ICC ವರ್ಷದ ಏಕದಿನ ತಂಡ ಪ್ರಕಟ; ಭಾರತೀಯರಿಗಿಲ್ಲ ಸ್ಥಾನ
ಐಸಿಸಿ ಏಕದಿನ ಪಂದ್ಯದಲ್ಲಿ(ICC Men's ODI Team of the Year 2024) ಪಾಕಿಸ್ತಾನದ ಶಾಹೀನ್ ಶಾ ಅಫ್ರೀದಿ,ಹ್ಯಾರಿಸ್ ರೌಫ್ ಮತ್ತು ಸೈಮ್ ಅಯೂಬ್ ಕಾಣಿಸಿಕೊಂಡಿದ್ದಾರೆ.
ಮುಂಬೈ: ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿಯು (ICC) ಶುಕ್ರವಾರ 2024ರ ವರ್ಷದ ಏಕದಿನ(ICC Men's ODI Team) ತಂಡವನ್ನು ಪ್ರಕಟಿಸಿದೆ. ಅಚ್ಚರಿ ಎಂದರೆ ಭಾರತ ತಂಡದ ಏಕೈಕ ಆಟಗಾರನ್ನೂ ಈ ತಂಡದಲ್ಲಿ ಸ್ಥಾನ ಪಡೆದಿಲ್ಲ. ಶ್ರೀಲಂಕಾದ ಚರಿತ ಅಸಲಂಕಾ(Charith Asalanka) ನಾಯಕನಾಗಿದ್ದಾರೆ. ಪಾಕಿಸ್ತಾನದ ಮೂರು ಮಂದಿ ತಂಡದಲ್ಲಿದ್ದಾರೆ.
ಭಾರತ ಮಾತ್ರವಲ್ಲದೆ, ವಿಶ್ವದ ಬಲಿಷ್ಠ ತಂಡಗಳಾದ ಆಸ್ಟ್ರೇಲಿಯಾ, ಇಂಗ್ಲೆಂಡ್, ನ್ಯೂಜಿಲ್ಯಾಂಡ್ ಮತ್ತು ದಕ್ಷಿಣ ಆಫ್ರಿಕಾದ ಆಟಗಾರರು ಕೂಡ ಸ್ಥಾನ ಪಡೆಯುವಲ್ಲಿ ವಿಫಲರಾಗಿದ್ದಾರೆ. 2023ರ ವರ್ಷದ ಏಕದಿನ ತಂಡಕ್ಕೆ ರೋಹಿತ್ ಶರ್ಮಾ ನಾಯಕರಾಗಿದ್ದರು. ಒಟ್ಟು ಆರು ಮಂದಿ ಭಾರತೀಯರಿದ್ದರು. ಈ ಬಾರಿ ಒಬ್ಬರೂ ಕೂಡ ಕಾಣಿಸಿಕೊಂಡಿಲ್ಲ.
ಕಳೆದ ವರ್ಷ ಭಾರತ ಕೇವಲ ಮೂರು ಏಕದಿನ ಪಂದ್ಯಗಳನ್ನು ಮಾತ್ರ ಆಡಿತ್ತು. ಒಂದು ಪಂದ್ಯ ಟೈ ಮತ್ತು ಉಳಿದ ಎರಡು ಪಂದ್ಯಗಳಲ್ಲಿ ಸೋಲು ಕಂಡಿತ್ತು. ಹೀಗಾಗಿ ಭಾರತೀಯ ಆಟಗಾರರು ಸ್ಥಾನ ಪಡೆಯುವಲ್ಲಿ ವಿಫಲರಾದರು. ಭಾರತ ಕೊನೆಯ ಬಾರಿಗೆ ಏಕದಿನ ಪಂದ್ಯ ಜಯಿಸಿದ್ದು, 2023ರ ವಿಶ್ವಕಪ್ ಸೆಮಿಫೈನಲ್ ಪಂದ್ಯದಲ್ಲಿ.
ಇದನ್ನೂ ಓದಿ ICC Test Rankings: ಅಗ್ರ ಸ್ಥಾನ ಕಾಯ್ದುಕೊಂಡ ಬುಮ್ರಾ
ಐಸಿಸಿ ಏಕದಿನ ಪಂದ್ಯದಲ್ಲಿ ಪಾಕಿಸ್ತಾನದ ಶಾಹೀನ್ ಶಾ ಅಫ್ರೀದಿ,ಹ್ಯಾರಿಸ್ ರೌಫ್ ಮತ್ತು ಸೈಮ್ ಅಯೂಬ್ ಕಾಣಿಸಿಕೊಂಡಿದ್ದಾರೆ. ಶ್ರೀಲಂಕಾದ ಗರಿಷ್ಠ ನಾಲ್ಕು ಮಂದಿ ಸ್ಥಾನ ಪಡೆದಿದ್ದಾರೆ. ಉಳಿದಂತೆ ಅಫಘಾನಿಸ್ತಾನದ ಇಬ್ಬರು,
ಐಸಿಸಿ ಏಕದಿನ ತಂಡ
ಸೈಮ್ ಅಯೂಬ್ (ಪಾಕಿಸ್ತಾನ), ರಹಮಾನುಲ್ಲಾ ಗುರ್ಬಾಜ್ (ಅಫ್ಘಾನಿಸ್ತಾನ), ಪಾತುಮ್ ನಿಸ್ಸಾಂಕ (ಶ್ರೀಲಂಕಾ), ಕುಸಲ್ ಮೆಂಡಿಸ್ (ವೀ.ಕಿ) (ಶ್ರೀಲಂಕಾ), ಚರಿತ್ ಅಸಲಂಕಾ (ನಾಯಕ) (ಶ್ರೀಲಂಕಾ), ಶೆರ್ಫೇನ್ ರುದರ್‌ಫೋರ್ಡ್ (ವೆಸ್ಟ್ ಇಂಡೀಸ್), ಅಜ್ಮತುಲ್ಲಾ ಒಮರ್ಜಾಯ್ (ಅಫ್ಘಾನಿಸ್ತಾನ ), ವನಿಂದು ಹಸರಂಗಾ (ಶ್ರೀಲಂಕಾ), ಶಾಹೀನ್ ಶಾ ಅಫ್ರಿದಿ (ಪಾಕಿಸ್ತಾನ), ಹಾರಿಸ್ ರೌಫ್ (ಪಾಕಿಸ್ತಾನ), ಎಎಮ್ ಗಜನ್ಫರ್ (ಅಫ್ಘಾನಿಸ್ತಾನ).