ಐಪಿಎಲ್‌ನ ಮೊದಲ ಅಭ್ಯಾಸ ಅವಧಿಯಲ್ಲೇ ಸಿಕ್ಸರ್‌ಗಳ ಸುರಿಮಳೆಗೈದ ಜಡೇಜಾ; ವಿಡಿಯೊ ವೈರಲ್
Ravindra Jadeja hits massive sixes: ರಾಜಸ್ಥಾನ ರಾಯಲ್ಸ್ ತಂಡವು ಐದು ಬಾರಿಯ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಎದುರಿಸುವ ಮೂಲಕ ತನ್ನ ಐಪಿಎಲ್ 2026 ಅಭಿಯಾನವನ್ನು ಆರಂಭಿಸಲಿದೆ. ಎರಡೂ ತಂಡಗಳು ಮಾರ್ಚ್ 30 ರಂದು ಗುವಾಹಟಿಯಲ್ಲಿ ಪರಸ್ಪರ ಮುಖಾಮುಖಿಯಾಗಲಿವೆ.
Ravindra Jadeja in training -
ಜೈಪುರ, ಮಾ.13: 19ನೇ ಆವೃತ್ತಿಯ ಐಪಿಎಲ್ ಟೂರ್ನಿಗೆ ದಿನಗಣನೆ ಶುರುವಾಗುತ್ತಿದ್ದಂತೆ ಎಲ್ಲ ಫ್ರಾಂಚೈಸಿಗಳು ಪಂದ್ಯಾವಳಿಗೆ ಬರದ ಸಿದ್ಧತೆ ನಡೆಸುತ್ತಿದೆ. ಚೆನ್ನೈ ಸೂಪರ್ ಕಿಂಗ್ಸ್ ತಂಡದಿಂದ ರಾಜಸ್ಥಾನ್ ರಾಯಲ್ಸ್(Rajasthan Royals) ಸೇರಿರುವ ಸ್ಟಾರ್ ಆಲ್‌ರೌಂಡರ್ ರವೀಂದ್ರ ಜಡೇಜಾ(Ravindra Jadeja) ತಮ್ಮ ಮೊದಲ ಅಭ್ಯಾಸದ ಅವಧಿಯಲ್ಲೇ ಸಿಕ್ಸರ್‌ಗಳ ಸುರಿಮಳೆಗೈದ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ.
ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿರುವ ಈ ಕ್ಲಿಪ್‌ನಲ್ಲಿ, ಜಡೇಜಾ ನೆಟ್ಸ್‌ನಲ್ಲಿ ಬೃಹತ್ ಸಿಕ್ಸರ್‌ಗಳನ್ನು ಬಾರಿಸುತ್ತಿರುವುದು ಸೆರೆಯಾಗಿದೆ. "ಆರ್‌ಆರ್ ಶಿಬಿರದೊಂದಿಗೆ ಮೊದಲ ದಿನ. ತುಂಬಾ ಚೆನ್ನಾಗಿ ಅನಿಸುತ್ತಿದೆ. ಬಹಳ ದಿನಗಳ ನಂತರ ಇಂದು ಕೆಲವು ಶಾಟ್‌ಗಳನ್ನು ಹೊಡೆದಿದ್ದೇನೆ, ಇನ್ನೂ ಹಲವು ಶಾಟ್‌ಗಳು ಬರಲಿವೆ" ಎಂದು ಜಡೇಜಾ ವೀಡಿಯೊದಲ್ಲಿ ಹೇಳಿದ್ದಾರೆ.
ತಂಡವು ರಿಯಾನ್ ಪರಾಗ್, ವೈಭವ್ ಸೂರ್ಯವಂಶಿ, ಧ್ರುವ್ ಜುರೆಲ್ ಮತ್ತು ಇನ್ನೂ ಅನೇಕ ತಾರೆಯರನ್ನು ಹೊಂದಿದ್ದು ಬಲಿಷ್ಠವಾಗಿ ಗೋಚರಿಸಿದೆ. ರಾಜಸ್ಥಾನ ರಾಯಲ್ಸ್ ತಂಡವು ಐದು ಬಾರಿಯ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಎದುರಿಸುವ ಮೂಲಕ ತನ್ನ ಐಪಿಎಲ್ 2026 ಅಭಿಯಾನವನ್ನು ಆರಂಭಿಸಲಿದೆ. ಎರಡೂ ತಂಡಗಳು ಮಾರ್ಚ್ 30 ರಂದು ಗುವಾಹಟಿಯಲ್ಲಿ ಪರಸ್ಪರ ಮುಖಾಮುಖಿಯಾಗಲಿವೆ.
