#ದೆಹಲಿರಿಸಲ್ಟ್​ ಧಾರ್ಮಿಕ ವಿಶ್ವವಾಣಿ ಕ್ಲಬ್‌ ಹೌಸ್‌ ರಾಜಕೀಯ ಸಂಪಾದಕೀಯ ಫ್ಯಾಷನ್‌ ಲೋಕ ಉದ್ಯೋಗ

PAK vs NZ: ನ್ಯೂಜಿಲೆಂಡ್‌ ಎದುರು ಪಾಕಿಸ್ತಾನ ತಂಡಕ್ಕೆ ಹೀನಾಯ ಸೋಲು!

PAK vs NZ 1st ODI Highlights: ಗ್ಲೆನ್‌ ಫಿಲಿಪ್ಸ್‌ ಶತಕದ ಬಲದಿಂದ ನ್ಯೂಜಿಲೆಂಡ್‌ ತಂಡ, ಪಾಕಿಸ್ತಾನದ ವಿರುದ್ದ ತ್ರಿಕೋನ ಸರಣಿಯ ಮೊದಲನೇ ಪಂದ್ಯದಲ್ಲಿ 78 ರನ್‌ಗಳ ಭರ್ಜರಿ ಗೆಲುವು ಪಡೆದಿದೆ. ಆ ಮೂಲಕ ಸರಣಿಯಲ್ಲಿ ಶುಭಾರಂಭ ಕಂಡಿದೆ.

ಗ್ಲೆನ್‌ ಫಿಲಿಪ್ಸ್‌ ಶತಕದ ಬಲದಿಂದ ಪಾಕ್‌ ಎದುರು ಗೆದ್ದ ನ್ಯೂಜಿಲೆಂಡ್‌!

Glenn Phillips

Profile Ramesh Kote Feb 9, 2025 10:18 AM

ಲಾಹೋರ್: ತ್ರಿಕೋನ ಸರಣಿಯ ಮೊದಲ ಪಂದ್ಯದಲ್ಲಿ ಪಾಕಿಸ್ತಾನ ತಂಡ ಸೋತಿದೆ. ಗಡಾಫಿ ಕ್ರೀಡಾಂಗಣದಲ್ಲಿ ಶನಿವಾರ ನಡೆದಿದ್ದ ಪಂದ್ಯದಲ್ಲಿ ಗ್ಲೆನ್‌ ಫಿಲಿಪ್ಸ್‌ ಶತಕದ ಬಲದಿಂದ ನ್ಯೂಜಿಲೆಂಡ್‌ ತಂಡ 78 ರನ್‌ಗಳಿಂದ ಭರ್ಜರಿ ಗೆಲುವು ಪಡೆದಿದೆ. ಆ ಮೂಲಕ ತ್ರಿಕೋನ ಸರಣಿಯಲ್ಲಿ ಕಿವೀಸ್‌ ಶುಭಾರಂಭ ಕಂಡಿದೆ. ಈ ಹಣಾಹಣಿಯಲ್ಲಿ ಮೊದಲು ಬ್ಯಾಟ್‌ ಮಾಡಿದ್ದ ನ್ಯೂಜಿಲೆಂಡ್ 6 ವಿಕೆಟ್ ನಷ್ಟಕ್ಕೆ 330 ರನ್ ಗಳಿಸಿತ್ತು. ಬಳಿಕ ಗುರಿ ಹಿಂಬಾಲಿಸಿದ ಫಖಾರ್ ಝಮಾನ್ ಪಾಕಿಸ್ತಾನ ತಂಡಕ್ಕೆ ಉತ್ತಮ ಆರಂಭ ತಂದುಕೊಟ್ಟಿದ್ದರು. ಆದರೆ, ಇನ್ನುಳಿದ ಬ್ಯಾಟ್ಸ್‌ಮನ್‌ಗಳ ವೈಫಲ್ಯದ ಕಾರಣ ಆತಿಥೇಯ ಪಾಕಿಸ್ತಾನ ತಂಡ 47.5ನೇ ಓವರ್‌ನಲ್ಲಿ 252 ರನ್‌ಗಳಿಗೆ ಆಲ್‌ಔಟ್‌ ಆಯಿತು.

