Health Tips: ಚಳಿಗಾಲದ ಆರೋಗ್ಯಕ್ಕೆ ಕರಿಮೆಣಸು ರಾಮಬಾಣ!
Black Pepper: ಕರಿಮೆಣಸು ಪ್ರಪಂಚದಾದ್ಯಂತ ಸಾಮಾನ್ಯವಾಗಿ ಬಳಸುವ ಮಸಾಲೆಗಳಲ್ಲಿ ಒಂದಾಗಿದೆ. ಇದು ಕೇವಲ ಅಡುಗೆ ಪದಾರ್ಥದ ರುಚಿ ಹೆಚ್ಚು ಮಾಡುವುದಲ್ಲದೆ ಆರೋಗ್ಯವನ್ನು ಕಾಪಾಡಲು ಕೂಡ ಸಹಾಯ ಮಾಡುತ್ತದೆ. ಇದರಲ್ಲಿರುವ ಪೈಪರಿನ್ (Piperine) ಎಂಬ ಅಂಶವು ಆರೋಗ್ಯಕ್ಕೆ ಹಲವು ಪ್ರಯೋಜನಗಳನ್ನು ನೀಡುತ್ತದೆ.
ಸಂಗ್ರಹ ಚಿತ್ರ -
ಬೆಂಗಳೂರು, ಡಿ.24: ಇಂದು ಎಲ್ಲೆಡೆ ಚಳಿಯ ವಾತಾವರಣ ಹೆಚ್ಚಾಗಿದೆ. ಅದರಲ್ಲೂ ಚಳಿಗಾಲದ ತಂಪಾದ ಹವಾಮಾನದಿಂದಾಗಿ ಆರೋಗ್ಯ ಸಮಸ್ಯೆಗಳು ಹೆಚ್ಚಾಗಿ ಕಾಡುತ್ತವೆ. ಈ ಸಮಯದಲ್ಲಿ ಕೆಮ್ಮು, ಶೀತ, ಕಫ ಮತ್ತು ಜೀರ್ಣಕ್ರಿಯೆಯ ಸಮಸ್ಯೆಗಳು ಕಾಣಿಸಿಕೊಳ್ಳುವುದು ಸಾಮಾನ್ಯ. ಹಾಗಾಗಿ ನಾವು ಸೇವಿಸುವಂತಹ ಆಹಾರದಲ್ಲಿ ಕೂಡ ಕೆಲವೊಂದು ವಸ್ತುಗಳನ್ನು ಬಳಕೆ ಮಾಡುವ ಮೂಲಕ ಆರೋಗ್ಯ ಕಾಪಾಡಿಕೊಳ್ಳಬಹುದು. ಈ ಚಳಿಯ ವಾತಾವರಣದಲ್ಲಿ ಅಡುಗೆ ಮನೆಯಲ್ಲಿ ರುವ ಕರಿ ಮೆಣಸು (Black Pepper) ಬಳಸುವ ಮೂಲಕ ಹಲವಾರು ಆರೋಗ್ಯ ಲಾಭ ಪಡೆಯ ಬಹುದು.
ಕರಿಮೆಣಸು ಪ್ರಪಂಚದಾದ್ಯಂತ ಸಾಮಾನ್ಯವಾಗಿ ಬಳಸುವ ಮಸಾಲೆಗಳಲ್ಲಿ ಒಂದಾಗಿದೆ. ಇದು ಕೇವಲ ಅಡುಗೆ ಪದಾರ್ಥದ ರುಚಿ ಹೆಚ್ಚು ಮಾಡುವುದಲ್ಲದೆ ಆರೋಗ್ಯವನ್ನು ಕಾಪಾಡಲು ಕೂಡ ಸಹಾಯ ಮಾಡುತ್ತದೆ. ಇದರಲ್ಲಿರು ಪೈಪರಿನ್ (Piperine) ಎಂಬ ಅಂಶವು ಆರೋಗ್ಯಕ್ಕೆ ಹಲವು ಪ್ರಯೋಜನಗಳನ್ನು ನೀಡುತ್ತದೆ.
