#ದೆಹಲಿರಿಸಲ್ಟ್​ ಧಾರ್ಮಿಕ ವಿಶ್ವವಾಣಿ ಕ್ಲಬ್‌ ಹೌಸ್‌ ರಾಜಕೀಯ ಸಂಪಾದಕೀಯ ಫ್ಯಾಷನ್‌ ಲೋಕ ಉದ್ಯೋಗ

IND vs ENG 2nd ODI: ಕಟಕ್‌ ಪಂದ್ಯಕ್ಕೆ ಭಾರತ ತಂಡದಲ್ಲಿ 2 ಬದಲಾವಣೆ

ಮೊದಲ ಪಂದ್ಯದಲ್ಲಿ ದುಬಾರಿಯಾಗಿದ್ದ ಕುಲ್‌ದೀಪ್‌ ಯಾದವ್‌ ಅವರ ಸ್ಥಾನದಲ್ಲಿ ಮಿಸ್ಟರಿ ಖ್ಯಾತಿಯ ಸ್ಪಿನ್ನರ್‌ ವರುಣ್‌ ಚಕ್ರವರ್ತಿ ಆಡಬಹುದು. ಉಳಿದಂತೆ ಯಾವುದೇ ಬದಲಾವಣೆ ಸಂಭವಿಸುವುದು ಅನುಮಾನ. ಕೀಪರ್‌ ಆಗಿ ರಾಹುಲ್‌ ಅವರೇ ಮುಂದುವರಿಯಲಿದ್ದಾರೆ. ಹೀಗಾಗಿ ಪಂತ್‌ ಈ ಪಂದ್ಯದಲ್ಲಿಯೂ ಬೆಂಚ್‌ ಕಾಯಬೇಕು.

IND vs ENG 2nd ODI: ಕಟಕ್‌ ಪಂದ್ಯಕ್ಕೆ ಭಾರತ ತಂಡದಲ್ಲಿ 2 ಬದಲಾವಣೆ

Profile Abhilash BC Feb 8, 2025 3:22 PM

ಕಟಕ್‌: ಇಂಗ್ಲೆಂಡ್‌ ವಿರುದ್ಧ ಮೊದಲ ಏಕದಿನ ಪಂದ್ಯ ಗೆದ್ದು 1-0 ಮುನ್ನಡೆ ಸಾಧಿಸಿರುವ ರೋಹಿತ್‌ ಶರ್ಮ ಪಡೆದ ಭಾನುವಾರ ಕಟಕ್‌ನಲ್ಲಿ ದ್ವಿತೀಯ ಪಂದ್ಯವನ್ನಾಡಲಿದೆ. ಈ ಪಂದ್ಯಕ್ಕೆ ಭಾರತ ತನ್ನ ಆಡುವ ಬಳಗದಲ್ಲಿ 2 ಮಹತ್ವದ ಬದಲಾವಣೆ ಮಾಡುವ ಸಾಧ್ಯತೆ ಇದೆ. ಮಂಡಿ ನೋವಿನಿಂದಾಗಿ ಮೊದಲ ಪಂದ್ಯಕ್ಕೆ ಅಲಭ್ಯರಾಗಿದ್ದ ವಿರಾಟ್‌ ಕೊಹ್ಲಿ ದ್ವಿತೀಯ ಪಂದ್ಯದಲ್ಲಿ ಕಣಕ್ಕಿಳಿಯಲಿದ್ದಾರೆ. ಹೀಗಾಗಿ ನಾಗ್ಪುರದಲ್ಲಿ ಪದಾರ್ಪಣೆ ಮಾಡಿದ್ದ ಯಶಸ್ವಿ ಜೈಸ್ವಾಲ್‌ ಅವರನ್ನು ದ್ವಿತಿಯ ಪಂದ್ಯದಿಂದ ಕೈಬಿಡಬಹುದು.

