ವಕ್ಫ್​ ತಿದ್ದುಪಡಿ ಮಸೂದೆ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Caste Census Report: ಮುಸ್ಲಿಮರಲ್ಲಿ 99 ಜಾತಿ, ಕ್ರೈಸ್ತರಲ್ಲಿ 57 ಜಾತಿ: ಜಾತಿ ಗಣತಿ ವರದಿಯಲ್ಲಿ ಬಯಲು

ಮುಸ್ಲಿಮರಲ್ಲಿ ಹಾಗೂ ಕ್ರೈಸ್ತರಲ್ಲಿ ಎಷ್ಟು ಉಪ ಜಾತಿಗಳು ಇವೆ ಎಂಬ ವಿಚಾರವನ್ನೂ ಜಾತಿ ಗಣತಿ ವರದಿಯಲ್ಲಿ (Caste census report) ಉಲ್ಲೇಖ ಮಾಡಲಾಗಿದೆ. ಇದರ ಪ್ರಕಾರ ಮುಸ್ಲಿಮರಲ್ಲಿ ಬರೋಬ್ಬರಿ 99 ಜಾತಿಗಳಿವೆ ಎನ್ನೋದು ಗೊತ್ತಾಗಿದೆ. ಹಾಗೆಯೇ ಕ್ರೈಸ್ತರಲ್ಲೂ 57 ಜಾತಿಗಳಿವೆ ಅಂತ ವರದಿಯಲ್ಲಿ ಹೇಳಲಾಗಿದೆ.

ಮುಸ್ಲಿಮರಲ್ಲಿ 99 ಜಾತಿ, ಕ್ರೈಸ್ತರಲ್ಲಿ 57 ಜಾತಿ: ಜಾತಿ ಗಣತಿಯಲ್ಲಿ ಬಯಲು

ಸಾಂದರ್ಭಿಕ ಚಿತ್ರ

ಹರೀಶ್‌ ಕೇರ ಹರೀಶ್‌ ಕೇರ Apr 18, 2025 1:39 PM

ಬೆಂಗಳೂರು: ರಾಜ್ಯದಲ್ಲಿ ಜಾತಿ ಗಣತಿ ವರದಿ (caste census report) ಸಾಕಷ್ಟು ಸದ್ದು ಮಾಡುತ್ತಿದ್ದು, ಮಹತ್ವದ ಸಚಿವ ಸಂಪುಟ ಸಭೆಯಲ್ಲೂ (Cabinet meeting) ಚರ್ಚೆಯಾಗಿದೆ. ಆದರೆ ಈ ಕುರಿತು ಯಾವುದೇ ಪ್ರಮುಖ ಕ್ರಮ ಕೈಗೊಳ್ಳದೇ ಮುಂದಕ್ಕೆ ಹಾಕಲಾಗಿದೆ. ಜಾತಿ ಗಣತಿ ಎಂದೇ ಕರೆಯಲ್ಪಡುತ್ತಿರುವ ಸಾಮಾಜಿಕ, ಶೈಕ್ಷಣಿಕ ವರದಿಯ ಪ್ರತಿಗಳನ್ನು ಸಚಿವರಿಗೆ ನೀಡಲಾಗಿದ್ದು, ಈ ಪ್ರತಿಗಳು ಸೋರಿಕೆ ಆಗುತ್ತಿವೆ. ಯಾವ ಜಾತಿಗಳ ಜನಸಂಖ್ಯೆ ಎಷ್ಟು ಎಂಬುದು ಬಹಿರಂಗವಾಗುತ್ತಿದೆ. ಈ ನಡುವೆ ಮುಸ್ಲಿಮರಲ್ಲಿ (Muslim) ಹಾಗೂ ಕ್ರೈಸ್ತರಲ್ಲಿ (Cristian) ಎಷ್ಟು ಉಪ ಜಾತಿಗಳು ಇವೆ ಎಂಬ ವಿಚಾರವನ್ನೂ ಜಾತಿ ಗಣತಿ ವರದಿಯಲ್ಲಿ ಉಲ್ಲೇಖ ಮಾಡಲಾಗಿದೆ. ಇದರ ಪ್ರಕಾರ ಮುಸ್ಲಿಮರಲ್ಲಿ ಬರೋಬ್ಬರಿ 99 ಜಾತಿಗಳಿವೆ ಎನ್ನೋದು ಗೊತ್ತಾಗಿದೆ. ಹಾಗೆಯೇ ಕ್ರೈಸ್ತರಲ್ಲೂ 57 ಜಾತಿಗಳಿವೆ ಅಂತ ವರದಿಯಲ್ಲಿ ಹೇಳಲಾಗಿದೆ.

