IPL 2026 ಟೂರ್ನಿಯಿಂದ ಸ್ಯಾಮ್ ಕರನ್ ಔಟ್, ರಾಜಸ್ಥಾನ್ ರಾಯಲ್ಸ್‌ಗೆ ಹಿನ್ನಡೆ!
Sam Curran Injury: ಐಪಿಎಲ್ 2026 ಆರಂಭಕ್ಕೂ ಮುನ್ನ ರಾಜಸ್ಥಾನ ರಾಯಲ್ಸ್ ತಂಡಕ್ಕೆ ದೊಡ್ಡ ಹೊಡೆತ ಬಿದ್ದಿದೆ. ರಾಜಸ್ಥಾನದ ಸ್ಟಾರ್ ಆಲ್‌ರೌಂಡರ್ ಸ್ಯಾಮ್ ಕರನ್ ಅವರು ಗಾಯದಿಂದಾದಿ ಟೂರ್ನಿಯಿಂದ ಹೊರಗುಳಿದಿದ್ದಾರೆ. ಮಾರ್ಚ್ 28 ರಂದು 19ನೇ ಆವೃತ್ತಿಯ ಐಪಿಎಲ್ ಟೂರ್ನಿ ಆರಂಭವಾಗಲಿದೆ.
ಸ್ಯಾಮ್ ಕರನ್ ಐಪಿಎಲ್ ಟೂರ್ನಿಯಿಂದ ಔಟ್. -
ನವದೆಹಲಿ: ಐಪಿಎಲ್ ಟೂರ್ನಿಯ ಆರಂಭಕ್ಕೂ ಮುನ್ನ ರಾಜಸ್ಥಾನ್ ರಾಯಲ್ಸ್ (Rajasthan Royals) ತಂಡಕ್ಕೆ ದೊಡ್ಡ ಹೊಡೆತ ಬಿದ್ದಿದೆ. ಇಂಗ್ಲೆಂಡ್‌ನ ಸ್ಟಾರ್ ಆಲ್‌ರೌಂಡರ್ ಸ್ಯಾಮ್ ಕರನ್ (Sam Curran) ಗಾಯದ ಕಾರಣದಿಂದಾಗಿ 2026ರ ಐಪಿಎಲ್ (IPL 2026) ಟೂರ್ನಿಯಿಂದ ಹೊರ ಬಿದ್ದಿದ್ದಾರೆ. ಇಎಸ್‌ಪಿಎನ್ ಕ್ರಿಕ್‌ಇನ್ಫೊ ವರದಿಯ ಪ್ರಕಾರ, ಕರನ್ ತೊಡೆಸಂದು ಗಾಯದ ಸಮಸ್ಯೆಯಿಂದ ಬಳಲುತ್ತಿದ್ದಾರೆ, ಇದರ ಪರಿಣಾಮವಾಗಿ ಅವರು ಗುಣಮುಖರಾಗಲು ದೀರ್ಘಾವಧಿ ಸಮಯವನ್ನು ತೆಗೆದುಕೊಳ್ಳಬಹುದು. ಚೆನ್ನೈ ಸೂಪರ್ ಕಿಂಗ್ಸ್ ಜೊತೆಗಿನ ಟ್ರೇಡ್ ಡೀಲ್ ಮೂಲಕ ಸ್ಯಾಮ್ ಕರನ್ ಅವರನ್ನು ರಾಜಸ್ಥಾನ್ ರಾಯಲ್ಸ್ ಸ್ವಾಧೀನಪಡಿಸಿಕೊಂಡಿತು. ಈ ವ್ಯವಹಾರದಲ್ಲಿ ಸಂಜು ಸ್ಯಾಮ್ಸನ್ ಮತ್ತು ರವೀಂದ್ರ ಜಡೇಜಾ ಅವರಂತಹ ಪ್ರಮುಖ ಹೆಸರುಗಳು ಸಹ ಸೇರಿವೆ.
ಸ್ಯಾಮ್ ಕರನ್ 2026ರ ಮಾರ್ಚ್ 6 ರಂದು ಭಾರತ ವಿರುದ್ಧದ ಟಿ20 ವಿಶ್ವಕಪ್ ಸೆಮಿಫೈನಲ್ ಪಂದ್ಯದಲ್ಲಿ ತಮ್ಮ ಕೊನೆಯ ಪಂದ್ಯವನ್ನು ಆಡಿದ್ದರು. ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದಿದ್ದ ಆ ಪಂದ್ಯದಲ್ಲ ಕರನ್ ಸಾಕಷ್ಟು ದುಬಾರಿಯಾಗಿದ್ದರು. ಅವರು ತಮ್ಮ ನಾಲ್ಕು ಓವರ್‌ಗಳಲ್ಲಿ 53 ರನ್‌ಗಳನ್ನು ಬಿಟ್ಟುಕೊಟ್ಟಿದ್ದರು ಮತ್ತು ಬ್ಯಾಟಿಂಗ್‌ನಲ್ಲಿ ಕೇವಲ 18 ರನ್‌ಗಳನ್ನು ಗಳಿಸಿದ್ದರು. ರಾಜಸ್ಥಾನ ರಾಯಲ್ಸ್ ತಂಡಕ್ಕೆ ಅವರ ಅನುಪಸ್ಥಿತಿ ಕಾಡಲಿದೆ. ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡರಲ್ಲೂ ಅವರು ಮ್ಯಾಚ್ ವಿನ್ನರ್ ಆಗಿದ್ದು, ಇದು ತಂಡಕ್ಕೆ ಡಬಲ್ ಶಾಕ್ ನೀಡಲಿದೆ.
