Maharashtra Tragedy: ಜಾತ್ರಾ ಮಹೋತ್ಸವದಲ್ಲಿ ಪ್ರಸಾದ ಸೇವಿಸಿ 250ಕ್ಕೂ ಹೆಚ್ಚು ಜನರು ಅಸ್ವಸ್ಥ!
ಮಹಾರಾಷ್ಟ್ರದ ಕೊಲ್ಹಾಪುರ ಜಿಲ್ಲೆಯಲ್ಲಿ ನಡೆದ ಗ್ರಾಮ ಜಾತ್ರೆಯಲ್ಲಿ ಪಾಲ್ಗೊಂಡಿದ್ದ 250ಕ್ಕೂ ಹೆಚ್ಚು ಜನರು ಪ್ರಸಾದ ಸೇವಿಸಿ ಅಸ್ವಸ್ಥಗೊಂಡಿದ್ದಾರೆ ಎಂದು ಪೊಲೀಸರು ಇಂದು(ಫೆ.5) ತಿಳಿಸಿದ್ದಾರೆ. ಶಿರೋಲ್‌ನ ಆಸ್ಪತ್ರೆಯಲ್ಲಿ ಸರಿ ಸುಮಾರು 50 ಮಂದಿ ಚಿಕಿತ್ಸೆ ಪಡೆಯುತ್ತಿದ್ದು, ಅವರೆಲ್ಲರ ಆರೋಗ್ಯ ಸ್ಥಿರವಾಗಿದೆ ಎಂದು ಕುರುಂದವಾಡ ಪೊಲೀಸ್ ಠಾಣೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಶಿವನಾಕವಾಡಿ ಗ್ರಾಮದಲ್ಲಿ ನಡೆದ ಜಾತ್ರೆಯಲ್ಲಿ ಹಾಲಿನಿಂದ ತಯಾರಿಸಿದ 'ಖೀರ್' ಅನ್ನು ಪ್ರಸಾದದ ರೂಪದಲ್ಲಿ ನೀಡಲಾಗಿದ್ದು,ಅದನ್ನು ಸೇವಿಸಿದ ನಂತರ ಜನರು ಅಸ್ವಸ್ಥರಾಗಿದ್ದಾರೆ ಎಂದು ತಿಳಿದು ಬಂದಿದೆ.
![Maharashtra Tragedy](https://cdn-vishwavani-prod.hindverse.com/media/images/Maharashtra_Tragedy.max-1280x720.jpg)
![Profile](https://vishwavani.news/static/img/user.5c7ca8245eec.png)
ಮುಂಬೈ: ಮಹಾರಾಷ್ಟ್ರದ ಕೊಲ್ಹಾಪುರ( Kolhapur) ಜಿಲ್ಲೆಯಲ್ಲಿ ನಡೆದ ಗ್ರಾಮ ಜಾತ್ರೆಯಲ್ಲಿ ಪಾಲ್ಗೊಂಡಿದ್ದ 250ಕ್ಕೂ ಹೆಚ್ಚು ಜನರು ಪ್ರಸಾದ ಸೇವಿಸಿ ಅಸ್ವಸ್ಥಗೊಂಡಿದ್ದಾರೆ(Maharashtra Tragedy) ಎಂದು ಪೊಲೀಸರು ಇಂದು(ಫೆ.5) ತಿಳಿಸಿದ್ದಾರೆ. ಶಿರೋಲ್‌ನ ಆಸ್ಪತ್ರೆಯಲ್ಲಿ ಸರಿ ಸುಮಾರು 50 ಮಂದಿ ಚಿಕಿತ್ಸೆ ಪಡೆಯುತ್ತಿದ್ದು, ಅವರೆಲ್ಲರ ಆರೋಗ್ಯ ಸ್ಥಿರವಾಗಿದೆ ಎಂದು ಕುರುಂದವಾಡ( Kurundwad) ಪೊಲೀಸ್ ಠಾಣೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಶಿವನಾಕವಾಡಿ(Shivnakwadi) ಗ್ರಾಮದಲ್ಲಿ ನಡೆದ ಜಾತ್ರೆಯಲ್ಲಿ ಹಾಲಿನಿಂದ ತಯಾರಿಸಿದ 'ಖೀರ್'(Kheer) ಅನ್ನು ಪ್ರಸಾದದ ರೂಪದಲ್ಲಿ ನೀಡಲಾಗಿದ್ದು,ಅದನ್ನು ಸೇವಿಸಿದ ನಂತರ ಜನರು ಅಸ್ವಸ್ಥರಾಗಿದ್ದಾರೆ ಎಂದು ತಿಳಿದು ಬಂದಿದೆ.
