ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

IND vs ENG: ಲಾರ್ಡ್ಸ್‌ ಟೆಸ್ಟ್‌ನಲ್ಲಿ ಕುಲ್ದೀಪ್‌ ಯಾದವ್‌ಗೆ ಅವಕಾಶ ನೀಡಬೇಕೆಂದ ಕೆವಿನ್‌ ಪೀಟರ್ಸನ್‌!

ಇಂಗ್ಲೆಂಡ್‌ ವಿರುದ್ಧ ಜುಲೈ 10 ರಂದು ಲಂಡನ್‌ ದಿ ಲಾರ್ಡ್ಸ್‌ ಕ್ರೀಡಾಂಗಣದಲ್ಲಿ ನಡೆಯುವ ಮೂರನೇ ಟೆಸ್ಟ್‌ ಪಂದ್ಯಕ್ಕೆ ಭಾರತ ತಂಡದ ಪ್ಲೇಯಿಂಗ್‌ XIನಲ್ಲಿ ಕುಲ್ದೀಪ್‌ ಯಾದವ್‌ಗೆ ಅವಕಾಶ ನೀಡಬೇಕೆಂದು ಆಂಗ್ಲರ ಮಾಜಿ ನಾಯಕ ಕೆವಿನ್‌ ಪೀಟರ್ಸನ್‌ ಸಲಹೆ ನೀಡಿದ್ದಾರೆ.

ಮೂರನೇ ಟೆಸ್ಟ್‌ನಲ್ಲಿ ಕುಲ್ದೀಪ್‌ ಯಾದವ್‌ ಆಡಬೇಕೆಂದ ಪೀಟರ್ಸನ್‌!

ಕುಲ್ದೀಪ್‌ ಯಾದವ್‌ ಪ್ಲೇಯಿಂಗ್‌ XIನಲ್ಲಿ ಆಡಬೇಕೆಂದ ಕೆವಿನ್‌ ಪೀಟರ್ಸನ್‌.

Profile Ramesh Kote Jul 9, 2025 6:21 PM

ನವದೆಹಲಿ: ಎಜ್‌ಬಾಸ್ಟನ್‌ನಲ್ಲಿ ನಡೆದಿದ್ದ ಎರಡನೇ ಟೆಸ್ಟ್‌ ಪಂದ್ಯದಲ್ಲಿ(IND vs ENG) ಗೆಲುವು ಪಡೆಯುವ ಮೂಲಕ ಭಾರತ ತಂಡ (India), ಸರಣಿಯಲ್ಲಿ 1-1 ಕಾಯ್ದುಕೊಂಡಿವೆ. ಮೊದಲನೇ ಟೆಸ್ಟ್‌ ಪಂದ್ಯದಲ್ಲಿ ಭಾರತ ತಂಡ 5 ವಿಕೆಟ್‌ಗಳಿಂದ ಸೋಲು ಅನುಭವಿಸಿತ್ತು. ನಂತರ ಎರಡನೇ ಟೆಸ್ಟ್‌ನಲ್ಲಿ 336 ರನ್‌ಗಳಿಂದ ಗೆಲುವು ಪಡೆಯುವ ಮೂಲಕ ಟೀಮ್‌ ಇಂಡಿಯಾ ಇದೀಗ ಮೂರನೇ ಟೆಸ್ಟ್‌ ಪಂದ್ಯದಲ್ಲಿಯೂ ಅದೇ ಲಯವನ್ನು ಮುಂದುವರಿಸಲು ಎದುರು ನೋಡುತ್ತಿದೆ. ಇದೀಗ ಲಾರ್ಡ್ಸ್‌ ಟೆಸ್ಟ್‌ ಪಂದ್ಯದಲ್ಲಿ ಭಾರತ ತಂಡದ ಪ್ಲೇಯಿಂಗ್‌ XIನಲ್ಲಿ ಕುಲ್ದೀಪ್‌ ಯಾದವ್‌ಗೆ (Kuldeep Yadav) ಅವಕಾಶ ಮಾಡಿಕೊಡಬೇಕೆಂದು ಸಲಹೆ ನೀಡಿದ್ದಾರೆ.