IPL 2026: ನೇಥನ್ ಎಲ್ಲಿಸ್ ಔಟ್, ಟೂರ್ನಿಯ ಆರಂಭಕ್ಕೂ ಮುನ್ನ ಚೆನ್ನೈ ಸೂಪರ್ ಕಿಂಗ್ಸ್‌ಗೆ ಶಾಕ್!
ಡೊನೋವಾನ್ ಫೆರೆರಾ ಸೇರ್ಪಡೆ ಸಾಧ್ಯತೆ
ಸ್ಯಾಮ್ ಕರನ್ ಅನುಪಸ್ಥಿತಿಯಲ್ಲಿ, ರಾಜಸ್ಥಾನ್ ರಾಯಲ್ಸ್ ತಂಡವು ಇದೀಗ ದಕ್ಷಿಣ ಆಫ್ರಿಕಾದ ಡೊನೊವನ್ ಫೆರೇರಾ ಅವರ ಮೇಲೆ ನಂಬಿಕೆ ಇಡಬಹುದು. ಫೆರೇರಾ ಕೂಡ ಟ್ರೇಡ್ ಡೀಲ್ ಮೂಲಕ ರಾಯಲ್ಸ್ ತಂಡವನ್ನು ಸೇರಿಕೊಂಡಿದ್ದರು ಮತ್ತು ಇದೀಗ ಮಧ್ಯಮ ಕ್ರಮಾಂಕದಲ್ಲಿ ಫಿನಿಷರ್ ಪಾತ್ರವನ್ನು ನಿರ್ವಹಿಸಬಹುದು. ಫ್ರಾಂಚೈಸಿ ಇನ್ನೂ ಇತರ ವಿದೇಶಿ ಆಟಗಾರರನ್ನು ಕರನ್ ಬದಲಿಗೆ ಸಂಭಾವ್ಯ ಆಟಗಾರರಾಗಿ ಪರಿಗಣಿಸುತ್ತಿದ್ದರೂ, ಬದಲಿ ಆಟಗಾರರ ಕುರಿತು ಅಧಿಕೃತ ಘೋಷಣೆ ಇನ್ನೂ ಮಾಡಲಾಗಿಲ್ಲ.
IPL 2026: ಈ ಸಲವೂ ಆರ್‌ಸಿಬಿಗೆ ಕಪ್ ಗೆದ್ದುಕೊಡಬಲ್ಲ ಬಲಿಷ್ಠ ಪ್ಲೇಯಿಂಗ್ 11 ಹೀಗಿದೆ!
ನೇಥನ್ ಎಲ್ಲಿಸ್‌ಗೆ ಗಾಯ
ಮತ್ತೊಂದೆಡೆ, ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೂ ಕೆಟ್ಟ ಸುದ್ದಿ ಹೊರಬಿದ್ದಿದೆ. ಆಸ್ಟ್ರೇಲಿಯಾದ ವೇಗದ ಬೌಲರ್ ನೇಥನ್ ಎಲ್ಲಿಸ್ ಮಂಡಿರಜ್ಜು ಗಾಯದಿಂದಾಗಿ 2026ರ ಐಪಿಎಲ್ ಟೂರ್ನಿಯಿಂದ ಹೊರಗುಳಿದಿದ್ದಾರೆ. ಸಿಎಸ್‌ಕೆ ಸಿಇಒ ಕೆಎಸ್ ವಿಶ್ವನಾಥನ್ ಗುರುವಾರ (ಮಾರ್ಚ್ 19) ಸಂಜೆ ಈ ಸುದ್ದಿಯನ್ನು ದೃಢಪಡಿಸಿದರು. ಐಪಿಎಲ್ ಅಂಕಿಅಂಶಗಳ ಬಗ್ಗೆ ಹೇಳುವುದಾದರೆ, ಸ್ಯಾಮ್ ಕರನ್ ಇದುವರೆಗೆ 64 ಪಂದ್ಯಗಳಲ್ಲಿ 997 ರನ್ ಗಳಿಸಿದ್ದಾರೆ ಮತ್ತು 54 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಅವರು ಈ ಹಿಂದೆ ಪಂಜಾಬ್ ಕಿಂಗ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್‌ನಂತಹ ತಂಡಗಳ ಭಾಗವಾಗಿದ್ದಾರೆ.