ʻಒಂದೇ ಒಂದು ಫೋನ್ ಕರೆ ಇಶಾನ್ ಕಿಶನ್‌ರ ಅದೃಷ್ಟ ಬದಲಿಸಿತುʼ: ಸೂರ್ಯಕುಮಾರ್ ಯಾದವ್!
ಸುಮಾರು ಮೂರು ವರ್ಷಗಳ ಭಾರತ ತಂಡದಿಂದ ದೂರ ಉಳಿದಿದ್ದ ವಿಕೆಟ್ ಕೀಪರ್ ಇಶಾನ್ ಕಿಶನ್ ಅವರು 2026ರ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಕಮ್‌ಬ್ಯಾಕ್ ಮಾಡಿದ್ದರು. ಅವರು 317 ರನ್‌ಗಳನ್ನು ಕಲೆ ಹಾಕುವ ಮೂಲಕ ಭಾರತ ತಂಡದ ಮೂರನೇ ಟಿ20 ವಿಶ್ವಕಪ್ ಗೆಲುವಿಗೆ ನೆರವು ನೀಡಿದ್ದರು. ಇಶಾನ್ ಕಿಶನ್ ಕಮ್‌ಬ್ಯಾಕ್ ಬಗ್ಗೆ ನಾಯಕ ಸೂರ್ಯಕುಮಾರ್ ಯಾದವ್ ಪ್ರತಿಕ್ರಿಯಿಸಿದ್ದಾರೆ.
ಇಶಾನ್ ಕಿಶನ್ ಕಮ್‌ಬ್ಯಾಕ್ ಬಗ್ಗೆ ಸೂರ್ಯಕುಮಾರ್ ಹೇಳಿಕೆ. -
ನವದೆಹಲಿ: ಒಂದೇ ಒಂದು ಫೋನ್ ಕರೆ ಹೇಗೆ ಇಶಾನ್ ಕಿಶನ್ (Ishan Kishan) ಅವರ ಅದೃಷ್ಟವನ್ನು ಬದಲಿಸಿತು ಎಂದು ಭಾರತ ತಂಡದ ನಾಯಕ ಸೂರ್ಯಕುಮಾರ್ ಯಾದವ್ (Suryakumar Yadav) ಬಹಿರಂಗಪಡಿಸಿದ್ದಾರೆ. ಫೋನ್ ಕರೆಯಿಂದಲೇ ಅವರನ್ನು ಪುರುಷರ ಐಸಿಸಿ ಟಿ20 ವಿಶ್ವಕಪ್ (T20 World Cup 2026) ತಂಡಕ್ಕೆ ಸೇರಿಸಲು ಕಾರಣವಾಯಿತು ಎಂಬುದನ್ನು ಬಹಿರಂಗಪಡಿಸಿದ್ದಾರೆ. ಸುಮಾರು ಮೂರು ವರ್ಷಗಳ ಕಾಲ ತಂಡದಿಂದ ಹೊರಗಿದ್ದ ಕಿಶನ್, ಅದ್ಭುತವಾಗಿ ಕಮ್‌ಬ್ಯಾಕ್ ಮಾಡಿ ಒಂಬತ್ತು ಪಂದ್ಯಗಳಲ್ಲಿ 317 ರನ್ ಗಳಿಸಿದ್ದರು. ಆ ಮೂಲಕ ಭಾರತ ತಂಡ ಟಿ20 ವಿಶ್ವಕಪ್ ಗೆಲ್ಲಲು ನೆರವು ನೀಡಿದ್ದರು.
ಇಶಾನ್ ಕಿಶನ್ ಅವರು ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಟೂರ್ನಿಯಲ್ಲಿ ನೀಡಿದ ಅದ್ಭುತ ಪ್ರದರ್ಶನದ ಬಳಿಕ ನ್ಯೂಜಿಲೆಂಡ್ ವಿರುದ್ಧದ ಟಿ20ಐ ಸರಣಿಯ ಭಾರತ ತಂಡದಲ್ಲಿ ಸ್ಥಾನ ಪಡೆದಿದ್ದರು. ಈ ಸರಣಿಯಲ್ಲಿ ಅವರು ಅತಿ ಹೆಚ್ಚು ರನ್ ಗಳಿಸಿದ ಬ್ಯಾಟ್ಸ್‌ಮನ್ ಎನಿಸಿಕೊಂಡಿದ್ದರು. ಫೈನಲ್ ಪಂದ್ಯದಲ್ಲಿ ಕೇವಲ 45 ಎಸೆತಗಳಲ್ಲಿ ಶತಕ ಸಿಡಿಸಿ ಗಮನಸೆಳೆದಿದ್ದರು. ತದ ನಂತರ ಕಿಶನ್ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿಯೂ ಅದ್ಭುತ ಪ್ರದರ್ಶನವನ್ನು ತೋರಿದರು.
T20 World Cup ಗೆದ್ದ ಬಳಿಕ ಗೌತಮ್ ಗಂಭೀರ್ ಹೇಳಿದ್ದ ಮಾತನ್ನು ರಿವೀಲ್ ಮಾಡಿದ ಸೂರ್ಯಕುಮಾರ್ ಯಾದವ್!