ಮೊದಲು ಬ್ಯಾಟಿಂಗ್‌ ಆರಂಭಿಸಿದ ನ್ಯೂಜಿಲೆಂಡ್ ತಂಡದ ಆರಂಭ ಅಷ್ಟೊಂದು ಉತ್ತಮವಾಗಿರಲಿಲ್ಲ. ಮೊದಲ ಓವರ್‌ನಲ್ಲಿಯೇ ಶಾಹೀನ್ ಅಫ್ರಿದಿ, ವಿಲ್ ಯಂಗ್ ಅವರನ್ನು ಪೆವಿಲಿಯನ್‌ಗೆ ಕಳುಹಿಸಿದರು. ಅವರು ಕೇವಲ ನಾಲ್ಕು ರನ್ ಗಳಿಗೆ ಸೀಮಿತರಾದರು. ರಚಿನ್ ರವೀಂದ್ರ (25) ಕೆಲವು ಉತ್ತಮ ಹೊಡೆತಗಳನ್ನು ಆಡಿದರೂ ಪವರ್‌ಪ್ಲೇನಲ್ಲಿ ಔಟಾದರು. 39 ರನ್‌ಗಳಿಗೆ ಎರಡು ವಿಕೆಟ್‌ಗಳನ್ನು ಕಳೆದುಕೊಂಡ ನಂತರ, ಕೇನ್ ವಿಲಿಯಮ್ಸನ್ ಮತ್ತು ಡ್ಯಾರಿಲ್ ಮಿಚೆಲ್ ಇನಿಂಗ್ಸ್‌ನ ಜವಾಬ್ದಾರಿಯನ್ನು ವಹಿಸಿಕೊಂಡರು. ವಿಲಿಯಮ್ಸನ್ ಅರ್ಧಶತಕ ಗಳಿಸಿದರು ಆದರೆ ಅವರು ತುಂಬಾ ನಿಧಾನವಾಗಿ ಆಡುತ್ತಿದ್ದರು. ಅವರು 89 ಎಸೆತಗಳಲ್ಲಿ 58 ರನ್ ಗಳಿಸಿದಾಗ ಶಾಹೀನ್ ಅಫ್ರಿದಿ ಬೌಲಿಂಗ್‌ನಲ್ಲಿ ವಿಕೆಟ್‌ ಒಪ್ಪಿಸಿದರು.

ವಿಕೆಟ್ ಕೀಪರ್ ಟಾಮ್ ಲೇಥಮ್ ಖಾತೆ ತೆರೆಯದೆ ವಿಕೆಟ್‌ ಒಪ್ಪಿಸಿದರು. ಡ್ಯಾರಿಲ್‌ ಮಿಚೆಲ್ ಕೂಡ ತಮ್ಮ ಅರ್ಧಶತಕವನ್ನು ಪೂರ್ಣಗೊಳಿಸಿದರು. 84 ಎಸೆತಗಳಲ್ಲಿ 81 ರನ್ ಗಳಿಸಿದ ನಂತರ ಅವರನ್ನು ಅಬ್ರಾರ್ ಅಹ್ಮದ್ ಔಟ್ ಮಾಡಿದರು. 38ನೇ ಓವರ್‌ನಲ್ಲಿ ಮಿಚೆಲ್ ಔಟಾದಾಗ ನ್ಯೂಜಿಲೆಂಡ್ ಮೊತ್ತ 200 ರನ್‌ಗಳಾಗಿತ್ತು.

IND vs ENG 2nd ODI: ಕಟಕ್‌ ಪಂದ್ಯಕ್ಕೆ ಭಾರತ ತಂಡದಲ್ಲಿ 2 ಬದಲಾವಣೆ

ಗ್ಲೆನ್‌ ಫಿಲಿಪ್ಸ್‌ ಶತಕ

ನ್ಯೂಜಿಲೆಂಡ್ ಇನಿಂಗ್ಸ್‌ನ ಕೊನೆಯ 10 ಓವರ್‌ಗಳಲ್ಲಿ ಗ್ಲೆನ್ ಫಿಲಿಪ್ಸ್ ಸ್ಪೋಟಕ ಬ್ಯಾಟಿಂಗ್‌ ಪ್ರದರ್ಶನವನ್ನು ತೋರಿದ್ದರು. ಅವರು ಕೇವಲ 56 ಎಸೆತಗಳಲ್ಲಿ ಅರ್ಧಶತಕ ಗಳಿಸಿದರು. ಆದರೆ, ಮುಂದಿನ 16 ಎಸೆತಗಳಲ್ಲಿ ಅವರು ಶತಕವನ್ನು ಪೂರ್ಣಗೊಳಿಸಿದರು. ಗ್ಲೆನ್‌ ಫಿಲಿಪ್ಸ್ 74 ಎಸೆತಗಳಲ್ಲಿ 106 ರನ್ ಗಳಿಸಿ ಅಜೇಯರಾಗಿ ಉಳಿದರು. ಕೊನೆಯ 10 ಓವರ್‌ಗಳಲ್ಲಿ ಕಿವೀಸ್ ತಂಡ 123 ರನ್ ಗಳಿಸಿದ್ದು ವಿಶೇಷ. ಪಾಕಿಸ್ತಾನ ಪರ ಶಾಹೀನ್ ಅಫ್ರಿದಿ ಮೂರು ವಿಕೆಟ್ ಕಬಳಿಸಿದರೂ ಅವರು 10 ಓವರ್‌ಗಳಲ್ಲಿ 88 ರನ್‌ಗಳನ್ನು ಬಿಟ್ಟು ಕೊಟ್ಟರು. ಅಬ್ರಾರ್ ಅಹ್ಮದ್ ಎರಡು ವಿಕೆಟ್‌ ಪಡೆದರು.