ಪಂದ್ಯವು ಆಸಕ್ತಿದಾಯಕವಾಗಿರಬಹುದು, ಏಕೆಂದರೆ ರವೀಂದ್ರ ಜಡೇಜಾ ರಾಜಸ್ಥಾನ್ ರಾಯಲ್ಸ್‌ನಲ್ಲಿ ತಮ್ಮ ಹಿಂದಿನ ತಂಡವನ್ನು ಎದುರಿಸಲಿದ್ದಾರೆ, ಚೆನ್ನೈ ಸೂಪರ್ ಕಿಂಗ್ಸ್‌ನಲ್ಲಿ ಈ ಹಿಂದೆ ರಾಜಸ್ಥಾನ್ ಪರ ಆಡಿದ್ದ ಸಂಜು ಸ್ಯಾಮ್ಸನ್ ಇದ್ದಾರೆ. ಹೀಗಾಗಿ ಸಂಜು ಮತ್ತು ಜಡೇಜಾಗೆ ಇದು ಪ್ರತಿಷ್ಠಿತ ಪಂದ್ಯ ಎಂದರೂ ತಪ್ಪಾಗಲಾರದು.
ರಾಜಸ್ಥಾನ್ ತಂಡ
ಯಶಸ್ವಿ ಜೈಸ್ವಾಲ್, ಶಿಮ್ರೋನ್ ಹೆಟ್ಮೆಯರ್, ಶುಭಂ ದುಬೆ, ವೈಭವ್ ಸೂರ್ಯವಂಶಿ, ಧ್ರುವ್ ಜುರೆಲ್, ಲುವಾನ್-ಡ್ರೆ ಪ್ರಿಟೋರಿಯಸ್, ಡೊನೊವನ್ ಫೆರೇರಾ, ರಿಯಾನ್ ಪರಾಗ್ (ನಾಯಕ), ರವೀಂದ್ರ ಜಡೇಜಾ, ಸ್ಯಾಮ್ ಕರ್ರಾನ್, ಜೋಫ್ರಾ ಆರ್ಚರ್, ರವಿ ಬಿಷ್ಣೋಯ್, ಸಂದೀಪ್ ಶರ್ಮಾ, ತುಷಾರ್ ದೇಶಪಾಂಡೆ, ಕ್ವೆನಾ ಮಫಕಾ, ನಾಂದ್ರೆ ಬರ್ಗರ್.
ಪಾಕ್ ಆಟಗಾರನ ಖರೀದಿ; ಐಪಿಎಲ್ ಆರಂಭಕ್ಕೂ ಮುನ್ನ ಸನ್‌ರೈಸರ್ಸ್ ತಂಡಕ್ಕೆ ಬಾಯ್ಕಾಟ್ ಬಿಸಿ!
ರಾಜಸ್ಥಾನ್ ತಂಡ ವೇಳಾಪಟ್ಟಿ
ಮಾರ್ಚ್ 30; ರಾಜಸ್ಥಾನ್ vs ಚೆನ್ನೈ ಸೂಪರ್ ಕಿಂಗ್ಸ್, ಗುವಾಹಟಿ
ಏಪ್ರಿಲ್ 4; ರಾಜಸ್ಥಾನ್ vs ಗುಜರಾತ್ ಟೈಟಾನ್ಸ್, ಅಹಮದಾಬಾದ್
ಏಪ್ರಿಲ್ 7; ರಾಜಸ್ಥಾನ್ vs ಮುಂಬೈ ಇಂಡಿಯನ್ಸ್, ಗುವಾಹಟಿ
ಏಪ್ರಿಲ್ 10; ರಾಜಸ್ಥಾನ್ vs ರಾಯಲ್ ಚಾಲೆಂಜರ್ಸ್ ಬೆಂಗಳೂರು, ಗುವಾಹಟಿ