ರಾಜ್ಯದಲ್ಲಿ ಇರುವ ಜಾತಿಗಳ ಪಟ್ಟಿಯನ್ನು ಸಮೀಕ್ಷೆಯಲ್ಲಿ ವಿವರವಾಗಿ ನೀಡಲಾಗಿದೆ. ಅದಕ್ಕೆ ಪ್ರತ್ಯೇಕ ಕೋಡ್‌ಗಳನ್ನು ನೀಡಲಾಗಿದೆ. ಆಯಾ ಜಾತಿಯ ಸಾಮಾಜಿಕ, ಶೈಕ್ಷಣಿಕ ಸ್ಥಿತಿಗತಿಗಳು ಹಾಗೂ ಸಂಖ್ಯೆಗಳು ಎಲ್ಲದರ ವಿವರಗಳನ್ನು ಜಾತಿಗಣತಿ ವರದಿಯಲ್ಲಿ ನೀಡಲಾಗಿದೆ. ಈ ನಡುವೆ ಮುಸ್ಲಿಮರಲ್ಲಿ ಜಾತಿಗಳು ಇವೆಯಾ ಇಲ್ಲವಾ ಎಂಬ ಬಗ್ಗೆ ಚರ್ಚೆಗಳು ನಡೆಯುತ್ತಿದ್ದವು. ಇಸ್ಲಾಂ ಜಾತಿ ವ್ಯವಸ್ಥೆಯನ್ನು ಒಪ್ಪುವುದಿಲ್ಲ ಎಂಬುದು ಇಸ್ಲಾಂ ಪಂಡಿತರ ವಾದವಾಗಿದೆ. ಆದರೆ ಮುಸ್ಲಿಮರಲ್ಲಿ 99ರಷ್ಟು ಜಾತಿಗಳಿವೆ ಎಂಬುದು ವರದಿಯಲ್ಲಿದೆ.

ಭಾರತದಲ್ಲಿ ಮತಾಂತರಗೊಂಡ ಮುಸ್ಲಿಂ ಹಾಗೂ ಕ್ರೈಸ್ತರ ಜಾತಿಗಳ ಬಗ್ಗೆ ಹಿಂದಿನಿಂದಲೂ ಚರ್ಚೆಗಳು ನಡೆಯುತ್ತಿದ್ದವು. ಡಾ. ಮುಜಾಫರ್ ಅಸ್ಸಾದಿ ಅವರು ‘ಅಲ್ಪಸಂಖ್ಯಾತರು ಮತ್ತು ಜಾತಿ ವ್ಯವಸ್ಥೆ’ ಎಂಬ ಅಧ್ಯಯನ ಪುಸ್ತಕವನ್ನು ಪ್ರಕಟಿಸಿದ್ದರು. ಇದೀಗ ಜಾತಿ ಗಣತಿ ವರದಿಯಲ್ಲೂ ಮುಸ್ಲಿಂ ಹಾಗೂ ಕ್ರೈಸ್ತ ಜಾತಿಗಳನ್ನು ಉಲ್ಲೇಖ ಮಾಡಲಾಗಿದೆ.