ಫಖಾರ್‌ ಝಮಾನ್‌ ಅರ್ಧಶತಕ

ಪಾಕಿಸ್ತಾನ ತಂಡದ ಪರ ಕ್ರೀಸ್‌ಗೆ ಇಳಿದ ಫಖಾರ್ ಝಮಾನ್‌ ಸ್ಪೋಟಕ ಬ್ಯಾಟಿಂಗ್‌ ಪ್ರದರ್ಶನ ತೋರಿದರು. ಅವರು ಸುಲಭವಾಗಿ ರನ್ ಗಳಿಸುತ್ತಿದ್ದರು ಆದರೆ ಮತ್ತೊಂದು ತುದಿಯಲ್ಲಿ ಅವರಿಗೆ ಯಾರೂ ಬೆಂಬಲ ನೀಡಲಿಲ್ಲ. ಬಾಬರ್ ಆಝಮ್‌ ಕೇವಲ 23 ಎಸೆತಗಳಲ್ಲಿ 10 ರನ್ ಗಳಿಸುವ ಮೂಲಕ ಮೈಕಲ್ ಬ್ರೇಸ್‌ವೆಲ್‌ಗೆ ವಿಕೆಟ್‌ ಒಪ್ಪಿಸಿದರು. ಕಮ್ರಾನ್ ಗುಲಾಮ್ 32 ಎಸೆತಗಳಲ್ಲಿ ಕೇವಲ 18 ರನ್ ಗಳಿಗೆ ಸೀಮಿತರಾದರು. ನಾಯಕ ಮೊಹಮ್ಮದ್ ರಿಝ್ವಾನ್ ಕೇವಲ 3 ರನ್ ಗಳಿಸಿ ವಿಕೆಟ್‌ ಒಪ್ಪಿಸಿದರು. ಏಕಾಂಗಿ ಹೋರಾಟ ನಡೆಸಿದ್ದ ಫಖಾರ್ ಝಮಾನ್ 47 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. ಇದಾದ ನಂತರ, ಅವರು ಆಕ್ರಮಣಕಾರಿಯಾಗಿ ಆಡಲು ಮುಂದಾದರು. ಅಂತಿಮವಾಗಿ ಅವರು 69 ಎಸೆತಗಳಲ್ಲಿ 84 ರನ್ ಗಳಿಸಿದ ಬಳಿಕ ಫಿಲಿಪ್ಸ್‌ ಎಸೆತದಲ್ಲಿ ಎಲ್‌ಬಿಡಬ್ಲ್ಯು ಬಲೆಗೆ ಬಿದ್ದರು.



ಪಾಕಿಸ್ತಾನ ತಂಡ 252 ರನ್‌ಗಳಿಗೆ ಆಲ್‌ಔಟ್‌

ಸಲ್ಮಾನ್ ಆಗಾ ಮತ್ತು ತಯ್ಯಬ್ ತಾಹಿರ್ 5ನೇ ವಿಕೆಟ್‌ಗೆ 53 ಎಸೆತಗಳಲ್ಲಿ 57 ರನ್ ಸೇರಿಸಿದರು. 29 ಎಸೆತಗಳಲ್ಲಿ 30 ರನ್ ಗಳಿಸಿದ ತಾಹಿರ್ ಅವರನ್ನು ಮ್ಯಾಟ್ ಹೆನ್ರಿ ಔಟ್ ಮಾಡಿದರು. ಕೆಳ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳು ಸಣ್ಣ ಕೊಡುಗೆಗಳನ್ನು ನೀಡಿದರೂ ಪ್ರಯೋಜನವಾಗಲಿಲ್ಲ. ಅಂತಿಮವಾಗಿ ಪಾಕಿಸ್ತಾನ ತಂಡ 48ನೇ ಓವರ್‌ನಲ್ಲಿ 252 ರನ್‌ಗಳಿಗೆ ಆಲ್‌ಔಟ್‌ ಆಯಿತು. ಫಖಾರ್‌ ಝಮಾನ್ ಹೊರತುಪಡಿಸಿ, ಸಲ್ಮಾನ್ ಅಗಾ 40 ರನ್ ಗಳಿಸಿದರು. ಮ್ಯಾಟ್ ಹೆನ್ರಿ ಮತ್ತು ನಾಯಕ ಮಿಚೆಲ್ ಸ್ಯಾಂಟ್ನರ್ ತಲಾ ಮೂರು ವಿಕೆಟ್ ಪಡೆದರು.