ಕಳೆದ ಎರಡೂ ಟೆಸ್ಟ್‌ ಪಂದ್ಯಗಳಲ್ಲಿ ರವೀಂದ್ರ ಜಡೇಜಾ ಆಡಿದ್ದರು. ಆದರೆ, ಅವರು ಬ್ಯಾಟಿಂಗ್‌ನಲ್ಲಿ ಗಮನ ಸೆಳೆದಿದ್ದರೆ, ಬೌಲಿಂಗ್‌ನಲ್ಲಿ ವಿಫಲರಾಗಿದ್ದರು. ಅವರು ಆಡಿದ ನಾಲ್ಕು ಇನಿಂಗ್ಸ್‌ಗಳಿಂದ ಪಡೆದಿದ್ದು ಕೇವಲ ಎರಡು ವಿಕೆಟ್‌ ಮಾತ್ರ. ಎಜ್‌ಬಾಸ್ಟನ್‌ ಟೆಸ್ಟ್‌ನಲ್ಲಿ ಆಡಿದ್ದ ವಾಷಿಂಗ್ಟನ್‌ ಸುಂದರ್‌ ಬ್ಯಾಟಿಂಗ್‌ನಲ್ಲಿ ಗಮನ ಸೆಳೆದಿದ್ದರೆ, ಬೌಲಿಂಗ್‌ನಲ್ಲಿ ಒಂದು ವಿಕೆಟ್‌ ಪಡೆದಿದ್ದರು.

IND vs ENG: ಆಡಮ್‌ ಗಿಲ್‌ಕ್ರಿಸ್ಟ್‌ಗೆ ರಿಷಭ್‌ ಪಂತ್‌ ಹೋಲಿಕೆ ಇಲ್ಲ ಎಂದ ಆರ್‌ ಅಶ್ವಿನ್‌!

ಜುಲೈ 10 ರಂದು ಗುರುವಾರ ಲಂಡನ್‌ನ ಲಾರ್ಡ್ಸ್‌ನಲ್ಲಿ ಆರಂಭವಾಗುವ ಮೂರನೇ ಟೆಸ್ಟ್‌ ಗೆಲ್ಲುವ ಮೂಲಕ ಭಾರತ ತಂಡ, ಟೆಸ್ಟ್‌ ಸರಣಿಯಲ್ಲಿ 2-1 ಮುನ್ನಡೆ ಸಾಧಿಸಲು ಎದುರು ನೋಡುತ್ತಿದೆ. ಇದರ ನಡುವೆ ಇಂಗ್ಲೆಂಡ್‌ ಮಾಜಿ ನಾಯಕ ಹಾಗೂ ಡೆಲ್ಲಿ ಕ್ಯಾಪಿಟಲ್ಸ್‌ ಮೆಂಟರ್‌ ಕೆವಿನ್‌ ಪೀಟರ್ಸನ್‌ ಅವರು ಕುಲ್ದೀಪ್‌ ಯಾದವ್‌ಗೆ ಭಾರತ ತಂಡದ ಪ್ಲೇಯಿಂಗ್‌ Xiನಲ್ಲಿ ಅವಕಾಶ ನೀಡಬೇಕು ಎಂದು ಆಗ್ರಹಿಸಿದ್ದಾರೆ. ಅದರಂತೆ ಮಂಗಳವಾರ ಕುಲ್ದೀಪ್‌ ಯಾದವ್‌ ಎರಡು ಸುತ್ತು ಓಟವನ್ನು ಮುಗಿಸಿ ಅಭ್ಯಾಸ ನಡೆಸಿದ್ದರು.

