Chikkaballapur News: ಸರ್ಕಾರಿ ಪ್ರಥಮದರ್ಜೆ ಕಾಲೇಜಿನಲ್ಲಿ "ವಿಶ್ವ ಗ್ರಾಹಕರ ಹಕ್ಕುಗಳ ದಿನಾಚರಣೆ" ಉದ್ಘಾಟಿಸಿ ಹೇಳಿಕೆ
ಗ್ರಾಹಕ ಯಾವುದೇ ವಸ್ತು,ಉತ್ಪನ್ನಗಳ ಖರೀದಿ ಮಾಡುವಾಗ, ಅಥವಾ ಸೇವೆ ಪಡೆದಾಗ ಅದರ ಗುಣಮಟ್ಟ ಸೇರಿದಂತೆ ಯಾವುದೇ ವಿಚಾರದಲ್ಲಿ ಪ್ರಶ್ನಿಸುವ ಹಕ್ಕು ಅವರಿಗಿದೆ.ವಸ್ತು ಅಥವಾ ಸೇವೆಯಲ್ಲಿ ಕೊರತೆ,ದೋಷ ಅಥವಾ ಲೋಪಗಳು ಇರಬಾರದು. ಒಂದು ವೇಳೆ ಗ್ರಾಹಕ ವಂಚ ನೆಗೆ ಒಳಗಾದರೆ ತನಗೆ ಕಾನೂನಾತ್ಮಕವಾಗಿ ಲಭ್ಯವಿರುವ ಅವಕಾಶಗಳನ್ನು ಬಳಸಿಕೊಂಡು ಸೂಕ್ತ ನ್ಯಾಯ ಪಡೆಯಬಹುದು ಎಂದರು

ಮಾರುಕಟ್ಟೆಯಲ್ಲಿ ವ್ಯಾಪಾರಕ್ಕೆ ಬರುವ ಗ್ರಾಹಕನೇ ಸಾರ್ವಭೌಮ ಎಂಬುದನ್ನು ಅರಿತು ವರ್ತಕರು ನಡೆದುಕೊಳ್ಳಬೇಕು ಎಂದು ನ್ಯಾಯಾಧೀಶೆ ಭವಾನಿ ತಿಳಿಸಿದರು.

ಚಿಕ್ಕಬಳ್ಳಾಪುರ: ಯಾವುದೇ ಗ್ರಾಹಕ ಯಾವುದೇ ಉತ್ಪನ್ನ,ವಸ್ತುಗಳನ್ನು ಖರೀದಿಸಿದಾಗ ಹಾಗೂ ಸೇವೆಗಳನ್ನು ಪಡೆದಾಗ ಅವುಗಳಲ್ಲಿ ಲೋಪ,ದೋಷ ಮತ್ತು ಕೊರತೆಗಳ ಬಗ್ಗೆ ಮಾಹಿತಿ ಪಡೆಯುವುದು ಗ್ರಾಹಕನ ಸಾರ್ವಭೌಮ ಹಕ್ಕಾಗಿದೆ. ಯಾರೂ ಕೂಡ ಇದನ್ನು ನಿರಾಕರಿಸುವಂತಿಲ್ಲ. ದುರ್ವರ್ತನೆ ಮೋಸ ಕಂಡು ಬಂದಲ್ಲಿ ಜಿಲ್ಲಾ ಗ್ರಾಹಕರ ಹಕ್ಕುಗಳ ನ್ಯಾಯಾಲಯದ ಮೂಲಕ ಸೂಕ್ತ ನ್ಯಾಯ ಪಡೆಯಬಹುದು ಎಂದು ಪ್ರಧಾನ ಜಿಲ್ಲಾ ಹಾಗೂ ಸತ್ರ ನ್ಯಾಯಾಧೀಶೆ ನೇರಳೆ ವೀರಭದ್ರಯ್ಯ ಭವಾನಿ ತಿಳಿಸಿದರು. ಚಿಕ್ಕಬಳ್ಳಾಪುರ ನಗರದ ಸರ್ಕಾರಿ ಪ್ರಥಮದರ್ಜೆ ಕಾಲೇಜಿನಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆಹಾರ ನಾಗರೀಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ, ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ,ಜಿಲ್ಲಾ ವಕೀಲರ ಸಂಘ ಹಾಗೂ ಜಿಲ್ಲಾ ಗ್ರಾಹಕರ ಮಾಹಿ ತಿ ಕೇಂದ್ರ ಹಾಗೂ ಕಾನೂನು ಮಾಪನಶಾಸ್ತ್ರ ಇಲಾಖೆ ಸಹಯೋಗದಲ್ಲಿ ಹಮ್ಮಿಕೊಂಡಿದ್ದ "ವಿಶ್ವ ಗ್ರಾಹಕರ ಹಕ್ಕುಗಳ ದಿನಾಚರಣೆ"ಯನ್ನು ಉದ್ಘಾಟಿಸಿ ಮಾತನಾಡಿದರು.
