ಕರ್ನಾಟಕ ಬಜೆಟ್​ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Online Betting: ಆನ್‌ಲೈನ್‌ ಬೆಟ್ಟಿಂಗ್‌ಗೆ ಒಂದೇ ಕುಟುಂಬದ ಮೂವರು ಬಲಿ

ಬೆಟ್ಟಿಂಗ್‌ ಚಾಳಿಯಿಂದ ಸಾಲಕ್ಕೆ ತುತ್ತಾದ ಒಂದೇ ಕುಟುಂಬದ ಮೂವರು ಆತ್ಮಹತ್ಯೆ (Self Harming) ಮಾಡಿಕೊಂಡಿರುವ ಘಟನೆ ಮೈಸೂರು (Mysuru news) ತಾಲೂಕಿನ ಹಂಚ್ಯಾ ಗ್ರಾಮದ ಬಳಿ ನಡೆದಿದೆ. ಜೋಶಿ ಆಂಥೋನಿ, ಜೋಬಿ ಆಂಥೋನಿ, ಶರ್ಮಿಳಾ ಅಲಿಯಾಸ್​ ಸ್ವಾತಿ ಮೃತ ದುರ್ದೈವಿಗಳು.

ಆನ್‌ಲೈನ್‌ ಬೆಟ್ಟಿಂಗ್‌ಗೆ ಒಂದೇ ಕುಟುಂಬದ ಮೂವರು ಬಲಿ

ಜೋಬಿ ಆಂಥೋನಿ, ಶರ್ಮಿಳಾ, ಜೋಶಿ ಆಂಥೋನಿ

ಹರೀಶ್‌ ಕೇರ ಹರೀಶ್‌ ಕೇರ Feb 18, 2025 12:05 PM

ಮೈಸೂರು: ಐಪಿಎಲ್​ ಬೆಟ್ಟಿಂಗ್‌ (IPL betting) ಹಾಗೂ ಆನ್​ಲೈನ್ ಬೆಟ್ಟಿಂಗ್​ (Online Betting) ಒಂದು ಕುಟುಂಬವನ್ನು ಬಲಿ (crime news) ತೆಗೆದುಕೊಂಡಿದೆ. ಬೆಟ್ಟಿಂಗ್‌ ಚಾಳಿಯಿಂದ ಸಾಲಕ್ಕೆ ತುತ್ತಾದ ಒಂದೇ ಕುಟುಂಬದ ಮೂವರು ಆತ್ಮಹತ್ಯೆ (Self Harming) ಮಾಡಿಕೊಂಡಿರುವ ಘಟನೆ ಮೈಸೂರು (Mysuru news) ತಾಲೂಕಿನ ಹಂಚ್ಯಾ ಗ್ರಾಮದ ಬಳಿ ನಡೆದಿದೆ. ಜೋಶಿ ಆಂಥೋನಿ, ಜೋಬಿ ಆಂಥೋನಿ, ಶರ್ಮಿಳಾ ಅಲಿಯಾಸ್​ ಸ್ವಾತಿ ಮೃತ ದುರ್ದೈವಿಗಳು. ಜೋಬಿ ಆಂಥೋನಿ ಹಾಗೂ ಜೋಷಿ ಆಂಥೋನಿ ಸಹೋದರರು.

ಜೋಶಿ ಆಂಥೋನಿ ತನ್ನ ತಮ್ಮನಾದ ಜೋಬಿ ಆಂಥೋನಿ ಮತ್ತು ನಾದಿನಿ ಶರ್ಮಿಳಾ ಆಲಿಯಾಸ್ ಸ್ವಾತಿ ಮೇಲೆ ಮೋಸದ ಆರೋಪ ಹೊರಿಸಿ ಸೋಮವಾರ (ಫೆ.17) ರಂದು ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸಾಯುವ ಮುನ್ನ ಜೋಶಿ ಆಂಥೋನಿ ವಿಡಿಯೋ ಮಾಡಿದ್ದು, “ಸಹೋದರ ಜೋಬಿ, ಆತನ ಪತ್ನಿ ಶರ್ಮಿಳಾ ಮೋಸದಿಂದ ನನ್ನ ಸಹೋದರಿ ಮೂಲಕ ಊರು ತುಂಬ ಸಾಲ ಪಡೆದು ಮೋಸ ಮಾಡಿದ್ದಾರೆ. ನನ್ನ ಸಹೋದರಿಗೆ ಗಂಡ ಇಲ್ಲ, ಅವರು ಮೋಸ ಮಾಡಿದ್ದಾರೆ. ನನ್ನ ಸಾವಿಗೆ ತಮ್ಮ ಜೋಬಿ ಆಂಥೋನಿ ಮತ್ತು ಆತನ ಪತ್ನಿ ಶರ್ಮಿಳಾ ಕಾರಣ. ಅವರಿಗೆ ಶಿಕ್ಷೆ ಕೊಡಿಸಿ” ಎಂದು ವಿಡಿಯೋದಲ್ಲಿ ಹೇಳಿ ನೇಣಿಗೆ ಶರಣದಾಗಿದ್ದಾರೆ.

