Viral Video: ರೀಲ್ಸ್ ಮಾಡಲು ಹೋಗಿ ಯಮುನಾ ನದಿಯಲ್ಲಿ ಬಿದ್ದ ಬಿಜೆಪಿ ಶಾಸಕ; ವಿಡಿಯೋ ನೋಡಿ
ದೆಹಲಿಯಲ್ಲಿ ಯಮುನಾ ನದಿ ಗಲಾಟೆ ಜೋರಾಗಿರುವಾಗಲೇ ಬಿಜೆಪಿ ಶಾಸಕರೊಬ್ಬರು ಯಡವಟ್ಟನ್ನು ಮಾಡಿಕೊಂಡಿದ್ದಾರೆ. ನದಿ ಸ್ವಚ್ಛತಾ ಜಾಗೃತಿ ಅಭಿಯಾನದ ರೀಲ್ ಚಿತ್ರೀಕರಣ ಮಾಡುವಾಗ ದೆಹಲಿ ಬಿಜೆಪಿ ಶಾಸಕ ರವೀಂದರ್ ಸಿಂಗ್ ನೇಗಿ ಯಮುನಾ ನದಿಯಲ್ಲಿ ಬಿದ್ದಿದ್ದಾರೆ.
-
Vishakha Bhat
Oct 28, 2025 12:19 PM
ನವದೆಹಲಿ: ಯಮುನಾ ನದಿ ಗಲಾಟೆ ಜೋರಾಗಿರುವಾಗಲೇ ಬಿಜೆಪಿ ಶಾಸಕರೊಬ್ಬರು ಯಡವಟ್ಟನ್ನು ಮಾಡಿಕೊಂಡಿದ್ದಾರೆ. ನದಿ ಸ್ವಚ್ಛತಾ (Viral Video) ಜಾಗೃತಿ ಅಭಿಯಾನದ ರೀಲ್ ಚಿತ್ರೀಕರಣ ಮಾಡುವಾಗ ದೆಹಲಿ ಬಿಜೆಪಿ ಶಾಸಕ ರವೀಂದರ್ ಸಿಂಗ್ ನೇಗಿ ಯಮುನಾ ನದಿಯಲ್ಲಿ (Yamuna River) ಬಿದ್ದಿದ್ದಾರೆ. ಛತ್ ಪೂಜಾ ಆಚರಣೆಯ ನಡುವೆ ನದಿಯ ಸ್ವಚ್ಛತೆಯ ಬಗ್ಗೆ ರಾಜಕೀಯ ಜಟಾಪಟಿ ಮುಂದುವರಿದಿದ್ದು , ಪತ್ಪರ್‌ಗಂಜ್ ಶಾಸಕರು ಜಾರಿ ನೀರಿಗೆ ಬೀಳುತ್ತಿರುವ ಘಟನೆ ಕ್ಯಾಮೆರಾದಲ್ಲಿ ಸೆರೆಯಾಗಿದೆ. ವಿಪಕ್ಷಗಳು ಈ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು ಟೀಕಿಸಿವೆ.
ಆಮ್ ಆದ್ಮಿ ಪಕ್ಷದ ಶಾಸಕ ಸಂಜೀವ್ ಝಾ ಅವರು X ನಲ್ಲಿ ವೀಡಿಯೊವನ್ನು ಹಂಚಿಕೊಂಡು, ನೇಗಿ ಅವರನ್ನು ಟೀಕಿಸಿದ್ದಾರೆ. ಬಿಜೆಪಿ ನಾಯಕರು ದೇಶದ ಜನರಿಗೆ ಸುಳ್ಳು ಭರವಸೆ ನೀಡುವಲ್ಲಿ ನಿಸ್ಸೀಮರು. ಇದೇ ಅವರ ಯಮುನಾ ನದಿ ಸ್ವಚ್ಛತೆ. ಅವರು ಕ್ಯಾಮರಾಗಷ್ಟೇ ಸೀಮಿತ ಎಂದು ಅವರು ಟೀಕಿಸಿದರು. ಬಹುಶಃ ಸುಳ್ಳು ಮತ್ತು ವೈಭವೀಕರಣದ ರಾಜಕೀಯದಿಂದ ಬೇಸತ್ತು, ಯಮುನಾ ಮಯ್ಯ ಸ್ವತಃ ಅವರನ್ನು ತನ್ನ ಕಡೆಗೆ ಕರೆದಿರಬಹುದು ಎಂದು ಝಾ ಬರೆದುಕೊಂಡಿದ್ದಾರೆ.
ಶಾಸಕ ನದಿಯಲ್ಲಿ ಬಿದ್ದ ವಿಡಿಯೋ
क्या विधायक जी, कितना नाटक करोगे, इसी नाटकबाजी के लिए मोदी जी के नाम पर इलेक्शन जीते थे क्या ?
