#ದೆಹಲಿರಿಸಲ್ಟ್​ ಧಾರ್ಮಿಕ ವಿಶ್ವವಾಣಿ ಕ್ಲಬ್‌ ಹೌಸ್‌ ರಾಜಕೀಯ ಸಂಪಾದಕೀಯ ಫ್ಯಾಷನ್‌ ಲೋಕ ಉದ್ಯೋಗ

Mahakumbh 2025: ಮಹಾಕುಂಭ ಮೇಳದ ವಿಶೇಷ ರೈಲಿನ ಮೇಲೆ ಕಲ್ಲು ತೂರಾಟ; ವಿಡಿಯೊ ವೈರಲ್‌

ಝಾನ್ಸಿಯಿಂದ ಪ್ರಯಾಗ್‌ರಾಜ್‌ಗೆ ಹೋಗುತ್ತಿದ್ದ ಮಹಾಕುಂಭ ಮೇಳದ ವಿಶೇಷ ರೈಲಿಗೆ ಹತ್ತಲು ಹೋದಾಗ ಬಾಗಿಲು ಮುಚ್ಚಿದಕ್ಕೆ ಪ್ರಯಾಣಿಕರು ತೀವ್ರ ಆಕ್ರೋಶಗೊಂಡು ರೈಲಿಗೆ ಕಲ್ಲು ಎಸೆದಿರುವ ಘಟನೆ ಮಧ್ಯಪ್ರದೇಶದ ಹರ್ಪಾಲ್‌ಪುರ ರೈಲ್ವೆ ನಿಲ್ದಾಣದಲ್ಲಿ ನಡೆದಿದೆ. ಪ್ರಯಾಣಿಕರು ರೈಲಿಗೆ ಕಲ್ಲು ಎಸೆದಿರುವ ವಿಡಿಯೊ ಇದೀಗ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.

ಕುಂಭಮೇಳದ ವಿಶೇಷ ರೈಲಿನ ಮೇಲೆ ಪ್ರಯಾಣಿಕರಿಂದ ಕಲ್ಲು ತೂರಾಟ!

Mahakumbh 2025

Profile Deekshith Nair Jan 28, 2025 1:57 PM

ಲಖನೌ: ಮಹಾಕುಂಭ ಮೇಳಕ್ಕೆ ತೆರಳುತ್ತಿದ್ದ ವಿಶೇಷ ರೈಲಿನ ಮೇಲೆ ಕಲ್ಲುತೂರಾಟ ನಡೆದಿರುವ ಘಟನೆ ವರದಿಯಾಗಿದೆ. ಝಾನ್ಸಿಯಿಂದ(Jhansi) ಪ್ರಯಾಗ್‌ರಾಜ್‌ಗೆ(Prayagraj) ಹೋಗುತ್ತಿದ್ದ ಮಹಾಕುಂಭ ಮೇಳದ(Mahakumbh) ವಿಶೇಷ ರೈಲಿಗೆ(Special Train) ಹತ್ತಲು ಹೋದಾಗ ಬಾಗಿಲು ಮುಚ್ಚಿದಕ್ಕೆ ಪ್ರಯಾಣಿಕರು ತೀವ್ರ ಆಕ್ರೋಶಗೊಂಡು ರೈಲಿಗೆ ಕಲ್ಲು ಎಸೆದಿರುವ(Throw Stones) ಘಟನೆ ಮಧ್ಯಪ್ರದೇಶದ ಹರ್ಪಾಲ್‌ಪುರ ರೈಲ್ವೆ ನಿಲ್ದಾಣದಲ್ಲಿ ನಡೆದಿದೆ. ಪ್ರಯಾಣಿಕರು ರೈಲಿಗೆ ಕಲ್ಲು ಎಸೆದಿರುವ ವಿಡಿಯೊ ಇದೀಗ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.

ಮಹಾಕುಂಭ ಮೇಳ ಹಿನ್ನೆಲೆ ಪ್ರಯಾಗ್‌ರಾಜ್‌ಗೆ ರೈಲು ತೆರಳುತ್ತಿತ್ತು. ಕಿಕ್ಕಿರಿದ ಜನ ಸಂದಣಿಯಿಂದ ರೈಲಿನ ಬಾಗಿಲನ್ನು ಮುಚ್ಚಲಾಗಿತ್ತು. ಬಾಗಿಲು ತೆರೆಯದ ಕಾರಣಕ್ಕೆ ಆಕ್ರೋಶಗೊಂಡ ಪ್ರಯಾಣಿಕರು ಕಲ್ಲಿನಿಂದ ಬಾಗಿಲಿನ ಗಾಜನ್ನು ಪುಡಿ-ಪುಡಿ ಮಾಡಿರುವ ಘಟನೆ ಮಂಗಳವಾರ(ಜ.28) ನಡೆದಿದೆ ಎಂದು ತಿಳಿದು ಬಂದಿದೆ. ಕಲ್ಲು ಎಸೆದು ಟ್ರೈನ್‌ನ ಬಾಗಿಲಿನ ಗಾಜನ್ನು ಒಡೆಯುತ್ತಿರುವ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್‌ ಆಗಿದೆ.