ಇದನ್ನೂ ಓದಿ: Chikkaballapur News: ಇಫ್ತಿಯಾರ್ ಕೂಟದಲ್ಲಿ ಭಾಗಿಯಾದ ಎಸ್ಪಿ ಕುಶಾಲ್ ಚೌಕ್ಸೆ: ಶಾಂತಿ ಕಾಪಾಡಲು ಮುಖಂಡರಲ್ಲಿ ಮನವಿ
ಗ್ರಾಹಕ ಯಾವುದೇ ವಸ್ತು,ಉತ್ಪನ್ನಗಳ ಖರೀದಿ ಮಾಡುವಾಗ, ಅಥವಾ ಸೇವೆ ಪಡೆದಾಗ ಅದರ ಗುಣಮಟ್ಟ ಸೇರಿದಂತೆ ಯಾವುದೇ ವಿಚಾರದಲ್ಲಿ ಪ್ರಶ್ನಿಸುವ ಹಕ್ಕು ಅವರಿಗಿದೆ.ವಸ್ತು ಅಥವಾ ಸೇವೆಯಲ್ಲಿ ಕೊರತೆ,ದೋಷ ಅಥವಾ ಲೋಪಗಳು ಇರಬಾರದು. ಒಂದು ವೇಳೆ ಗ್ರಾಹಕ ವಂಚನೆಗೆ ಒಳಗಾದರೆ ತನಗೆ ಕಾನೂನಾತ್ಮಕವಾಗಿ ಲಭ್ಯವಿರುವ ಅವಕಾಶಗಳನ್ನು ಬಳಸಿಕೊಂಡು ಸೂಕ್ತ ನ್ಯಾಯ ಪಡೆಯಬಹುದು ಎಂದರು.
ಗ್ರಾಹಕನಿಗೆ ಹಕ್ಕುಗಳನ್ನು ಸರ್ಕಾರಗಳು ಒದಗಿಸಿದ್ದು, ವಸ್ತು, ಉತ್ಪನ್ನ ಖರೀದಿಯ ಸಂದ ರ್ಭದಲ್ಲಿ ಸಂಬAಧಪಟ್ಟ ವ್ಯಾಪಾರಸ್ಥ ಅಥವಾ ಮಾರಾಟಗಾರನಿಂದ ಅಧಿಕೃತ ರಸೀದಿ ಯನ್ನು ಪಡೆದುಕೊಳ್ಳುವುದು ಕಡ್ಡಾಯವಾಗಿರುತ್ತದೆ. ಗ್ರಾಹಕನೇ ಸಾರ್ವಭೌಮನಾಗಿರುವ ವಿಷಯ, ಕಾನೂನು ರಕ್ಷಣೆಯ ವಿಷಯದ ಕುರಿತು ಅರಿವು ಕಡಿಮೆ ಇದೆ. ಈ ಬಗ್ಗೆ ಗ್ರಾಹಕ ರಲ್ಲಿ ವ್ಯಾಪಕ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಅಗತ್ಯ ಹೆಚ್ಚಾಗಿದೆ ಎಂದು ತಿಳಿಸಿದರು.