ರೋಗನಿರೋಧಕ ಶಕ್ತಿ ಹೆಚ್ಚಿಸುತ್ತದೆ:
ಕರಿಮೆಣಸಿನಲ್ಲಿ ಉತ್ಕರ್ಷಣ ನಿರೋಧಕ ಅಂಶಗಳು ಸಮೃದ್ಧವಾಗಿದೆ. ಇದು ದೇಹದಲ್ಲಿ ಸ್ವತಂತ್ರ ರಾಡಿಕಲ್‌ಗಳನ್ನು ತಟಸ್ಥಗೊಳಿಸಲು ಸಹಾಯ ಮಾಡುತ್ತದೆ. ಶೀತ ಮತ್ತು ಜ್ವರದ ಸಂದರ್ಭದಲ್ಲಿ ಇದು ವಿಶೇಷವಾಗಿ ಅಗತ್ಯ.. ರೋಗನಿರೋಧಕ ವ್ಯವಸ್ಥೆಯನ್ನು ಬೆಂಬಲಿಸುವ ಮೂಲಕ ಕರಿಮೆಣಸು ಅನಾ ರೋಗ್ಯಗಳನ್ನು ದೂರವಿಡಲು ಸಹಾಯ ಮಾಡುತ್ತದೆ.
ಕೆಮ್ಮು ಮತ್ತು ಶೀತಕ್ಕೆ ಅಗತ್ಯ:
ಕರಿಮೆಣಸು ನೈಸರ್ಗಿಕವಾಗಿ ಕಫವನ್ನು ಹೊರಹಾಕುವ ಗುಣ ಹೊಂದಿದೆ. ಬಿಸಿಯಾದ ಹಾಲಿಗೆ ಕರಿ ಮೆಣಸಿನ ಪುಡಿ ಬೆರೆಸಿ ಕುಡಿಯುವುದರಿಂದ ಗಂಟಲು ನೋವು ಮತ್ತು ಕೆಮ್ಮುವಿನಂತ ಆರೋಗ್ಯ ಸಮಸ್ಯೆಗೆ ತಕ್ಷಣದ ಉಪಶಮನ ನೀಡುತ್ತದೆ.
ಜೀರ್ಣಕ್ರಿಯೆ ಸುಧಾರಣೆ:
ಚಳಿಗಾಲದಲ್ಲಿ ನಾವು ಸೇವಿಸುವಂತಹ ಆಹಾರ ಕೂಡ ಮುಖ್ಯವಾಗುತ್ತದೆ. ಕರಿಮೆಣಸು ಜೀರ್ಣಕಾರಿ ಕಿಣ್ವಗಳನ್ನು ಹೊಂದಿದ್ದು ಇದರಲ್ಲಿರುವ ಪೈಪರೀನ್ ಅಂಶವು ಜೀರ್ಣಕಾರಿ ಕಿಣ್ವಗಳ ಉತ್ಪಾದನೆಯನ್ನು ಉತ್ತೇಜಿಸುತ್ತದೆ. ಇದರಿಂದ ಹೊಟ್ಟೆ ಉರಿ ಮತ್ತು ಗ್ಯಾಸ್ಟ್ರಿಕ್ ನಂತ ಸಮಸ್ಯೆ ಯನ್ನು ನಿವಾರಿಸುತ್ತದೆ.
Health Tips: ಚಳಿಗಾಲದ ಸೋಂಕುಗಳಿಂದ ಮಕ್ಕಳನ್ನು ಕಾಪಾಡುವುದು ಹೇಗೆ?
ಉಸಿರಾಟದ ಸಮಸ್ಯೆ ನಿವಾರಣೆ:
ಕರಿಮೆಣಸಿನ ಉತ್ಕರ್ಷಣ ಅಂಶವು ಮೂಗಿನ ದಟ್ಟಣೆಯನ್ನು ಕಡಿಮೆ ಮಾಡಲು ಮತ್ತು ಉಸಿರಾಟದ ಸಮಸ್ಯೆಗಳನ್ನು ನಿವಾರಿಸಲು ಸಹಾಯ ಮಾಡುತ್ತದೆ. ಇದು ಕಫ ನಿವಾರಕವಾಗಿ ಕಾರ್ಯನಿರ್ವಹಿಸಲಿದ್ದು ವಿಶೇಷವಾಗಿ ಜ್ವರ ಬಂದಾಗ ಇದರ ಬಳಕೆ ಪ್ರಯೋಜನಕಾರಿಯಾಗಿದೆ.