ಜೈಸ್ವಾಲ್‌ ಹೊರಗಿಟ್ಟರೆ ರೋಹಿತ್‌ ಶರ್ಮ ಜತೆ ಎಂದಿನಂತೆ ಶುಭಮನ್‌ ಗಿಲ್‌ ಇನಿಂಗ್ಸ್‌ ಆರಂಭಿಸಲಿದ್ದಾರೆ. ಮೊದಲ ಪಂದ್ಯದಲ್ಲಿ ಗಿಲ್‌ ಮೂರನೇ ಕ್ರಮಾಂಕದಲ್ಲಿ ಆಡಿದ್ದರು. ಇನ್ನು ಮೊದಲ ಪಂದ್ಯದಲ್ಲಿ ದುಬಾರಿಯಾಗಿದ್ದ ಕುಲ್‌ದೀಪ್‌ ಯಾದವ್‌ ಅವರ ಸ್ಥಾನದಲ್ಲಿ ಮಿಸ್ಟರಿ ಖ್ಯಾತಿಯ ಸ್ಪಿನ್ನರ್‌ ವರುಣ್‌ ಚಕ್ರವರ್ತಿ ಆಡಬಹುದು. ಉಳಿದಂತೆ ಯಾವುದೇ ಬದಲಾವಣೆ ಸಂಭವಿಸುವುದು ಅನುಮಾನ. ಕೀಪರ್‌ ಆಗಿ ರಾಹುಲ್‌ ಅವರೇ ಮುಂದುವರಿಯಲಿದ್ದಾರೆ. ಹೀಗಾಗಿ ಪಂತ್‌ ಈ ಪಂದ್ಯದಲ್ಲಿಯೂ ಬೆಂಚ್‌ ಕಾಯಬೇಕು.

ಶ್ರೇಯಸ್‌ ಅಯ್ಯರ್‌ ಸಿಕ್ಕ ಅವಕಾಶವನ್ನೂ ಎರಡೂ ಕೈಗಳಿಂದ ಬಾಚಿ ತಮ್ಮ ಬ್ಯಾಟಿಂಗ್‌ ಸಾಮರ್ಥ್ಯವನ್ನು ಸಾಬೀತುಪಡಿಸಿದ್ದಾರೆ. ಹೀಗಾಗಿ ಅವರನ್‌ ನು ತಂಡದಿಂದ ಕೈ ಬಿಡುವುದು ಕಷ್ಟ ಸಾಧ್ಯ.

ಇದನ್ನೂ ಓದಿ IND vs ENG 2nd ODI: ದ್ವಿತೀಯ ಪಂದ್ಯದ ಪಿಚ್‌ ರಿಪೋರ್ಟ್‌, ಸಂಭಾವ್ಯ ತಂಡ ಹೇಗಿದೆ?

ಭಾರತವು 2017 ರಲ್ಲಿ ಕಟಕ್‌ನಲ್ಲಿ ಇಂಗ್ಲೆಂಡ್‌ ವಿರುದ್ಧ 6 ವಿಕೆಟ್‌ಗೆ 381 ರನ್‌ ಬಾರಿಸಿತ್ತು. ಇದು ಈ ಮೈದಾನದಲ್ಲಿ ಭಾರತ ದಾಖಲಿಸಿದ ಗರಿಷ್ಠ ಮೊತ್ತವಾಗಿದೆ. ಆ ಪಂದ್ಯದಲ್ಲಿ ಯುವರಾಜ್ ಸಿಂಗ್ (127 ಎಸೆತಗಳಲ್ಲಿ 150) ಮತ್ತು ಎಂಎಸ್ ಧೋನಿ (122 ಎಸೆತಗಳಲ್ಲಿ 134) 5ನೇ ವಿಕೆಟ್‌ಗೆ 257 ರನ್‌ಗಳ ಜತೆಯಾಟದೊಂದಿಗೆ ತಮ್ಮ ಕೊನೆಯ ಅಂತಾರಾಷ್ಟ್ರೀಯ ಶತಕಗಳನ್ನು ಗಳಿಸಿದ್ದರು.

ಭಾರತ ಸಂಭಾವ್ಯ ತಂಡ

ರೋಹಿತ್ ಶರ್ಮಾ (ನಾಯಕ), ಶುಭಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆ.ಎಲ್ ರಾಹುಲ್ (ವಿ.ಕೀ.), ಹಾರ್ದಿಕ್ ಪಾಂಡ್ಯ, ಅಕ್ಷರ್ ಪಟೇಲ್, ವರುಣ್ ಚಕ್ರವರ್ತಿ, ಹರ್ಷಿತ್ ರಾಣಾ, ರವೀಂದ್ರ ಜಡೇಜಾ, ಮೊಹಮ್ಮದ್ ಶಮಿ.