ಬ್ಯಾರಿಗಳು, ಬ್ಯಾರಿ ಮುಸ್ಲಿಂ, ಚಪ್ಪರ್‌ ಬಂದ್ ಮುಸ್ಲಿಂ, ಚಪ್ಪೇರ್‌ ಬಂದ್, ದಖನಿ ಮುಸ್ಲಿಂ , ದರ್ಜಿ ಮುಸ್ಲಿಂ, ದರ್ವೇಸು ಮುಸ್ಲಿಂ, ಫಕೀರ್ ಮುಸ್ಲಿಂ, ಇರಾನಿ ಮುಸ್ಲಿಂ, ಮುಜಾವರ್ ಮುಸ್ಲಿಂ, ಮುಲ್ಲಾ ಮುಸ್ಲಿಂ, ನದಾಫ್ ಮುಸ್ಲಿಂ, ನಾಲಾ ಬಂದ ಮುಸ್ಲಿಂ, ನವಾಯತ್ ಮುಸ್ಲಿಂ ಮುಂತಾದ 99 ಜಾತಿಗಳನ್ನು ಉಲ್ಲೇಖಿಸಲಾಗಿದೆ. ಕ್ರಿಶ್ಚಿಯನ್ನರಲ್ಲೂ ಬ್ರಾಹ್ಮಣ, ಬುಡುಗ ಜಂಗಮ, ದೇವಾಂಗ, ಗೊಲ್ಲ, ಜಲಗಾರ.. ಹೀಗೆ ಕ್ರಿಶ್ಚಿಯನ್ನರಲ್ಲೂ ಈ ರೀತಿ ಉಪ ಜಾತಿಗಳಿವೆ. ಒಟ್ಟು 57 ಉಪಜಾತಿಗಳ ಬಗ್ಗೆ ವರದಿಯಲ್ಲಿ ಪ್ರಸ್ತಾಪಿಸಲಾಗಿದೆ.

ಜಾತಿ ಗಣತಿ ವಿರುದ್ಧ ಕ್ರೈಸ್ತ ಸಮುದಾಯ ಕಿಡಿ ಕಾರಿದ್ದು, ಕಾಂತರಾಜು ವರದಿಯಲ್ಲಿ ಪ್ರವರ್ಗ 1 ರಲ್ಲಿ ಕ್ರೈಸ್ತ ಸಮುದಾಯವನ್ನು ಸೇರಿಸಲಾಗಿತ್ತು. ಆದರೆ ಈಗ ಪ್ರವರ್ಗ 3 ಬಿ ಗೆ ಸೇರಿಸಲಾಗಿದೆ. ಕ್ರೈಸ್ತ ಸಮುದಾಯವನ್ನು ಪ್ರವರ್ಗ 3 ಬಿ ಸೇರಿಸಿರುವುದು ಕಷ್ಟಕರವಾಗಲಿದೆ. ಪ್ರವರ್ಗ 3 ಬಿ ಬಿಟ್ಟು, ಸಣ್ಣ ಸಮುದಾಯದ ಜೊತೆ ನಮ್ಮವರನ್ನು ಸೇರಿಸಲಿ. ಹೀಗಾಗಿ ನಾವು ಸಿಎಂ ಸಿದ್ಧರಾಮಯ್ಯ ಅವರನ್ನೆಲ್ಲ ಭೇಟಿ‌ ಮಾಡಿ ಮನವಿ ಸಲ್ಲಿಸಲಿದ್ದೇವೆ. ಕಳೆದ 40 ವರ್ಷಗಳಿಂದ ನಮ್ಮ ಸಮುದಾಯಕ್ಕೆ ನ್ಯಾಯಯುತವಾದ ಮೀಸಲಾತಿ ಸಿಕ್ಕಿಲ್ಲ, ಈ ಬಾರಿಯಾದ್ರೂ ನ್ಯಾಯ ಸಿಗಬೇಕು ಎಂದು ಒತ್ತಾಯಿಸಿದ್ದಾರೆ.

ಇದನ್ನೂ ಓದಿ: Caste Census:‌ ಮೇ 2ರ ಸಚಿವ ಸಂಪುಟ ಸಭೆಯಲ್ಲಿ ಜಾತಿ ಗಣತಿ ವರದಿಯ ಬಗ್ಗೆ ಅಂತಿಮ ನಿರ್ಧಾರ: ಎಚ್.ಕೆ.ಪಾಟೀಲ್