IND vs ENG 2nd ODI: ದ್ವಿತೀಯ ಪಂದ್ಯದ ಪಿಚ್ ರಿಪೋರ್ಟ್, ಸಂಭಾವ್ಯ ತಂಡ ಹೇಗಿದೆ?
IND vs ENG 2nd ODI: ಭಾರತವು 2017 ರಲ್ಲಿ ಕಟಕ್‌ನಲ್ಲಿ ಇಂಗ್ಲೆಂಡ್ ವಿರುದ್ಧ 6 ವಿಕೆಟ್‌ಗೆ 381 ರನ್ ಬಾರಿಸಿತ್ತು. ಇದು ಈ ಮೈದಾನದಲ್ಲಿ ಭಾರತ ದಾಖಲಿಸಿದ ಗರಿಷ್ಠ ಮೊತ್ತವಾಗಿದೆ. ಆ ಪಂದ್ಯದಲ್ಲಿ ಯುವರಾಜ್ ಸಿಂಗ್ (127 ಎಸೆತಗಳಲ್ಲಿ 150) ಮತ್ತು ಎಂಎಸ್ ಧೋನಿ (122 ಎಸೆತಗಳಲ್ಲಿ 134) 5ನೇ ವಿಕೆಟ್‌ಗೆ 257 ರನ್‌ಗಳ ಜತೆಯಾಟದೊಂದಿಗೆ ತಮ್ಮ ಕೊನೆಯ ಅಂತಾರಾಷ್ಟ್ರೀಯ ಶತಕಗಳನ್ನು ಗಳಿಸಿದ್ದರು.
![ದ್ವಿತೀಯ ಪಂದ್ಯದ ಪಿಚ್ ರಿಪೋರ್ಟ್, ಸಂಭಾವ್ಯ ತಂಡ ಹೇಗಿದೆ?](https://cdn-vishwavani-prod.hindverse.com/media/original_images/cuttack_cricket_stadium.jpg)
cuttack cricket stadium
![Profile](https://vishwavani.news/static/img/user.png)
ಕಟಕ್: ನಾಗ್ಪುರದಲ್ಲಿ ಗೆಲುವಿನ ಬಾವುಟ ಹಾರಿಸಿದ ಟೀಮ್ ಇಂಡಿಯಾ ಇದೀಗ ಸರಣಿ ವಶಪಡಿಸಿಕೊಳ್ಳುವ ನಿರೀಕ್ಷೆಯೊಂದಿಗೆ ಕಟಕ್‌ನ ಬಾರಾಬತಿ ಮೈದಾನದಲ್ಲಿ ಭಾನುವಾರ ದ್ವಿತೀಯ ಪಂದ್ಯವನ್ನಾಡಲು ಸಜ್ಜಾಗಿದೆ. ಅತ್ತ ಸರಣಿ ಜೀವಂತವಿರಿಸಿಕೊಳ್ಳಬೇಕಿದ್ದರೆ ಬಟ್ಲರ್ ಪಡೆಗೆ ಇಲ್ಲಿ ಗೆಲುವು ಒಲಿಯಬೇಕಿದೆ. ಹೀಗಾಗಿ ಪಂದ್ಯ ತೀವ್ರ ಪೈಪೋಟಿಯಿಂದ ಕೂಡಿರುವ ನಿರೀಕ್ಷೆ ಮಾಡಬಹುದು. ಈ ಪಂದ್ಯದ ಪಿಚ್ ರಿಪೋರ್ಟ್, ಹವಾಮಾನ ವರದಿ ಮತ್ತು ಸಂಭಾವ್ಯ ತಂಡಗಳ ಮಾಹಿತಿ ಇಲ್ಲಿದೆ.
ಪಿಚ್ ರಿಪೋರ್ಟ್
ಕಟಕ್‌ನ ಬಾರಾಬತಿ ಸ್ಟೇಡಿಯಂ ಸಾಮಾನ್ಯವಾಗಿ ಸ್ಪಿನ್ನರ್‌ಗಳಿಗೆ ಉತ್ತಮ ನೆರವು ನೀಡುತ್ತದೆ. ಜತೆಗೆ ಬೌನ್ಸಿ ಪಿಚ್ ಆಗಿರುವ ಕಾರಣ ಹೊಸ ಚೆಂಡಿನಲ್ಲಿ ವೇಗಿಗಳೂ ಹಿಡಿತ ಸಾಧಿಸಬಹುದು. ಆದರೆ, 6 ವರ್ಷಗಳ ಬಳಿಕ ಇಲ್ಲಿ ಏಕದಿನ ಪಂದ್ಯ ನಡೆಯುತ್ತಿರುವ ಕಾರಣ ಪಿಚ್ ಹೇಗೆ ವರ್ತಿಸಲಿದೆ ಎನ್ನುವುದು ಕೂಡ ಮುಖ್ಯವಾಗಿದೆ. ಇದುವರೆಗೆ ಇಲ್ಲಿ ನಡೆದ ಪಂದ್ಯದಲ್ಲಿ12 ಬಾರಿ ಚೇಸಿಂಗ್ ನಡೆಸಿದ ತಂಡ ಗೆದ್ದರೆ, 7 ಬಾರಿ ಮೊದಲು ಬ್ಯಾಟಿಂಗ್ ಮಾಡಿದ ತಂಡ ಗೆಲುವು ಸಾಧಿಸಿದೆ. ಹೀಗಾಗಿ ಟಾಸ್ ಗೆದ್ದ ತಂಡ ಬೌಲಿಂಗ್ ಆಯ್ದುಕೊಳ್ಳುವ ಸಾಧ್ಯತೆ ಅಧಿಕ. ಭಾರತ ಕೊನೆಯ ಬಾರಿ ಇಲ್ಲಿ ಏಕದಿನ ಪಂದ್ಯ ಆಡಿದ್ದು 2019 ರಲ್ಲಿ.
