ICC Test Rankings: ಅಗ್ರ ಸ್ಥಾನ ಕಾಯ್ದುಕೊಂಡ ಬುಮ್ರಾ
ICC Test Rankings: ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಅಮೋಘ ಬೌಲಿಂಗ್ ಪ್ರದರ್ಶನ ತೋರಿದ್ದ ಪಾಕಿಸ್ತಾನದ ಸ್ಪಿನ್ನರ್ ನೊಮಾನ್ ಅಲಿ ತನ್ನ ಜೀವನಶ್ರೇಷ್ಠ 9ನೇ ಸ್ಥಾನವನ್ನು ಪಡೆದಿದ್ದಾರೆ.
ದುಬೈ: ಈ ವಾರದ ಐಸಿಸಿ ನೂತನ ಟೆಸ್ಟ್(ICC Test Rankings) ಬೌಲಿಂಗ್ ಶ್ರೇಯಾಂಕದಲ್ಲಿಯೂ ಟೀಮ್ ಇಂಡಿಯಾದ ಸ್ಟಾರ್ ವೇಗಿ ಜಸ್‌ಪ್ರೀತ್ ಬುಮ್ರಾ(Jasprit Bumrah) ಅಗ್ರಸ್ಥಾನ ಕಾಯ್ದುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಆದರೆ ಬ್ಯಾಟಿಂಗ್ ಶ್ರೇಯಾಂಕದಲ್ಲಿ ರಿಷಭ್ ಪಂತ್ ಒಂದು ಸ್ಥಾನ ಕುಸಿತ ಕಂಡು 10ನೇ ಸ್ಥಾನಕ್ಕೆ (739) ತಲುಪಿದ್ದಾರೆ. ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಅಮೋಘ ಬೌಲಿಂಗ್ ಪ್ರದರ್ಶನ ತೋರಿದ್ದ ಪಾಕಿಸ್ತಾನದ ಸ್ಪಿನ್ನರ್ ನೊಮಾನ್ ಅಲಿ ತನ್ನ ಜೀವನಶ್ರೇಷ್ಠ 9ನೇ ಸ್ಥಾನವನ್ನು ಪಡೆದಿದ್ದಾರೆ.
ಬ್ಯಾಟಿಂಗ್ ಶ್ರೇಯಾಂಕದಲ್ಲಿ ಪಾಕಿಸ್ತಾನದ ಬ್ಯಾಟರ್ ಸೌದ್ ಶಕೀಲ್ ಮೂರು ಸ್ಥಾನಗಳ ಪ್ರಗತಿಯೊಂದಿಗೆ 8ನೇ ಸ್ಥಾನ ಪಡೆದಿದ್ದಾರೆ. ಉಳಿದಂತೆ ಯಾವುದೇ ದೊಡ್ಡ ಬದಲಾವಣೆ ಸಂಭವಿಸಿಲ್ಲ. ಈ ಹಿಂದಿನಂತೆ ಇಂಗ್ಲೆಂಡ್ ಬ್ಯಾಟರ್‌ಗಳಾದ ಜೋ ರೂಟ್(895) ಮತ್ತು ಹ್ಯಾರಿ ಬ್ರೂಕ್(876) ಕ್ರಮವಾಗಿ ಮೊದಲ ಮತ್ತು ದ್ವಿತೀಯ ಸ್ಥಾನದಲ್ಲಿಯೇ ಮುಂದುವರಿದಿದ್ದಾರೆ. ನ್ಯೂಜಿಲ್ಯಾಂಡ್‌ನ ಕೇನ್ ವಿಲಿಯಮ್ಸನ್(867) ಮೂರನೇ ಮತ್ತು ಭಾರತದ ಎಡಗೈ ಬ್ಯಾಟರ್ ಯಶಸ್ವಿ ಜೈಸ್ವಾಲ್(847) ನಾಲ್ಕನೇ ಸ್ಥಾನದಲ್ಲಿ ಕಾಣಿಸಿಕೊಂಡಿದ್ದಾರೆ.
ಕಳೆದ ವಾರ ಪಾಳತಕ್ಕೆ ಕುಸಿದಿದ್ದ ಅನುಭವಿ ಬ್ಯಾಟರ್ ವಿರಾಟ್ ಕೊಹ್ಲಿ ಒಂದು ಸ್ಥಾನದ ಜಿಗಿತದೊಂದಿಗೆ 26ನೇ ಸ್ಥಾನ ಪಡೆದಿದ್ದಾರೆ. ಬುಮ್ರಾ ಹೊರತುಪಡಿಸಿ ಬೌಲಿಂಗ್ ಶ್ರೆಯಾಂಕದಲ್ಲಿ ಆಸ್ಟ್ರೇಲಿಯಾದ ನಾಯಕ ಪ್ಯಾಟ್ ಕಮಿನ್ಸ್ (841), ದಕ್ಷಿಣ ಆಫ್ರಿಕಾದ ಕಗಿಸೊ ರಬಾಡ (837) ಮತ್ತು ಆಸೀಸ್‌ನ ಜೋಶ್ ಹ್ಯಾಜಲ್‌ವುಡ್ ಕ್ರಮವಾಗಿ ಎರಡು, ಮೂರು ಮತ್ತು ನಾಲ್ಕನೇ ಸ್ಥಾನದಲ್ಲಿದ್ದಾರೆ. ರವೀಂದ್ರ ಜಡೇಜಾ ಒಂದು ಸ್ಥಾನ ಕುಸಿತ ಕಂಡು 10ನೇ ಸ್ಥಾನಕ್ಕೆ ತಲುಪಿದ್ದಾರೆ. ಆದರೆ ಆಲ್‌ರೌಂಡರ್‌ಗಳ ಪಟ್ಟಿಯಲ್ಲಿ 400 ರೇಟಿಂಗ್ ಅಂಕದೊಂದಿಗೆ ಅಗ್ರಸ್ಥಾನದಲ್ಲಿ ಕಾಣಿಸಿಕೊಂಡಿದ್ದಾರೆ.
ಅಗ್ರ-5 ಬ್ಯಾಟರ್‌ಗಳು
ಜೋ ರೂಟ್-895
ಹ್ಯಾರಿ ಬ್ರೂಕ್-876
ಕೇನ್ ವಿಲಿಯಮ್ಸನ್-867
ಯಶಸ್ವಿ ಜೈಸ್ವಾಲ್-847
ಟ್ರಾವಿಸ್ ಹೆಡ್-772
ಇದನ್ನೂ ಓದಿ Rohit Sharma: ಮಾಧ್ಯಮದವರ ಮೇಲೆ ಗರಂ ಆದ ಟೀಮ್ ಇಂಡಿಯಾ ನಾಯಕ ರೋಹಿತ್
ಟಾಪ್-5 ಬೌಲರ್
ಜಸ್‌ಪ್ರೀತ್ ಬುಮ್ರಾ-908
ಪ್ಯಾಟ್ ಕಮಿನ್ಸ್-841
ಕಗಿಸೊ ರಬಾಡ-837
ಜೋಶ್ ಹ್ಯಾಜಲ್‌ವುಡ್-835
ಮಾರ್ಕೊ ಜಾನ್ಸನ್-785