ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Chikkaballapur News: 3ನೇ ಬಾರಿ ಸರ್ವೆ ಮಾಡಲು ಫೀಲ್ಡಿಗೆ ಇಳಿದ ಅಧಿಕಾರಿಗಳು

ಇತ್ತೀಚೆಗೆ ಭೂ ಮಾಪನ ಇಲಾಖೆ ಸರ್ವೇಯರ್ ಖಾದರ್ ಸಾಬ್,ಗ್ರಾಮ ಆಡಳಿತ ಅಧಿಕಾರಿ ಸುಪ್ರಿಯ,ಗ್ರಾಮ ಸಹಾಯಕರಾದ ನಾರಾಯಣಸ್ವಾಮಿ, ಸರ್ವೆ ಕಾರ್ಯ ನಡೆಸಿ ಓಣಿ ಗುರುತಿಸಿ ಜೆಸಿಬಿ ಮುಖಾಂತರ ಕೆಲ ದೂರ ಒತ್ತುವರಿ ತೆರವುಗೊಳಿಸಿ ವಾಪಸ್ ಆಗಿದ್ದರು,

ಚಿಂತಾಮಣಿ: ಓಣಿ ಗುರುತಿಸಿ ತೆರವು ಗೊಳಿಸಿಕೊಡಲು ಚಿಂತಾಮಣಿ ತಾಲ್ಲೂಕಿನ ಅಂಬಾ ಜಿದುರ್ಗ ಹೋಬಳಿ ಉಪ್ಪರಪೇಟೆ ಗ್ರಾಮ ಪಂಚಾಯತಿ ವ್ಯಾಪ್ತಿಯ ರಾಯಪಲ್ಲಿ ಗ್ರಾಮದ ಕೆಲ ವ್ಯಕ್ತಿಗಳು ತಾಲ್ಲೂಕು ದಂಡಾಧಿಕಾರಿಗಳಿಗೆ ಅರ್ಜಿ ಸಲ್ಲಿಸಿದ್ದರು. ಯಾಕಂದರೆ ಸುಮಾ ರು ವರ್ಷಗಳಿಂದ ಜಮೀನುಗಳ ಮುಖಾಂತರ ಹಾದು ಹೋಗುವ ಒಣಿ ಮುಚ್ಚಿ ಹೋಗಿದ್ದು ಹಿಂದಿನ ಕಾಲದಲ್ಲಿ ಆ ಓಣಿಯಿಂದ ಜಾನುವಾರುಗಳು ಹೋಗು ತ್ತಿದ್ದವು. ಅದಲ್ಲದೆ ಒಣಿಯಲ್ಲಿ ಬೆಟ್ಟದಿಂದ ಮಳೆ ನೀರು ಹರಿದು ಹೋಗುತ್ತಿದ್ದು ಸದರಿ ನೀರಿನಿಂದ ರೈತರಿಗೆ ಉಪಯೋಗವಾಗುತ್ತಿತ್ತು.

ಇದನ್ನೂ ಓದಿ: Chikkaballapur News: ಸರ್ಕಾರಿ ಪ್ರಥಮದರ್ಜೆ ಕಾಲೇಜಿನಲ್ಲಿ "ವಿಶ್ವ ಗ್ರಾಹಕರ ಹಕ್ಕುಗಳ ದಿನಾಚರಣೆ" ಉದ್ಘಾಟಿಸಿ ಹೇಳಿಕೆ

ಅದರಂತೆ ಇತ್ತೀಚೆಗೆ ಭೂ ಮಾಪನ ಇಲಾಖೆ ಸರ್ವೇಯರ್ ಖಾದರ್ ಸಾಬ್,ಗ್ರಾಮ ಆಡಳಿತ ಅಧಿಕಾರಿ ಸುಪ್ರಿಯ,ಗ್ರಾಮ ಸಹಾಯಕರಾದ ನಾರಾಯಣಸ್ವಾಮಿ, ಸರ್ವೆ ಕಾರ್ಯ ನಡೆಸಿ ಓಣಿ ಗುರುತಿಸಿ ಜೆಸಿಬಿ ಮುಖಾಂತರ ಕೆಲ ದೂರ ಒತ್ತುವರಿ ತೆರವುಗೊಳಿಸಿ ವಾಪಸ್ ಆಗಿದ್ದರು,

ಮತ್ತೆ ಪುನಃ ಎರಡನೇ ಬಾರಿಗೂ ಒತ್ತುವರಿಯ ತೆರವುಗೊಳಿಸಲು ಮುಂದಾದರೂ ರೈತರು ಮಾತ್ರ ತೆರವು   ಗೊಳಿಸಲು ಅವಕಾಶ ಕೊಡದೆ ಇರುವ ಕಾರಣಕ್ಕೆ ಇಂದು ಮೂರನೇ ಬಾರಿಗೆ ಕಂದಾಯ ಹಾಗೂ ಭೂಮಾಪನ ಇಲಾಖೆಯ ಸರ್ವೇಯರ್ ಸರ್ವೆ ಕಾರ್ಯ ನಡೆಸಿ ಓಣಿ ಎಲ್ಲಿಂದ ಎಲ್ಲಿಯವರೆಗೂ ಬರುತ್ತದೆ ಎಂದು ಗುರುತಿಸಿ ಕೊಟ್ಟು ಸರ್ವೆ ಕಾರ್ಯವನ್ನು ಮುಕ್ತಾಯಗೊಳಿಸಿದ್ದಾರೆ.