ತೋರಿಸಿದ್ದ ಸಮರ್ಪಣೆ ಮತ್ತು ಕಠಿಣ ಪರಿಶ್ರಮವನ್ನು ಸೂರ್ಯಕುಮಾರ್ ಯಾದವ್ ಗುಣಗಾನ ಮಾಡಿದ್ದು, ತಾನು ಕರೆ ಮಾಡಿದ ಬಳಿಕ ಅವರ ಅದೃಷ್ಟ ಬದಲಿಸಿತು ಎಂದು ಹೇಳಿದ್ದಾರೆ. ಟೂರ್ನಿಗೂ ಮುನ್ನ ತಂಡ ಆಯ್ಕೆ ಮಾಡುವ ಸಮಯದಲ್ಲಿ ಇಶಾನ್ ಕಿಶನ್ ಜೊತೆ ನಡೆದಿದ್ದ ಒಂದು ಸಂಭಾಷಣೆಯನ್ನು ಸೂರ್ಯಕುಮಾರ್ ಯಾದವ್ ನೆನಪಿಸಿಕೊಂಡಿದ್ದಾರೆ.
ಫೋನ್ ಕರೆ ಇಶಾನ್ ಕಿಶನ್ ದೃಷ್ಟಷ್ಟವನ್ನು ಬದಲಿಸಿತು
“ಟೂರ್ನಿಯ ಆರಂಭಕ್ಕೂ ಮುನ್ನ ತಂಡವನ್ನು ಆಯ್ಕೆ ಮಾಡುತ್ತಿದ್ದಾಗ ನನಗೆ ಇನ್ನೂ ನೆನಪಿದೆ. ನಾನು ಅವರಿಗೆ ಫೋನ್ ಮಾಡಿ, ‘ನನಗಾಗಿ ವಿಶ್ವಕಪ್ ಗೆಲ್ಲುತ್ತೀಯಾ?’ ಎಂದು ಕೇಳಿದ್ದೆ,” ಎಂದು ಸೂರ್ಯಕುಮಾರ್ ಇಂಟರ್‌ನ್ಯಾಷನಲ್ ಕ್ರಿಕೆಟ್ ಕೌನ್ಸಿಲ್‌ಗೆನೀಡಿದ ವಿಶೇಷ ಸಂದರ್ಶನದಲ್ಲಿ ಹೇಳಿದ್ದಾರೆ.
ಅಕ್ಷರ್ ಪಟೇಲ್‌ಗೆ ಕ್ಷಮೆಯಾಚಿಸಿದ ಸೂರ್ಯಕುಮಾರ್ ಯಾದವ್
“ಅವರು ‘ಸ್ವಲ್ಪ ವಿಶ್ವಾಸ ಇಡಿ, ನಾನು ಅದನ್ನು ಮಾಡಿ ತೋರಿಸುತ್ತೇನೆ’ ಎಂದು ಹೇಳಿದ್ದರು. ಅವರು ಮಾತು ತಪ್ಪಿಸಲಿಲ್ಲ. ಕಳೆದ ಎರಡು ವರ್ಷಗಳಲ್ಲಿ ಅವರು ಬಹಳಷ್ಟು ಅಂತಾರಾಷ್ಟ್ರೀಯ ಕ್ರಿಕೆಟ್ ಅನ್ನು ಕಳೆದುಕೊಂಡಿದ್ದಾರೆ. ಆದರೆ ನಂತರ ದೇಶಿ ಕ್ರಿಕೆಟ್‌ಗೆ ಹಿಂದಿರುಗಿ ಕಠಿಣ ಪರಿಶ್ರಮ ಪಟ್ಟು, ಮತ್ತೆ ಭಾರತ ತಂಡಕ್ಕೆ ಮರಳಿ ಬಂದರು ಮತ್ತು ಅವರಿಗೆ ತಿಳಿದಿರುವ ಅತ್ಯುತ್ತಮ ಪ್ರದರ್ಶನವನ್ನು ನೀಡಿದ್ದಾಋಎ,” ಎಂದು ಸೂರ್ಯಕುಮಾರ್ ಹೇಳಿದ್ದಾರೆ.
ಇಶಾನ್ ಕಿಶನ್ ಅವರು ನ್ಯೂಜಿಲೆಂಡ್ ವಿರುದ್ಧದ ಸರಣಿಯಲ್ಲಿ ಅದ್ಭುತ ಫಾರ್ಮ್ ತೋರಿಸಿದ್ದರು. ನಾಲ್ಕು ಪಂದ್ಯಗಳಲ್ಲಿ 215 ರನ್ ಗಳಿಸಿದ ಅವರು ಸರಾಸರಿ 53.75 ಮತ್ತು 231.18ರ ಸ್ಟ್ರೈಕ್ ರೇಟ್‌ನೊಂದಿಗೆ ಗಮನಸೆಳೆದಿದ್ದರು. ಆದರೆ ತಿರುವನಂತಪುರದಲ್ಲಿ ನಡೆದಿದ್ದ ಐದನೇ ಟಿ20ಐ ಪಂದ್ಯದಲ್ಲಿ ಕೇವಲ 42 ಚೆಂಡುಗಳಲ್ಲಿ ಸಿಡಿಸಿದ ಶತಕವೇ ಅವರಿಗೆ ಐಸಿಸಿ ಟಿ20 ವಿಶ್ವಕಪ್ ತಂಡದಲ್ಲಿ ಸ್ಥಾನವನ್ನು ಭದ್ರಪಡಿಸಿತು.