— Ajit Singh Rathi (@AjitSinghRathi) October 26, 2025
ये है दिल्ली से भाजपा विधायक रवि नेगी, यमुना की सफाई को लेकर रील बना रहे थे, पैर फिसला और सीधे यमुना में जा गिरे। बस रील बननी चाहिए चाहे ख़ुद की रेल बन जाय। @BJP4India @BJP4Delhi pic.twitter.com/uLcQoVqBwe
19 ಸೆಕೆಂಡುಗಳ ವೀಡಿಯೊದಲ್ಲಿ, ಪತ್ಪರ್ಗಂಜ್ ಶಾಸಕರು ಎರಡು ಬಾಟಲಿಗಳನ್ನು ಹಿಡಿದುಕೊಂಡು ನದಿಯ ದಡದಲ್ಲಿ ನಿಂತಿರುವುದು ಕಂಡುಬರುತ್ತದೆ. ಮಂಡಿಯೂರಿ ಕುಳಿತಿದ್ದ ಸ್ಥಾನದಿಂದ ಮೇಲೇಳಲು ಪ್ರಯತ್ನಿಸುತ್ತಿರುವಾಗ, ನೇಗಿ ಸಮತೋಲನ ಕಳೆದುಕೊಂಡು ನೀರಿಗೆ ಜಾರಿ ಬೀಳುತ್ತಾರೆ. ಹತ್ತಿರದ ವ್ಯಕ್ತಿಯೊಬ್ಬರು ಸಹಾಯ ಮಾಡಲು ಧಾವಿಸುತ್ತಾರೆ, ಆದರೆ ಅಷ್ಟರಲ್ಲಾಗಲೇ ಅವರು ನದಿಯ ಒಳಗೆ ಬಿದ್ದರು. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ದೆಹಲಿಯ ಆಡಳಿತಾರೂಢ ಬಿಜೆಪಿ ಮತ್ತು ವಿರೋಧ ಪಕ್ಷ ಎಎಪಿ ನಡುವಿನ ರಾಜಕೀಯ ವಾಗ್ವಾದ ತೀವ್ರಗೊಂಡಿದೆ. ಇಂದು ಮುಕ್ತಾಯಗೊಳ್ಳಲಿರುವ ಛತ್ ಪೂಜೆಗೆ ಸಿದ್ಧತೆಗಳ ಮಧ್ಯೆ, ಯಮುನಾ ನದಿಯ ಸ್ಥಿತಿಯ ಬಗ್ಗೆ ಸಾರ್ವಜನಿಕರನ್ನು ದಾರಿ ತಪ್ಪಿಸುತ್ತಿದ್ದಾರೆ ಎಂದು ಎರಡೂ ಪಕ್ಷಗಳು ಪರಸ್ಪರ ಆರೋಪ ಮಾಡಿಕೊಳ್ಳುತ್ತಿವೆ.ಕಳೆದ ವಾರಾಂತ್ಯದಲ್ಲಿ ಎಎಪಿಯ ದೆಹಲಿ ಘಟಕದ ಮುಖ್ಯಸ್ಥ ಸೌರಭ್ ಭಾರದ್ವಾಜ್ ಅವರು ಮುಖ್ಯಮಂತ್ರಿ ರೇಖಾ ಗುಪ್ತಾ ಅವರಿಗೆ ನದಿಯನ್ನು ಸ್ವಚ್ಛಗೊಳಿಸಲಾಗಿದೆ ಎಂಬ ತಮ್ಮ ಹೇಳಿಕೆಯನ್ನು ಸಾಬೀತುಪಡಿಸಲು ನದಿಯ ನೀರು ಕುಡಿಯುವಂತೆ ಸವಾಲು ಹಾಕಿದ್ದರು.
ಅವರು ಮಣ್ಣಿನ, ಬೂದು ಬಣ್ಣದ ನೀರಿನಿಂದ ತುಂಬಿದ ಬಾಟಲಿಯನ್ನು ಹೊತ್ತುಕೊಂಡು ಮುಖ್ಯಮಂತ್ರಿಯವರ ನಿವಾಸವನ್ನು ತಲುಪಿದ್ದರು. ಇದು ದೆಹಲಿಯ ಮೂಲಕ ಹರಿಯುವ ಯಮುನೆಯಿಂದ ಸಂಗ್ರಹಿಸಲಾದ ನೀರು. ನಾವು ಈ ನೀರನ್ನು ರೇಖಾ ಗುಪ್ತಾ ಜಿ ಅವರಿಗೆ ನೀಡಲು ಬಯಸುತ್ತೇವೆ. ಯಮುನೆ ಶುದ್ಧವಾಗಿದೆ ಎಂದು ಅವರು ಹೇಳಿದರೆ, ಅವರು ಅದನ್ನು ಕುಡಿಯಬೇಕು" ಎಂದು ಭಾರದ್ವಾಜ್ ಒತ್ತಾಯಿಸಿದ್ದರು.