ಜೋಶಿ ಆಂಥೋನಿ ಸಾವಿನ ವಿಚಾರ ತಿಳಿದು ತಮ್ಮ ಜೋಬಿ ಆಂಥೋನಿ ಹಾಗೂ ಈತನ ಪತ್ನಿ ಶರ್ಮಿಳಾ ಅಲಿಯಾ‌ಸ್‌ ಸ್ವಾತಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಜೋಬಿ ಹಾಗೂ ಶರ್ಮಿಳಾ ಐಪಿಎಲ್ ಹಾಗೂ ಆನ್ ಲೈನ್ ಗೇಮ್​ನಲ್ಲಿ ಲಕ್ಷಾಂತರ ಸಾಲ ಮಾಡಿಕೊಂಡಿದ್ದರು. ಸಾಲಗಾರರು ಪ್ರತಿ ನಿತ್ಯ ಮನೆಯ ಬಳಿ ಬಂದು ದುಡ್ಡು ಕೇಳುತ್ತಿದ್ದರು. ಇದರಿಂದ ಮನನೊಂದ ಜೋಷಿ ಆಂಥೋನಿ ಸೋಮವಾರ ಮೈಸೂರು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇಂದು (ಫೆ.18) ಜೋಬಿ ಹಾಗೂ ಶರ್ಮಿಳಾ ವಿಜಯನಗರದ ಕ್ರೀಡಾ ಮೈದಾನದ ಬಳಿ ನೇಣಿಗೆ ಶರಣಾಗಿದ್ದಾರೆ.

ಇಂದು ಬೆಳಿಗ್ಗೆ ಮೈಸೂರಿನ ವಿಜಯನಗರದ ಮೈದಾನದಲ್ಲಿ ಒಬ್ಬ ಪುರುಷ ಹಾಗೂ ಮಹಿಳೆಯ ಶವ ಪತ್ತೆಯಾಗಿತ್ತು. ಆದರೆ ಅವರ ಗುರುತು ಪತ್ತೆ ಆಗಿರಲಿಲ್ಲ. ಇದೀಗ ಅಣ್ಣನ ಸಾವಿನ ಸುದ್ದಿ ತಿಳಿದು ಭಯಗೊಂಡ ಜೋಬಿ ಆಂತೋನಿ ಹಾಗೂ ಶರ್ಮಿಳಾ ಆತ್ಮಹತ್ಯೆಗೆ ಶರಣಾಗಿರುವುದು ಗೊತ್ತಾಗಿದೆ. ಸಹೋದರಿ ಸ್ವಾತಿ ಹಾಗೂ ಶರ್ಮಿಳ ಆನ್ಲೈನ್ ನಲ್ಲಿ ಆಟ ಆಡುತ್ತಿದ್ದರು. ಲಕ್ಷಾಂತರ ರೂಪಾಯಿ ಸಾಲವನ್ನು ಮಾಡಿಕೊಂಡಿದ್ದರು. ಸಾಲಗಾರರು ನಿತ್ಯ ಮನೆಯ ಬಳಿ ಬಂದು ದುಡ್ಡು ಕೇಳುತ್ತಿದ್ದರು. ಇದರಿಂದ ಮನನೊಂದಿದ್ದ ಜೋಶಿ ಮೊದಲು ನೇಣಿಗೆ ಶರಣಾಗಿದ್ದರು.

ಇದನ್ನೂ ಓದಿ: Shocking News: ಆಟ ಆಡುತ್ತಿದ್ದಾಗಲೇ ಕುಸಿದು ಬಿದ್ದು ಅಂಗನವಾಡಿ ಬಾಲಕಿ ಸಾವು