ಕೀಲು ನೋವು ನಿವಾರಣೆ:
ಚಳಿಗಾಲದಲ್ಲಿ ಅನೇಕರಿಗೆ ಕೀಲು ನೋವು ಸಮಸ್ಯೆ ಮತ್ತು ಸ್ನಾಯುಗಳ ಸೆಳೆತ ಇರುತ್ತದೆ. ಕರಿ ಮೆಣಸಿನಲ್ಲಿರುವ ಉರಿಯೂತ ವಿರೋಧಿ ಅಂಶಗಳು ನೋವನ್ನು ಕಡಿಮೆ ಮಾಡಲು ಸಹಕಾರಿ ಯಾಗುತ್ತವೆ.
ಖಿನ್ನತೆ ದೂರ ಮಾಡುತ್ತದೆ:
ಕರಿಮೆಣಸು ಮನಸ್ಥಿತಿಯನ್ನು ಸರಿಪಡಿಸುವ ಗುಣಗಳನ್ನು ಹೊಂದಿದೆ. ಇದು ಖಿನ್ನತೆ ಮತ್ತು ಆತಂಕದ ಲಕ್ಷಣಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ
ಬಳಸುವುದು ಹೇಗೆ?
*ಹುರಿದ ತರಕಾರಿಗಳ ಮೇಲೆ ಕರಿಮೆಣಸು ಪುಡಿಯನ್ನು ಸಿಂಪಡಿಸಿ ಸೇವಿಸಬಹುದು. ಕ್ಯಾರೆಟ್ ಮತ್ತು ತಾಜಾ ತರಕಾರಿಗಳೊಂದಿಗೆ ಇದು ಚೆನ್ನಾಗಿ ಹೊಂದಿಕೊಳ್ಳುತ್ತದೆ,
*ಹಾಲಿಗೆ ಅರಿಶಿನ ಮತ್ತು ಒಂದು ಚಿಟಿಕೆ ಮೆಣಸಿನ ಪುಡಿ ಬೆರೆಸಿ ಕುಡಿಯಿರಿ.
*ಸಸ್ಯಾಹಾರಿ ಅಥವಾ ಮಾಂಸಾಹಾರಿ ಸೂಪ್‌ಗಳಿಗೆ ತಾಜಾ ಮೆಣಸಿನ ಪುಡಿ ಸೇರಿಸಿ ಸೇವಿಸಬಹುದು
*ಹಸಿ ತರಕಾರಿ ಅಥವಾ ಹಣ್ಣಿನ ಸಲಾಡ್‌ಗಳ ಮೇಲೆ ಮೆಣಸಿನ ಪುಡಿ ಉದುರಿಸಿ
*ಬಿಸಿ ಪಾನೀಯವಾದ ಶುಂಠಿ ಚಹಾ ಅಥವಾ ಕಷಾಯಕ್ಕೆ ಕರಿಮೆಣಸು ಪುಡಿ ಸೇರಿಸಿ
ಆದರೆ ಕರಿ ಮೆಣಸನ್ನು ಮಿತವಾಗಿ ಬಳಸುವುದು ಉತ್ತಮ. ಅತಿಯಾದ ಬಳಕೆ ಹೊಟ್ಟೆಯಲ್ಲಿ ಉರಿಯೂತ ಉಂಟುಮಾಡಬಹುದು. ಹಾಗಾಗಿ ಪ್ರತಿದಿನದ ಆಹಾರದಲ್ಲಿ ಸ್ವಲ್ಪ ಪ್ರಮಾಣದ ಕರಿಮೆಣಸು ಸೇರಿಸುವುದು ಆರೋಗ್ಯಕ್ಕೆ ಉತ್ತಮ