ವಿದೇಶ ಧಾರ್ಮಿಕ ವಿಶ್ವವಾಣಿ ಕ್ಲಬ್‌ ಹೌಸ್‌ ರಾಜಕೀಯ ಸಂಪಾದಕೀಯ ಕ್ರೈಂ ಫ್ಯಾಷನ್‌ ಲೋಕ ಉದ್ಯೋಗ

ಫೆ.19ಕ್ಕೆ ಹುಳಿಯಾರು ಗೇಟ್ ಸಮೀಪದಿಂದ ಮಾಜಿ ಸಚಿವ ಜೆ.ಸಿ. ಮಾಧುಸ್ವಾಮಿ ಚಾಲನೆ

ಸಂತ ಸೇವಾಲಾಲ್ ಮಹಾರಾಜರ ತಾಲ್ಲೂಕು ಮಟ್ಟದ ಜಯಂತಿಯನ್ನು ಫೆ.22ರಂದು ನಗರದ ಕನ್ನಡ ಸಂಘದ ವೇದಿಕೆಯಲ್ಲಿ ಅದ್ದೂರಿಯಾಗಿ ಆಚರಿಸಲು ನಿರ್ಧರಿಸಲಾಗಿದೆ ಎಂದು ಶ್ರೀ ಸೇವಾಲಾಲ್ ಮರಿಯಮ್ಮ ದೆವಿ ತಾಂಡಾಭಿವೃದ್ದಿ ಟ್ರಸ್ಟ್ ಅಧ್ಯಕ್ಷ ಜಿ. ರಘುನಾಥ್ ತಿಳಿಸಿದರು

ಫೆ.22ಕ್ಕೆ ಸಂತ ಸೇವಾಲಾಲ್ ಜಯಂತಿ

Profile Ashok Nayak Feb 18, 2025 10:04 PM

ಚಿಕ್ಕನಾಯಕನಹಳ್ಳಿ: ಸಂತ ಸೇವಾಲಾಲ್ ಮಹಾರಾಜರ ತಾಲ್ಲೂಕು ಮಟ್ಟದ ಜಯಂತಿ ಯನ್ನು ಫೆ.22ರಂದು ನಗರದ ಕನ್ನಡ ಸಂಘದ ವೇದಿಕೆಯಲ್ಲಿ ಅದ್ದೂರಿಯಾಗಿ ಆಚರಿಸಲು ನಿರ್ಧರಿಸಲಾಗಿದೆ ಎಂದು ಶ್ರೀ ಸೇವಾಲಾಲ್ ಮರಿಯಮ್ಮ ದೆವಿ ತಾಂಡಾಭಿವೃದ್ದಿ ಟ್ರಸ್ಟ್ ಅಧ್ಯಕ್ಷ ಜಿ. ರಘುನಾಥ್ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಶ್ರೀ ಸೇವಾ ಲಾಲ್ ಮರಿಯಮ್ಮದೇವಿ ತಾಂಡಾ ಭಿವೃದ್ದಿ ಟ್ರಸ್ಟ್ ಹಾಗು ಸಂತ ಸೇವಾಲಾಲ್ ಜಯಂ ತೋತ್ಸವ ಸಮಿತಿ ವತಿಯಿಂದ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ. ಬೆಳಗ್ಗೆ 11ಕ್ಕೆ ಪ್ರಧಾನ ವೇದಿಕೆಯಲ್ಲಿ ನಡೆಯುವ ಜಯಂತಿ ಕಾರ್ಯಕ್ರಮವನ್ನು ಕೇಂದ್ರ ಸಚಿವ ವಿ.ಸೋಮಣ್ಣ ಉದ್ಘಾಟಿಸಲಿದ್ದು ಶಾಸಕ ಸಿ.ಬಿ.ಸುರೇಶಬಾಬು ಅಧ್ಯಕ್ಷತೆ ವಹಿಸಲಿದ್ದಾರೆ.

ಶ್ರೀ ಶಿವಪ್ರಕಾಶ್ ಮಹಾರಾಜ್ ಹಾಗು ಶ್ರೀ ಧೇನ ಭಗತ್ ಗುರುಗಳ ದಿವ್ಯ ಸಾನಿಧ್ಯ ದಲ್ಲಿ ತಾಂಡಾ ಅಭಿವೃದ್ದಿ ನಿಗಮದ ಅಧ್ಯಕ್ಷ ಜಯದೇವ ನಾಯ್ಕ ಸೇವಾಲಾಲ್ ಭಾವಚಿತ್ರ ಅನಾವರಣ ಮಾಡಲಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ಡಾ. ಜಿ.ಪರಮೇಶ್ವರ್ ಸಂತರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸುವರು. ಸಹಕಾರ ಸಚಿವ ಕೆ.ಎನ್.ರಾಜಣ್ಣ, ಶಾಸಕ ಟಿ.ಬಿ. ಜಯಚಂದ್ರ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ಸಮಾಜ ಸೇವಕರು, ಕೃಷಿಕರು, ನೌಕರರು ಮತ್ತು ವಿದ್ಯಾರ್ಥಿಗಳನ್ನು ಸನ್ಮಾನಿಸಲಾಗುವುದು ಎಂದು ಮಾಹಿತಿ ನೀಡಿದರು.

ಸೇವಾಲಾಲ್ ಜಯಂತೋತ್ಸವ ಸಮಿತಿ ಅಧ್ಯಕ್ಷ ಗಂಗಾಧರಯ್ಯ ಮಾತನಾಡಿ ಬೆಳಗ್ಗೆ ೯.೩೦ ಕ್ಕೆ ಸಾಂಸ್ಕೃತಿಕ ಕಲಾ ತಂಡಗಳ ಮೆರವಣಿಗೆಗೆ ಹುಳಿಯಾರು ಗೇಟ್ ಸಮೀಪದಿಂದ ಮಾಜಿ ಸಚಿವ ಜೆ.ಸಿ. ಮಾಧುಸ್ವಾಮಿ ಚಾಲನೆ ನೀಡಲಿದ್ದಾರೆ. ಸಾಹಿತಿ ಬಿ.ಟಿ.ಲಲಿತಾ ನಾಯಕ್, ಮಾಜಿ ಶಾಸಕ ಕೆ.ಎಸ್.ಕಿರಣ್ ಕುಮಾರ್, ಲಕ್ಕಪ್ಪ ಇನ್ನಿತರ ಮುಖಂಡರುಗಳು ಭಾಗವಹಿಸ ಲಿದ್ದಾರೆ. ಸುಮಾರು 52 ತಾಂಡದ ಜನರು ಆಗಮಿಸಲಿದ್ದು ಲಂಬಾಣಿ ಉಡುಗೆಯಲ್ಲಿ ಮಹಿಳೆಯರು ಮೆರವಣಿಗೆಯಲ್ಲಿ ಭಾಗವಹಿಸಲಿದ್ದಾರೆ. ಊಟ, ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿದೆ. ಎಂದು ತಿಳಿಸಿದರು.

ತಾ.ಪಂ. ಮಾಜಿ ಅಧ್ಯಕ್ಷೆ ಚೇತನ, ಸದಸ್ಯ ಪ್ರಸನ್ನಕುಮಾರ್, ಬಂಜಾರ ಮುಖಂಡರು ಗಳಾದ ವೇದಮೂರ್ತಿ ನಾಯಕ್, ಕರಿನಾಯ್ಕ, ಅಶೋಕ ನಾಯ್ಕ, ದೇವರಾಜ್ ಮತ್ತಿತರ ರಿದ್ದರು.