೆ ಕಾರಣವಾಗಿದ್ದವಳನ್ನು ಪೊಲೀಸರು ಬಂಧಿಸಿದ್ದಾರೆ. ದಾವಣಗೆರೆ ಗ್ರಾಮಾಂತರ ಡಿವೈಎಸ್​ಪಿ ಬಸವರಾಜ್​ ನೇತೃತ್ವದಲ್ಲಿ ವಿಚಾರಣೆ ನಡೆಯುತ್ತಿದ್ದು, ಪ್ರಾಥಮಿಕ ವಿಚಾರಣೆ ನಂತರ ಮೆಡಿಕಲ್ ಚೆಕ್ ಅಪ್ ಮಾಡಿಸಿ ಬಳಿಕ ಆಕೆಯನ್ನು ಜಡ್ಜ್ ಮುಂದೆ ಪೊಲೀಸರು ಹಾಜರುಪಡಿಸಲಿದ್ದಾರೆ.

ಹಲವು ಯುವತಿಯರೊಂದಿಗೆ ರಾಸಲೀಲೆ ವಿಡಿಯೊ ವೈರಲ್‌; ಕೊಡಗಿನ ಮುಸ್ಲಿಂ ಯುವಕ ಆರೆಸ್ಟ್‌

ಇನ್ನು ಸರಸ್ವತಿಯನ್ನು ಕಾರಿನಲ್ಲಿ ಕರೆದುಕೊಂಡು ಹೋಗಿದ್ದ ಪ್ರಿಯಕರ ಶಿವಕುಮಾರ್​ ನಾಪತ್ತೆಯಾಗಿದ್ದಾನೆ. ಸರಸ್ವತಿ ಪ್ರಿಯಕರ ಶಿವಕುಮಾರ್ ಜತೆ ಸೋದರ ಮಾವ ಗಣೇಶ್, ಸರಸ್ವತಿ ಚಿಕ್ಕಮ್ಮ ಅಂಜಿನಮ್ಮ ನಾಪತ್ತೆಯಾಗಿದ್ದು, ನಾಪತ್ತೆಯಾಗಿರುವ ಶಿವಕುಮಾರಗಾಗಿ ದಾವಣಗೆರೆ ಪೊಲೀಸರು ಬಲೆ ಬೀಸಿದ್ದಾರೆ. ಪ್ರಿಯಕರ ಶಿವಕುಮಾರ್ ಮೇಲೆ ಎರಡು ಪ್ರತ್ಯೇಕ ಅಟ್ರಾಸಿಟಿ ಪ್ರಕರಣ ದಾಖಲಾಗಿದೆ. ಮೃತ ಹರೀಶ್ ತಂದೆ ಮಹಾರುದ್ರಪ್ಪ ಅವರ ಕಡೆಯಿಂದ ಒಂದು ಅಟ್ರಾಸಿಟಿ ಕೇಸ್, ಮೃತ ರುದ್ರೇಶ್ ಪತ್ನಿ ಪೂರ್ಣಿಮಾ ಅವರಿಂದ ಒಂದು ಅಟ್ರಾಸಿಟಿ ಕೇಸ್​​ ದಾಖಲಿಸಿಕೊಂಡಿರುವ ಪೊಲೀಸರು ಶಿವಕುಮಾರ್ ಪತ್ತೆಗೆ ಹುಡುಕಾಟ ಮುಂದುವರೆಸಿದ್ದಾರೆ.