"ಪ್ಲಾಟ್‌ಫಾರಂನಲ್ಲಿ ಸರಿ ಸುಮಾರು 7 ರಿಂದ 8 ಸಾವಿರ ಜನರಿದ್ದರು ಎನ್ನಲಾಗಿದೆ. ಕಿಕ್ಕಿರಿದ ಪ್ರಯಾಣಿಕರಿದ್ದ ಕಾರಣ ಟ್ರೈನ್ ಅನ್ನು ಬಹಳ ಹೊತ್ತು ನಿಲ್ಲಿಸಿಲ್ಲ. ಇದರಿಂದ ಆಕ್ರೋಶಗೊಂಡ ಪ್ರಯಾಣಿಕರು ದಾಳಿ ನಡೆಸಿದ್ದಾರೆ. ಒಂದು ಗಂಟೆ ಕಾಲ ಪರಿಸ್ಥಿತಿ ಹದಗೆಟ್ಟಿತ್ತು. ಕೂಡಲೇ ನಮ್ಮ ಅಧಿಕಾರಿಗಳು ಬಂದು ಪರಿಸ್ಥಿತಿ ನಿಯಂತ್ರಿಸಿದ್ದಾರೆ. ಟ್ರೈನ್ ತೆರಳಲು ಅನುವು ಮಾಡಿಕೊಟ್ಟಿದ್ದೇವೆ ಎಂದು ಸ್ಥಳೀಯ ಪೊಲೀಸ್ ಠಾಣೆಯ ಅಧಿಕಾರಿ ಪುಷ್ಪಕ್ ಶರ್ಮಾ ಸುದ್ದಿಗಾರರಿಗೆ ತಿಳಿಸಿದ್ದಾರೆ.

ಈ ಸುದ್ದಿಯನ್ನೂ ಓದಿ:Mahakumbh: ಬಾಹ್ಯಾಕಾಶದಿಂದ ಮಹಾ ಕುಂಭಮೇಳ ಹೇಗೆ ಕಾಣಿಸುತ್ತೆ? ನಾಸಾದಿಂದ ಅದ್ಭುತ ಫೋಟೊ ರಿಲೀಸ್!

ಕುಂಭಮೇಳಕ್ಕೆ ಹೊರಟಿದ್ದ ರೈಲಿನ ಮೇಲೆ ಕಲ್ಲು ತೂರಾಟ

ಕೆಲವು ದಿನಗಳ ಹಿಂದೆಯಷ್ಟೇ ಮಹಾರಾಷ್ಟ್ರದ ಜಲ್‌ಗಾಂವ್‌ ರೈಲ್ವೆ ನಿಲ್ದಾಣದಲ್ಲಿ ಕುಂಭ ಮೇಳಕ್ಕೆ ಹೊರಟಿದ್ದ ರೈಲಿನ ಮೇಲೆ ಕಲ್ಲು ತೂರಾಟ ನಡೆದಿತ್ತು. ಜನವರಿ 12 ರಂದು ಸೂರತ್‌ನಿಂದ ಛಾಪ್ರಾಗೆ ತೆರಳುತ್ತಿದ್ದ ತಪತಿ ಗಂಗಾ ಎಕ್ಸ್ಪ್ರೆಸ್‌ ಮೇಲೆ ಕಿಡಿಗೇಡಿಗಳು ಕಲ್ಲು ತೂರಾಟ ನಡೆಸಿದ್ದರು.



"ನಾವು ಸೂರತ್ ಉದ್ನಾದಿಂದ ಪ್ರಯಾಗ್‌ರಾಜ್‌ಗೆ ಹೊರಟಿದ್ದೇವೆ. ಎಲ್ಲಾ ಪ್ರಯಾಣಿಕರು ನಮ್ಮೊಂದಿಗಿದ್ದಾರೆ. ಜಲಗಾಂವ್‌ನಿಂದ ಕನಿಷ್ಠ 3 ಕಿಮೀ ಮುಂದೆ ಕೆಲವು ಸಮಾಜ ವಿರೋಧಿಗಳು ಕಲ್ಲು ರೈಲಿನ ಮೇಲೆ ಕಲ್ಲು ಎಸೆದಿದ್ದಾರೆ. ನಮಗೆ ಭದ್ರತೆ ಒದಗಿಸುವಂತೆ ನಾವು ರೈಲ್ವೆ ಸಚಿವರಿಗೆ ವಿನಂತಿಸುತ್ತೇವೆ ಎಂದು ಹಾನಿಗೊಳಗಾದ ಕೋಚ್‌ನಲ್ಲಿದ್ದ ಪ್ರಯಾಣಿಕ ರಾಜೇಂದ್ರ ಗುಪ್ತಾ, ಹಾನಿಗೊಳಗಾದ ಕಿಟಕಿಯನ್ನು ತೋರಿಸಿ ಮನವಿ ಮಾಡಿದ್ದರು. ಪ್ರಕರಣದ ತನಿಖೆ ಪ್ರಾರಂಭಿಸಿದ ರೈಲ್ವೆ ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದ್ದರು.

ಈ ಬಗ್ಗೆ ಮಾತನಾಡಿದ್ದ ಕೇಂದ್ರ ರೈಲ್ವೆಯ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಸ್ವಪ್ನಿಲ್ ನೀಲಾ ಜಲಗಾಂವ್ ಬಳಿಯ ಸೂರತ್ ಉದ್ನಾದಿಂದ ಬರುತ್ತಿದ್ದ ಈ ರೈಲಿನ ಮೇಲೆ ಕಲ್ಲು ತೂರಲಾಗಿದೆ. ಈ ಸಂದರ್ಭದಲ್ಲಿ ರೈಲ್ವೇ ರಕ್ಷಣಾ ಪಡೆ ತಕ್ಷಣ ಕ್ರಮ ಕೈಗೊಂಡು ರೈಲಿನಲ್ಲಿ ನಾಲ್ಕು ತಂಡಗಳನ್ನು ನಿಯೋಜಿಸಲಾಗಿದೆ. ದೂರು ಕೂಡ ದಾಖಲಾಗಿದೆ" ಎಂದು ಹೇಳಿದ್ದರು.