ಗ್ರಾಹಕರನ್ನು ಯಾವಾಗಲೂ ರಾಜ ಎಂದು ಕರೆಯಲಾಗುತ್ತದೆ. ಗ್ರಾಹಕರು ಯಾವುದೇ ಉತ್ಪನ್ನ ಅಥವಾ ಸೇವೆಯನ್ನು ಖರೀದಿಸುವ ಹಕ್ಕನ್ನು ಹೊಂದಿದ್ದಾರೆ. ಗ್ರಾಹಕರು ಖರೀದಿ ಯ ಹಕ್ಕುಗಳ ಬಗ್ಗೆ ತಿಳಿದುಕೊಳ್ಳುವುದರಿಂದ ಮಾರುಕಟ್ಟೆ ಅಥವಾ ಖರೀದಿ ಸ್ಥಳದಲ್ಲಿ ಉಂಟಾಗುವ ಅನ್ಯಾಯಗಳನ್ನು ತಪ್ಪಿಸಿಕೊಳ್ಳಬಹುದು ಎಂದು ತಿಳಿಸಿದರು.
ನಾವು ಸೇವಿಸುವ ಪೌಷ್ಟಿಕ ಆಹಾರದಲ್ಲಿ ಕೀಟ ನಾಶಕಗಳ ಬಳಕೆಯು ಹೆಚ್ಚುತ್ತಿರುವುದು ಒಂದು ಗಂಭೀರ ಸಮಸ್ಯೆಯಾಗಿದೆ. ಕೀಟ ನಾಶಕಗಳು ಆಹಾರ ಉತ್ಪಾದನೆಯಲ್ಲಿ ಕೀಟ ಗಳನ್ನು ನಿಯಂತ್ರಿಸಲು ಬಳಸಲಾಗುತ್ತದೆ, ಆದರೆ ಅವು ಮಾನವ ದೇಹವನ್ನು ಸೇರಿ ಆರೋ ಗ್ಯಕ್ಕೆ ಹಾನಿಕಾರಕ ಪರಿಣಾಮಗಳನ್ನು ಉಂಟುಮಾಡುತ್ತಿವೆ. ಹಲವು ವರ್ಷಗಳ ಹಿಂದೆ ವಾರ್ಷಿಕವಾಗಿ ಕೇವಲ ಒಂದು ಬೆಳೆಯನ್ನು ಮಾತ್ರ ಬೆಳೆಯುತ್ತಿದ್ದರು ಅದರೆ ಈಗ ವಾರ್ಷಿಕ 3 ಬೆಳೆಗಳನ್ನು ಬೆಳೆಯುತ್ತಿರುವುದರಿಂದ ಆಹಾರದಲ್ಲಿ ಗುಣಮಟ್ಟ ಹಾಗೂ ಪೌಷ್ಟಿಕತೆ ಕಡಿಮೆ ಯಾಗಿದೆ ಎಂದು ತಿಳಿಸಿದರು.