ಭಾರತವು 2017 ರಲ್ಲಿ ಕಟಕ್‌ನಲ್ಲಿ ಇಂಗ್ಲೆಂಡ್ ವಿರುದ್ಧ 6 ವಿಕೆಟ್‌ಗೆ 381 ರನ್ ಬಾರಿಸಿತ್ತು. ಇದು ಈ ಮೈದಾನದಲ್ಲಿ ಭಾರತ ದಾಖಲಿಸಿದ ಗರಿಷ್ಠ ಮೊತ್ತವಾಗಿದೆ. ಆ ಪಂದ್ಯದಲ್ಲಿ ಯುವರಾಜ್ ಸಿಂಗ್ (127 ಎಸೆತಗಳಲ್ಲಿ 150) ಮತ್ತು ಎಂಎಸ್ ಧೋನಿ (122 ಎಸೆತಗಳಲ್ಲಿ 134) 5ನೇ ವಿಕೆಟ್‌ಗೆ 257 ರನ್‌ಗಳ ಜತೆಯಾಟದೊಂದಿಗೆ ತಮ್ಮ ಕೊನೆಯ ಅಂತಾರಾಷ್ಟ್ರೀಯ ಶತಕಗಳನ್ನು ಗಳಿಸಿದ್ದರು.
ಕೊಹ್ಲಿ ಲಭ್ಯ!
ಮಂಡಿ ನೋವಿನಿಂದಾಗಿ ಮೊದಲ ಪಂದ್ಯಕ್ಕೆ ಅಲಭ್ಯರಾಗಿದ್ದ ವಿರಾಟ್ ಕೊಹ್ಲಿ, ಭಾನುವಾರ ನಡೆಯಲಿರುವ ಎರಡನೇ ಪಂದ್ಯಕ್ಕೆ ಮರಳಲಿದ್ದಾರೆ ಎಂದು ಟೀಂ ಇಂಡಿಯಾದ ಉಪನಾಯಕ ಶುಭ್‌ಮನ್ ಗಿಲ್ ಹೇಳಿದ್ದಾರೆ. ಕೊಹ್ಲಿ ಆಡಿದರೆ ಇವರಿಗಾಗಿ ಜಾಗ ಬಿಡುವವರು ಯಾರೆಂದುಬುದು ಸದ್ಯದ ಪ್ರಶ್ನೆ.
ಇದನ್ನೂ ಓದಿ IND vs ENG: ಕಳೆದ ವರ್ಷ ಭಾರತ ತಂಡದಿಂದ ಶ್ರೇಯಸ್ ಅಯ್ಯರ್ ಹೊರಗಿದ್ದಿದ್ದೇಕೆ? ರಿಕಿ ಪಾಂಟಿಂಗ್ ಪ್ರಶ್ನೆ!
ಸಂಭಾವ್ಯ ತಂಡಗಳು
ಭಾರತ: ರೋಹಿತ್ ಶರ್ಮಾ (ನಾಯಕ), ಯಶಸ್ವಿ ಜೈಸ್ವಾಲ್, ಶ್ರೇಯಸ್ ಅಯ್ಯರ್, ಶುಭಮನ್ ಗಿಲ್, ಕೆ.ಎಲ್ ರಾಹುಲ್ (ವಿಕೆ), ಹಾರ್ದಿಕ್ ಪಾಂಡ್ಯ, ಅಕ್ಷರ್ ಪಟೇಲ್, ರವೀಂದ್ರ ಜಡೇಜಾ, ಹರ್ಷಿತ್ ರಾಣಾ, ಕುಲದೀಪ್ ಯಾದವ್, ಮೊಹಮ್ಮದ್ ಶಮಿ.
ಇಂಗ್ಲೆಂಡ್: ಬೆನ್ ಡಕೆಟ್, ಫಿಲ್ ಸಾಲ್ಟ್ (ವಿ.ಕೀ), ಜೋ ರೂಟ್, ಹ್ಯಾರಿ ಬ್ರೂಕ್, ಜೋಸ್ ಬಟ್ಲರ್ (ನಾಯಕ), ಲಿಯಾಮ್ ಲಿವಿಂಗ್‌ಸ್ಟೋನ್, ಜಾಕೋಬ್ ಬೆಥೆಲ್, ಬ್ರೈಡನ್ ಕಾರ್ಸೆ, ಜೋಫ್ರಾ ಆರ್ಚರ್, ಆದಿಲ್ ರಶೀದ್, ಸಾಕಿಬ್ ಮಹಮೂದ್.