ಪಾಳ್ಯಕೆರೆ ಪ್ರಾಥಮಿಕ ಕೃಷಿ ಪತ್ತಿನ ಸೇವಾ ಸಹಕಾರ ಸಂಘ ಚುನಾವಣೆ: ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಜಯಭೇರಿ
ಸೇವಾ ಭಾವನೆಯಿಂದ ಕೆಲಸ ಮಾಡುವುದರಿಂದ ಇದರ ಪ್ರತಿಫಲವು ನೇರವಾಗಿ ರೈತರಿಗೆ ತಲುಪುತ್ತದೆ ಆದ್ದರಿಂದ ಸಹಕಾರ ಸಂಘಗಳಲ್ಲಿ ರಾಜಕೀಯ ಹಸ್ತಕ್ಷೇಪ ಮಾಡದಂತೆ ಅವುಗಳ ಅಭಿವೃದ್ಧಿಗೆ ಆದ್ಯತೆ ನೀಡಬೇಕು
ಚೇಳೂರು: ತಾಲ್ಲೂಕಿನ ಪಾಳ್ಯಕೆರೆ ಪ್ರಾಥಮಿಕ ಕೃಷಿ ಪತ್ತಿನ ಸೇವಾ ಸಹಕಾರ ಸಂಘ ನಿಯಮಿತ ಪಾಳ್ಯಕೆರೆ ಸಂಘದ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಚುನಾವಣೆ 2ರಂದು ನಡೆದಿದ್ದು, ಅಂದಿನ ದಿನವೇ ಫಲಿತಾಂಶ ಹೊರಬಂದಿದ್ದು ಈ ಚುನಾವಣೆಯಲ್ಲಿ ಒಟ್ಟು 12 ಸ್ಥಾನಗಳು ಇದ್ದು ಗೌಪ್ಯ ಮತದಾನ ದಲ್ಲಿ ಸಮಬಲ ಸಾಧಿಸಿದ್ದು ಲಾಟರಿ ಮೂಲಕ ಬಿಜೆಪಿ ಪಕ್ಷ ಬೆಂಬಲಿತ ಅಭ್ಯರ್ಥಿ ಅಧ್ಯಕ್ಷರಾಗಿ ಜೆ.ಪಿ.ಚಂದ್ರಶೇಖರ ರೆಡ್ಡಿ, ಹಾಗೂ ಉಪಾಧ್ಯಕ್ಷರಾಗಿ ಮಂಜುನಾಥ ರೆಡ್ಡಿ ಅವರು ಆಯ್ಕೆ ಮಾಡಲಾ ಯಿತು ಎಂದು ಚುನಾವಣೆ ಅಧಿಕಾರಿಗಳಾದ ಮಂಜುನಾಥ ರೆಡ್ಡಿ ಆಯ್ಕೆಯಾದ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಗಳು ಸಂಘದ ಆಡಳಿತ ಮಂಡಳಿಯು ಅಸ್ತಿತ್ವಕ್ಕೆ ಬಂದ ದಿನದಿಂದ ಮುಂದಿನ 5(ಐದು) ವರ್ಷಗಳ ಅವಧಿಗೆ ಅಧ್ಯಕ್ಷರ ಮತ್ತು ಉಪಾಧ್ಯಕ್ಷರ ಸ್ಥಾನಕ್ಕೆ ಕರ್ನಾಟಕ ಸಹಕಾರ ಸಂಘ ಗಳ ನಿಯಮ 14 ಎಜಿ(12)ರನ್ವಯ ಚುನಾಯಿತರಾಗಿರುತ್ತಾರೆಂದು ಈ ಮೂಲಕ ಘೋಷಿಸ ಲಾಯಿತು.
ಇದನ್ನೂ ಓದಿ: Chikkaballapur News: ರೈತರ ಹಿತ ಕಾಯುವುದು ರಾಷ್ಟ್ರೀಯ ಬ್ಯಾಂಕುಗಳು ಮಾತ್ರ : ಪ್ರಗತಿಪರ ರೈತ ಜಿ.ಎನ್. ನಾರಾಯಣಸ್ವಾಮಿ ಅಭಿಮತ
ಈ ಸಂದರ್ಭದಲ್ಲಿ ರಾಜ್ಯ ಒಕ್ಕಲಿಗರ ಸಂಘದ ಪ್ರಧಾನ ಕಾರ್ಯದರ್ಶಿ ಟಿ.ಕೋನಪ್ಪ ರೆಡ್ಡಿ ಮಾತ ನಾಡಿ ಸಹಕಾರ ತತ್ವದ ಉದ್ದೇಶಗಳನ್ನು ಪ್ರತಿಯೊಬ್ಬರೂ ಅರ್ಥ ಮಾಡಿಕೊಳ್ಳಬೇಕು. ಸಹಕಾರ ಸಂಘದಲ್ಲಿ ಯಾರೂ ಸಹ ತಾವು ಯಾವುದೇ ವೈಯಕ್ತಿಕ ಲಾಭ ಪಡೆಯಲು ಪ್ರಯತ್ನಿಸಬಾರದು. ಸೇವಾ ಭಾವನೆಯಿಂದ ಕೆಲಸ ಮಾಡುವುದರಿಂದ ಇದರ ಪ್ರತಿಫಲವು ನೇರವಾಗಿ ರೈತರಿಗೆ ತಲುಪು ತ್ತದೆ. ಆದ್ದರಿಂದ ಸಹಕಾರ ಸಂಘಗಳಲ್ಲಿ ರಾಜಕೀಯ ಹಸ್ತಕ್ಷೇಪ ಮಾಡದಂತೆ ಅವುಗಳ ಅಭಿವೃದ್ಧಿಗೆ ಆದ್ಯತೆ ನೀಡಬೇಕು ಎಂದು ಸಲಹೆ ನೀಡಿದರು.