ಪ್ರತಿದಿನ ಒಂದಲ್ಲ ಒಂದು ಸರಕು, ಸೇವೆ, ಆಸ್ತಿಯನ್ನು ನಾವೆಲ್ಲರೂ ಖರೀದಿಸುತ್ತಿರುತ್ತೇವೆ. ಅದೇ ರೀತಿ ಒಮ್ಮೊಮ್ಮೆ ವ್ಯವಹಾರದಲ್ಲಿ ಮೋಸಕ್ಕೂ ಒಳಗಾಗುತ್ತಿದ್ದೇವೆ ಅಂತಹ ಮೋಸ ವನ್ನು ಸಹಿಸದೆ ಖಂಡಿಸುವ ಜೊತೆಗೆ ನ್ಯಾಯ ಪಡೆಯಬೇಕು. ಗ್ರಾಹಕರು ವೈದ್ಯಕೀಯ ನಿರ್ಲಕ್ಷ್ಯದಿಂದ ಹಾನಿಗೊಳಗಾದರೆ, ಅದು ಗ್ರಾಹಕರ ಆರೋಗ್ಯ ಮತ್ತು ಜೀವನದ ಮೇಲೆ ತೀವ್ರ ಪರಿಣಾಮಗಳನ್ನು ಹೊಂದಿರುತ್ತದೆ ಅಂತಹ ಘಟನೆಗಳು ಕಂಡುಬಂದಲ್ಲಿ ಪರಿಹಾರ ಪಡೆಯಲು ಹಕ್ಕನ್ನು ಹೊಂದಿದ್ದಾರೆ. ಇದರ ಬಗ್ಗೆ ಗ್ರಾಹಕರಿಗೆ ಅರಿವು ಮೂಡಿಸಬೇಕು. ಉತ್ತಮ ಗುಣಮಟ್ಟದ ಸೇವೆಯನ್ನು ಒದಗಿಸದ್ದಿದರೆ ಅದನ್ನು ಪ್ರಶ್ನೆಮಾಡಿ ನ್ಯಾಯ ಪಡೆ ಯುವ ಹಕ್ಕು ಗ್ರಾಹಕರಿಗಿದೆ. ಉತ್ಪಾದನಾ ದೋಷದ ಕಾರಣದಿಂದ ಗ್ರಾಹಕರು ಉತ್ಪಾ ದಕರ ವಿರುದ್ಧ ಕಾನೂನು ಕ್ರಮವನ್ನು ಕೈಗೊಳ್ಳಬಹುದು ಎಂದು ತಿಳಿಸಿದರು.
ಜಿಲ್ಲಾಧಿಕಾರಿ ಪಿ.ಎನ್. ರವೀಂದ್ರ ಮಾತನಾಡಿ ಗ್ರಾಹಕರು ವಾಣಿಜ್ಯ ವ್ಯಾಪಾರ ಮಳಿಗೆ ಗಳಲ್ಲಿ ವಸ್ತುಗಳನ್ನು ಖರೀದಿಸುವ ವೇಳೆ ವಸ್ತುಗಳ ಗುಣಮಟ್ಟ ಹಾಗೂ ಪ್ರಮಾಣ ಸೇರಿ ದಂತೆ ಆ ವಸ್ತುವಿನ ಬಳಕೆಯ ಕುರಿತಾಗಿ ಎಲ್ಲ ಮಾಹಿತಿ ತಿಳಿದುಕೊಳ್ಳಬೇಕು. ಯಾವುದೇ ವಸ್ತುವನ್ನು ಹಾಗೂ ಸೇವೆಯನ್ನು ಖರೀದಿಸುವಾಗ ಅವುಗಳ ಮಾರಾಟಗಾರರಿಂದ ಮಾಹಿತಿಯನ್ನು ಪಡೆಯುವ ಹಕ್ಕು ಗ್ರಾಹಕರಿಗೆ ಇರುತ್ತದೆ ಎಂದು ತಿಳಿಸಿದರು.