"ಇಂಗ್ಲೆಂಡ್‌ ವಿರುದ್ದದ ಎರಡು ಟೆಸ್ಟ್‌ ಸರಣಿಯಲ್ಲಿ ಭಾರತದ ಸ್ಪಿನ್ನರ್‌ಗಳು ವಿಫಲರಾಗಿದ್ದರು. ಹಾಗಾಗಿ ಭಾರತ ತಂಡಕ್ಕೆ ಕುಲ್ದೀಪ್‌ ಯಾದವ್‌ ಅವರ ಅಗತ್ಯವಿದೆ. ಭಾರತ ತಂಡ ಒಂದು ಟೆಸ್ಟ್‌ ಪಂದ್ಯವನ್ನು ಸೋತು, ಮತ್ತೊಂದು ಟೆಸ್ಟ್‌ನಲ್ಲಿ ಗೆಲುವು ಪಡೆದಿದೆ. ಆದರೆ, ಟೀಮ್‌ ಇಂಡಿಯಾ ಏನೋ ಒಂದು ರೀತಿಯ ಬದಲಾವಣೆಯನ್ನು ಕಳೆದುಕೊಂಡಿದ್ದೇನೆಂದು ನಾನು ಭಾವಿಸುತ್ತೇನೆ. ಅವರಿಗೆ ಬದಲಾವಣೆ ಮಿಸ್‌ ಆಗಿದೆ," ಎಂದು ಕೆವಿನ್‌ ಪೀಟರ್ಸನ್‌ ಹೇಳಿದ್ದಾರೆ.

IND vs ENG 3rd Test: ಲಾರ್ಡ್ಸ್‌ ಟೆಸ್ಟ್‌ನ ಪಿಚ್‌ ರಿಪೋರ್ಟ್‌, ಹವಾಮಾನ ವರದಿ ಹೇಗಿದೆ?

"ನಾನು ಡೆಲ್ಲಿ ಕ್ಯಾಪಿಟಲ್ಸ್ ತಂಡದ ಮೆಂಟರ್‌ ಆಗಿದ್ದಾಗ ಅವರೊಂದಿಗೆ ಒಂದೆರಡು ಬಾರಿ ಕುಳಿತು, ಇಂಗ್ಲೆಂಡ್‌ನಲ್ಲಿ ಬೌಲಿಂಗ್ ಬಗ್ಗೆ ಚರ್ಚಿಸಿದ್ದೆ. ಅವರ ಜೊತೆ ತಂತ್ರಗಳನ್ನು ಚರ್ಚಿಸಿದ್ದೆ. ಹೇಗೆ ಬೌಲ್ ಮಾಡಬೇಕು ಮತ್ತು ಎಲ್ಲಿ ಬೌಲ್‌ ಮಾಡಬೇಕು ಎಂಬುದರ ಕುರಿತು ನಾನು ಸಾಕಷ್ಟು ಮಾತನಾಡಿದ್ದೆ. ನಾವು ಸಾಕಷ್ಟು ಸಮಯ ಕಳೆದಿದ್ದೆವು ಮತ್ತು ಅವರು ಆಡುವುದನ್ನು ನೋಡಲು ಚೆನ್ನಾಗಿರುತ್ತದೆ. ಅವರು ಆಡುವುದನ್ನು ನೋಡಲು ಸಂತೋಷವಾಗುತ್ತದೆ. ಅವರು ಬೌಲ್‌ ಮಾಡಲು ಇಷ್ಟಪಡುತ್ತಾರೆ, ವಿಕೆಟ್ ತೆಗೆದುಕೊಳ್ಳುವುದನ್ನು ಇಷ್ಟಪಡುತ್ತಾರೆ. ನನ್ನ ಸ್ನೇಹಿತ ಆಡುವುದನ್ನು ನಾನು ನೋಡಲು ಬಯಸುತ್ತೇನೆ. ನನ್ನ ಸ್ನೇಹಿತರು ಬೆಂಚ್‌ನಲ್ಲಿರುವುದು ನನಗೆ ಇಷ್ಟವಿಲ್ಲ," ಎಂದು ಪೀಟರ್ಸನ್ ತಿಳಿಸಿದ್ದಾರೆ.