Narendra Modi : ಪ್ರಧಾನಿ ನರೇಂದ್ರ ಮೋದಿ ಯೂಟ್ಯೂಬ್‌ನಿಂದ ಪ್ರತೀ ತಿಂಗಳು ಗಳಿಸುವ ಆದಾಯವೆಷ್ಟು? ಕೇಳಿದ್ರೆ ಶಾಕ್ ಆಗ್ತೀರಾ!
ಯೂಟ್ಯೂಬ್‌ನಲ್ಲಿ ಸಾಕಷ್ಟು ಹಣಗಳಿಸುವವರ ಬಗ್ಗೆ ಕೇಳಿರುತ್ತೇವೆ, ಚಂದಾದಾರರು ಹಾಗೂ ವೀಕ್ಷಣೆ ಹೆಚ್ಚಾದಂತೆ ಹಣವೂ ಹೆಚ್ಚಾಗುತ್ತಾ ಹೋಗುತ್ತದೆ. 25.1 ಮಿಲಿಯನ್ ಚಂದಾದಾರರನ್ನು ಹೊಂದಿರುವ ಪ್ರಧಾನಿ ನರೇಂದ್ರ ಮೋದಿಯವರ ಆದಾಯವೆಷ್ಟು ಎಂಬುದಕ್ಕೆ ಇಲ್ಲಿದೆ ಉತ್ತರ
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ (Narendra Modi) ಅವರಿಗೆ ಜಗತ್ತಿನಾದ್ಯಂತ ಅಭಿಮಾನಿಗಳಿದ್ದಾರೆ. ಸಾಮಾಜಿಕ ಮಾಧ್ಯಮಗಳಲ್ಲಿ ಮಿಲಿಯನ್‌ಗಟ್ಟಲೇ ಫಾಲೋವರ್ಸ್ ಹೊಂದಿದ್ದಾರೆ. ಅವರ ಒಂದು ಪೋಸ್ಟ್ ಲಕ್ಷಗಟ್ಟಲೆ ವೀಕ್ಷಣೆಯನ್ನು ಪಡೆಯುತ್ತವೆ. ಪ್ರಧಾನಿ ಮೋದಿ ಅಧಿಕೃತ ಯೂಟ್ಯೂಬ್ ಖಾತೆಯನ್ನು ಹೊಂದಿದ್ದು, 26.5 ಮಿಲಿಯನ್ ಚಂದಾದಾರರನ್ನು ಹೊಂದಿದ್ದಾರೆ. ಹಾಗಾದರೆ ಮೋದಿ ಅವರು ಯೂಟ್ಯೂಬ್‌ನಿಂದ ಪ್ರತಿ ತಿಂಗಳು ಗಳಿಸುವ ಹಣವೆಷ್ಟು? ಇಲ್ಲಿದೆ ನೋಡಿ ಮಾಹಿತಿ.
ಸೋಶಿಯಲ್ ಮೀಡಿಯಾದಲ್ಲಿ ಸಕ್ರಿಯರಾಗಿರುವ ಮೋದಿ ಅವರ ಯೂಟ್ಯೂಬ್ ಚಾನಲ್‌ನ್ನು 26, 2007 ರಂದು ಪ್ರಾರಂಭಿಸಲಾಯಿತು. ಇದರಲ್ಲಿ ಮೋದಿ ಅವರಿಗೆ ಸಂಬಂಧಪಟ್ಟ ಎಲ್ಲಾ ಕಾರ್ಯಕ್ರಮಗಳನ್ನು ಪ್ರಸಾರ ಮಾಡಲಾಗುತ್ತದೆ ಹಾಗೂ ಕಾರ್ಯಕ್ರಮದ ನೇರ ಪ್ರಸಾರವನ್ನು ಕೂಡ ನೀಡಲಾಗುತ್ತದೆ. ಈ ಚಾನೆಲ್ 26 ಮಿಲಿಯನ್ ಚಂದಾದಾರರನ್ನ ಹೊಂದಿದೆ. ಈವರೆಗೆ 29,272 ವೀಡಿಯೊಗಳನ್ನು ಪೋಸ್ಟ್ ಮಾಡಲಾಗಿದೆ. ಈ ವಿಡಿಯೋವನ್ನು 636 ಕೋಟಿಗೂ ಅಧಿಕ ಮಂದಿ ವೀಕ್ಷಿಸಿದ್ದಾರೆ. 20 ಮಿಲಿಯನ್‌ಗಿಂತಲೂ ಅಧಿಕ ಚಂದಾದಾರರನ್ನು ಹೊಂದಿರು ವಿಶ್ವದ ಏಕೈಕ ನಾಯಕ ಮೋದಿ ಆಗಿದ್ದಾರೆ.
ವರದಿಗಳ ಪ್ರಕಾರ ಮೋದಿ ಅವರ ಯೂಟ್ಯೂಬ್ ಆದಾಯ 1.62 ಕೋಟಿ ರೂ. - 4.88 ಕೋಟಿ ರೂ. ಎಂದು ಹೇಳಲಾಗಿದೆ. ಪ್ರತಿ ವಾರ ಸರಾಸರಿ ಈ ಚಾನೆಲ್‌ನಲ್ಲಿ 19 ವಿಡಿಯೋಗಳನ್ನು ಅಪ್‌ಲೋಡ್ ಮಾಡಲಾಗುತ್ತದೆ. ಸರಾಸರಿ ಒಂದು ವಿಡಿಯೋವನ್ನು 40 ಸಾವಿರ ವೀಕ್ಷಣೆಗಳನ್ನು ಪಡೆದಿರುತ್ತವೆ. ಮೋದಿ ಅವರು ಫೇಸ್‌ಬುಕ್‌ನಲ್ಲಿ 48 ಮಿಲಿಯನ್ ಹಾಗೂ ಇನ್ಸ್ಟಾಗ್ರಾಂನಲ್ಲಿ 82.7 ಮಿಲಿಯನ್ಸ್ ಫಾಲೋವರ್ಸ್‌ಗಳನ್ನು ಹೊಂದಿದ್ದಾರೆ.
ಈ ಸುದ್ದಿಯನ್ನೂ ಓದಿ : Narendra Modi: ಝಡ್-ಮೋರ್ಹ್ ಸುರಂಗ ಮಾರ್ಗ ಪ್ರಧಾನಿ ನರೇಂದ್ರ ಮೋದಿಯಿಂದ ಉದ್ಘಾಟನೆ!
ಬ್ರೆಜಿಲ್‌ನ ಮಾಜಿ ಅಧ್ಯಕ್ಷ ಜೈರ್ ಬೋಲ್ಸನಾರೋ ರಾಜಕೀಯ ನಾಯಕರಲ್ಲಿ ಎರಡನೇ ಅತೀ ಹೆಚ್ಚು 6.4 ಮಿಲಿಯನ್ ಚಂದಾದಾರನ್ನು ಹೊಂದಿದ ವ್ಯಕ್ತಿಯಾಗಿದ್ದಾರೆ.