ಪ್ರತಿಯೊಬ್ಬರು ಒಂದು ಚಿಕ್ಕ ವ್ಯವಹಾರಕ್ಕೂ ಡಿಜಿಟಲ್ ಮೂಲಕವೇ ಹಣವನ್ನು ಪಾವತಿ ಮಾಡುತ್ತಿದ್ದಾರೆ. ಗ್ರಾಹಕರಿಗೆ ಹೆಚ್ಚಿನ ಮಟ್ಟದಲ್ಲಿ ವ್ಯವಹರಿಸಲು ಡಿಜಿಟಲ್ ಸುಲಭ ವಾಗಿದೆ. ಆನ್ ಲೈನ್ ರೂಪದಲ್ಲಾಗಲಿ, ಭೌತಿಕವಾಗಿ ಆಗಲಿ ಸರಕು, ಸೇವೆ ಹಾಗೂ ಆಸ್ತಿ ಗಳನ್ನು ವೈಯಕ್ತಿಕ ಉಪಯೋಗಕ್ಕೆ ಖರೀದಿಸುವಾಗ ಮೋಸ ಹೋಗದಿರಲು ಎಚ್ಚರಿಕೆ ವಹಿಸಬೇಕು ಪ್ರತಿ ವ್ಯವಹಾರಕ್ಕೆ ದಾಖಲೆಗಳನ್ನು, ರಶೀದಿಗಳನ್ನು ಪಡೆದು ಸಂಗ್ರಹಿಸಿಡುವ ಪ್ರವೃತ್ತಿ ಬೆಳೆಸಿಕೊಳ್ಳಬೇಕು. ಮಾರಾಟ ಮಾಡುವ ಗ್ರಾಹಕರಿಗೆ ಅಳತೆಯಲ್ಲಾಗಲಿ, ಪರಿಮಾ ಣಗಳಲ್ಲಿ ವ್ಯತ್ಯಾಸಗಳು ಆಗದ ರೀತಿಯಲ್ಲಿ ನ್ಯಾಯಬದ್ದವಾಗಿ ಒದಗಿಸಬೇಕು. ಕಷ್ಟಪಟ್ಟು ದುಡಿದ ಹಣವನ್ನು ವ್ಯರ್ಥ ಮಾಡಬಾರದು, ಹಣ ಕೊಟ್ಟು ಯಾವುದೇ ಸರಕು ಸಾಮಾಗ್ರಿ ಗಳ ಮಾರಾಟ ಹಾಗೂ ಖರೀದಿಯ ವೇಳೆ ಗ್ರಾಹಕರು ಯಾವುದೇ ವಂಚನೆಗೆ ಒಳಗಾಗ ಬಾರದು ಎಂದರೆ ನಾವು ನಮ್ಮ ಗ್ರಾಹಕ ಹಕ್ಕುಗಳ ಬಗ್ಗೆ ತಿಳಿದಿರುವುದು ಬಹಳ ಮುಖ್ಯ ವಾಗುತ್ತದೆ “ಸುಸ್ಥಿರ ಜೀವನ ಶೈಲಿಗೆ ಒಂದು ಸರಳ ಪರಿವರ್ತನೆ ”ಎಂಬ ಘೋಷ ವಾಕ್ಯ ದೊಂದಿಗೆ ವಿಶ್ವ ಗ್ರಾಹಕರ ಹಕ್ಕುಗಳ ದಿನವನ್ನು ಆಚರಿಸಲಾಗುತ್ತಿರುವುದು ಗ್ರಾಹಕರಿಗೆ ಅರಿವು ಮೂಡಿಸುವಲ್ಲಿ ಸಹಾಯಕಾರಿಯಾಗಿದೆ ಎಂದು ತಿಳಿಸಿದರು.
ಮಾಹಿತಿಯ ಕೊರತೆ, ಸಮಯದ ಅಭಾವ, ಅಥವಾ ನಿರ್ಲಕ್ಷತೆಯ ಕಾರಣದಿಂದ ಗ್ರಾಹಕರು ಮೋಸ ಹೋದರೂ ನ್ಯಾಯ ಪಡೆಯಲು ಪ್ರಯತ್ನಿಸದಿರುವುದು ಕೆಲವರಲ್ಲಿ ಕಂಡು ಬರುತ್ತಿದೆ, ಆ ಪ್ರವೃತ್ತಿ ಒಳ್ಳೆಯದಲ್ಲ. ಯಾವುದೇ ವ್ಯವಹಾರದಲ್ಲಿ ಮೋಸ ಹೋಗದಿರು ವಂತೆ ಎಚ್ಚರವಹಿಸಲು ಸಾರ್ವಜನಿಕರಲ್ಲಿ ಮನವಿ ಮಾಡಿದರು ಎಂದು ತಿಳಿಸಿದರು.
ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಅಧ್ಯಕ್ಷರಾದ ಎನ್. ಕುಮಾರ್ ಅವರು ಮಾತನಾಡಿ, ವಿಶ್ವ ಗ್ರಾಹಕರ ಹಕ್ಕುಗಳ ಈ ದಿನದ ಉದ್ದೇಶ ಗ್ರಾಹಕರಿಗೆ ಅವರ ಹಕ್ಕುಗಳ ಬಗ್ಗೆ ಶಿಕ್ಷಣ ಮತ್ತು ಗರಿಷ್ಠ ಪ್ರಯೋಜನಗಳನ್ನು ಪಡೆಯಲು ಸಹಾಯ ಮಾಡುವುದು ಹೇಗೆ ಎಂಬ ಗುರಿ ಹೊಂದಿದೆ. ವ್ಯಾಪಾರ ಪದ್ಧತಿಗಳಲ್ಲಿನ ಅನ್ಯಾಯದ ವಿರುದ್ಧ ಕ್ರಮ ತೆಗೆದು ಕೊಳ್ಳುವಂತೆ ಇದು ಗ್ರಾಹಕರಿಗೆ ಶಿಕ್ಷಣ ನೀಡುತ್ತದೆ. ಗ್ರಾಹಕರಿಗೆ ಯಾವುದೇ ಅನ್ಯಾಯವಾ ದಲ್ಲಿ ನೀವು ಗ್ರಾಹಕರ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಬಹುದು. ಈ ಮೂಲಕ ನಿಮಗಾದ ಅನ್ಯಾಯಕ್ಕೆ ನ್ಯಾಯ ಹಾಗೂ ಪರಿಹಾರ ಕೇಳಬಹುದು ಎಂದು ಜಿಲ್ಲಾಧಿಕಾರಿ ಗಳು ತಿಳಿಸಿದರು.
ಜಿಲ್ಲಾ ವಕೀಲ ಸಂಘದ ಅಧ್ಯಕ್ಷ ಕೆ.ವಿ ಅಭಿಲಾಷ್ ಗ್ರಾಹಕರ ಹಕ್ಕುಗಳು ಹಾಗೂ ಕಾನೂನು ಗಳ ಬಗ್ಗೆ ತಿಳಿಸಿಕೊಟ್ಟರು.
ಕಾರ್ಯಕ್ರಮದಲ್ಲಿ ಗ್ರಾಹಕರ ಜಾಗೃತಿಗಾಗಿ ಕರಪತ್ರಗಳು ಹಾಗೂ ಬಿತ್ತಿ ಪತ್ರಗಳನ್ನು ಗಣ್ಯರು ಬಿಡುಗಡೆ ಮಾಡಿದರು.
ಈ ಸಂದರ್ಭದಲ್ಲಿ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಬಿ.ಶಿಲ್ಪ, ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಜಂಟಿ ನಿರ್ದೇಶಕ ನಾಗರಾಜ್ ಕೆಳಗಿನಮನಿ, ಜಿಲ್ಲಾ ಗ್ರಾಹಕ ವ್ಯವಹಾರಗಳ ಪರಿಹಾರ ಆಯೋಗದ ಅಧ್ಯಕ್ಷ ಕುಮಾರ್, ಸದಸ್ಯ ಜನಾರ್ದನ್, ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ. ಮುನಿರಾಜು, ಜಿಲ್ಲಾ ವಕೀಲ ಸಂಘದ ಅಧ್ಯಕ್ಷ ಕೆ.ವಿ ಅಭಿಲಾಷ್, ವಿವಿಧ ಇಲಾಖೆಯ ಅಧಿಕಾರಿಗಳು ಇದ್ದರು.