ಪ್ರಸಾದ ಸೇವಿಸಿದ್ದ ಜನರಲ್ಲಿ ಇಂದು ಬೆಳಗ್ಗೆಯಿಂದ ಅತಿಸಾರ, ವಿಪರೀತ ವಾಂತಿ ಮತ್ತು ಜ್ವರ ಕಾಣಿಸಿಕೊಂಡಿದೆ. ಈವರೆಗೆ 250ಕ್ಕೂ ಹೆಚ್ಚು ಮಂದಿ ಅಸ್ವಸ್ಥಗೊಂಡಿದ್ದಾರೆ. ಆಹಾರ ಕಲುಷಿತಗೊಂಡಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಲು ಆಹಾರದ ಮಾದರಿಗಳನ್ನು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ರವಾನಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Maharashtra: Over 250 people fall ill at fair in Kolhapur, #foodpoisoning suspectedhttps://t.co/G0wWur5OxA
— The Telegraph (@ttindia) February 5, 2025
ದೇವರ ಪ್ರಸಾದ ಸೇವಿಸಿ 25 ಜನ ಅಸ್ವಸ್ಥ!
ಕೆಲ ತಿಂಗಳ ಹಿಂದೆಯಷ್ಟೇ ವಿಜಯನಗರ ಜಿಲ್ಲೆಯ ಕೂಡ್ಲಿಗಿಯಲ್ಲಿ ದೇವರ ಪ್ರಸಾದ ಸೇವಿಸಿ 25 ಜನರಲ್ಲಿ ವಾಂತಿ-ಭೇದಿ ಕಾಣಿಸಿಕೊಂಡಿತ್ತು. ಎಲ್ಲರಿಗೂ ವಾಂತಿ-ಭೇದಿಯಾಗಿದ್ದು, ತಾಲೂಕು ಆಸ್ಪತ್ರೆಗೆ ದಾಖಲಾಗಿದ್ದರು. ಯುಗಾದಿ ಹಬ್ಬದ ದಿನ ಸಂಪ್ರದಾಯದಂತೆ ದೇವಸ್ಥಾನದಲ್ಲಿ ನೈವೇದ್ಯ ಮಾಡಿ ಮನೆಗಳಿಗೆ ಪ್ರಸಾದ ಹಂಚಿದ್ದು, ಪ್ರಸಾದ ತಿಂದ ಬಹುತೇಕರಲ್ಲಿ ವಾಂತಿ-ಭೇದಿಯಾಗಿತ್ತು.
ಈ ಸುದ್ದಿಯನ್ನೂ ಓದಿ:Mallikarjun Kharge: `ನಿಮ್ಮ ಅಪ್ಪ....'- ಸಂಸತ್‌ನಲ್ಲಿ ಬಿಜೆಪಿ ಸಂಸದನಿಗೆ ಖರ್ಗೆ ಹೀಗಂದಿದ್ಯಾಕೆ?
ಮುಂಜಾಗ್ರತಾ ಕ್ರಮವಾಗಿ ಗ್ರಾಮದ ನೀರಿನ ಮಾದರಿಯನ್ನು ಪರೀಕ್ಷೆಗೆ ಕಳುಹಿಸಲಾಗಿತ್ತು. ವರದಿ ಬಂದ ನಂತರ ನಿಖರ ಕಾರಣ ತಿಳಿದುಬಂದಿತ್ತು. ತಾತ್ಕಾಲಿಕವಾಗಿ ವೈದ್ಯರ ತಂಡ ಗ್ರಾಮದಲ್ಲಿ ಬೀಡು ಬಿಟ್ಟಿದ್ದರು. ಎಲ್ಲ ಮನೆಗಳಿಗೂ ಆರೋಗ್ಯ ನಿರೀಕ್ಷಕರು ಭೇಟಿ ನೀಡಿ ಜನರ ತಪಾಸಣೆ ಮಾಡಿ, ಮಾತ್ರೆಗಳನ್ನು ನೀಡಿದ್ದರು.