ಈ ಸಂದರ್ಭದಲ್ಲಿ ನೂತನ ಅಧ್ಯಕ್ಷರಾದ ಜೆ.ಪಿ.ಚಂದ್ರಶೇಖರ ರೆಡ್ಡಿ ಮಾತನಾಡಿ ಮುಂದಿನ ದಿನಗಳಲ್ಲಿ ಎಲ್ಲರ ಸಹಕಾರ ಪಡೆದು ಸಹಕಾರ ಸಂಘದ ಅಭಿವೃದ್ಧಿಗೆ ಶ್ರಮಿಸುತ್ತೇನೆ. ರೈತರಿಗೆ ಸಕಾಲಕ್ಕೆ ರಸಗೊಬ್ಬರ ಪೂರೈಕೆ, ಸಾಲ ವಿತರಣೆ, ಷೇರುದಾರರಿಗೆ ಸಲ್ಲಬೇಕಾದ ಎಲ್ಲಾ ಸೌಲಭ್ಯ ಗಳನ್ನು ಸಕಾಲಕ್ಕೆ ತಲುಪಿಸುವ ಹಾಗೂ ಪಾಳ್ಯಕೆರೆ ಸಹಕಾರ ಸಂಘವನ್ನು ಹೈಟೆಕ್ ಮಾದರಿಯಲ್ಲಿ ಅಭಿವೃದ್ಧಿಪಡಿಸುವ ಗುರಿ ಹೊಂದಿದ್ದೇನೆ’ ಎಂದರು.
ನೂತನ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಆಯ್ಕೆಯಾದ ಹಿನ್ನೆಲೆಯಲ್ಲಿ ನಿರ್ದೇಶಕರು ಮತ್ತು ಬಿಜೆಪಿ ಪಕ್ಷದ ಮುಖಂಡರು ಹಾಗೂ ನಾಯಕರು ಹೂವಿನ ಹಾರಗಳನ್ನು ಹಾಕಿ, ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದರು.
ಈ ಸಂದರ್ಭದಲ್ಲಿ ಚೇಳೂರು ಠಾಣೆಯ ಸಿಬ್ಬಂದಿ ವರ್ಗದ ಯಾವುದೇ ರೀತಿಯ ಅಹಿತಕರ ಘಟನೆ ಗಳು ನಡೆಯದಂತೆ ಬಿಗಿ ಪೋಲಿಸ್ ಭದ್ರತೆ ಒದಗಿಸಲಾಗಿತ್ತು.
ಈ ಸಂದರ್ಭದಲ್ಲಿ ಈ ಸಂದರ್ಭದಲ್ಲಿ ಮಾಜಿ ಜಿಲ್ಲಾ ಪಂಚಾಯತಿ ಸದಸ್ಯ ಹರಿನಾಥರೆಡ್ಡಿ, ಮುಖಂಡರಾದ ಅ.ನ.ಮೂರ್ತಿ,ಎಸ್. ವಿ. ವೆಂಕಟರಾಮರೆಡ್ಡಿ, ಲಕ್ಷ್ಮೀನಾರಾಯಣ, ರೆಡ್ಡಿಪ್ಪ, ಉಪಾಧ್ಯಕ್ಷರಾದ ವೆಂಕಟರೆಡ್ಡಿ, ಸದಸ್ಯರಾದ ರಮ್ಯಾ, ಪಾರ್ವತಮ್ಮ, ನಾಗಪ್ಪ, ಮುಖಂಡರಾದ ವೆಂಕಟಸುಬ್ಬಾರೆಡ್ಡಿ, ಜೆ.ಪಿ. ಚೌಡರೆಡ್ಡಿ, ಪಿ.ವಿ. ವೆಂಕರೆಡ್ಡಿ, ವೆಂಕಟರಾಮರೆಡ್ಡಿ, ಮಂಜುನಾಥ ರೆಡ್ಡಿ, ಸುಬ್ರಮಣ್ಯಂ, ಕೆ.ವಿ. ವೆಂಕಟರೆಡ್ಡಿ, ಕೋನಪ್ಪ, ಶ್ರೀರಾಮಪ್ಪ, ಶಂಕರಪ್ಪ, ಆಂಜನೇಯಶೆಟ್ಟಿ, ವೆಂಕಟರಮಣಸ್ವಾಮಿ, ಮಲ್ಲಿಕಾರ್ಜುನ, ಸಹಕಾರಿ ಸಂಘದ ಕಾರ್ಯದರ್ಶಿ ಶ್ರೀನಿವಾಸ್ ರೆಡ್ಡಿ ಸಿಬ್ಬಂದಿಗಳಾದ ಜಯ ಕುಮಾರ್.ಬಿ, ವಸಂತ, ಆಂಜನೇಯ ರೆಡ್ಡಿ ಸೇರಿದಂತೆ ಹಲವಾರು ಮುಖಂಡ ರು ಹಾಜರಿದ್ದರು.