Road Accident: ಚನ್ನರಾಯಪಟ್ಟಣದಲ್ಲಿ ಸ್ಕೂಟಿ- ಬೈಕ್ ಡಿಕ್ಕಿ, ಇಬ್ಬರು ಸವಾರರ ಸಾವು
ಮತ್ತಿಘಟ್ಟ ಗ್ರಾಮದ ರಮೇಶ್ ಹಾಗೂ ಕಿರಣ್ (22) ಸ್ಕೂಟಿಯಲ್ಲಿ ಬರುತ್ತಿದ್ದು ಅವರ ಎದುರಿನಿಂದ ಎಂ.ಹೊನ್ನೇನಹಳ್ಳಿ ಗ್ರಾಮದ ಪುರುಷೋತ್ತಮ್ ಬೈಕ್‌ನಲ್ಲಿ (Bike) ಬಂದು ಡಿಕ್ಕಿ ಹೊಡೆದಿದ್ದಾನೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಹಿರಿಸಾವೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಮೃತ ಪುರುಷೋತ್ತಮ್, ರಮೇಶ್ -
ಹಾಸನ, ಫೆ.17: ಸ್ಕೂಟಿ ಹಾಗೂ ಬೈಕ್ ನಡುವೆ ಮುಖಾಮುಖಿ ಡಿಕ್ಕಿ (Road Accident) ಸಂಭವಿಸಿ ಇಬ್ಬರು ಯುವಕರು ದಾರುಣವಾಗಿ (two death) ಸಾವನ್ನಪ್ಪಿರುವ ಘಟನೆ ಚನ್ನರಾಯಪಟ್ಟಣ (Channarayapatna) ತಾಲ್ಲೂಕಿನ, ದೊಡ್ಢರಿ ಕಾವಲು ಗೇಟ್ ಬಳಿ ನಡೆದಿದೆ. ರಮೇಶ್ (23), ಪುರುಷೋತ್ತಮ್ (26) ಮೃತ ದುರ್ದೈವಿಗಳು.
ಮತ್ತಿಘಟ್ಟ ಗ್ರಾಮದ ರಮೇಶ್ ಹಾಗೂ ಕಿರಣ್ (22) ಸ್ಕೂಟಿಯಲ್ಲಿ ಬರುತ್ತಿದ್ದು ಅವರ ಎದುರಿನಿಂದ ಎಂ.ಹೊನ್ನೇನಹಳ್ಳಿ ಗ್ರಾಮದ ಪುರುಷೋತ್ತಮ್ ಬೈಕ್‌ನಲ್ಲಿ (Bike) ಬಂದು ಡಿಕ್ಕಿ ಹೊಡೆದಿದ್ದಾನೆ. ರಮೇಶ್‌ಗೆ ಚಿಕ್ಕವನಿದ್ದಾಗಲೇ ಹಾರ್ಟ್ ಸರ್ಜರಿಯಾಗಿದ್ದು ಹೆಲ್ಮೆಟ್ ಧರಿಸಿ ಸ್ಕೂಟಿ ಚಲಾಯಿಸುತ್ತಿದ್ದರು. ಆದರೆ ಡಿಕ್ಕಿ ರಭಸಕ್ಕೆ ಎದೆಗೆ ಬೈಕ್‌ನ ಹ್ಯಾಂಡಲ್ ಒತ್ತಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಗಾಯಾಳು ಕಿರಣ್ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಹಿರಿಸಾವೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಮುಖ ತೊಳೆಯಲು ಹೋಗಿ ಮುಳುಗಿ ತಂದೆ- ಮಗ ಸಾವು
ಬೀದರ್: ಮುಖ ತೊಳೆಯಲು ಹೋಗಿ ಕಾಲು ಜಾರಿ ನೀರುಪಾಲಾದ ಮಗನನ್ನು ರಕ್ಷಿಸಲು ಹೋಗಿ ತಂದೆಯೂ ಜಲಸಮಾಧಿಯಾಗಿರುವ (Drowned) ಘಟನೆ ಬೀದರ್‌ನ (Bidar) ಹಾಲಳ್ಳಿ ಗ್ರಾಮದ ಕಾರಂಜಾ ನದಿಯ ಹಿನ್ನೀರಿನ ಕಾಲುವೆಯಲ್ಲಿ ನಡೆದಿದೆ. ಮೃತರನ್ನು ಹಳ್ಳೆಖೇಡ್(ಬಿ) ಗ್ರಾಮದ ತಂದೆ ಈಶಪ್ಪ (50) ಮತ್ತು ಮಗ ಅಮರೇಶ (23) ಎಂದು ಗುರುತಿಸಲಾಗಿದೆ.
ತಂದೆ-ಮಗ ಬೀದರ್‌ನಲ್ಲಿ ಸಿಮೆಂಟ್ ಖಾಲಿ ಮಾಡಿ, ವಾಪಸ್ ಹಳ್ಳಿಖೇಡ್‌ಗೆ ಹೋಗುತ್ತಿದ್ದರು. ಈ ವೇಳೆ ಕಾರಂಜಾ ನದಿಯ ಹಿನ್ನೀರಿನ ಕಾಲುವೆಯಲ್ಲಿ ಮಗ ಮುಖ ತೊಳೆಯಲು ಹೋಗಿದ್ದರು. ಆಗ ಆಯತಪ್ಪಿ ಕಾಲು ಜಾರಿ ಕಾಲುವೆಯಲ್ಲಿ ಬಿದ್ದಿದ್ದಾರೆ. ಮಗ ಕಾಲುವೆಯಲ್ಲಿ ಬಿದ್ದಿದ್ದನ್ನು ಕಂಡ ತಂದೆ ವಿಶ್ವನಾಥ ರಕ್ಷಿಸಲು ಮುಂದಾದಾಗ, ಅವರು ಕೂಡ ನೀರುಪಾಲಾಗಿದ್ದಾರೆ.
ಸ್ಥಳಕ್ಕೆ ಪೊಲೀಸರು ಹಾಗೂ ಅಗ್ನಿಶಾಮಕದಳ ಸಿಬ್ಬಂದಿ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಸದ್ಯ ಇಬ್ಬರ ಮೃತದೇಹವನ್ನು ಹೊರ ತೆಗೆದಿದ್ದು, ಧನ್ನೂರು ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ರಾಸಾಯನಿಕ ಕಾರ್ಖಾನೆಯಲ್ಲಿ ಬೆಂಕಿ ಅವಘಡ: 7 ಕಾರ್ಮಿಕರು ಸಾವು, 10 ಮಂದಿ ಸಿಲುಕಿರುವ ಶಂಕೆ